ನಾಳೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ Google Pixel 8a: ಈ ಫೋನ್‌ ಬೆಲೆ ಹಾಗೂ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

ಮಾರುಕಟ್ಟೆಗೂ ದಿನವೂ ಒಂದಿಲ್ಲಾ ಒಂದು ಕಂಪನಿಯ ಮೊಬೈಲ್‌ಗಳು ಮಾರುಕಟ್ಟೆಗೆ ಬಿಡುಗಡೆ ಆಗುತ್ತವೆ. ಆದರೆ ತನ್ನ ವಿಭಿನ್ನ ತಂತ್ರಜ್ಞಾನ ಹಾಗೂ ವಿಶೇಷ ಗುಣ ಲಕ್ಷಣಗಳೊಂದಿಗೆ ಭಾರತದ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಸಿದ್ಧವಾಗಿದೆ ಗೂಗಲ್‌ ಪಿಕ್ಸಲ್‌ 8 ಎ.

ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ ಪಿಕ್ಸಲ್‌ಗೂ ಮೊದಲ ಸ್ಥಾನ. ಈ ಕಂಪನಿಯ ಮೊಬೈಲ್‌ಗಳು ಯೂಸರ್‌ ಫ್ರೆಂಡ್ಲಿ ಇದ್ದು, ಹ್ಯಾಂಡಿಯಾಗಿವೆ. ಹೀಗಾಗಿ ಈ ಮೊಬೈಲ್‌ಗಳು ಗ್ರಾಹಕರ ನೆಚ್ಚಿನ ಫೋನ್‌ಗಳಾಗಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ಇದೇ ಕಂಪನಿಯ ಗೂಗಲ್‌ ಪಿಕ್ಸಲ್‌ 7 ಮೊಬೈಲ್ ಇದ್ದು, ಇದರ ಅಪ್‌ಡೇಟ್‌ ವರ್ಷನ್‌ ಮಂಗಳವಾರ (ಮೇ 14) ಮಾರುಕಟ್ಟೆಗೆ ಲಗ್ಗೆ ಇಡಲಿದೆ.

Introducing the Google Pixel 8a in India Key Specifications Features and More

ಗೂಗಲ್‌ ಪಿಕ್ಸಲ್‌ 8ಎ ಬೆಲೆ ಎಷ್ಟು?

ಬೆಲೆ ಎಷ್ಟು: ಗೂಗಲ್‌ ಪಿಕ್ಸಲ್‌ 8ಎ ಆರಂಭಿಕ ಬೆಲೆ 52,999 ರೂಪಾಯಿ ಆಗಿದೆ. ಪ್ರೀಮಿಯಂ ಫೋನ್‌ಗಳ ಶ್ರೇಣಿಯಲ್ಲಿ ಕಾಣಿಸಿಕೊಳ್ಳುವ ಈ ಫೋನ್‌ ಸಖತ್‌ ಸ್ಲಿಂ ಆಗಿದೆ. ಇನ್ನು ಸದ್ಯ ಮಾರುಕಟ್ಟೆಯಲ್ಲಿ ಲಭ್ಯ ಇರುವ ಗೂಗಲ್‌ ಪಿಕ್ಸಲ್‌ 7ಎ ಬೆಲೆ 43,999 ಆಗಿದೆ. ಗೂಗಲ್‌ ಪಿಕ್ಸಲ್‌ 7ನಲ್ಲಿ 128 ಸ್ಟೋರೇಜ್‌ ಇದ್ದು, ಗೂಗಲ್‌ ಪಿಕ್ಸಲ್‌ 8ಎ ನಲ್ಲಿ ಇಂಟರ್ನಲ್‌ ಸ್ಟೋರೇಜ್‌ 256 ಜಿಬಿ ವರೆಗೂ ಹೆಚ್ಚಿದೆ.

ಪಿಕ್ಸಲ್ 7ಕ್ಕೆ ಹೋಲಿಸದರೆ ಪಿಕ್ಸಲ್‌ 8ರಲ್ಲಿ ಏನೆಲ್ಲಾ ಅಪ್‌ಡೇಟ್‌ ಇದೆ

ಈ ಕಂಪನಿಯ ಫೋನ್‌ಗಳು ಎರಡು ರೂಪಾಂತರಗಳಲ್ಲಿ ಬರಲಿದ್ದು, ಗೂಗಲ್‌ ಪಿಕ್ಸಲ್‌ 8, ಗೂಗಲ್‌ ಪಿಕ್ಸಲ್‌ 8 ಪ್ರೋ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯ. ಈ ಮೊಬೈಲ್‌ನಲ್ಲಿ ಗೂಗಲ್‌ ಟೆನ್ಸರ್‌ ಜಿ3 ಚಿಪ್‌ಸೆಟ್‌ ನೀಡಲಾಗಿದೆ. ಗೂಗಲ್‌ ಪಿಕ್ಸಲ್‌ 7 ಸರಣಿಯಲ್ಲಿ ಟೆನ್ಸರ್‌ ಜಿ2 ಚಿಪ್‌ಸೆಟ್‌ ನೀಡಲಾಗಿದೆ. ಇನ್ನು ಹೊಸ ಪ್ರೊಸೆಸರ್‌ ಸ್ಪೀಡ್ ಆಗಿ ಕೆಲಸ ನಿರ್ವಹಿಸುತ್ತದೆ ಎಂದು ನಂಬಲಾಗಿದೆ.

ಬ್ಯಾಟರಿ ಎಷ್ಟು mAh ಹೊಂದಿದೆ?

ಗೂಗಲ್‌ ಪಿಕ್ಸಲ್‌ 7 ಸರಣಿಯ ಫೋನ್‌ಗೆ ಹೋಲಿಸಿದರೆ, ಗೂಗಲ್‌ ಪಿಕ್ಸಲ್‌ 8 ಸಖತ್‌ ಅಪ್‌ಡೇಟ್‌ ಆಗಿದೆ. ಗೂಗಲ್‌ ಪಿಕ್ಸಲ್‌ 7 90 HZ ರಿಫ್ರೆಶ್‌ ರೇಟ್ ಹೊಂದಿದ್ದರೆ, ಗೂಗಲ್‌ ಪಿಕ್ಸಲ್‌ 8 120 HZ ರಿಫ್ರೆಶ್‌ ರೇಟ್ ಹೊಂದಿದೆ. ಇನ್ನು ಗೂಗಲ್‌ ಪಿಕ್ಸಲ್‌ 8 ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ 4,492mAh ಬ್ಯಾಟರಿಯನ್ನು ಹೊಂದಿದೆ.

ಗೂಗಲ್‌ ಪಿಕ್ಸಲ್‌ 7 ಸರಣಿಯ ಫೋನ್‌ಗಳಂತೆ ಕಾಣುವ ಗೂಗಲ್‌ ಪಿಕ್ಸಲ್‌ 8 ಹಲವು ವೈಶಿಷ್ಠ್ಯಗಳೊಂದಿಗೆ ಮಾರಾಟಕ್ಕಿವೆ. ಈ ಎರಡೂ ಫೋನ್‌ಗಳ ಲುಕ್‌ ಹಾಗೂ ಇದರ ತೂಕ ಸಮನಾಗಿದೆ. ಗೂಗಲ್‌ ಪಿಕ್ಸಲ್‌ 8 ನಾಲ್ಕು ಬಣ್ಣಗಳಿಗೆ ಗ್ರಾಹಕರನ್ನು ಆಕರ್ಷಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+