ಹುಲಿಗೆ ಚೆಲ್ಲಾಟ-ವ್ಯಕ್ತಿಗೆ ಪ್ರಾಣ ಸಂಕಟ: ಫೋಟೋಗೆಂದು ಹೋದವ ಹುಲಿ ದಾಳಿಯಲ್ಲಿ ಜಸ್ಟ್ ಮೀಸ್: Video Viral
Tiger Attacked Video Viral: ಸಾಕು ಪ್ರಾಣಿಯೇ ಆಗಲಿ, ಕಾಡು ಪ್ರಾಣಿಯೇ ಆಗಲಿ ಅವುಗಳೊಂದಿಗೆ ಸಾಧ್ಯವಾದಷ್ಟು ಜಾಗರೂಕವಾಗಿರಬೇಕು. ವ್ಯನ್ಯ ಜೀವಿಗಳು ಇರುವ ಉದ್ಯಾನದಲ್ಲಿ ಪ್ರಾಣಿಗಳ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋದರೆ ಏನೆಲ್ಲ ಅಪಾಯ ಎದುರಾಗಲಿದೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಭಾರತೀಯ ಮೂಲದ ವ್ಯಕ್ತಿ ಮೇಲೆ ಹುಲಿ ಎರಗಿ ದಾಳಿ ಮಾಡಿದ ಘಟನೆ ಥೈಲ್ಯಾಂಡ್‌ನ ಥಾಯ್ ಉದ್ಯಾನದಲ್ಲಿ ನಡೆದಿದೆ.
ಹೌದು, ಥಾಯ್ ಪ್ರಾಣಿ ಉದ್ಯಾನವನದಲ್ಲಿ ಹುಲಿಯೊಂದು ಅನಿರೀಕ್ಷಿತವಾಗಿ ಪ್ರವಾಸಿಗನ ಮೇಲೆ ದಾಳಿ ಮಾಡಿದೆ. ಈ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ದಾಳಿಗೊಳಗಾಗುವ ವ್ಯಕ್ತಿ ಚೀರುವ ಸದ್ದು ನೀವು ಕೇಳಬಹುದಾಗಿದೆ. ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣ ಎಕ್ಸ್ (@sidhshuk) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಘಟನೆಯು ಉದ್ಯಾನಗಳಿಗೆ ಭೇಟಿ ನೀಡಿದ್ದ ವೇಳೆ ಸಂದರ್ಶಕರ ಸುರಕ್ಷತೆ ಹಾಗೂ ಕಾಡು ಪ್ರಾಣಿಗಳೊಂದಿಗೆ ನಿಕಟ ಸಂವಹನ, ಎದುರಾಗುವ ಅಪಾಯ ಕುರಿತು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ವೀಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ಮೂರು ವ್ಯಕ್ತಿಗಳು ಅಕ್ಕ ಪಕ್ಕ ನಡೆದುಕೊಂಡು ಬರುತ್ತಿರುತ್ತಾರೆ. ಅದರಲ್ಲಿ ದಾಳಿಗೆ ಒಳಗಾದ ವ್ಯಕ್ತಿ ಹುಲಿಗೆ ಕಟ್ಟಿದ ಸರಪಳಿ ಒಂದು ಕೈಲಿ ಹಿಡಿದು ಮತ್ತೊಂದು ಕೈ ಹುಲಿ ಮೇಲೆ ಇಟ್ಟಿರುತ್ತಾನೆ. ಪಕ್ಕದಲ್ಲಿದ್ದ ವ್ಯಕ್ತಿ ಉದ್ಯಾನದ ಸಿಬ್ಬಂದಿ ಕೋಲು ಹಿಡಿದಿದ್ದ ಎನ್ನಲಾಗಿದೆ. ಮತ್ತೊಬ್ಬ ವಿಡಿಯೋ ಸೆರೆ ಹಿಡಯುವಲ್ಲಿ ನಿರತವಾಗಿದ್ದ.
ಹೀಗೆ ಮೂವರು ಬರುವಾಗ ಹುಲಿ ಮೇಲೆ ಕೈ ಇಟ್ಟಿದ್ದ ವ್ಯಕ್ತಿ ಮಂಡಿಯೂರಿ ಕೆಳಗೆ ಕೂತು, ಹುಲಿ ಜೊತೆಗೆ ಫೋಟೋ ತೆಗೆದುಕೊಳ್ಳಲು ಮುಂದಾಗುತ್ತಾರೆ. ಅವರ ಮೇಲೆ ಸರಪಳಿಯಿಂದ ಬಂಧಿಸಲ್ಪಟ್ಟ ಹುಲಿ ಏಕಾಎಕಿಯಾಗಿ ಅನಿರೀಕ್ಷಿತ ದಾಳಿ ನಡೆಸಿ ಬಿಡುತ್ತದೆ. ಕಳೆಗೆ ಬಿದ್ದು ಒದ್ದಾಡಿದರೂ ಹುಲಿ ಬಿಡುವುದಿಲ್ಲ. ಆ ವ್ಯಕ್ತಿಯ ಚೀರಾಟ, ಪ್ರಾಣ ಸಂಕಟಗಳು ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲಿದ್ದ ಮೂವರು ಭಯ ಬೀತರಾಗಿದ್ದಾರೆ. ಸದ್ಯ ವ್ಯಕ್ತಿಗೆ ಗಾಯಗಳಾಗಿದೆ,ಆದರೆ ವ್ಯಕ್ತಿಯ ನಿಖರ ಮತ್ತು ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ.
ಹುಲಿಗಳನ್ನು ಸಾಕು ಪ್ರಾಣಿಗಳಂತೆ ಸಾಕುವ ಸ್ಥಳಗಳಲ್ಲಿ ಥೈಲಾಂಡ್‌ನ ಈ ಉದ್ಯಾನ ಸಹ ಒಂದಾಗಿದೆ. ಇಲ್ಲಿ ಬಂದವರು ಹುಲಿಗಳ ಜೊತೆಗೆ ಸೆಲ್ಫಿ ತೆಗೆದುಕೊಳ್ಳಬಹುದು, ಅವುಗಳಿಗೆ ಆಹಾರ ನೀಡಬಹುದು ಎಂಬಿತ್ಯಾದಿ ಬೋರ್ಡ್‌ಗಳನ್ನು ನೋಡಬಹುದಾಗಿದೆ. ಈ ಘಟನೆಯು ವನ್ಯಜೀವಿ ಪ್ರವಾಸೋದ್ಯಮ ತಾಣಗಳ ಭೇಟಿ, ಸುರಕ್ಷತೆ ಕುರಿತು ಕೆಲವು ಆತಂಕಗಳನ್ನು ಹೊರ ಹಾಕಿದೆ.
Apparently an Indian man attacked by a tiger in Thailand.
— Sidharth Shukla (@sidhshuk) May 29, 2025
This is one of those paces where they keep tigers like pets and people can take selfies, feed them etc etc.#Indians #tigers #thailand #AnimalAbuse pic.twitter.com/7Scx5eOSB4
ಜವಾಬ್ದಾರಿಯಿಂದ ವರ್ತಿಸಿಬೇಕು, ಸಲುಗೆ ಬೇಡ
ಇನ್ನೂ ವಿಡಿಯೋ ನೋಡಿದ ಕೆಲವರು ಕಾಮೆಂಟ್ ಮಾಡಿದ್ದಾರೆ. ಹುಲಿ ದಾಳಿ ಘಟನೆ ವನ್ಯಜೀವಿ ಪ್ರವಾಸೋದ್ಯಮದ ಕುರಿತು ಒಂದಷ್ಟು ಪ್ರಶ್ನೆಗಳ ಸೃಷ್ಟಿಗೆ ಕಾರಣವಾಗಿದೆ. ಏನೇ ಆದರೆ ಕಾಡು ಪ್ರಾಣಿಗಳ ಜೊತೆ ಸಲಗೆ ಸರಿಯಲ್ಲ ಎಂದು ಒಬ್ಬರು ಹೇಳಿದ್ದಾರೆ. ಮನೆಯಲ್ಲಿರುವ ಬೆಕ್ಕುಗಳು ಸಾಮಾನ್ಯವಾಗಿ ಕೆಳಗಿನ ದೇಹದ ಹೊಟ್ಟೆ ಭಾಗದ ಸ್ಪರ್ಶಿಸಿದರೆ ಅವು ಇಷ್ಟಪಡುವುದಿಲ್ಲ, ಕೆಲವೊಮ್ಮೆ ಕೆರಳುತ್ತವೆ. ಈ ವ್ಯಕ್ತಿ ಅಂತಹ ಪರಿಸ್ಥಿತಿ ಎದುರಿಸಿದ್ದಾನೆ ಅನ್ನಿಸುತ್ತದೆ ಎಂದು ತಿಳಿಸಿದ್ದಾರೆ.
ಮನುಷ್ಯರು ಯಾವುದೇ ಸ್ಥಳಕ್ಕೆ ಹೋದರೆ ಅಗತ್ಯ ಎಚ್ಚರಿಕೆ ವಹಿಸಬೇಕು. ಅದರಲ್ಲಿ ವನ್ಯ ಜೀವಗಳ ಜೊತೆಗೆ ಇದ್ದಾಗ ಸಲುಗೆ, ತೀರಾ ಅತಿರೇಕದ ವರ್ತನೆ ಮಾಡದಂತೆ ಕೆಲವರು ಸಲಹೆ ನೀಡಿದ್ದಾರೆ. ಜವಾಬ್ದಾರಿಯುತವಾಗಿ ವರ್ತಿಸುವಂತೆ ತಿಳಿಸಿದ್ದಾರೆ.
-
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
ಮದ್ಯಪಾನದ ಅಭ್ಯಾಸವನ್ನು ನಿಯಂತ್ರಿಸಲು ಬಯಸುತ್ತೀರಾ? ತಜ್ಞರ ಸರಳ ಸಲಹೆಗಳು ಇಲ್ಲಿವೆ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral










Click it and Unblock the Notifications