ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯೂಎಸ್ ವಿಶ್ವ ವಿವಿ ರ್‍ಯಾಂಕಿಂಗ್: ಬೆಂಗಳೂರಿನ ಐಐಎಸ್‌ಸಿ ಹೈಜಂಪ್

|
Google Oneindia Kannada News

ನವದೆಹಲಿ, ಜೂನ್ 9: ಉನ್ನತ ಶಿಕ್ಷಣ ಕ್ಷೇತ್ರದ ಪ್ರತಿಷ್ಠಿತ ಶ್ರೇಯಾಂಕ ಎನಿಸಿರುವ ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ರ್‍ಯಾಂಕಿಂಗ್‌ಗಳ ಪಟ್ಟಿ (QS World University Ranking List 2023) ಪ್ರಕಟವಾಗಿದ್ದು ಬೆಂಗಳೂರಿನ ಐಐಎಸ್‌ಸಿ (IISc Bengaluru) ಭಾರತದ ನಂಬರ್ ಒನ್ ವಿವಿ ಎನಿಸಿದೆ.

ಇದು 2023ನೇ ಸಾಲಿನ ರ್‍ಯಾಂಕಿಂಗ್ ಪಟ್ಟಿಯಾಗಿದೆ. ಕಳೆದ ವರ್ಷದ ಪಟ್ಟಿಯಲ್ಲಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ 186ನೇ ಸ್ಥಾನ ಹೊಂದಿತ್ತು. ಈಗ ಒಂದೇ ವರ್ಷದಲ್ಲಿ 31 ಸ್ಥಾನ ಜಿಗಿದಿದೆ. ದಕ್ಷಿಣ ಏಷ್ಯಾ ಪ್ರದೇಶದ ಯೂನಿವರ್ಸಿಟಿಗಳ ಪೈಕಿ ಅತ್ಯಂತ ವೇಗವಾಗಿ ಮೇಲೇರಿರುವುದು ಐಐಎಸ್‌ಸಿಯೇ.

Most innovative educational institute: ಐಐಟಿ ಮದ್ರಾಸ್‌ ರ್‍ಯಾಂಕ್‌ 1Most innovative educational institute: ಐಐಟಿ ಮದ್ರಾಸ್‌ ರ್‍ಯಾಂಕ್‌ 1

ಈ ವರ್ಷ ವಿಶ್ವಾದ್ಯಂತ 1418 ಯೂನಿವರ್ಸಿಟಿಗಳಿಗೆ ಶ್ರೇಯಾಂಕ ನೀಡಲಾಗಿದೆ. ಇದೂವರೆಗೆ ಇದೇ ಅತಿದೊಡ್ಡ ಪಟ್ಟಿಯಾಗಿದೆ. ಕಳೆದ ವರ್ಷ 1300 ವಿಶ್ವವಿದ್ಯಾಲಯಗಳು ರ್‍ಯಾಂಕಿಂಗ್ ಪಡೆದಿದ್ದವು.

IISc Tops Among Indian Universities in QS 2023 List

ಲಂಡನ್‌ನಲ್ಲಿರುವ ಕ್ವಾಕ್ವಾರೆಲಿ ಸೈಮಂಡ್ಸ್ (QS- Quacquarelli Symonds) ಎಂಬ ಜಾಗತಿಕ ಉನ್ನತ ಶಿಕ್ಷಣ ವಿಶ್ಲೇಷಕ ಸಂಸ್ಥೆ ಕಳೆದ ಹಲವು ವರ್ಷಗಳಿಂದಲೂ ವಿಶ್ವವಿದ್ಯಾಲಯಗಳ ಶ್ರೇಯಾಂಕ ಪಟ್ಟಿ ಪ್ರಕಟಿಸುತ್ತಲೇ ಬಂದಿದೆ. ಈಗ ನೀಡಿರುವುದು ಇದು 19ನೇ ಪಟ್ಟಿಯಾಗಿದೆ. ವಿವಿಧ ಮಾನದಂಡಗಳನ್ನು ಇಟ್ಟುಕೊಂಡು ಯೂನಿವರ್ಸಿಟಿಯ ಗುಣಮಟ್ಟವನ್ನು ಈ ಸಂಸ್ಥೆ ಅಳೆದು ರ್‍ಯಾಂಕಿಂಗ್ ನೀಡುತ್ತದೆ.

 ಐಐಎಸ್‌ಸಿ 155ನೇ ಸ್ಥಾನ

ಐಐಎಸ್‌ಸಿ 155ನೇ ಸ್ಥಾನ

2023ರ ಪಟ್ಟಿಯಲ್ಲಿ ಐಐಎಸ್‌ಸಿ 155ನೇ ಸ್ಥಾನ ಪಡೆದು ಭಾರತದ ನಂಬರ್ ಒನ್ ಯೂನಿವರ್ಸಿಟಿ ಎನಿಸಿದೆ. ಐಐಟಿ ಬಾಂಬೆ ಮತ್ತು ಐಐಟಿ ಡೆಲ್ಲಿ ಅಗ್ರ 200 ಪಟ್ಟಿಯಲ್ಲಿವೆ. ಈ ವರ್ಷದಲ್ಲಿ ಪಟ್ಟಿಯಲ್ಲಿ ಕಾಣಿಸಿಕೊಂಡ 1418 ವಿವಿಗಳ ಪೈಕಿ ಭಾರತದ 41 ಯೂನಿವರ್ಸಿಟಿಗಳೂ ಇವೆ. ಉಡುಪಿಯ ಮಣಿಪಾಲ ಶಿಕ್ಷಣ ಸಂಸ್ಥೆ 750-800ರ ರ್‍ಯಾಂಕಿಂಗ್ ಪಡೆದಿದೆ.

ಪಟ್ಟಿಯಲ್ಲಿರುವ ಅಗ್ರ ಯೂನಿವರ್ಸಿಟಿಗಳು

ಪಟ್ಟಿಯಲ್ಲಿರುವ ಅಗ್ರ ಯೂನಿವರ್ಸಿಟಿಗಳು

ಪಟ್ಟಿಯಲ್ಲಿರುವ ಅಗ್ರ ಯೂನಿವರ್ಸಿಟಿಗಳು:
1) ಎಂಐಟಿ, ಕೇಂಬ್ರಿಜ್ಡ್, ಅಮೆರಿಕ
2) ಕೇಂಬ್ರಿಡ್ಜ್ ಯೂನಿವರ್ಸಿಟಿ, ಬ್ರಿಟನ್
3) ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿ, ಅಮೆರಿಕ
4) ಆಕ್ಸ್‌ಫರ್ಡ್ ಯೂನಿವರ್ಸಿಟಿ, ಬ್ರಿಟನ್
5) ಹಾರ್ವರ್ಡ್ ಯೂನಿವರ್ಸಿಟಿ, ಅಮೆರಿಕ
6) ಕ್ಯಾಲಿಫೋರ್ನಿಯಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ಅಮೆರಿಕ
7) ಇಂಪೀರಿಯಲ್ ಕಾಲೇಜ್, ಲಂಡನ್, ಬ್ರಿಟನ್
8) ಯುಸಿಎಲ್, ಲಂಡನ್, ಬ್ರಿಟನ್
9) ಇಟಿಎಚ್, ಸ್ವಿಟ್ಜರ್ಲ್ಯಾಂಡ್
10) ಚಿಕಾಗೋ ಯೂನಿವರ್ಸಿಟಿ, ಅಮೆರಿಕ

ಏಷ್ಯಾದ ಅಗ್ರ ಯೂನಿವರ್ಸಿಟಿಗಳು

ಏಷ್ಯಾದ ಅಗ್ರ ಯೂನಿವರ್ಸಿಟಿಗಳು

ಏಷ್ಯಾದ ಅಗ್ರ ಯೂನಿವರ್ಸಿಟಿಗಳು:
1) ಸಿಂಗಾಪುರ ನ್ಯಾಷನಲ್ ಯೂನಿವರ್ಸಿಟಿ (ಎನ್‌ಯುಎಸ್)
2) ಪೆಕಿಂಗ್ ಯೂನಿವರ್ಸಿಟಿ, ಬೀಜಿಂಗ್, ಚೀನಾ
3) ಟ್ಸಿಂಗುವಾ ಯೂನಿವರ್ಸಿಟಿ, ಬೀಜಿಂಗ್, ಚೀನಾ
4) ನನ್ಯಾಂಗ್ ಟೆಕ್ನಾಲಾಜಿಕಲ್ ಯೂನಿವರ್ಸಿಟಿ, ಸಿಂಗಾಪುರ್
5) ಹಾಂಕಾಂಗ್ ಯೂನಿವರ್ಸಿಟಿ
6) ಟೋಕಿಯೋ ಯೂನಿವರ್ಸಿಟಿ, ಜಪಾನ್
7) ಸೋಲ್ ನ್ಯಾಷನಲ್ ಯೂನಿವರ್ಸಿಟಿ, ಸೌತ್ ಕೊರಿಯಾ
8) ಫುಡಾನ್ ಯೂನಿವರ್ಸಿಟಿ, ಶಾಂಘೈ, ಚೀನಾ
9) ಕ್ಯೋಟೋ ಯೂನಿವರ್ಸಿಟಿ, ಜಪಾನ್
10) ಹಾಂಕಾಂಗ್ ಚೈನೀಸ್ ಯೂನಿವರ್ಸಿಟಿ

ಭಾರತದ ಟಾಪ್ 5 ವಿವಿಗಳು

ಭಾರತದ ಟಾಪ್ 5 ವಿವಿಗಳು

ಭಾರತದ ಟಾಪ್ 5 ವಿವಿಗಳು:
1) ಐಐಎಸ್‌ಸಿ, ಬೆಂಗಳೂರು
2) ಐಐಟಿ ಬಾಂಬೆ
3) ಐಐಟಿ ಡೆಲ್ಲಿ
4) ಐಐಟಿ ಮದ್ರಾಸ್
5) ಐಐಟಿ ಕಾನಪುರ್

ಬಹುತೇಕ ಎಲ್ಲಾ ಐಐಟಿಗಳು ಪಟ್ಟಿಯಲ್ಲಿ ಇವೆ. ಐಐಟಿ, ಐಐಎಸ್‌ಸಿ ಬಿಟ್ಟರೆ ಬೇರಾವುದೇ ಭಾರತೀಯ ವಿವಿಗಳು ಅಗ್ರ 500 ಪಟ್ಟಿಯಲ್ಲಿಲ್ಲ. ಡೆಲ್ಲಿ ಯೂನಿವರ್ಸಿಟಿ, ಸಾವಿತ್ರಿಬಾಯಿ ಫುಲೆ ಪುಣೆ ಯೂನಿವರ್ಸಿಟಿ, ಮದ್ರಾಸ್ ಯೂನಿವರ್ಸಿಟಿ, ಅಣ್ಣಾ ಯೂನಿವರ್ಸಿಟಿ, ಜೆಎನ್‌ಯು, ಜಾದವಪುರ್ ಯೂನಿವರ್ಸಿಟಿ, ಓ.ಪಿ. ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿ, ಮಣಿಪಾಲ ವಿವಿ, ಅಮೃತ ವಿಶ್ವ ವಿದ್ಯಾಪೀಠಂ ಮೊದಲಾದ ವಿಶ್ವವಿದ್ಯಾಲಗಳು ಈ ಪಟ್ಟಿಯಲ್ಲಿವೆ.

ಇಸ್ಲಾಮಾಬಾದ್‌ನಲ್ಲಿರುವ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ

ಇಸ್ಲಾಮಾಬಾದ್‌ನಲ್ಲಿರುವ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ

ನಮ್ಮ ನೆರೆಯ ಪಾಕಿಸ್ತಾನದ ಒಟ್ಟು 13 ವಿಶ್ವವಿದ್ಯಾಲಯಗಳು ಕ್ಯೂಎಸ್ ಪಟ್ಟಿಯಲ್ಲಿವೆ. ಇಸ್ಲಾಮಾಬಾದ್‌ನಲ್ಲಿರುವ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ 334ನೇ ಸ್ಥಾನ ಪಡೆದು ಪಾಕಿಸ್ತಾನದ ನಂಬರ್ ಒನ್ ಎನಿಸಿದೆ.

ಚೀನಾದ 71 ವಿಶ್ವವಿದ್ಯಾಲಯಗಳು ಈ ಪಟ್ಟಿಯಲ್ಲಿವೆ. ಅಮೆರಿಕದ 202, ಬ್ರಿಟನ್‌ನ 89 ಶಿಕ್ಷಣ ಸಂಸ್ಥೆಗಳು ಕ್ಯೂಎಸ್ ಶ್ರೇಯಾಂಕ ಪಟ್ಟಿಯಲ್ಲಿವೆ. ಬ್ರಿಟನ್ ಸೇರಿ ಯೂರೋಪಿಯನ್ ದೇಶಗಳ ಒಟ್ಟು 483 ಯೂನಿವರ್ಸಿಟಿಗಳು ಇದರಲ್ಲಿವೆ. ಖಂಡವಾರು ಲೆಕ್ಕದಲ್ಲಿ ಯೂರೋಪ್ ಅಗ್ರಜ ಎನಿಸಿದರೆ 439 ಯೂನಿವರ್ಸಿಟಿಗಳು ಪಟ್ಟಿಯಲ್ಲಿ ಹೊಂದಿರುವ ಏಷ್ಯಾ ಎರಡನೇ ಸ್ಥಾನ ಪಡೆದಿದೆ.

English summary
The Indian Institute of Science (IISc), Bengaluru, is the fastest rising South Asian university among the coveted QS World University Rankings top 200 varsities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X