ತಂಪು ಪಾನೀಯ, ಐಸ್ ಕ್ರೀಂ ಸೇವನೆಯಿಂದ ಕ್ಯಾನ್ಸರ್ ಬರುತ್ತಾ? ಸಂಶೋಧನಾ ವರದಿ ಏನು ಹೇಳುತ್ತೆ?
ಬೆಂಗಳೂರು, ಏ. 15: ಸಿಹಿ ಇಲ್ಲದೇ ನಾವು ಆಹಾರ ಸೇವಿಸಲ್ಲ. ಟೀ, ಕಾಫಿ ಕುಡಿಯುವಾಗಲೂ ಸ್ವಲ್ಪ ಸಕ್ಕರೆ ಹಾಕಿಕೊಂಡ್ರೇನೆ ಟೇಸ್ಟ್ ಅಂತ ಸಿಹಿ ಮೊರೆ ಹೋಗುವರೇ ಜಾಸ್ತಿ. ಇನ್ನು ಸಿಹಿ ತಿನಿಸು ವಿಚಾರಕ್ಕೆ ಬಂದರೆ ಐಸ್ ಕ್ರೀಮ್, ಸೋಡಾ, ಕೂಲ್ ಡ್ರಿಂಕ್ ಕುಡಿಯದೇ ಇರುವರೇ ಅಪರೂಪ. ಸಕ್ಕರೆ ಬದಲಿಗೆ ಕೃತಕ ಸಿಹಿಕಾರಕ ಬಳಿಸಿ ತಯಾರಿಸಿದ ಪದಾರ್ಥಗಳ ಸೇವನೆಯಿಂದ ಜೀವಕ್ಕೆ ಅಪಾಯ ತಂದೊಡ್ಡುವ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ ಎಂಬ ಆಘಾತಕಾರಿ ಸಂಗತಿ ಸಂಶೋಧನಾ ವರದಿಯೊಂದು ಬಹಿರಂಗ ಪಡಿಸಿದೆ.
ಕೃತಕ ಸಿಹಿಕಾರಕ (ಆಸ್ಪರ್ಟೇಮ್, ಅಸೆಸಲ್ಫೇಮ್ ಪೊಟ್ಯಾಸಿಯಮ್) ಬಳಸಿ ತಯಾರಿಸಿದ ಕೂಲ್ ಡ್ರಿಂಕ್, ಐಸ್ ಕ್ರೀಂ, ಮತ್ತಿತರ ಪದಾರ್ಥಗಳ ಅತಿ ಸೇವನೆಯಿಂದ ಶೇ. 13 ಪಟ್ಟು ವಿವಿಧ ಕ್ಯಾನ್ಸರ್ ರೋಗಗಳಿಗೆ ತುತ್ತಾಗುವ ಅಪಾಯವಿದೆ ಎಂಬ ಆಘಾತಕಾರಿ ಸಂಗತಿಯನ್ನು ಅಧ್ಯಯನವರದಿ ಬಹಿರಂಗ ಪಡಿಸಿದೆ. ಎಚ್‌ಸಿಜಿ ಸೆಂಟರ್ ಪರ್ ಅಕಾಡೆಮಿಕ್ ರಿಸರ್ಚ್ ನಡೆಸಿದ ಈ ಅಧ್ಯಯನ ವರದಿಯ ವಾಸ್ತವ ಸಂಗತಿಗಳು ಇಲ್ಲಿವೆ.
ಆಸ್ಪರ್ಟೇಮ್ ಕೃತಕ ಸಿಹಿಕಾರಕ ಪದಾರ್ಥಗಳ ಸೇವನೆಯಿಂದ ಶೇ. 22 ಪಟ್ಟು ಕ್ಯಾನ್ಸರ್ ರೋಗಕ್ಕೆ ತುತ್ತಾಗಲಿದ್ದಾರೆ. ಶೇ. 15 ರಷ್ಟು ಒಬೇಸಿಟಿಗೆ ಸಂಬಂಧಿಸಿದ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಅಪಾಯವಿದೆ. ಆಹಾರ ಪದಾರ್ಥಗಳಲ್ಲಿ ಕೃತಕ ಸಿಹಿಕಾರಕಗಳನ್ನು ಬಳಸುವ ಬಗ್ಗೆ ಆರೋಗ್ಯ ಸಂಸ್ಥೆಗಳು ನಡೆಸಿದ ಅಧ್ಯಯನ ವರದಿಗಳು ಈ ಮಹತ್ವದ ಅಂಶವನ್ನು ಬಹಿರಂಗ ಪಡಿಸಿವೆ.

ಸಕ್ಕರೆ ಬದಲು ಕೃತಕ ಸಿಹಿ
ಇವತ್ತಿನ ಆಹಾರ ಉದ್ಯಮ ಬಹುತೇಕ ಸಕ್ಕರೆ ಬದಲಿಗೆ ಪರ್ಯಾವಾಗಿ ಕೃತಕ ಸಿಹಿಕಾರಕಗಳನ್ನೇ ಬಳಸಿ ಆಹಾರ ಪದಾರ್ಥಗಳನ್ನು ತಯಾರಿಸುತ್ತಿವೆ. ಜ್ಯೂಸ್, ಕೂಲ್ ಡ್ರಿಂಕ್, ಐಸ್ ಕ್ರೀಮ್ , ಓಟ್ಸ್ ವಿಚಾರಕ್ಕೆ ಬಂದರೆ, ಸಕ್ಕರೆ ಬದಲಿಗೆ ಕೃತಕ ಸಿಹಿಕಾರಕಗಳನ್ನೇ ಉಪಯೋಗಿಸಲಾಗುತ್ತಿದೆ. ಆದರೆ ಈ ಕೃತಕ ಸಿಹಿಕಾರಕಗಳನ್ನು ಬಳಸುವುದರಿಂದ ಎದುರಾಗುವ ತೊಂದರೆಗಳ ಬಗ್ಗೆ ಮೊದಲಿನಿಂದಲೂ ದೊಡ್ಡ ವಾದ- ವಿವಾದ- ಗೊಂದಲ ಇದ್ದೇ ಇವೆ. ಈ ಬಗ್ಗೆ ನಡೆಸಿದ ಅಧ್ಯಯನ ವರದಿಗಳು ಸಾಕ್ಷಿಗಳ ಕೊರತೆಯಿಂದ ಮಹತ್ವ ಕಳೆದುಕೊಂಡಿದ್ದವು. ಇತ್ತೀಚೆಗೆ ನಡೆಸಿದ ಅಧ್ಯಯನ ವರದಿ ಮಾತ್ರ ಅಪಾಯಕಾರಿ ವಿವಿಧ ರೀತಿಯ ಕ್ಯಾನ್ಸರ್ ರೋಗಗಳಿಗೆ ತುತ್ತಾಗುವ ಬಗ್ಗೆ ಅಧ್ಯಯನ ವರದಿ ಬೆಳಕು ಚೆಲ್ಲಿದೆ.

ಅಧ್ಯಯನ ವರದಿ ಅಂಶಗಳು:
ಕೃತಕ ಸಿಹಿಕಾರಕಗಳ ಸೇವನೆಯಿಂದ ಬರುವ ಕಾಯಿಲೆಗಳ ಬಗ್ಗೆ ನಡೆಸಿದ ಅಧ್ಯಯನಕ್ಕೆ ಬರೋಬ್ಬರಿ 102,865 ಮಂದಿಯನ್ನು ಬಳಸಿಕೊಳ್ಳಲಾಗಿದೆ. 2009 ರಿಂದ 2021 ರ ಅವಧಿಯಲ್ಲಿ ಕೃತಕ ಸಿಹಿಕಾರಕ ಬಳಸುವರನ್ನು ಈ ಸಂಶೋಧನೆಗೆ ಒಳಪಡಿಸಲಾಗಿದೆ. ವಯಸ್ಸು, ಅವರ ಚಟಗಳು, ಮದ್ಯ ಸೇವನೆ, ಕ್ಯಾನ್ಸರ್ ಕುರಿತ ಕುಟುಂಬದ ಇತಿಹಾಸ ನಾನಾ ರೀತಿಯ ಮಾನದಂಡ ಅನುಸರಿಸಲಾಗಿದೆ. ಕೃತಕ ಸಿಹಿಕಾರಕ ಬಳಸುವ ಡೈರಿ ಉತ್ಪನ್ನ, ಜ್ಯೂಸ್, ಕೂಲ್ ಡ್ರಿಂಕ್ ಬಳಕೆ ಮಾಡುವರನ್ನು ಈ ಸಂಶೋಧನೆಗೆ ಒಳಪಡಿಸಲಾಗಿದೆ.
ಇದರಲ್ಲಿ ಕೂಲ್ ಡ್ರಿಂಕ್, ಡೈರಿ ಉತ್ಪನ್ನ, ಓಟ್ಸ್ ಮತ್ತಿತರ ಉತ್ಪನ್ನಗಳಿಗೆ ಸಕ್ಕರೆ ಬದಲಿಗೆ ಪರ್ಯಾಯವಾಗಿ ಬಳಕೆ ಮಾಡುವ ಅಸ್ಪರ್ಟೇಮ್ ( ಕೃತಕ ಸಿಹಿಕಾರಕ) ಬಳಕೆ ಮಾಡುವರ ಪೈಕಿ 3,358 ಮಂದಿ ಕ್ಯಾನ್ಸರ್‌ಗೆ ತುತ್ತಾಗುವ ಲಕ್ಷಣ ಕಂಡು ಬಂದಿದೆ. ಮಹಿಳೆಯರಲ್ಲಿ ಅತಿ ಹೆಚ್ಚಾಗಿ ಸ್ಥನ ಕ್ಯಾನ್ಸರ್‌ಗೆ ತುತ್ತಾಗುವ ಆಘಾತಕಾರಿ ಸಂಗತಿ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಒಬೇಸಿಟಿ ಸಂಬಂಧಿ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುವ 2,023 ಕೇಸ್ ದಾಖಲಾಗಿವೆ. ಒಟ್ಟಾರೆ ಈ ಸಂಶೋಧನೆಯ ತಾತ್ಪರ್ಯ ಇಷ್ಟೇ. ಸಕ್ಕರೆಗೆ ಪರ್ಯಾಯವಾಗಿ ಬಳಕೆ ಮಾಡಿ ತಯಾರಿಸಿದ ಆಹಾರ ಉತ್ಪನ್ನಗಳ ಸೇವನೆಯಿಂದ ವಿವಿಧ ರೀತಿಯ ಕ್ಯಾನ್ಸರ್ ರೋಗಗಳಿಗೆ ತುತ್ತಾಗುವ ಅಪಾಯವಿದೆ ಎಂಬ ಸತ್ಯವನ್ನು ಸಂಶೋಧನಾ ವರದಿ ಬಹಿರಂಗಪಡಿಸಿದೆ.

ಅಸೆಸಲ್ಫೇಮ್, ಪೊಟಾಷಿಯಂ:
ಅಸೆಸಲ್ಪೇಮ್ ಪೊಟಾಷಿಯಂ ಎಂದರೆ ಕೃತಕ ಸಿಹಿಕಾರಕ. ಇದನ್ನು E950 ಅಂತಲೂ ಕರೆಯುತ್ತಾರೆ. ಇದರ ಉತ್ಪಾದಕರು ಸ್ವೀಟ್ ಒನ್ ಮತ್ತು ಸನೆಟ್ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಾರೆ. ಇದು ಸಕ್ಕರೆಗಿಂತಲೂ ಶೇ. 200 ಪಟ್ಟು ಹೆಚ್ಚು ಸಿಹಿಯಾಗಿರುತ್ತದೆ. ಆಹಾರ ಉತ್ಪನ್ನ ಮತ್ತು ಕೂಲ್ ಡ್ರಿಂಕ್ ಸ್ವೀಟ್‌ಗೆ ಇದೇ ಕಾರಣ. ಸಕ್ಕರೆಗಿಂತಲೂ ಹೆಚ್ಚು ಸಿಹಿ ಇರುವ ಕಾರಣ, ನಾಲಿಗೆಗೆ ರುಚಿ ಜಾಸ್ತಿ ಸಿಗುತ್ತದೆ. ಹೀಗಾಗಿ ಒಮ್ಮೆ ಸೇವಿಸಿದ ಜನ ಪದೇ ಪದೇ ಸೇವನೆಗೆ ಮುಂದಾಗುತ್ತಾರೆ. ಕೇಕ್, ಬ್ರೆಡ್, ಕೂಲ್ ಡ್ರಿಂಕ್ ಸೇರಿದಂತೆ ನಾನಾ ಸಿಹಿ ಪದಾರ್ಥಗಳಿಗೆ ಈ ಕೃತಕ ಸಿಹಿಕಾರಕವನ್ನೇ ಬಳಿಸಿ ತಯಾರಿಸುತ್ತಾರೆ. ಡೈರಿ ಉತ್ಪನ್ನ, ಐಸ್ ಕ್ರೀಮ್, ಡೆಸರ್ಟ್, ಕೂಲ್ ಡ್ರಿಂಕ್, ಜ್ಯೂಸ್, ಫ್ರೂಟ್ ಜ್ಯೂಸ್, ಹಾಲ್ಕೋ ಹಾಲ್, ಜಾಮ್, ಜೆಲ್ಲಿ, ಚೂಯಿಂಗ್ ಗಮ್, ಟೂತ್ ಪೇಸ್ಟ್, ಮೌತ್ ವಾಶ್, ಹಾಲಿನ ಪದಾರ್ಥಗಳಿಗೆ ಇದನ್ನೇ ಬಳಸಲಾಗುತ್ತದೆ. ಅಸ್ಪರ್ಟೇಮ್ ಸಹ ಸಕ್ಕರೆಗೆ ಪರ್ಯಾಯವಾಗಿ ಬಳಸುವ ಕೃತಕ ಸಿಹಿಕಾರಕ. ಇದನ್ನು ಸಹ ಮೇಲಿನ ಪದಾರ್ಥಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಜನರು ಎಚ್ಚರಿಕೆ ವಹಿಸಬೇಕು
"ಇವತ್ತಿನ ಬಹುತೇಕ ಆಹಾರ ಪದಾರ್ಥಗಳಲ್ಲಿ ಕೃತಕ ಸಿಹಿಕಾರಕಗಳನ್ನೇ ಬಳಸಲಾಗುತ್ತದೆ. ಸಕ್ಕರೆಗೆ ಪರ್ಯಾಯವಾಗಿ ಕೃತಕ ಸಿಹಿಕಾರಕ ಬಳಸಿ ತಯಾರಿಸಿದ ಉತ್ಪನ್ನಗಳ ಸೇವನೆಯಿಂದ ನಾನಾ ರೀತಿಯ ಕ್ಯಾನ್ಸರ್ ರೋಗಗಳು ಬರುವ ಸಂಭವವಿದೆ ಎಂಬುದನ್ನು ಅಧ್ಯಯನ ವರದಿ ಬಹಿರಂಗಪಡಿಸಿದೆ. ಕೃತಕ ಸಿಹಿಕಾರಕ ಪದಾರ್ಥಗಳ ಸೇವನೆ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು."
- ಡಾ. ಯು.ಎಸ್. ವಿಶಾಲ್ ರಾವ್ , ಕ್ಯಾನ್ಸರ್ ತಜ್ಞರು, ಎಚ್ ಸಿಜಿ ಸೆಂಟರ್ ಫರ್ ರಿಸರ್ಚ್ ಅಕಾಡೆಮಿ,
-
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ವಾಸ್ತು ಅನುಸರಿಸುವುದು ಏಕೆ ಮುಖ್ಯ? ತಿಳಿಯಿರಿ ಕಾರಣಗಳು -
Top 3 Job Sectors: 2026ರಲ್ಲಿ ಯಾವ ಕ್ಷೇತ್ರ ಆಯ್ಕೆ ಮಾಡಬೇಕು? ಟಾಪ್ 3 ಉದ್ಯೋಗ ವಲಯಗಳು -
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications