ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ನಗರದಲ್ಲಿ ಇವಿ ಚಾರ್ಜಿಂಗ್ ಪಾಯಿಂಟ್ ಹುಡುಕುವುದು ಹೇಗೆ?

|
Google Oneindia Kannada News

ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಪೆಟ್ರೋಲ್, ಡೀಸೆಲ್ ದರಗಳು ಏರಿಕೆ ಕಾಣುತ್ತಿರುವ ಸಂದರ್ಭ ಜನರು ವಿದ್ಯುತ್ ವಾಹನಗಳ ಬಳಕೆಗೆ ಮುಂದಾಗುತ್ತಿದ್ದಾರೆ. ಆದರೆ ಚಾರ್ಜಿಂಗ್ ಪಾಯಿಂಟ್‌ಗಳನ್ನು ಹುಡುಕುವುದು ಸವಾಲಿನ ಕೆಲಸವಾಗಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಬೆಂಗಳೂರು ನಗರದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆದಾರರಿಗೆ ಅನುಕೂಲವಾಗುವಂತೆ ಚಾರ್ಜಿಂಗ್ ಪಾಯಿಂಟ್ ಸ್ಥಾಪನೆ ಮಾಡಿದೆ. ಜನರು ಅಂಗೈಯಲ್ಲಿಯೇ ಹತ್ತಿರದ ಚಾರ್ಜಿಂಗ್ ಪಾಯಿಂಟ್ ಎಲ್ಲಿದೆ? ಎಂದು ಹುಡುಕಬಹುದಾಗಿದೆ. ಚಾರ್ಜಿಂಗ್‌ಗಾಗಿ ಮುಂಗಡವಾಗಿ ಸಹ ಬುಕ್ಕಿಂಗ್ ಮಾಡಬಹುದಾಗಿದೆ.

Breaking; ಬೆಸ್ಕಾಂ; ವಿದ್ಯುತ್‌ ಬಿಲ್ ಕಟ್ಟದಿದ್ದರೆ ಸಂಪರ್ಕವೇ ರದ್ದು Breaking; ಬೆಸ್ಕಾಂ; ವಿದ್ಯುತ್‌ ಬಿಲ್ ಕಟ್ಟದಿದ್ದರೆ ಸಂಪರ್ಕವೇ ರದ್ದು

ಬೆಸ್ಕಾಂ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಪಾಯಿಂಟ್ ಹುಡುಕಲು ಅನುಕೂಲವಾಗಲಿ ಎಂದು 'ಇವಿ ಮಿತ್ರ' ಎಂಬ ಮೊಬೈಲ್ ಅಪ್ಲಿಕೇಶನ್ ತಯಾರು ಮಾಡಿದೆ. ನಿಮ್ಮ ಇವಿ ವಾಹನ ಚಾರ್ಜಿಂಗ್ ಹುಡುಕಾಟಕ್ಕೆ ಬೆಸ್ಕಾಂನ ಈ ಮೊಬೈಲ್ ಅಪ್ಲಿಕೇಶನ್ ಸಹಾಯ ಮಾಡಲಿದೆ.

 ದೇಶದಲ್ಲಿ ಓಡಲಿವೆ 50 ಸಾವಿರ ಇವಿ ಬಸ್‌ಗಳು; ಬರಲಿದೆ ಬ್ಯಾಟರಿ ವಿನಿಮಯ ನೀತಿ ? ದೇಶದಲ್ಲಿ ಓಡಲಿವೆ 50 ಸಾವಿರ ಇವಿ ಬಸ್‌ಗಳು; ಬರಲಿದೆ ಬ್ಯಾಟರಿ ವಿನಿಮಯ ನೀತಿ ?

How To Find EV Charging Stations In Bengaluru City

'ಇವಿ ಮಿತ್ರ' ಮೊಬೈಲ್ ಅಪ್ಲಿಕೇಶನ್ ಮೂಲಕ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿರುವ ಬೆಸ್ಕಾಂನ ಎಲ್ಲಾ ಚಾರ್ಜಿಂಗ್ ಕೇಂದ್ರಗಳ ವಿವರಗಳನ್ನು ತಿಳಿಯಬಹುದಾಗಿದೆ ಮತ್ತು ಇವಿ ಚಾರ್ಜಿಂಗ್ ಸ್ಲಾಟ್ ಅನ್ನು ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ. ಆನ್‌ಲೈನ್ ಮೂಲಕವೇ ಹಣ ಪಾವತಿ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರಿನ ಈ ಮಾಲ್‌ನಲ್ಲಿವೆ 46 ಹೊಸ ಇವಿ ಚಾರ್ಜಿಂಗ್ ಪಾಯಿಂಟ್‌ ಬೆಂಗಳೂರಿನ ಈ ಮಾಲ್‌ನಲ್ಲಿವೆ 46 ಹೊಸ ಇವಿ ಚಾರ್ಜಿಂಗ್ ಪಾಯಿಂಟ್‌

ಎಷ್ಟು ಚಾರ್ಜಿಂಗ್ ಪಾಯಿಂಟ್‌ಗಳಿವೆ?; ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ನಗರದಲ್ಲಿ 136 ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪನೆ ಮಾಡಿದೆ. ಇನ್ನೂ 152 ಪಾಯಿಂಟ್‌ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ.

ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ 1000 ಚಾರ್ಜಿಂಗ್ ಪಾಯಿಂಟ್ ಸ್ಥಾಪನೆ ಮಾಡಲು ಟೆಂಡರ್ ಸಹ ಕರೆಯಲಾಗಿದೆ. ಈ ಮೂಲಕ ರಾಜ್ಯದಲ್ಲಿ ವಿದ್ಯುತ್ ವಾಹನ ಬಳಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.

ev charging station

ಬೆಂಗಳೂರಿನಲ್ಲಿ ಎಷ್ಟು ವಾಹನಗಳಿವೆ?; ಬೆಂಗಳೂರು ನಗರದಲ್ಲಿ 10 ಆರ್‌ಟಿಒ ಕಚೇರಿಗಳಿವೆ. ಕರ್ನಾಟಕದ ಸಾರಿಗೆ ಇಲಾಖೆಯ ಮಾಹಿತಿಯ ಪ್ರಕಾರ ಈ ವರ್ಷದ ಏಪ್ರಿಲ್ ವೇಳೆಗೆ ರಾಜ್ಯದಲ್ಲಿ 85,828 ವಿದ್ಯುತ್ ಚಾಲಿತ ವಾಹನಗಳು ನೋಂದಣಿಯಾಗಿದ್ದವು. ಇವುಗಳಲ್ಲಿ 53,935 ವಾಹನಗಳು ಬೆಂಗಳೂರು ನಗರದಲ್ಲಿಯೇ ನೋಂದಣಿಗೊಂಡಿದ್ದವು. ಇವುಗಳಲ್ಲಿ 8,360 ಕಾರು, 42,007 ಬೈಕ್, 3,568 ಮೂರು ಚಕ್ರದ ವಾಹನಗಳು ಸೇರಿದ್ದವು. ಅಕ್ಟೋಬರ್ ವೇಳೆಗೆ ವಾಹನಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.

ಅಪಾರ್ಟ್‌ಮೆಂಟ್‌ಗಳಲ್ಲಿನ ವಿದ್ಯುತ್ ಚಾಲಿತ ವಾಹನಗಳ ಬಳಕೆದಾರರಿಗೆ ಅನುಕೂಲವಾಗುವಂತೆ ಅಲ್ಲಿಯೇ ಚಾರ್ಜಿಂಗ್ ಪಾಯಿಂಟ್‌ಗಳನ್ನು ಬೆಸ್ಕಾಂ ಸ್ಥಾಪಿಸುತ್ತಿದೆ. ಇದರಿಂದಾಗಿ ಜನರು ಚಾರ್ಜಿಂಗ್ ಪಾಯಿಂಟ್ ಹುಡುಕಿಕೊಂಡು ಹೋಗುವ ಅಗತ್ಯ ಇರುವುದಿಲ್ಲ.

ಪ್ಲೇ ಸ್ಟೋರ್‌ನಲ್ಲಿ ಲಭ್ಯ; ಬೆಸ್ಕಾಂ ಬೆಂಗಳೂರು ನಗರದಲ್ಲಿನ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಪಾಯಿಂಟ್ ಹುಡುಕಲು ಅನುಕೂಲವಾಗುವಂತೆ 'ಇವಿ ಮಿತ್ರ' ಎಂಬ ಮೊಬೈಲ್ ಅಪ್ಲಿಕೇಶನ್ ಆರಂಭಿಸಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿಯೇ ಇದು ಲಭ್ಯವಿದೆ.

ಈ ಅಪ್ಲಿಕೇಶನ್ ಎಲೆಕ್ಟ್ರಿಕ್ 2 ಡಬ್ಲ್ಯೂ, 3 ಡಬ್ಲ್ಯೂ ಮತ್ತು 4 ಡಬ್ಲ್ಯೂಗಳಿಗೆ ಎಲೆಕ್ಟ್ರಿಕ್ ವಾಹನದ ಚಾರ್ಜಿಂಗ್ ಕೇಂದ್ರಗಳನ್ನು ಹುಡುಕಲು ಸಹಾಯ ಮಾಡುತ್ತದೆ. ಈ ಅಪ್ಲಿಕೇಶನ್‌ನಲ್ಲಿ ಬಹು ಆಪರೇಟರ್‌ಗಳ ಮಾಹಿತಿ ಇದೆ.

'ಇವಿ ಮಿತ್ರ' ಎಂಬ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡ ಮೇಲೆ ಚಾರ್ಜಿಂಗ್ ಪಾಯಿಂಟ್ ಹುಡುಕಲು ವಾಹನದ ಸಂಖ್ಯೆ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಆನ್‌ಲೈನ್ ಮೂಲಕ ಜನರು ಪೇಮೆಂಟ್ ಪಾವತಿ ಮಾಡಲು ಸಹ ವ್ಯವಸ್ಥೆ ಮಾಡಲಾಗಿದೆ.

ಈ ಅಪ್ಲಿಕೇಶನ್‌ನಲ್ಲಿನ ಮಾಹಿತಿಗಳು ಕಳ್ಳತನವಾಗದಂತೆ ಸೈಬರ್ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಹ ನಗರದಲ್ಲಿ ವಿದ್ಯುತ್ ಚಾಲಿನ ಬಸ್‌ ಸಂಚಾರವನ್ನು ಸಹ ಆರಂಭಿಸಿದೆ.

English summary
How to find ev charging stations in Bengaluru city. Bangalore Electricity Supply Company Ltd (BESCOM) launched EV Mitra mobile applications to find charging station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X