India Hottest Year: ಭಾರತದಲ್ಲಿ ಬಿಸಿಲ ಬಿಸಿಗೆ ದಾಖಲೆ ಬರೆದ 2024
ದೆಹಲಿ ಜನವರಿ 2: 2024ನೇ ವರ್ಷದಲ್ಲಿ ಸಾಕಷ್ಟು ಹವಾಮಾನ ಬದಲಾವಣೆಯನ್ನು ನಾವು ಕಂಡಿದ್ದೇವೆ. ಭಾರತದಲ್ಲಿ ಈ ವರ್ಷವನ್ನು ಅತೀ ಹೆಚ್ಚು ಬೆಚ್ಚಗಿನ ವರ್ಷ ಎಂದು ಹವಾಮಾನ ಇಲಾಖೆ ಘೋಷಿಸಿದೆ. 1901ರಿಂದ ಈವರೆಗೆ ಭಾರತದಲ್ಲಿ 2024 ಅತ್ಯಂತ ಬೆಚ್ಚಗಿನ ವರ್ಷ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಹೌದು.. ಕಳೆದ ವರ್ಷ 2024 ದೇಶದಲ್ಲಿ ಬಿಸಿಲಿಗೆ ದಾಖಲೆಯನ್ನು ಸೃಷ್ಟಿ ಮಾಡಿದೆ. 1901ರ ನಂತರ ದೇಶದಲ್ಲಿ 2024 ಅತ್ಯಂತ ಬಿಸಿಯಾದ ವರ್ಷವಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ವರ್ಷದ ಕೊನೆಯ ಮೂರು ತಿಂಗಳುಗಳು (ಅಕ್ಟೋಬರ್-ಡಿಸೆಂಬರ್) ಅತಿ ಹೆಚ್ಚು ಬೆಚ್ಚಗಿನ ವಾತಾವರಣ ಕಂಡಿವೆ. ಅಲ್ಲದೆ ಅಕ್ಟೋಬರ್ 2024, 123 ವರ್ಷಗಳಲ್ಲಿ ಅತ್ಯಂತ ಬೆಚ್ಚಗಿನ ತಿಂಗಳಾಗಿತ್ತು ಎಂದು ಐಎಂಡಿ ಹೇಳಿದೆ.

ಪ್ರಪಂಚದ ತಾಪಮಾನ ಹೆಚ್ಚಳ
ವಿಶ್ವ ಹವಾಮಾನ ಸಂಸ್ಥೆ ಕೂಡ 2024 ಜಾಗತಿಕವಾಗಿ ಅತ್ಯಂತ ಬಿಸಿಯಾದ ವರ್ಷ ಎಂದು ಹೇಳಿದೆ. 2024 ರಲ್ಲಿ ವಾರ್ಷಿಕ ಸರಾಸರಿ ಭೂ ಮೇಲ್ಮೈ ಗಾಳಿಯ ಉಷ್ಣತೆಯು ದೀರ್ಘಾವಧಿಯ ಸರಾಸರಿಗಿಂತ (1991-2020 ಅವಧಿ) 0.65 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಇದು 2016 ರಲ್ಲಿ 0.54 ಡಿಗ್ರಿ ಸೆಲ್ಸಿಯಸ್ ಆಗಿತ್ತು.
ಈ ವರ್ಷ ಹೇಗೆ ಪ್ರಾರಂಭವಾಗುತ್ತದೆ?
ಇನ್ನೂ ಜನವರಿಯ ಹವಮಾನ ವರದಿಯನ್ನು ಬಿಡುಗಡೆ ಮಾಡಿದ ಐಎಂಡಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಕೆಲವು ಭಾಗಗಳು, ಮಧ್ಯಪ್ರದೇಶ ಮತ್ತು ಗುಜರಾತ್‌ನ ಕೆಲವು ಭಾಗಗಳು ಮತ್ತು ಬಿಹಾರದಂತಹ ಪೂರ್ವ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ ಭಾರತದ ಹೆಚ್ಚಿನ ಭಾಗಗಳಲ್ಲಿ ಮಾಸಿಕ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ ಎಂದು ಹೇಳಿದೆ.
ಮಹಾಕುಂಭದ ಸಮಯದಲ್ಲಿ ಹವಾಮಾನ
ಮಹಾ ಕುಂಭ (ಜನವರಿ 13-ಫೆಬ್ರವರಿ 26) ಸಮಯದಲ್ಲಿ ಪ್ರಯಾಗರಾಜ್‌ನಲ್ಲಿನ ಹವಾಮಾನ ಪರಿಸ್ಥಿತಿಗಳ ಬಗ್ಗೆ ಕೇಳಿದಾಗ ಊಎಂಡಿ ಮುಖ್ಯಸ್ಥ ಎಂ ಮಹಾಪಾತ್ರ, ಈ ಅವಧಿಯಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆಯಿದ್ದರೂ ಬಿಸಿಲಿನ ಶಾಖ ಇರಲಿದೆ ಎಂದು ಹೇಳಿದರು. ಹಬ್ಬದ ಸಮಯದಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆಯಿರುತ್ತದೆ. ನಂತರ ಹೆಚ್ಚು ಶಾಖ ಹೆಚ್ಚಾಗಲಿದೆ ಎಂದರು.

ಹವಾಮಾನ ಇಲಾಖೆಯು ಬಿಡುಗಡೆ ಮಾಡಿದ ಜನವರಿಯ ಸಂಭವನೀಯ ಮುನ್ಸೂಚನೆಯ ವರದಿ ಪ್ರಕಾರ ಪೂರ್ವ ಭಾರತ ಮತ್ತು ದಕ್ಷಿಣ ಪರ್ಯಾಯ ದ್ವೀಪದ ವಾಯುವ್ಯ, ಮಧ್ಯ ಮತ್ತು ಪಕ್ಕದ ಮಧ್ಯ ಭಾಗಗಳನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ಜನವರಿಯಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಬೆಚ್ಚಗಿರುತ್ತದೆ.
ಜನವರಿಯಲ್ಲಿ ಮಳೆ ಮುನ್ಸೂಚನೆ
ಇನ್ನೂ ಮಳೆಯ ಬಗ್ಗೆ ಹೇಳುವುದಾದರೆ, ಜನವರಿ ತಿಂಗಳಲ್ಲಿ ಸಾಮಾನ್ಯ ಮಳೆಗಿಂತ ಸ್ವಲ್ಪ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ನಿಂತಿರುವ ಬಿತ್ತನೆ ಬೆಳೆಗಳಿಗೆ ಈ ಮಳೆ ಸಹಾಯಕವಾಗಬಹುದು. ಏಳು ಹವಾಮಾನ ಉಪವಿಭಾಗಗಳನ್ನು (ಪೂರ್ವ ಉತ್ತರ ಪ್ರದೇಶ, ಪಶ್ಚಿಮ ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್) ಒಳಗೊಂಡಿರುವ ಉತ್ತರ ಭಾರತದಲ್ಲಿ ಜನವರಿಯಲ್ಲಿ ಮಾಸಿಕ ಮಳೆಯು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಐಎಂಡಿ ಹೇಳಿದೆ.











Click it and Unblock the Notifications