ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟರ್ನೆಟ್ ಇಲ್ಲದೇ ಜಿ-ಮೇಲ್ ತೆರೆಯುವುದು ಹೇಗೆ?

|
Google Oneindia Kannada News

ಈಗಿನ ಜಗತ್ತಿನಲ್ಲಿ ಸೋಷಿಯಲ್ ಮೀಡಿಯಾ ಜನರ ಬದುಕಿನ ಅವಿಭಾಜ್ಯ ಅಂಗವಾಗಿ ಬೆಳೆದು ನಿಂತಿದೆ. ಸೋಷಿಯಲ್ ಮೀಡಿಯಾ ಬಳಸುವ ಜನರಿಗೆ ಪ್ರತಿಯೊಂದಕ್ಕೂ ಇಂಟರ್ನೆಟ್ ಬಲು ಇಂಪಾರ್ಟೆಂಟ್ ಆಗಿದೆ. ಇದರ ಮಧ್ಯೆ ಗೂಗಲ್ ಸಿಹಿಸುದ್ದಿಯೊಂದನ್ನು ಕೊಟ್ಟಿದೆ.

ಸಾಮಾನ್ಯವಾಗಿ ಉದ್ಯೋಗಕ್ಕೆ ಸಂಬಂಧಿಸಿದ ಅಪ್ಲಿಕೇಶನ್ ಹಾಕುವುದು, ಶಿಕ್ಷಣಕ್ಕೆ ಸಂಬಂಧಿಸಿದ ಅರ್ಜಿ ಸಲ್ಲಿಸುವುದು, ಮನರಂಜನೆಗಾಗಿ ಇಂಟರ್ನೆಟ್ ಬಳಸುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಎಲ್ಲ ಪ್ರಕ್ರಿಯೆಗೂ ಜಿ-ಮೇಲ್ ಖಾತೆ ತೀರಾ ಅತ್ಯವಶ್ಯಕವಾಗಿರುತ್ತದೆ. ಈ ಮೊದಲು ಜಿ-ಮೇಲ್ ಓಪನ್ ಮಾಡುವುದಕ್ಕೂ ಇಂಟರ್ನೆಟ್ ಕಡ್ಡಾಯವಾಗಿತ್ತು. ಆದರೆ ಈಗ ಪರಿಸ್ಥಿತಿ ಮೊದಲಿನಂತಿಲ್ಲ.

ಗೂಗಲ್‌ನ ಮೊಟ್ಟ ಮೊದಲ ತ್ವರಿತ ಮೆಸೇಜಿಂಗ್ ವೇದಿಕೆಗೆ ಗುಡ್ ಬೈಗೂಗಲ್‌ನ ಮೊಟ್ಟ ಮೊದಲ ತ್ವರಿತ ಮೆಸೇಜಿಂಗ್ ವೇದಿಕೆಗೆ ಗುಡ್ ಬೈ

ಯಾವುದೇ ರೀತಿ ಇಂಟರ್ನೆಟ್ ಸಂಪರ್ಕವಿಲ್ಲದೆ ಜಿ-ಮೇಲ್ ಅನ್ನು ಸುಲಭವಾಗಿ ಬಳಸಬಹುದು ಎಂದು ಗೂಗಲ್ ಹೇಳಿದೆ. ಆ ಮೂಲಕ ಆನ್‌ಲೈನ್‌ನಲ್ಲಿ ಇಂಟರ್ನೆಟ್ ಇಲ್ಲದೇ ಜಿ-ಮೇಲ್ ಓಪನ್ ಮಾಡುವುದು ಹೇಗೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

How to Use Use Gmail Without Internet; Here How You Can Do It

ಕ್ರೋಮ್ ಮೂಲಕ ಜಿ-ಮೇಲ್ ತೆರೆಯಿರಿ

ನಿಮ್ಮ ಕಂಪ್ಯೂಟರ್ ಡೆಸ್ಕ್‌ಟಾಪ್‌ನಲ್ಲಿ, ನೀವು Chrome ಅನ್ನು ಹೊಂದಿದ್ದೀರಾ ಎಂಬುದನ್ನು ಮೊದಲು ಖಾತ್ರಿಪಡಿಸಿಕೊಳ್ಳಬೇಕು. Gmail ಅನ್ನು Chrome ಬ್ರೌಸರ್ ವಿಂಡೋದಲ್ಲಿ ಮಾತ್ರ ಆಫ್‌ಲೈನ್‌ನಲ್ಲಿ ಬಳಸಬಹುದಾಗಿದೆ.

* ಜಿ-ಮೇಲ್ ಗಾಗಿ ಆಫ್‌ಲೈನ್ ಸೆಟ್ಟಿಂಗ್‌ಗಳನ್ನು ತೆರೆಯಿರಿ.

* "ಆಫ್‌ಲೈನ್ ಮೇಲ್ ಅನ್ನು ಸಕ್ರಿಯಗೊಳಿಸಿ" ಆಯ್ಕೆಮಾಡಿ.

* ನೀವು ಎಷ್ಟು ದಿನಗಳ ಸಂದೇಶಗಳನ್ನು ಸಿಂಕ್ ಮಾಡುವುದಕ್ಕೆ ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿರಿ

* ಮಾರ್ಪಾಡುಗಳನ್ನು ಉಳಿಸಿ ಎಂಬ ಆಯ್ಕೆಯನ್ನು ಒತ್ತಿರಿ

ನಿಮ್ಮ ಇನ್‌ಬಾಕ್ಸ್ ಅನ್ನು ಬುಕ್‌ಮಾರ್ಕ್ ಮಾಡುವುದು: Chrome ನಲ್ಲಿ mail.google.com ಅನ್ನು ಬುಕ್‌ಮಾರ್ಕ್ ಮಾಡುವುದರಿಂದ ಆಫ್‌ಲೈನ್‌ನಲ್ಲಿ Gmail ಬಳಸಿಕೊಂಡು ಸಂದೇಶಗಳನ್ನು ಕಳುಹಿಸುವುದನ್ನು ಸರಳಗೊಳಿಸುತ್ತದೆ ಎಂದು ನಮೂದಿಸಬೇಕು.

How to Use Use Gmail Without Internet; Here How You Can Do It

ನೀವು ಈ ಸೂಚನೆಗಳನ್ನು ಅನುಸರಿಸಬಹುದು: ಆಫ್‌ಲೈನ್‌ನಲ್ಲಿರುವಾಗ ನಿಮ್ಮ ಇಮೇಲ್ ಅನ್ನು ವೀಕ್ಷಿಸುವುದನ್ನು ಸರಳಗೊಳಿಸಲು, ನಿಮ್ಮ ಇನ್‌ಬಾಕ್ಸ್ ಅನ್ನು ನೀವು ಬುಕ್‌ಮಾರ್ಕ್ ಮಾಡಬಹುದು.

* Chrome ನಲ್ಲಿ ನಿಮ್ಮ Gmail ಇನ್‌ಬಾಕ್ಸ್ ಅನ್ನು ಪ್ರವೇಶಿಸಿ.

* ಅಡ್ರೆಸ್ ಬಾರ್ ಬಲಭಾಗದಲ್ಲಿರುವ ಸ್ಟಾರ್ ಅನ್ನು ಕ್ಲಿಕ್ ಮಾಡಿರಿ.

English summary
How to Use use Gmail without internet; here how you can do it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X