Maha Kumbh Mela 2025: ಮಹಾ ಕುಂಭಮೇಳಕ್ಕಾಗಿ ಮೊದಲ ಡೋಮ್ ಸಿಟಿ ನಿರ್ಮಾಣ, ಏನಿದರ ವಿಶೇಷ?

ಮಹಾ ಕುಂಭಮೇಳ-2025ಕ್ಕೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ ಸಜ್ಜಾಗಿದೆ. ಕೋಟ್ಯಂತರ ಭಕ್ತಾದಿಗಳು ಸೇರಲಿರುವ ಈ ಧಾರ್ಮಿಕ ಹಬ್ಬಕ್ಕೆ ಸಕಲ ತಯಾರಿಗಳು ನೆರವೇರಿವೆ. ಪ್ರವಾಸಿಗರನ್ನು ಕೈಬೀಸಿ ಕರೆಯಲು ಮುಂದಾಗಿರುವ ಉತ್ತರಪ್ರದೇಶ ಪ್ರವಾಸೋದ್ಯಮವು ಪ್ರಯಾಗ್‌ರಾಜ್‌ನಲ್ಲಿ ಮೊದಲ ಡೋಮ್ ಸಿಟಿಯನ್ನು ನಿರ್ಮಿಸಿ ಗಮನ ಸೆಳೆದಿದೆ.

ಪ್ರಯಾಗರಾಜ್‌ನ ಅರೈಲ್ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಡೋಮ್ ಸಿಟಿಯು 176 ಅತ್ಯಾಧುನಿಕ ಕಾಟೇಜ್‌ಗಳನ್ನು ಒಳಗೊಂಡಿದೆ. ಇವು ಸಂಪೂರ್ಣ ಹವಾನಿಯಂತ್ರಿತ (ಎಸಿ) ವ್ಯವಸ್ಥೆ ಹೊಂದಿವೆ. ಪ್ರವಾಸಿಗರ ಅನುಕೂಲಕ್ಕಾಗಿ ಇದರಲ್ಲೇ ಗೀಸರ್‌ಗಳು ಮತ್ತು ಸಾತ್ವಿಕ್ ಆಹಾರಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಕೂಡ ಹೊಂದಿದೆ. ಪ್ರವಾಸಿಗರ ಭದ್ರತೆಗಾಗಿ 44 ಬುಲೆಟ್ ಪ್ರೂಫ್ ಕಾಟೇಜ್‌ಗಳು ಕೂಡ ಇಲ್ಲಿವೆ.

Indias First Dome City Built In Prayagraj For Maha Kumbh Mela 2025

ಅರೈಲ್ ಪ್ರದೇಶದಲ್ಲಿ ನಿರ್ಮಿಸಿರುವ ಈ ಕಾಟೇಜ್‌ಗಳನ್ನು ಭಾರತದ ಮೊಟ್ಟಮೊದಲ ಡೋಮ್ ಸಿಟಿ ಎನ್ನಲಾಗಿದೆ. ಈ ಆಧ್ಯಾತ್ಮಿಕ ಕಾರ್ಯಕ್ರಮದ ಸಮಯದಲ್ಲಿ ಪ್ರವಾಸಿಗರಿಗೆ ಮರೆಯಲಾಗದ ವಾಸ್ತವ್ಯವನ್ನು ಒದಗಿಸಲು ಈ ಕಾಟೇಜ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಈ ಆಧುನಿಕ ವಸತಿ ಸಂಕೀರ್ಣವು ಪ್ರವಾಸಿಗರಿಗೆ ಉತ್ತಮ ಸೌಕರ್ಯ, ಭದ್ರತೆ ಮತ್ತು ಕುಂಭಮೇಳದ ವಿಹಂಗಮ ನೋಟಗಳನ್ನು ನೀಡುತ್ತದೆ. ಈ ಡೋಮ್ ಸಿಟಿಯು 44 ಅತ್ಯಾಧುನಿಕ ಗುಮ್ಮಟಗಳನ್ನು ಹೊಂದಿವೆ. ಪ್ರತಿ ಗುಮ್ಮಟವು 32x32 ಅಡಿಗಳಷ್ಟು ವಿಸ್ತೀರ್ಣದಲ್ಲಿದೆ. 15-18 ಅಡಿ ಎತ್ತರದಲ್ಲಿ ಇವುಗಳನ್ನು ನಿರ್ಮಿಸಲಾಗಿದೆ. ಹೈಟೆಕ್ 360-ಡಿಗ್ರಿ ಪಾಲಿಕಾರ್ಬೊನೇಟ್ ಶೀಟ್‌ಗಳಿಂದ ನಿರ್ಮಿಸಲಾದ ಈ ಗುಮ್ಮಟಗಳಲ್ಲಿ ಒಳಗಿನಿಂದಲೇ ಹೊರಗಿನ ಪ್ರಪಂಚವನ್ನು ಸ್ಪಷ್ಟವಾಗಿ ನೋಡಬಹುದಾಗಿದೆ.

ಇದರ ಜೊತೆಗೆ ಈ ಕಾಟೇಜ್‌ಗಳು ಬುಲೆಟ್‌ ಪ್ರೂಫ್‌ ಹಾಗೂ ಫೈರ್‌ ಪ್ರೂಫ್‌ ಎನ್ನಲಾಗಿದೆ. ಇಲ್ಲಿ ತಂಗುವ ಅತಿಥಿಗಳಿಗೆ ಸುರಕ್ಷತೆ ಮತ್ತು ಸೌಕರ್ಯವನ್ನು ಕಲ್ಪಿಸುತ್ತದೆ. ಈ ಗುಮ್ಮಟಗಳ ಜೊತೆಗೆ ಡೋಮ್ ಸಿಟಿಯು 176 ಸಂಪೂರ್ಣ ಸುಸಜ್ಜಿತ ಕಾಟೇಜ್‌ಗಳನ್ನು ಸಹ ಒಳಗೊಂಡಿವೆ.

Indias First Dome City Built In Prayagraj For Maha Kumbh Mela 2025

ಈ ಕಾಟೇಜ್‌ಗಳಲ್ಲಿ ಹವಾನಿಯಂತ್ರಣ, ಗೀಸರ್‌ಗಳು ಮತ್ತು ಸಾತ್ವಿಕ ಆಹಾರದ ವ್ಯವಸ್ಥೆಗಳು ಸೇರಿದಂತೆ ಪ್ರವಾಸಿಗರಿಗೆ ಆಧುನಿಕ ಸೌಕರ್ಯಗಳನ್ನು ಒಳಗೊಂಡಿರುತ್ತದೆ ಎಂದು ವರದಿಗಳು ಹೇಳಿವೆ. ಈ ವಸತಿಗಳಲ್ಲಿ ಉಳಿಯುವ ದರಗಳು ಮಹಾಕುಂಭಮೇಳದ ಪ್ರಮುಖ ದಿನಗಳು ಹಾಗೂ ಸಮಯವನ್ನು ಆಧರಿಸಿ ಬದಲಾಗುತ್ತಿರುತ್ತದೆ ಎಂದು ಹೇಳಲಾಗಿದೆ.

ಮಹಾಕುಂಭ ಮೇಳದ ಪ್ರಮುಖ ದಿನಗಳಂದು ಈ ಡೋಮ್‌ ಸಿಟಿಯಲ್ಲಿರುವ ಒಂದು ಗುಮ್ಮಟದ ಬೆಲೆ 1,10,000 ರೂಪಾಯಿ ಎನ್ನಲಾಗಿದೆ. ಆದರೆ ಹಬ್ಬದ ಅವಧಿಯಲ್ಲಿ ಕಾಟೇಜ್‌ಗಳಿಗೆ 81,000 ರೂಪಾಯಿ ಹಾಗೂ ಸಾಮಾನ್ಯ ದಿನಗಳಲ್ಲಿ 41,000 ರೂಪಾಯಿ ದರವನ್ನು ನಿಗದಿ ಮಾಡಲಾಗಿದೆ ಎಂದು ವರದಿಯಾಗಿದೆ. ಸದ್ಯ ಈ ಡೋಮ್‌ ಸಿಟಿಯ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳದಲ್ಲಿ ಯಾತ್ರಾರ್ಥಿಗಳಿಗೆ ಈ ಬಾರಿ ಯಾವುದೇ ತೊಂದರೆಗಳಾಗದಂತೆ ಕ್ಯೂಆರ್‌ ಕೋಡ್‌ ಸ್ಕ್ಯಾನರ್‌ಗಳನ್ನು ರಿಲೀಸ್‌ ಮಾಡಿದ್ದು, ಇದನ್ನು ಸ್ಕ್ಯಾನ್‌ ಮಾಡಿದರೆ ಇಡೀ ಮಹಾಕುಂಭ ಮೇಳದ ಪ್ರಕ್ರಿಯೆ ತಿಳಿದುಕೊಳ್ಳಬಹುದು. ಜನವರಿ 13ರಿಂದ ಫೆಬ್ರವರಿ 26ರವರೆಗೆ ಮಹಾಕುಂಭ ಮೇಳ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+