IRCTC luggage rules : ಪ್ರಯಾಣಿಕರು ರೈಲುಗಳಲ್ಲಿ ಎಷ್ಟು ಕೆ.ಜಿ ಲಗೇಜ್ ಉಚಿತವಾಗಿ ಸಾಗಿಸಬಹುದು

ಪ್ರಯಾಣಿಕರು ವಿಮಾನಕ್ಕಿಂತ ರೈಲಿನಲ್ಲಿ ಹೆಚ್ಚು ಜನರು ದಿನನಿತ್ಯ ತಮ್ಮ ಲಗೇಜ್‌ನೊಂದಿಗೆ ಪ್ರಯಾಣಿಸುತ್ತಾರೆ. ಇಂತಹ ಸಮಯದಲ್ಲಿ ರೈಲಿನಲ್ಲಿ ಎಷ್ಟು ಬ್ಯಾಗ್‌ ವಸ್ತು ಮತ್ತು ಲಗೇಜ್‌ಗಳನ್ನು ಸಾಗಿಸಬಹುದು ಮತ್ತು ಬ್ಯಾಗೇಜ್‌ಗಳ ಮೇಲೆ ಯಾವುದೇ ದಂಡ ಇರುವುದಿಲ್ಲ ಎಂದು ಪ್ರಯಾಣಿಕರು ಭಾವಿಸಿದ್ದಾರೆ ಆದರೆ, ರೈಲ್ವೆ ಇಲಾಖೆ ನಿಯಮಗಳ ಪ್ರಕಾರ, ಮಿತಿ ಮೀರಿದ ಲಗೇಜ್‌ಗಳಿಗೆ ದಂಡ ಅಥವಾ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ ಎಂಬುವುದನ್ನು ರೈಲು ಪ್ರಯಾಣಿಕರು ಗಮನಿಸಬೇಕಾಗುತ್ತದೆ. ಒಂದು ವೇಳೆ ರೈಲಿನಲ್ಲಿ ಲಗೇಜ್‌ ಸೇವೆ ಉಚತ ಎಂದು ನಿಮಗೂ ಹಾಗೆ ಅನಿಸಿದರೆ, ಉಚಿತವಿರುವುದಿಲ್ಲ ಬದಲಾಗಿ ರೈಲು ಲಗೇಜ್‌ ನಿಯಮಗಳು ಇವೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೌದು, ವಿಮಾನದಂತೆ, ರೈಲಿನಲ್ಲಿಯೂ ಲಗೇಜ್ ನಿಯಮಗಳಿವೆ ನಿಯಮಗಳನ್ನು ಅನುಸರಿಸದಿದ್ದರೆ ದಂಡಕ್ಕೆ ಕಾರಣವಾಗಬಹುದು. ರೈಲಿನಲ್ಲಿ ಪ್ರಯಾಣಿಸುವಾಗ, ಲಗೇಜ್ ನಿಯಮಗಳು ಸಾಮಾನು ತೂಕದ ಬಗ್ಗೆ ಹೇಳಲಾಗುತ್ತದೆ. ಅಂದರೆ ರೈಲಿನಲ್ಲಿ ಪ್ರಯಾಣಿಸುವಾಗ ಒಬ್ಬ ಪ್ರಯಾಣಿಕನು ತನ್ನೊಂದಿಗೆ ಎಷ್ಟು ಕೆಜಿ ಸಾಮಾನುಗಳನ್ನು ಒಯ್ಯಬಹುದು ಎಂದು ರೈಲ್ವೆ ಇಲಾಖೆಯ ನಿಯಮಗಳಲ್ಲಿ ಪ್ರಕಟಿಸಲಾಗಿದೆ.

 ರೈಲಿನಲ್ಲಿ ವಿವಿಧ ವರ್ಗಗಳಿಗೆ ಲಗೇಜ್ ತೂಕ

ರೈಲಿನಲ್ಲಿ ವಿವಿಧ ವರ್ಗಗಳಿಗೆ ಲಗೇಜ್ ತೂಕ

ಭಾರತೀಯ ರೈಲ್ವೆ ವಿವಿಧ ವರ್ಗಗಳ ರೈಲಿಗೆ ವಿಭಿನ್ನ ಲಗೇಜ್ ತೂಕವನ್ನು ನಿಗದಿಪಡಿಸಿದೆ ಅವುಗಳೆಂದರೆ Indianrail.gov ವೆಬ್‌ಸೈಟ್ ಪ್ರಕಾರ, ನೀವು ಸ್ಲೀಪರ್ ಕ್ಲಾಸ್‌ನಲ್ಲಿ ಪ್ರಯಾಣಿಸಿದರೆ, ನೀವು 40 ಕೆಜಿ ತೂಕದ ಲಗೇಜ್‌ ನಿಮ್ಮೊಂದಿಗೆ ಇಟ್ಟುಕೊಳ್ಳಬಹುದು. ಇದಕ್ಕಾಗಿ ಭಾರತೀಯ ರೈಲ್ವೆ ನಿಮಗೆ ಪ್ರತ್ಯೇಕವಾಗಿ ಶುಲ್ಕ ವಿಧಿಸುವುದಿಲ್ಲ. ಇದೇ ಸಮಯದಲ್ಲಿ ಭಾರತೀಯ ರೈಲ್ವೆಯು ಇದರಲ್ಲಿ 10 ಕೆಜಿ ಮಾರ್ಜಿನಲ್ ಭತ್ಯೆಯನ್ನು ನೀಡುತ್ತದೆ. ಅಂದರೆ ಉಚಿತ ತೂಕದೊಂದಿಗೆ, ಪ್ರಯಾಣಿಕರು 70 ಕೆಜಿ (ಗರಿಷ್ಠ ಮಿತಿ)ವರೆಗೆ ತೂಕವನ್ನು ನೀವು ರೈಲು ಪ್ರಯಾಣದ ವೇಳೆ ಸಾಗಿಸಬಹುದು.

* ಎರಡನೇ ದರ್ಜೆಯ ಪ್ರಯಾಣಿಕರು ತಮ್ಮೊಂದಿಗೆ ಕನಿಷ್ಠ 35 ಕೆಜಿ ತೂಕವನ್ನು ಉಚಿತವಾಗಿ ಸಾಗಿಸಬಹುದು. ಈ ಬೋಗಿಯಲ್ಲಿ ಮಾರ್ಜಿನಲ್ ಭತ್ಯೆ 10 ಕನಿಷ್ಠ ಮತ್ತು 88 ಕೆಜಿಯ ಗರಿಷ್ಠ ತೂಕದ ಮಿತಿ ಇದೆ ಅಂದರೆ ಲಗೇಜ್ ಸ್ಕೇಲ್ ದರದಲ್ಲಿ ಹೆಚ್ಚು ಬುಕ್ ಮಾಡಬಹುದು.

*ನೀವು ಎಸಿ 3-ಟೈಯರ್ ಸ್ಲೀಪರ್/ ಎಸಿ ಚೇರ್ ಕಾರ್‌ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರೆ, ನೀವು 40 ಕೆಜಿ ತೂಕವನ್ನು ನಿಮ್ಮೊಂದಿಗೆ ಉಚಿತವಾಗಿ ತೆಗೆದುಕೊಂಡು ಪ್ರಯಾಣಿಸಬಹುದು ಈ ಸಮಯದಲ್ಲಿ 10 ಕೆಜಿ ಮಾರ್ಜಿನಲ್ ಅಲೋವೆನ್ಸ್ ಲಭ್ಯವಿರುತ್ತದೆ ಮತ್ತು ಇಲ್ಲಿ ಗರಿಷ್ಠ ತೂಕದ ಮಿತಿ 40 ಕೆಜಿ ಇರುತ್ತದೆ.

*ಎಸಿ 2-ಟೈರ್ ಸ್ಲೀಪರ್/ಫಸ್ಟ್‌ಕ್ಲಾಸ್ ವರ್ಗದ ಪ್ರಯಾಣಿಕರು 50 ಕೆಜಿ ತೂಕವನ್ನು ಉಚಿತವಾಗಿ ಸಾಗಿಸಬಹುದು. ಅದೇ ಸಮಯದಲ್ಲಿ, ಇಲ್ಲಿಯೂ 10 ಕೆಜಿ ಮಾರ್ಜಿನಲ್ ಭತ್ಯೆ ಇರುತ್ತದೆ. ಅಲ್ಲದೆ ಉಚಿತ ಸ್ಥಿರ ತೂಕದೊಂದಿಗೆ ಗರಿಷ್ಠ 100 ಕೆಜಿ ತೂಕವಿದೆ.

*ನೀವು ಎಸಿ ಕೋಚ್ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದರೆ, ನೀವು 70 ಕೆಜಿಯ ಉಚಿತ ನಿಗದಿತ ತೂಕವನ್ನು ಪಡೆಯುತ್ತೀರಿ ಮತ್ತು ಇಲ್ಲಿ ಕನಿಷ್ಠ ಹೆಚ್ಚಿನ 15 ಕೆಜಿ ಇರುತ್ತದೆ. ಇಲ್ಲಿ ಗರಿಷ್ಠ ತೂಕದ ಮಿತಿ 150 ಕೆ.ಜಿ. ನೀಡಲಾಗುತ್ತದೆ.

*ಹೊಸ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಸ್ಲೀಪರ್ ಕ್ಲಾಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು 40 ಕೆಜಿ ವರೆಗೆ ತೆಗೆದುಕೊಳ್ಳಲು ಅನುಮತಿಸಲಾಗಿದೆ. ನಿಗದಿತ ಮಿತಿಯನ್ನು ಮೀರಿದರೆ ಪಾವತಿಸಬೇಕಾಗುತ್ತದೆ. ಎರಡನೇ ದರ್ಜೆಯಲ್ಲಿ ಪ್ರಯಾಣಿಸುವವರಿಗೆ 35 ಕೆಜಿಯವರೆಗಿನ ಸಾಮಾನುಗಳನ್ನು ಮಾತ್ರ ಸಾಗಿಸಲು ಅವಕಾಶವಿದೆ.

 ವಾಲ್ಯೂಮೆಟ್ರಿಕ್ ಆಧಾರ ಮೇಲೆ ಶುಲ್ಕ

ವಾಲ್ಯೂಮೆಟ್ರಿಕ್ ಆಧಾರ ಮೇಲೆ ಶುಲ್ಕ

ವರದಿಗಳ ಪ್ರಕಾರ, 100 ಕೆಜಿಗಿಂತ ಹೆಚ್ಚು ತೂಕವಿರುವ ಅಥವಾ ಹೊರಗಿನ ಅಳತೆಯಲ್ಲಿ ಮೀರುವ ಲೆಗೇಜ್‌ಗಳ ಮೇಲೆ ಭಾರೀ ಶುಲ್ಕವನ್ನು ವಿಧಿಸಲಾಗುತ್ತದೆ. ಪ್ಯಾಕೇಜ್ ನೀಡಿದ ಆಯಾಮವನ್ನು ಮೀರಿದರೆ ಅದರ ನಿಜವಾದ ತೂಕವನ್ನು ಲೆಕ್ಕಿಸದೆಯೇ ಅದನ್ನು ಬೃಹತ್ ಪ್ಯಾಕೇಜ್ ಎಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ವಾಲ್ಯೂಮೆಟ್ರಿಕ್ ಆಧಾರವು ಅಪೇಕ್ಷಿತ ಅಳತೆಯ ಶೇ.10ರಷ್ಟು ಮೀರದಿದ್ದರೆ 100 ಕೆಜಿ ತೂಕವಿದ್ದರೆ, ಅದನ್ನು ಬೃಹತ್ ಪ್ರಮಾಣದಲ್ಲಿ ಪರಿಗಣಿಸಲಾಗುವುದಿಲ್ಲ. ಬ್ಯಾಗೇಜ್ ಮಿತಿಯನ್ನು ಮೀರಿರುವುದು ಕಂಡುಬಂದಲ್ಲಿ ಶುಲ್ಕಗಳು ಸಾಮಾನ್ಯ ದರಕ್ಕಿಂತ ದ್ವಿಗುಣವಾಗಿರುತ್ತದೆ. ಪ್ರಯಾಣದ ಮಧ್ಯೆ ಹೆಚ್ಚುವರಿ ಲಗೇಜ್‌ನೊಂದಿಗೆ ಸಿಕ್ಕಿಬಿದ್ದರೆ 654 ರೂಪಾಯಿ ದಂಡ ತೆರಬೇಕಾಗುತ್ತದೆ.

ಬ್ಯಾಗ್‌, ಸಾಮಾನು, ಬ್ಯಾಗೇಜ್‌ ಸಾಗಿಸಲು 100 cm x 60 cm x 25 cm ಗಾತ್ರದಲ್ಲಿರಬೇಕು. ನೀವು AC 3 ಶ್ರೇಣಿ ಮತ್ತು AC ಕುರ್ಚಿ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದರೆ, ಲಗೇಜ್ ಗಾತ್ರವು 55 cm x 45 cm x 22.5 cmಗಿಂತ ಹೆಚ್ಚಿರಬಾರದು.

 ಎಷ್ಟು ದಂಡ ವಿಧಿಸಲಾಗುತ್ತದೆ?

ಎಷ್ಟು ದಂಡ ವಿಧಿಸಲಾಗುತ್ತದೆ?

ಪ್ರಯಾಣಿಕರು ಉಚಿತ ಬ್ಯಾಗೇಜ್‌ಗಿಂತ ಹೆಚ್ಚಿನದನ್ನು ಸಾಗಿಸುತ್ತಿದ್ದರೆ ಬುಕ್ ಮಾಡಲು ಅನುಮತಿಸಲಾಗಿದೆ. ಇದಕ್ಕಾಗಿ ನೀವು ಲಗೇಜ್ ಸ್ಕೇಲ್ ದರದ ಪ್ರಕಾರ ನಿಗದಿತ ಮೊತ್ತವನ್ನು ಪಾವತಿಸಬೇಕು.

ಪ್ರಯಾಣದ ಸಮಯದಲ್ಲಿ ಒಟ್ಟು ಬ್ಯಾಗೇಜ್ ತೂಕವು ಉಚಿತ ನಿಗದಿತ ತೂಕಕ್ಕಿಂತ ಹೆಚ್ಚಿರುವುದು ಕಂಡುಬಂದರೆ ಆದರೆ ಅದು ಕನಿಷ್ಠ ಭತ್ಯೆಯೊಳಗೆ ಇದ್ದರೆ, ನಿಮಗೆ ಲಗೇಜ್ ಸ್ಕೇಲ್ ದರದ 1.5 ಪಟ್ಟು ವಿಧಿಸಲಾಗುತ್ತದೆ. ಇದೇ ಸಮಯದಲ್ಲಿ ಪ್ರಯಾಣಿಕರ ಲಗೇಜ್‌ನ ತೂಕವು ಗರಿಷ್ಠ ತೂಕಕ್ಕಿಂತ ಹೆಚ್ಚಿರುವುದು ಕಂಡುಬಂದರೆ, ಲಗೇಜ್ ಸ್ಕೇಲ್ ದರವನ್ನು 6 ಪಟ್ಟು ಪಾವತಿಸಬೇಕಾಗುತ್ತದೆ.

 ರೈಲು ಬ್ಯಾಗೇಜ್‌ಗಳ ಮಾಪನ

ರೈಲು ಬ್ಯಾಗೇಜ್‌ಗಳ ಮಾಪನ

ಪ್ರಯಾಣಿಕರು ಟ್ರಂಕ್‌ಗಳು, ಸೂಟ್‌ಕೇಸ್‌ಗಳು ಮತ್ತು ಬಾಕ್ಸ್‌ಗಳನ್ನು ಕೊಂಡೊಯ್ಯಬಹುದು, ಅದರ ಬಾಹ್ಯ ಅಳತೆಯು 100 cm x 60 cm x 25 cm (ಉದ್ದ x ಅಗಲ x ಎತ್ತರ) ಆಗಿರಬೇಕು. ಇದಕ್ಕಿಂತ ಹೆಚ್ಚು ಇದ್ದರೆ, ಇದಕ್ಕಾಗಿ ಪ್ರಯಾಣಿಕರು ಬ್ರೇಕ್ ವ್ಯಾನ್‌ನ್ನು ಬುಕ್ ಮಾಡಬೇಕಾಗುತ್ತದೆ ಅಥವಾ ರೈಲು ಸರಕು ಸೇವಾ ವಿಭಾಗದಲ್ಲೂ ನೀವು ನಿಮ್ಮ ಹೆಚ್ಚು ಭಾರವಿರುವ ವಸ್ತು ಅಥವಾ ಬ್ಯಾಗೇಜ್‌ಗಳನ್ನು ಸಾಗಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+