• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಕೊವಿಡ್ ಲಸಿಕೆ ವಿತರಣೆಗೂ ಮುನ್ನ ಈ ವ್ಯವಸ್ಥೆ ಬೇಕೇ ಬೇಕು

|

ನವದೆಹಲಿ, ಅಕ್ಟೋಬರ್ 08: ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆಗೂ ಮುನ್ನ ಶೈತ್ಯಾಗಾರ(ಕೋಲ್ಡ್ ಸ್ಟೋರೇಜ್) ವ್ಯವಸ್ಥೆಯನ್ನು ಮಾಡಲೇಬೇಕಿದೆ.

ತಜ್ಞರು ಈ ಕುರಿತು ಅಭಿಪ್ರಾಯ ತಿಳಿಸಿದ್ದು, ಲಸಿಕೆ ಸಂಗ್ರಹಿಸುವುದು ಮತ್ತು ಸುರಕ್ಷಿತವಾಗಿ ಜನರಿಗೆ ತಲುಪಿಸುವುದೇ ದೊಡ್ಡ ಸವಾಲು.

ಈಗಾಗಲೇ ಮುಂಚೂಣಿಯಲ್ಲಿರುವ ಲಸಿಕಾ ತಯಾರಕಾ ಕಂಪನಿಗಳಿಗೆ 'ಹೆಚ್ಚುವರಿ ಶೈತ್ಯಾಗಾರಗಳು ಅಗತ್ಯವಾಗಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಲಸಿಕೆಯನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಪರಿಣಾಮಕಾರಿಯಾಗಿ ಸರಬರಾಜು ಮಾಡಲು ಖಾಸಗಿ ಕ್ಷೇತ್ರದವರನ್ನೂ ಬಳಸಿಕೊಳ್ಳಬಹುದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿನ ಲಸಿಕೆಗಳು ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡಾಗ ಶಕ್ತಿಯನ್ನು ಕಳೆದುಕೊಳ್ಳುತ್ತವೆ ಮತ್ತು ಮರು ತಂಪಾಗಿಸುವುದರಿಂದ ಅನುಕೂಲವಾಗುವುದಿಲ್ಲ' ಎಂದು ಅವರು ಹೇಳಿದರು.

ಕಳೆದ ವಾರ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಕೊವಿಡ್-19 ಚಿಕಿತ್ಸೆಗಾಗಿ ಭಾರತಕ್ಕೆ 2021ರ ಜುಲೈ ವೇಳೆಗೆ ಅಂದಾಜು 40ರಿಂದ 50 ಕೋಟಿ ಡೋಸ್‌ ಲಸಿಕೆ ತಲುಪಲಿದ್ದು, ಇದನ್ನು 20ರಿಂದ 25 ಕೋಟಿ ಜನರಿಗೆ ನೀಡಬಹುದು ಎಂದು ಸರ್ಕಾರ ಅಂದಾಜಿಸಿರುವುದಾಗಿ ಹೇಳಿದ್ದಾರೆ.

ಭಾರತದಲ್ಲಿ ಸ್ಪುಟ್ನಿಕ್-V ಲಸಿಕೆ ಪ್ರಯೋಗ: ರಷ್ಯಾಕ್ಕೆ ಹಿನ್ನಡೆ

ಜತೆಗೆ, ಕೇಂದ್ರ ಸರ್ಕಾರ ಈ ಲಸಿಕೆಯನ್ನು ಆದ್ಯತೆಯ ಮೇರೆಗೆ ನೀಡಬೇಕಾಗಿರುವ ಜನರ ಪಟ್ಟಿಯನ್ನು ಅಕ್ಟೋಬರ್ ಅಂತ್ಯಕ್ಕೂ ಮೊದಲು ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.

ನಿರ್ದಿಷ್ಟ ತಾಪಮಾನದಲ್ಲಿರಿಸಬೇಕು

ನಿರ್ದಿಷ್ಟ ತಾಪಮಾನದಲ್ಲಿರಿಸಬೇಕು

ಸಾಕಷ್ಟು ಲಸಿಕೆಗಳನ್ನು ನಿರ್ದಿಷ್ಟ ತಾಪಮಾನದಲ್ಲಿ ಶೇಖರಿಸಿಡಬೇಕೆಂದು ರೋಗನಿರೋಧಕ ತಜ್ಞರು ಹೇಳುತ್ತಾರೆ. ಆದರೆ, ವಾಸ್ತವವಾಗಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಭಾರತದಲ್ಲಿ ಲಸಿಕೆಗಳನ್ನು ನಿರ್ವಹಿಸುವುದು ಕಷ್ಟ. ಲಸಿಕೆಗಳು ಮಾರುಕಟ್ಟೆಗೆ ಹೋಗಲು ಸಿದ್ಧವಾದ ನಂತರವೇ ನಿಜವಾದ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಅವರು ಹೇಳಿದರು.

ಭಾರತದಲ್ಲಿ ಲಸಿಕೆ ಪೂರೈಕೆ ಸವಾಲಿನ ಕೆಲಸ

ಭಾರತದಲ್ಲಿ ಲಸಿಕೆ ಪೂರೈಕೆ ಸವಾಲಿನ ಕೆಲಸ

ಸದ್ಯ ತಯಾರಿಕೆ ಹಂತದ ಮುಂಚೂಣಿಯಲ್ಲಿರುವ ಎಲ್ಲ ಲಸಿಕಾ ಸಂಸ್ಥೆಗಳಿಗೂ ಹೆಚ್ಚು ಕೋಲ್ಡ್‌ ಚೈನ್ ಬೇಕಾಗುವುದಿಲ್ಲ. ಆದರೆ, ಭಾರತದಲ್ಲಿ ಈ ಲಸಿಕೆಗಳನ್ನು ಪೂರೈಸುವುದು ಹೆಚ್ಚು ಸವಾಲಿನ ಕೆಲಸವಾಗುತ್ತದೆ‘ ಎಂದು ನವದೆಹಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನೊಲಾಜಿ (ಎನ್‌ಐಐ) ಯ ಸತ್ಯಜಿತ್ ರಾತ್ ಹೇಳಿದ್ದಾರೆ.

ಪ್ರಯೋಗದ ಮುಂದುವರೆದ ಹಂತ

ಪ್ರಯೋಗದ ಮುಂದುವರೆದ ಹಂತ

ಈಗಾಗಲೇ ಕೆಲವು ಲಸಿಕೆಗಳು ಪ್ರಯೋಗದ ಮುಂದುವರಿದ ಹಂತಗಳಲ್ಲಿವೆ. ಇಂಥ ಲಸಿಕೆಗಳು ಮುಂದಿನ ವರ್ಷದ ಆರಂಭದಲ್ಲೇ ಮಾರುಕಟ್ಟೆಗೆ ಬರಬಹುದು. ಕೊನೆಕ್ಷಣದಲ್ಲಿ ಲಸಿಕೆಯ ಸುರಕ್ಷತೆ ವಿಚಾರದಲ್ಲಿ ಯಾವುದೇ ವ್ಯತ್ಯಾಸಗಳಾಗದಂತೆ ಎಚ್ಚರವಹಿಸುವ ಅಗತ್ಯವಿದೆ.

  Political Popcorn with Lavanya : Satish Jarkiholi, ರಾಗಿ ಮುದ್ದೆ ಗು ಸೈ ಜೋಳದ ರೊಟ್ಟಿಗೆ ಜೈ | part 02
  ಲಸಿಕೆಯನ್ನು ತಣ್ಣನೆಯ ತಾಪಮಾನದಲ್ಲಿರಿಸಬೇಕು

  ಲಸಿಕೆಯನ್ನು ತಣ್ಣನೆಯ ತಾಪಮಾನದಲ್ಲಿರಿಸಬೇಕು

  'ಬೇರೆ ಔಷಧಿಗಳಿಗಿಂತ ಭಿನ್ನವಾಗಿ, ಈ ಎಲ್ಲಾ ಲಸಿಕೆಗಳನ್ನು ತಣ್ಣನೆಯ ತಾಪಮಾನದಲ್ಲಿ ಸರಬರಾಜು ಮಾಡಬೇಕಾಗುತ್ತದೆ. ಸಾಮಾನ್ಯವಾಗಿ 2 ಡಿಗ್ರಿಯಿಂದ 8 ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನದಲ್ಲಿ ಲಸಿಕೆಗಳನ್ನು ಸಾಗಿಸಬೇಕು‘ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪ್ರಾಧ್ಯಾಪಕ ರಾಘವನ್ ವರದರಾಜನ್ ಹೇಳಿದ್ದಾರೆ.

  ಲಸಿಕೆಯನ್ನು ಶೀತದ ವಾತಾರಣದಲ್ಲಿಡುವುದು ಅವಶ್ಯಕ. ಆದರೆ, ನೂರು ಕೋಟಿಗೂ ಹೆಚ್ಚು ಡೋಸೇಜ್‌ಗಳನ್ನು ಈ ರೀತಿ ಕಾಪಿಟ್ಟು ಪೂರೈಸುವುದು ತುಸು ಕಷ್ಟದ ಕೆಲಸ. ಅದರಲ್ಲೂ ಹೆಚ್ಚು ಜನಸಂಖ್ಯೆ ಭಾರತದಲ್ಲಿ ಇದು ಕಠಿಣ‘ ಎನ್ನುತ್ತಾರೆ ರಾಘವನ್.

  English summary
  Getting a COVID-19 vaccine is just the tip of the iceberg for India. The bigger challenge is to keep it safe till the time it is administered.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X