• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ: ನೀವು ತಿಳಿದಿರಬೇಕಾದ ಸಂಗತಿಗಳಿವು

|

ಬೆಂಗಳೂರು, ಜೂನ್ 26: ಜೂನ್ ಮುಗಿಯುತ್ತಾ ಬರುತ್ತಿರುವಂತೆ ಉದ್ಯೋಗಸ್ಥರು, ಅಕೌಂಟೆಂಟ್‌ಗಳ ಮೇಲೆ ಒತ್ತಡ, ಗೊಂದಲ ಹೆಚ್ಚುತ್ತಿದೆ. ಏಕೆಂದರೆ ಈ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇನ್ನು ಒಂದು ತಿಂಗಳು ಮಾತ್ರ ಬಾಕಿ ಉಳಿಯಲಿದೆ. ಜುಲೈ 31 ಐಟಿಆರ್‌ ದಾಖಲಿಸಲು ಕೊನೆಯ ದಿನ. ನೀವು ಆದಾಯ ತೆರಿಗೆ ವ್ಯಾಪ್ತಿಯೊಳಗೆ ಬರುವ ವೇತನ ಪಡೆಯುವ ಉದ್ಯೋಗಿಯಾಗಿದ್ದರೆ, ನಿಮ್ಮ ಕಂಪೆನಿಯಿಂದ ಫಾರ್ಮ್ 16 ಪಡೆದುಕೊಂಡಿರಬೇಕು. ಇಲ್ಲವಾದರೆ, ಕೂಡಲೇ ಕೇಳಿ ಪಡೆದುಕೊಳ್ಳಿ.

ವಿವಿಧ ಇ-ಫೈಲಿಂಗ್ ವೇದಿಕೆಗಳ ಮೂಲಕ ಐಟಿಆರ್ ಸಲ್ಲಿಕೆ ವಿಧಾನವನ್ನು ವರ್ಷದಿಂದ ವರ್ಷಕ್ಕೆ ಸರಳಗೊಳಿಸಲಾಗುತ್ತಿದೆ. ಆದರೂ ಪ್ರತಿ ಬಾರಿಯೂ ಒಂದಷ್ಟು ಗೊಂದಲಗಳು ಇದ್ದೇ ಇರುತ್ತವೆ. ನಾನು ಐಟಿ ರಿಟರ್ನ್ಸ್ ಫೈಲ್ ಮಾಡಲು ಅರ್ಹನೇ/ಳೇ? ಹೇಗೆ ಮತ್ತು ಎಲ್ಲಿ ಅದನ್ನು ಫೈಲ್ ಮಾಡುವುದು? ನಾನು ಐಟಿಆರ್ ಸಲ್ಲಿಕೆ ಮಾಡುವುದು ಅಗತ್ಯವೇ? ಫಾರ್ಮ್ 16ನ ವಿವರಗಳನ್ನು ನಾನು ಹೇಗೆ ಅರ್ಥ ಮಾಡಿಕೊಳ್ಳುವುದು? ನನ್ನ ಹಣ ವಾಪಸ್ ಬರುತ್ತದೆಯೇ? ನನಗೆ ಗರಿಷ್ಠ ಎಷ್ಟು ಹಣ ವಾಪಸ್ ಬರುತ್ತದೆ? ನಾನು ಸಲ್ಲಿಸಿದ ದಾಖಲೆಗಳು ಸರಿಯಾಗದೆ ಇದ್ದರೆ ಏನಾಗುತ್ತದೆ? ಇತ್ಯಾದಿ ಒಂದೆರಡಲ್ಲ, ನೂರಾರು ಪ್ರಶ್ನೆಗಳು ಎದುರಾಗುತ್ತವೆ.

ಆದಾಯ ತೆರಿಗೆ ಮಿತಿ, ಮೋದಿ ಸರ್ಕಾರ 2.0 ಬಜೆಟ್ ನಿರೀಕ್ಷೆಯೇನು?

ವಾರ್ಷಿಕ 2.5 ಲಕ್ಷ ರೂಪಾಯಿಗಿಂತ ಅಧಿಕ ಆದಾಯ ಹೊಂದಿರುವ ಯಾವುದೇ ವ್ಯಕ್ತಿ ತೆರಿಗೆ ಕಟ್ಟಬೇಕಿರದಿದ್ದರೂ ಐಟಿಆರ್ ಸಲ್ಲಿಸುವುದು ಕಡ್ಡಾಯ. ನೀವು ನಿಮ್ಮ ತೆರಿಗೆ ದಾಖಲೆ ಸಲ್ಲಿಸದೆ ಇದ್ದರೆ ಸೆಕ್ಷನ್ 234 ಎಫ್ ಅಡಿ 10,000 ರೂ. ದಂಡ ತೆರಬೇಕಾಗುತ್ತದೆ. ನಿಮ್ಮ ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಹೆಚ್ಚು ಇರದೆ ಇದ್ದರೆ 1,000 ರೂ. ಪಾವತಿಸಬೇಕಾಗುತ್ತದೆ.

ಮಿಗಿಲಾಗಿ ಐಟಿ ರಿಟರ್ನ್ಸ್ ಸಲ್ಲಿಕೆ ಮಹತ್ವದ್ದು ಮತ್ತು ಪ್ರಯೋಜನಕಾರಿ. ನಿಮ್ಮ ಆದಾಯಕ್ಕೆ ಅಧಿಕೃತ ದಾಖಲೆಯೆಂದರೆ ಐಟಿಆರ್ ರಸೀದಿ. ನೀವು ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಮುಂದಾದರೆ ಈ ರಸೀದಿ ಅಗತ್ಯ. ವಿವಿಧ ದೇಶಗಳ ರಾಯಭಾರ ಕಚೇರಿಗಳು, ಅದರಲ್ಲಿಯೂ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಕೆನಡಾಗಳು ವೀಸಾ ಪ್ರಕ್ರಿಯೆಗೆ ಐಟಿಆರ್ ರಸೀದಿಗಳನ್ನು ಕೇಳುತ್ತವೆ.

ಯಾವ ಯಾವ ದಾಖಲೆಗಳು ಬೇಕು?

ಯಾವ ಯಾವ ದಾಖಲೆಗಳು ಬೇಕು?

ಆರಂಭದಲ್ಲಿ ನೀವು ಐಟಿ ಸಲ್ಲಿಕೆಗೂ ಮುನ್ನ ಎಲ್ಲ ದಾಖಲೆಗಳನ್ನು ಹೊಂದಿರಬೇಕು. ನಿಮ್ಮ ಪಾನ್ ಕಾರ್ಡ್, ಬ್ಯಾಂಕ್ ಸ್ಟೇಟ್‌ಮೆಂಟ್ ಮತ್ತು ಫಾರ್ಮ್ 16 ಇರಬೇಕು. ಜತೆಗೆ ನಿಮ್ಮ ಪಾನ್‌ಗೆ ಡಿಪಾಸಿಟ್ ಆಗಿರುವ ಎಲ್ಲ ತೆರಿಗೆಗಳ ವಿವರಗಳನ್ನು ಒಳಗೊಂಡಿರುವ ಫಾರ್ಮ್ 26ಎಎಸ್ ಹೊಂದಿರಬೇಕು. ಈ ಫಾರ್ಮ್ TRACES ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್‌ಗೆ ಸಿಗುತ್ತದೆ.

ತೆರಿಗೆ ರಿಯಾಯಿತಿ ಕ್ಲೈಮ್ ಮಾಡಲು ಬ್ಯಾಂಕ್ ಅಥವಾ ಅಂಚೆ ಕಚೇರಿಗಳಿಂದ ನಿಮಗೆ ವಾರ್ಷಿಕ ಬಡ್ಡಿಯ ಪ್ರಮಾಣಪತ್ರ ಬೇಕು. ಯಾವುದೇ ರೀತಿಯ ಹೂಡಿಕೆ, ವಿಮೆ, ಎಲ್‌ಐಸಿ ಪಾಲಿಸಿ ಅಥವಾ ಸಾಲ ಹೊಂದಿದ್ದರೆ ಅದರ ದಾಖಲೆ ಬೇಕು. ಇದು ಪ್ರೀಮಿಯಂ ಸರ್ಟಿಫಿಕೇಟ್, ಸಾಲ ಸ್ಟೇಟ್‌ಮೆಂಟ್, ಸ್ಟಾಕ್ ಟ್ರೇಡಿಂಗ್ ಸ್ಟೇಟ್‌ಮೆಂಟ್, ಮ್ಯೂಚುವಲ್ ಫಂಡ್ ಸ್ಟೇಟ್‌ಮೆಂಟ್ ಮುಂತಾದವುಗಳ ರೂಪದಲ್ಲಿ ಇರುತ್ತದೆ.

ಇವುಗಳನ್ನು ಸಾಮಾನ್ಯವಾಗಿ ಐಟಿಆರ್ ಪಾವತಿಸುವಾಗ 80C, 80D ಮತ್ತು 80E ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾಗುತ್ತದೆ.

ಐಟಿಆರ್ ಸಲ್ಲಿಸುವುದು ಎಲ್ಲಿ?

ಐಟಿಆರ್ ಸಲ್ಲಿಸುವುದು ಎಲ್ಲಿ?

ಸರ್ಕಾರದ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಅಂತರ್ಜಾಲದ ಮೂಲಕ ಐಟಿಆರ್ ಸಲ್ಲಿಸಬಹುದು. ನಿಮ್ಮ ಬ್ಯಾಂಕ್‌ನ ನೆಟ್‌ಬ್ಯಾಂಕಿಂಗ್ ವೆಬ್‌ಸೈಟ್ ಲಾಗಿನ್ ಆದರೆ ಅಲ್ಲಿಯೂ ಐಟಿಆರ್ ಸಲ್ಲಿಸುವ ಆಯ್ಕೆ ಸಿಗುತ್ತದೆ. ಇದು ನೇರವಾಗಿ ಇ-ಫೈಲಿಂಗ್‌ ವೆಬ್‌ಸೈಟ್‌ಗೆ ರಿಡೈರೆಕ್ಟ್ ಮಾಡುತ್ತದೆ. ಸರಳವಾಗಿ ತೆರಿಗೆ ಪಾವತಿಸಲು ನೆರವಾಗುವ ಇತರೆ ವೆಬ್‌ಸೈಟ್ ಸೌಲಭ್ಯಗಳೂ ಇವೆ.

ಮೋದಿ ಸರಕಾರದಿಂದ ಮಧ್ಯಮ ವರ್ಗೀಯ ಆದಾಯ ತೆರಿಗೆದಾರರಿಗೆ ಸೂಪರ್ ಗಿಫ್ಟ್

ಸೂಕ್ತ ಐಟಿಆರ್ ಫಾರ್ಮ್ ಯಾವುದು? ತಿಳಿಯುವುದು ಹೇಗೆ?

ಸೂಕ್ತ ಐಟಿಆರ್ ಫಾರ್ಮ್ ಯಾವುದು? ತಿಳಿಯುವುದು ಹೇಗೆ?

ನಿಮ್ಮ ಆದಾಯದ ಮೂಲಗಳು ಮತ್ತು ನೀವು ಯಾವ ರೀತಿಯ ತೆರಿಗೆ ಪಾವತಿದಾರ ಎಂಬುದರ ಆಧಾರದಲ್ಲಿ ನಿಮಗೆ ಐಟಿಆರ್‌ ಫಾರ್ಮ್‌ಗಳು ಅನ್ವಯಿಸುತ್ತವೆ. ಇವುಗಳನ್ನು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪ್ರಸ್ತುತ ಐಟಿಆರ್- 1 ರಿಂದ ಐಟಿಆರ್-7ರವರೆಗೆ ಏಳು ಫಾರ್ಮ್‌ಗಳು ಲಭ್ಯ. ಪ್ರತಿಯೊಂದು ಫಾರ್ಮ್‌ನ ಅರ್ಥವನ್ನೂ ಐಟಿ ವೆಬ್‌ಸೈಟ್ ವಿವರಿಸುತ್ತದೆ. ಐಟಿಆರ್-1 ಮತ್ತು ಐಟಿಆರ್-2 ಅತ್ಯಂತ ಸಾಮಾನ್ಯವಾದವುಗಳು. ಇವುಗಳು ಹೆಚ್ಚಾಗಿ ಸಂಬಳ ಪಡೆದುಕೊಳ್ಳುವ ಉದ್ಯೋಗಿಗಳಿಗೆ ಅನ್ವಯವಾಗುತ್ತವೆ. ಐಟಿಆರ್-1 ತೆರಿಗೆ ಪಾವತಿದಾರರಾಗಿದ್ದು 50 ಲಕ್ಷ ರೂಪಾಯಿವರೆಗೆ ಒಟ್ಟು ಆದಾಯ ಹೊಂದಿರುವವರಿಗೆ ಅನ್ವಯವಾಗುತ್ತದೆ. ಐಟಿಆರ್-2 ಉದ್ಯಮ ಅಥವಾ ವೃತ್ತಿಯಿಂದ ಆದಾಯ ಗಳಿಸದವರಿಗೆ ಅನ್ವಯವಾಗುತ್ತದೆ.

ವಿವಿಧ ಐಟಿಆರ್ ವಿವರ

ವಿವಿಧ ಐಟಿಆರ್ ವಿವರ

ಐಟಿಆರ್-1 ವೇತನದ ವಿವರ, ಒನ್ ಹೌಸ್ ಪ್ರಾಪರ್ಟಿ, ಇತರೆ ಮೂಲಗಳ ಆದಾಯ ಮತ್ತು ಕೃಷಿ ಆದಾಯವನ್ನು ಒಳಗೊಂಡಿರುತ್ತದೆ. ಐಟಿಆರ್-2 ಅನ್ನು ಒನ್ ಹೌಸ್ ಪ್ರಾಪರ್ಟಿಗಿಂತ ಹೆಚ್ಚು ಮೂಲಗಳಿಂದ, ಬಂಡವಾಳದ ಗಳಿಕೆಯಿಂದ ಆದಾಯ, ಯಾವುದೇ ಕಂಪೆನಿಯ ನಿರ್ದೇಶಕ ಸ್ಥಾನ ಹೊಂದಿರುವುದರಿಂದ ಮತ್ತು ಪಟ್ಟಿಮಾಡ ಈಕ್ವಿಟಿ ಷೇರುಗಳನ್ನು ಹೊಂದಿರುವುದರಿಂದ ಆದಾಯ ಪಡೆಯುವವರಿಗೆ ಬಳಸಲಾಗುತ್ತದೆ.

ಐಟಿಆರ್-3 ಮತ್ತು 4 ಉದ್ಯಮ ಅಥವಾ ವೃತ್ತಿಯಿಂದ ಸಂಪಾದಿಸುವವರಿಗೆ ಅನ್ವಯವಾಗುತ್ತದೆ. ಉದಾಹರಣೆಗೆ ನೀವು ಒಂದು ಸಂಸ್ಥೆಗೆ ಸಲಹೆಗಾರ ಅಥವಾ ಫ್ರೀಲ್ಯಾನ್ಸರ್ ಆಗಿದ್ದರೆ ನೀವು ಈ ಎರಡು ಫಾರ್ಮ್‌ಗಳನ್ನು ಸಲ್ಲಿಸಬೇಕಾಗುತ್ತದೆ. ಐಟಿಆರ್-4 ಇದೇ ರೀತಿಯ ಪ್ರಕ್ರಿಯೆ ಹೊಂದಿದೆ. ಇದು ನೀವು ನಡೆಸುವ ವ್ಯಾಪಾರ ಅಥವಾ ವೃತ್ತಿಯಲ್ಲಿನ ಆದಾಯದ ಶೇ 50ರಷ್ಟು ವೆಚ್ಚವನ್ನು ಪರಿಗಣಿಸುತ್ತದೆ. ಇದಕ್ಕೆ ಬಿಲ್‌ಗಳ ಅಗತ್ಯವಿರುವುದಿಲ್ಲ. ಐಟಿಆರ್-3ನಲ್ಲಿ ಎಲ್ಲ ವೆಚ್ಚಗಳ ನಿರ್ದಿಷ್ಟ ಬಿಲ್‌ಗಳನ್ನು ಒದಗಿಸಬೇಕಾಗುತ್ತದೆ. 50 ಲಕ್ಷಕ್ಕಿಂತ ಅಧಿಕ ಆದಾಯವಿದ್ದರೆ ಐಟಿಆರ್-4 ಸಲ್ಲಿಸಲು ಆಗುವುದಿಲ್ಲ.

ಏರ್ ಟೆಲ್ ಡಿಜಿಟಲ್ ಟಿವಿಯಲ್ಲಿ ಚಾನೆಲ್ ಆಯ್ಕೆ ವಿಧಾನ ಹೇಗೆ?

ಇ-ಫೈಲಿಂಗ್ ಪ್ರಕ್ರಿಯೆ ಹೇಗೆ?

ಇ-ಫೈಲಿಂಗ್ ಪ್ರಕ್ರಿಯೆ ಹೇಗೆ?

ಮೊದಲ ಬಾರಿಗೆ ಐಟಿಆರ್ ಸಲ್ಲಿಸುತ್ತಿದ್ದರೆ ನೀವು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು ಲಾಗಿನ್ ಆಗಬೇಕು. ಅದಕ್ಕೆ ಪಾನ್, ಪಾಸ್‌ವರ್ಡ್ ಮತ್ತು ಜನ್ಮದಿನಾಂಕ ನಮೂದಿಸಬೇಕು. ಬಳಿಕ ಇ-ಫೈಲ್‌ಗೆ ಹೋಗಿ 'ಪ್ರಿಪೇರ್ ಆಂಡ್ ಸಮ್ಮಿಟ್ ಐಟಿಆರ್ ಆನ್‌ಲೈನ್' ಕ್ಲಿಕ್ ಮಾಡಬೇಕು. ಬಳಿಕ ನಿಮಗೆ ಅಗತ್ಯವಾದ ಐಟಿಆರ್ ಫಾರ್ಮ್ ಹಾಗೂ ಅಸೆಸ್‌ಮೆಂಟ್ ವರ್ಷ (2019-20) ಆಯ್ಕೆ ಮಾಡಬೇಕು. ವಿವರಗಳನ್ನು ಭರ್ತಿ ಮಾಡಿ 'ಸಬ್ಮಿಟ್' ಬಟನ್ ಒತ್ತಬೇಕು.

ಕ್ಲಿಯರ್ ಟ್ಯಾಕ್ಸ್‌ನಂತರ ವೆಬ್‌ಸೈಟ್ ಇಡೀ ಪ್ರಕ್ರಿಯೆಯಲ್ಲಿ ನಿಮಗೆ ಸಲಹೆಗಳನ್ನು ನೀಡುತ್ತವೆ. ಅಲ್ಲದೆ, ವೃತ್ತಿಪರ ಚಾರ್ಟರ್ಡ್ ಅಕೌಂಟೆಂಟ್ ಅವರಿಗೆ ಹಣ ಪಾವತಿಸಿ ಸಲಹೆ ಪಡೆಯುವ ಅವಕಾಶ ನೀಡುತ್ತದೆ.

ಈ ವರ್ಷ ಇ-ಫೈಲಿಂಗ್‌ನಲ್ಲಿನ ಬದಲಾವಣೆಗಳು

ಈ ವರ್ಷ ಇ-ಫೈಲಿಂಗ್‌ನಲ್ಲಿನ ಬದಲಾವಣೆಗಳು

2018ರ ಬಜೆಟ್‌ನಲ್ಲಿ ಸರ್ಕಾರವು ಪಟ್ಟಿಮಾಡಿದ ಈಕ್ವಿಟಿ ಷೇರುಗಳು ಅಥವಾ ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್ ಘಟಕದ ಮೂಲದಿಂದ ಬರುವ 1ಲಕ್ಷಕ್ಕೂ ಹೆಚ್ಚಿನ ದೀರ್ಘಾವಧಿ ಬಂಡವಾಳ ಗಳಿಕೆಯ ಮೇಲಿನ ತೆರಿಗೆಯನ್ನು ಪರಿಚಯಿಸಿದೆ. ಹೀಗಾಗಿ ಪ್ರಸಕ್ತ ವರ್ಷದಿಂದ ತೆರಿಗೆ ಪಾವತಿದಾರರು ಈಕ್ವಿಟಿ ಷೇರುಗಳ ವರ್ಗಾವಣೆಯಿಂದ ಬರುವ ಎಲ್‌ಟಿಸಿಜಿ ವರದಿಯನ್ನು ಕೊಡಬೇಕು.

ಅಲ್ಲದೆ, ಪಟ್ಟಿಮಾಡದ ಈಕ್ವಿಟಿ ಷೇರುಗಳಲ್ಲಿ ಹೂಡಿಕೆಯನ್ನು ಕಂಪೆನಿ ಹೆಸರು, ಷೇರುಗಳ ಆರಂಭದ ಸಂಖ್ಯೆ, ಅದರ ವೆಚ್ಚ, ಪಡೆದುಕೊಂಡ ಮತ್ತು ಈ ವರ್ಷ ಮಾರಾಟ ಮಾಡಿದ ಷೇರುಗಳ ವಿವರ ಹಾಗೂ ಷೇರುಗಳ ಅಂತ್ಯದ ಸಂಖ್ಯೆ ಮತ್ತು ವೆಚ್ಚವನ್ನು ಒದಗಿಸಬೇಕು.

ಯಾವುದೇ ಕಂಪೆನಿಯ ನಿರ್ದೇಶಕ ಸ್ಥಾನದ ಹೊಂದಿದ್ದರೆ, ನೀವು ಕಂಪೆನಿಯ ಹೆಸರನ್ನು ಬಹಿರಂಗಪಡಿಸಬೇಕು. ಅದರ ಪ್ಯಾನ್ ಮತ್ತು ನಿಮ್ಮ ನಿರ್ದೇಶಕರ ಗುರುತಿನ ಸಂಖ್ಯೆ (ಡಿಐಎನ್) ಒದಗಿಸಬೇಕು.

2018-19ನೇ ಸಾಲಿನ ಹಣಕಾಸು ವರ್ಷದಲ್ಲಿ ನೀವು ಆಸ್ತಿಯನ್ನು ಮಾರಾಟ ಮಾಡಿದ್ದರೆ (ಸ್ಥಿರ ಆಸ್ತಿ) ನೀವು ಖರೀದಿದಾರರ ಎಲ್ಲ ಮಾಹಿತಿಗಳನ್ನೂ ಕೂಡ ಒದಗಿಸಬೇಕು. ಆಸ್ತಿಯ ವಿಳಾಸ, ಖರೀದಿದಾರರ ಹೆಸರು ಮತ್ತು ಪಾನ್ ಸಂಖ್ಯೆಯನ್ನೂ ಇದು ಒಳಗೊಂಡಿರುತ್ತದೆ. ಒಬ್ಬರಿಗಿಂತ ಹೆಚ್ಚು ಖರೀದಿದಾರರು ಇದ್ದರೆ ಪ್ರತಿ ಖರೀದಿದಾರರ ಹಂಚಿಕೆಗಳನ್ನು ಕೂಡ ಬಹಿರಂಗಪಡಿಸಬೇಕು.

ಟ್ರಾಯ್ ನಲ್ಲಿ ಟಿವಿ ವಾಹಿನಿ ದರ ಪಟ್ಟಿ, ಕನ್ನಡ ಚಾನೆಲ್ ಆಯ್ಕೆ ಹೇಗೆ?

ವಾಸದ ಸ್ಥಿತಿಗತಿ ವಿವರ

ವಾಸದ ಸ್ಥಿತಿಗತಿ ವಿವರ

ನಿಮ್ಮ ವಾಸದ ಸ್ಥಿತಿಗತಿಯನ್ನು ಬಹಿರಂಗಡಿಸಬೇಕಾಗುತ್ತದೆ. ಐಟಿಆರ್-1 ಮತ್ತು 2ರಲ್ಲಿ ಭಾರತದಲ್ಲಿ ನೀವು ಎಷ್ಟು ದಿನಗಳ ಕಾಲ ದೈಹಿಕವಾಗಿ ಇದ್ದೀರ ಎಂಬುದನ್ನು ತಿಳಿಸಬೇಕು. ನಿಮ್ಮ ತೆರಿಗೆ ಮೊತ್ತವು ನೀವು ಎಷ್ಟು ದಿನ ದೈಹಿಕವಾಗಿ ಭಾರತದಲ್ಲಿ ಇದ್ದೀರಿ ಮತ್ತು ವಾಸ ಸ್ಥಿತಿಗತಿ ಹಾಗೂ ನೀವು ನಿವಾಸಿಯೇ, ನಿವಾಸಿ ಆದರೆ ಮಾಮೂಲಿ ನಿವಾಸಿಯಲ್ಲವೇ ಅಥವಾ ನಿವಾಸಿಯಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ನೀವು ಭಾರತದ ನಿವಾಸಿಯಾಗಿದ್ದು, ಸಾಮಾನ್ಯ ನಿವಾಸಿಯಾಗಿರದೆ ಇದ್ದರೆ ಕಳೆದ 9-10 ವರ್ಷಗಳಲ್ಲಿ ಭಾರತದಲ್ಲಿ ವಾಸವಾಗಿರದೆ ಹೋದರೆ ಅಥವಾ ಕಳೆದ ಏಳು ವರ್ಷಗಳಲ್ಲಿ 729 ದಿನಕ್ಕಿಂತ ಕಡಿಮೆ ಭಾರತದಲ್ಲಿ ವಾಸವಿದ್ದಿರೇ ಎಂಬುದು ಮುಖ್ಯವಾಗುತ್ತದೆ.

English summary
July 31 is the last date to file Income Tax Returns. People should know some basic things regarding how and where to file ITR. Here is some information on IT returns filing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more