ಇಮ್ರಾನ್ ಖಾನ್ ರ ಪ್ರೀತಿಯ ಸಾಕು ನಾಯಿಗಳಿಗೆ ವಿಕಿಪೀಡಿಯಾದಲ್ಲಿ ಸ್ಥಾನ
ಇನ್ನೇನು ಪಾಕಿಸ್ತಾನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ರ ಅಚ್ಚುಮೆಚ್ಚಿನ ನಾಯಿಗಳಿಗಾಗಿಯೇ ಒಂದು ವಿಕಿಪೀಡಿಯಾ ಪುಟ ಮೀಸಲಾಗಿದೆ. ಈ ವಿಚಾರವನ್ನು ಪಾಕಿಸ್ತಾನದ ಮಾಧ್ಯಮವೊಂದಕ್ಕೆ ಆನ್ ಲೈನ್ ಎನ್ ಸೈಕ್ಲೋಪಿಡಿಯಾದ ಹೆಲ್ಪ್ ಡೆಸ್ಕ್ ನವರೇ ಖಾತ್ರಿ ಪಡಿಸಿದ್ದಾರೆ.
ಇಮ್ರಾನ್ ಖಾನ್ ರ ಬಳಿ ಐದು ನಾಯಿಗಳಿದ್ದವು ಎಂದು ವರದಿಯಾಗಿತ್ತು. ಮೋಟಿ, ಶೆರ್ನಿ, ಪಿಡು, ಮ್ಯಾಕ್ಸಿಮಸ್ ಅವುಗಳ ಹೆಸರು. ಅದರ ಜತೆಗೆ ಶೇರು ಅನ್ನೋ ಐದನೇ ನಾಯಿಯ ಹೆಸರನ್ನು ವಿಕಿಪೀಡಿಯಾ ಪಟ್ಟಿ ಮಾಡಿದೆ. ಆದರೆ ಜಿಯೋ ಟಿವಿ ವರದಿ ಪ್ರಕಾರ ಇಮ್ರಾನ್ ಖಾನ್ ಹೇಳಿದ್ದಾರಂತೆ, ಏಪ್ರಿಲ್ ನಲ್ಲಿ ಅದು ಮೃತಪಟ್ಟಿದೆ.
ಆದರೆ, ಇಮ್ರಾನ್ ಖಾನ್ ತಮ್ಮ ಬಳಿ ಐದು ನಾಯಿಗಳಿರುವುದಾಗಿ ಹೇಳಿದ್ದರು. ಆ ಪೈಕಿ ಮ್ಯಾಕ್ಸಿಮಸ್ ಅವರ ಬಳಿಯೇ ಇದೆಯಾ ಅಥವಾ ಖಾನ್ ರ ಎರಡನೇ ಮಾಜಿ ಪತ್ನಿ ಬಳಿ ಇದೆಯಾ ಎಂಬ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ವಿಕಿಪೀಡಿಯಾದಲ್ಲಿ ಕೂಡ ಇಮ್ರಾನ್ ಖಾನ್ ರ ಅಚ್ಚುಮೆಚ್ಚಿನ ನಾಯಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಪ್ರಧಾನಿ ಹುದ್ದೆಗೆ ಏರುವುದು ಖಾತ್ರಿ ಆದ ಮೇಲೆ ಹೆಚ್ಚು ವಿವರಗಳು ಹರಿದು ಬರುವ ಭರವಸೆಯಂತೂ ಇದೆಯಂತೆ.

ಮ್ಯಾಕ್ಸಿಮಸ್ ಅನ್ನೋ ಬೆಲ್ಜಿಯಂ ಶೆಫರ್ಡ್
ರೆಹಾಮ್ ಖಾನ್ ಗೆ ಇಮ್ರಾನ್ ಖಾನ್ ವಿಚ್ಛೇದನ ನೀಡಿದ್ದೇ ತಮ್ಮ ಸಾಕು ನಾಯಿಗಳ ವಿಚಾರದ ಭಿನ್ನಾಭಿಪ್ರಾಯಕ್ಕೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಆದರೆ ಆ ಆರೋಪವನ್ನು ರೆಹಾಮ್ ನಿರಾಕರಿಸಿದ್ದರು. ಇನ್ನು ಮ್ಯಾಕ್ಸಿಮಸ್ ಅನ್ನೋ ಬೆಲ್ಜಿಯಂ ಶೆಫರ್ಡ್ ನಾಯಿಯನ್ನು ರೆಹಾಮ್ ಇಂಗ್ಲೆಂಡ್ ನಿಂದ ಇಸ್ಲಾಮ್ ಬಾದ್ ಗೆ ತಂದಿದ್ದರಂತೆ.

ಮೂರನೇ ಪತ್ನಿ ಜತೆಗೆ ಅದೇ ವಿಚಾರಕ್ಕೆ ಮನಸ್ತಾಪ
ಇಮ್ರಾನ್ ಹಾಗೂ ರೆಹಾಮ್ ವಿವಾಹದ ನಂತರ ನೀಡಿದ ಹಲವು ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದು ಅದೇ ಮ್ಯಾಕ್ಸಿಮಸ್. ವಿಚ್ಛೇದನದ ನಂತರ ಅದು ರೆಹಾಮ್ ಜತೆಗೆ ಇದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಇಮ್ರಾನ್ ಖಾನ್ ರ ಮೂರನೇ ಪತ್ನಿ ಬುಶ್ರಾ ಮನೇಕಾ ಜತೆಗೂ ತಮ್ಮ ನೆಚ್ಚಿನ ನಾಯಿ ಸಲುವಾಗಿಯೇ ಮನಸ್ತಾಪ ಮಾಡಿಕೊಂಡಿದ್ದರು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು.

ನಾಯಿ ಮರಿಗಳನ್ನು ಕೊಡುಗೆ ನೀಡಿದ್ದರಂತೆ ಮುಷರಫ್
ಪಾಕಿಸ್ತಾನದ ಮಾಜಿ ಸೇನಾಧಿಕಾರಿ ಪರ್ವೇಜ್ ಮುಷರಫ್ ಕೊಡುಗೆಯಾಗಿ ನೀಡಿದ ಹಲವು ನಾಯಿ ಮರಿಗಳು ಇಮ್ರಾನ್ ಖಾನ್ ಬಳಿಯಿವೆ. ಮುದ್ದಾದ ಮರಿಗಳೆಂದರೆ ಇಮ್ರಾನ್ ಖಾನ್ ಗೆ ಬಲು ಇಷ್ಟ ಎಂದು ರೆಹಾಮ್ ಬರೆದಿದ್ದಾರೆ. ಸದ್ಯಕ್ಕೆ ಈ ಬಗ್ಗೆ ವಿಕಿಪೀಡಿಯಾಗೆ ಏನೇ ಮಾಹಿತಿ ಬೇಕೆಂದರೂ ಅದಕ್ಕಾಗಿ ಬೇರೆ ಮಾಧ್ಯಮಗಳನ್ನು ಅವಲಂಬಿಸುವುದು ಅನಿವಾರ್ಯ ಆಗುತ್ತದೆ.

ನಾನಾ ದೇಶದ ಅಧ್ಯಕ್ಷರು- ಪ್ರಧಾನಿಗಳ ಮೆಚ್ಚಿನ ಪ್ರಾಣಿಗಳ ವಿವರ
ಎಷ್ಟಾದರೂ ದೇಶವೊಂದರ ಪ್ರಧಾನಿಯ ಮೆಚ್ಚಿನ ನಾಯಿಗಳ ಬಗ್ಗೆ ಮಾಹಿತಿಗಾಗಿ ಅಷ್ಟಾದರೂ ಶ್ರಮ ಹಾಕದಿದ್ದರೆ ಹೇಗೆ? ಅಮೆರಿಕ ಅಧ್ಯಕ್ಷರೂ ಸೇರಿದ ಹಾಗೆ ವಿವಿಧ ದೇಶಗಳ ಅಧ್ಯಕ್ಷರು- ಪ್ರಧಾನಿಗಳ ನೆಚ್ಚಿನ ಪ್ರಾಣಿಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿಯೇ ವಿಕಿಪೀಡಿಯಾದಲ್ಲಿ ಪುಟಗಳು ಇವೆ ಅನ್ನೋದು ಆಸಕ್ತಿಕರ ಅಂಶ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications