ಬಿಎಂಟಿಸಿಯ ಮಾಸಿಕ ಪಾಸ್ ವಿವರ, ಪಡೆಯುವುದು ಹೇಗೆ?

ಬೆಂಗಳೂರು, ಜನವರಿ 03 : ಬೆಂಗಳೂರು ನಗರದ ಸಂಚಾರ ವ್ಯವಸ್ಥೆಯ ಜೀವನಾಡಿ ಬಿಎಂಟಿಸಿ ಬಸ್. ಪ್ರತಿನಿತ್ಯ ಲಕ್ಷಾಂತರ ಜನರು ಬಸ್‌ಗಳಲ್ಲಿ ಸಂಚಾರ ನಡೆಸುತ್ತಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ವಿವಿಧ ಮಾದರಿಯ ಬಸ್ ಪಾಸುಗಳನ್ನು ಪರಿಚಯಿಸಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳ ಪಾಸುಗಳನ್ನು ಪಡೆದು ಸಾವಿರಾರು ಜನರು ಪ್ರಯಾಣಿಸುತ್ತಾರೆ. ದಿನ ಮತ್ತು ಮಾಸಿಕ ಎಂಬ ಎರಡು ಬಗೆಯ ಪಾಸುಗಳಿವೆ. ವಿದ್ಯಾರ್ಥಿಗಳಿಗಾಗಿಯೇ ಪ್ರತ್ಯೇಕ ಪಾಸುಗಳಿವೆ. ವಿಳಾಸವನ್ನು ನಮೂದಿಸಿದ ಗುರುತಿನ ಚೀಟಿ ಪಡೆದುಕೊಂಡು ಪಾಸುಗಳನ್ನು ಪಡೆಯಬಹುದು.

ಮುಂದಿನ ತಿಂಗಳ ಮಾಸಿಕ ಪಾಸುಗಳನ್ನು ಹಿಂದಿನ ತಿಂಗಳ 28ನೇ ದಿನಾಂಕದಿಂದಲೇ ವಿತರಣೆ ಮಾಡಲಾಗುತ್ತದೆ. ಬಿಎಂಟಿಸಿ ಬಸ್ ನಿಲ್ದಾಣಗಳು, ಬೆಂಗಳೂರು ಒನ್ ಕೇಂದ್ರ ಹಾಗೂ ಕರ್ತವ್ಯ ನಿರತ ನಿರ್ವಾಹಕರ ಮೂಲಕವೂ ಪಾಸುಗಳನ್ನು ಪ್ರಯಾಣಿಕರು ತೆಗೆದುಕೊಳ್ಳಬಹುದು.

ವಿದ್ಯಾರ್ಥಿಗಳ ಪಾಸುಗಳನ್ನು ಹೊರತುಪಡಿಸಿ ಒಟ್ಟು 7 ಬಗೆಯ ಪಾಸುಗಳನ್ನು ಬಿಎಂಟಿಸಿ ಪರಿಚಯಿಸಿದೆ. 1050 ರೂಪಾಯಿಗಳಿಂದ 3570 ರೂಪಾಯಿಗಳ ತನಕ ವಿವಿಧ ಮಾದರಿಯ ಪಾಸುಗಳು ಲಭ್ಯವಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಸಾಮಾನ್ಯ ಸೇವೆಯ ಪಾಸು

ಸಾಮಾನ್ಯ ಸೇವೆಯ ಪಾಸು

ಸಾಮಾನ್ಯ ಸೇವೆಯ ಮಾಸಿಕ ಪಾಸಿದ ದರ 1050 ರೂ.ಗಳು. ಈ ಪಾಸುಗಳನ್ನು ಪಡೆದರೆ ಸಂಸ್ಥೆಯ ಎಲ್ಲಾ ಹವಾನಿಯಂತ್ರಣರಹಿತ ಬಸ್‌ಗಳಲ್ಲಿ ಮಿತಿಯಿಲ್ಲದೇ ಪ್ರಯಾಣಿಸಬಹುದು. ಟೋಲ್ ಮಾರ್ಗದಲ್ಲಿ ಟೋಲ್ ಶುಲ್ಕ ಪಾವತಿ ಮಾಡುವುದು ಕಡ್ಡಾಯ.

ಹಿರಿಯ ನಾಗರಿಕರ ಸಾಮಾನ್ಯ ಸೇವೆಯ ಮಾಸಿಕ ಪಾಸಿನ ದರ 945. ಈ ಪಾಸುಗಳೊಂದಿಗೆ ಹವಾನಿಯಂತ್ರಣರಹಿತ ಬಸ್‌ಗಳಲ್ಲಿ ಮಿತಿಯಿಲ್ಲದೇ ಪ್ರಯಾಣಿಸಬಹುದು. ಟೋಲ್ ಮಾರ್ಗದಲ್ಲಿ ಟೋಲ್ ಶುಲ್ಕ ಪಾವತಿ ಮಾಡಬೇಕಿದೆ.

ನೈಸ್ ರಸ್ತೆಯ ಬಸ್ ಪಾಸುಗಳು

ನೈಸ್ ರಸ್ತೆಯ ಬಸ್ ಪಾಸುಗಳು

ನೈಸ್ ರಸ್ತೆಯ ಸಾಮಾನ್ಯ ಸೇವೆಯ ಮಾಸಿಕ ಪಾಸಿನ ದರ 1900 ರೂಪಾಯಿಗಳು. ಸಂಸ್ಥೆಯ ಎಲ್ಲಾ ಹವಾನಿಯಂತ್ರಣರಹಿತ ಬಸ್‌ಗಳಲ್ಲಿ ಮಿತಿಯಿಲ್ಲದೇ ಪ್ರಯಾಣಿಸಬಹುದು. ನೈಸ್ ರಸ್ತೆಯನ್ನು ಹೊರತುಪಡಿಸಿ ಉಳಿದ ಟೋಲ್ ಮಾರ್ಗಗಳಲ್ಲಿ ಟೋಲ್ ಶುಲ್ಕ ಪಾವತಿ ಮಾಡುವುದು ಕಡ್ಡಾಯ.

ನೈಸ್ ರಸ್ತೆಯ ಗೋಲ್ಡ್ ಮಾಸಿಕ ಪಾಸುಗಳ ದರ 3000 ರೂ., ಜಿಎಸ್‌ಟಿ 150 ರೂ. ಒಟ್ಟು 3150 ರೂ.ಗಳು. ಸಂಸ್ಥೆಯ ಎಲ್ಲಾ ಸೇವೆಗಳಲ್ಲಿ (ವಾಯುವಜ್ರ, ಬೆಂಗಳೂರು ರೌಂಡ್ಸ್ ಹೊರತುಪಡಿಸಿ) ಮಿತಿ ಇಲ್ಲದೇ ಪ್ರಯಾಣ ಮಾಡಬಹುದು. ನೈಸ್ ರಸ್ತೆಯನ್ನು ಹೊರತುಪಡಿಸಿ ಉಳಿದ ಟೋಲ್ ಮಾರ್ಗಗಳಲ್ಲಿ ಟೋಲ್ ಶುಲ್ಕ ಪಾವತಿ ಮಾಡುವುದು ಕಡ್ಡಾಯ.

ವಜ್ರ ಮಾಸಿಕ ಪಾಸುಗಳು

ವಜ್ರ ಮಾಸಿಕ ಪಾಸುಗಳು

ವಜ್ರ ಮಾಸಿಕ ಪಾಸುಗಳ ದರ 2250 ರೂ., ಜಿಎಸ್‌ಟಿ 113 ರೂ. ಒಟ್ಟು 2363 ರೂ.ಗಳು. ಸಂಸ್ಥೆಯ ಎಲ್ಲಾ ಸೇವೆಗಳಲ್ಲಿ (ವಾಯುವಜ್ರ, ವಿಶೇಷ ಸೇವೆ, ಬೆಂಗಳೂರು ರೌಂಡ್ಸ್ ಹೊರತುಪಡಿಸಿ) ಉಳಿದ ಬಸ್‌ಗಳಲ್ಲಿ ಮಿತಿ ಇಲ್ಲದೇ ಪ್ರಯಾಣ ಮಾಡಬಹುದು. ಟೋಲ್ ಮಾರ್ಗದಲ್ಲಿ ಟೋಲ್ ಶುಲ್ಕ ಪಾವತಿ ಕಡ್ಡಾಯ.

ವಜ್ರ ವಿದ್ಯಾರ್ಥಿ ಪಾಸಿನ ದರ 1500 ರೂ., 75 ರೂ. ಜಿಎಸ್‌ಟಿ ಸೇರಿ 1575 ರೂ. ದರವಿದೆ. ವಾಯುವಜ್ರ, ವಿಶೇಷ ಸೇವೆ, ಬೆಂಗಳೂರು ರೌಂಡ್ಸ್ ಹೊರತುಪಡಿಸಿ ಉಳಿದ ಬಸ್‌ಗಳಲ್ಲಿ ಮಿತಿ ಇಲ್ಲದೇ ಪ್ರಯಾಣ ಮಾಡಬಹುದು. ಟೋಲ್ ಮಾರ್ಗದಲ್ಲಿ ಟೋಲ್ ಶುಲ್ಕ ಪಾವತಿ ಮಾಡಬೇಕು.

ವಾಯುವಜ್ರ ಗೋಲ್ಡ್ ಪಾಸುಗಳು

ವಾಯುವಜ್ರ ಗೋಲ್ಡ್ ಪಾಸುಗಳು

ವಾಯುವಜ್ರ ಗೋಲ್ಡ್ ಪಾಸುಗಳ ಬೆಲೆ 3000 ರೂ. ಜಿಎಸ್‌ಟಿ ಶುಲ್ಕ ಸೇರಿ 3570 ರೂ.ಗಳು. ಈ ಪಾಸುಗಳನ್ನು ಪಡೆದರೆ ಬಿಎಂಟಿಸಿಯ ಎಲ್ಲಾ ಎಸಿ, ನಾನ್ ಎಸಿ ಬಸ್‌ಗಳಲ್ಲಿ ಪ್ರಯಾಣ ಮಾಡಬಹುದು. (ವಿಶೇಷ ಸೇವೆ, ಬೆಂಗಳೂರು ರೌಂಡ್ಸ್ ಹೊರತುಪಡಿಸಿ) ಉಳಿದ ಬಸ್‌ಗಳಲ್ಲಿ ಮಿತಿ ಇಲ್ಲದೇ ಪ್ರಯಾಣಿಸಬಹುದು. ನವಯುಗ ಟೋಲ್ ಹೊರತುಪಡಿಸಿ ಉಳಿದ ಮಾರ್ಗದಲ್ಲಿ ಟೋಲ್ ಶುಲ್ಕ ಪಾವತಿ ಕಡ್ಡಾಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+