ಜಿಮ್‌ನಲ್ಲಿ ವರ್ಕ್ ಔಟ್ ಮಾಡುವಾಗ ಕುಸಿದು ಬಿದ್ದ ಹೈದರಾಬಾದ್ ಪೊಲೀಸ್ ಸಾವು: ವಿಡಿಯೋ
ಜಿಮ್‌ನಲ್ಲಿ ವರ್ಕ್ ಔಟ್ ಮಾಡುವಾಗ ಕುಸಿದು ಬಿದ್ದ ಹೈದರಾಬಾದ್ ಪೊಲೀಸ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹೈದರಾಬಾದ್ ಫೆಬ್ರವರಿ 24: ಹೈದರಾಬಾದ್‌ನ ಜಿಮ್‌ನಿಂದ ಆಘಾತಕಾರಿ ದೃಶ್ಯವೊಂದು ಹೊರಬಿದ್ದಿದೆ. ಇದು ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. 24 ವರ್ಷದ ವಿಶಾಲ್ ಎಂದು ಗುರುತಿಸಲಾದ ಹುಡುಗ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾನೆ. ಈ ದೃಶ್ಯ ಜಿಮ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ನಟ ಪುನೀತ್ ರಾಜಕುಮಾರ್ ಸಾವನ್ನು ನೆನಪಿಸಿದೆ.
Yet another shocking case of a young man working out in the gym, simply collapsing; this is 24-year-old Vishal working as police constable at #AsifnagarPS police station #Hyderabad, who is suspected to have suffered a heart attack & could not be revived @ndtv @ndtvindia #GymDeath pic.twitter.com/rrUctZU5s0
— Uma Sudhir (@umasudhir) February 24, 2023
ಪೊಲೀಸ್ ಕಾನ್‌ಸ್ಟೆಬಲ್ ಆಗಿರುವ ವಿಶಾಲ್ ಪುಷ್-ಅಪ್ ಮತ್ತು ಸ್ಟ್ರೆಚ್ ಮಾಡುವಾಗ ಕುಸಿದು ಬಿದ್ದಿದ್ದಾರೆ. ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆಂದು ತುಳಿದುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ವಿಶಾಲ್ ಪುಷ್-ಅಪ್ ಮಾಡಿದ ನಂತರ ತೀವ್ರವಾಗಿ ಕೆಮ್ಮುವುದು ಮತ್ತು ನೆಲದ ಮೇಲೆ ಕುಸಿದು ಬೀಳುವುದನ್ನು ಕಾಣಬಹುದು.

ವಿಶಾಲ್ ನೆಲಕ್ಕೆ ಕುಸಿದಾಗ ಇತರ ಜಿಮ್ ಸದಸ್ಯರು ಅವರಿಗೆ ಸಹಾಯ ಮಾಡಲು ಜಮಾಯಿಸಿದರು. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ. ಕಾನ್‌ಸ್ಟೆಬಲ್ ವಿಶಾಲ್ 24 ವರ್ಷ ವಯಸ್ಸಿನವರಾಗಿದ್ದು, ಸಿಕಂದ್ರಾಬಾದ್‌ನ ಬೋವೆನ್‌ಪಲ್ಲಿ ನಿವಾಸಿಯಾಗಿದ್ದಾರೆ. ಸಿಸಿಟಿವಿ ರೆಕಾರ್ಡಿಂಗ್‌ನ ಪ್ರಕಾರ, ಘಟನೆ ಫೆಬ್ರವರಿ 23 ರಂದು ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ.












Click it and Unblock the Notifications