ಸೇವಾ ಸಿಂಧು ಮೂಲಕ ಜನನ ಪ್ರಮಾಣ ಪತ್ರ ಪಡೆಯುವುದು ಹೇಗೆ?

ಕರ್ನಾಟಕ ಸರ್ಕಾರ ಜನರು ಜನನ ಪ್ರಮಾಣ ಪತ್ರ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಸೇವಾ ಸಿಂಧು ಪೋರ್ಟಲ್ ಮೂಲಕವೂ ಜನನ ಪ್ರಮಾಣ ಪತ್ರಗಳನ್ನು ನಿಗದಿತ ಶುಲ್ಕವನ್ನು ಪಾವತಿಸಿ ಪಡೆಯಬಹುದಾಗಿದೆ.

ಸೇವ ಸಿಂಧು ಪೋರ್ಟಲ್‌ ಮೂಲಕ ಮನವಿ ಸಲ್ಲಿಸಿ ನಿಗದಿತ ಶುಲ್ಕ ರೂ. 25 ಅನ್ನು ಪಾವತಿಸಿ ಜನನ ಪ್ರಮಾಣ ಪತ್ರಗಳನ್ನು ಪಡೆಯಬಹುದಾಗಿದೆ. ಸರ್ಕಾರದ ಹಲವಾರು ಇಲಾಖೆಗಳ ಸೇವೆಗಳು ಪ್ರಸ್ತುತ ಸೇವಾ ಸಿಂಧುವಿನಲ್ಲಿ ಲಭ್ಯವಿದೆ.

ಸುಲಭವಾಗಿ ಜನನ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ? ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಮೊದಲು ಜನರು ಸೇವಾ ಸಿಂಧು ಪೋರ್ಟಲ್‌ಗೆ ಲಾಗಿನ್ ಆಗಿ ಅಲ್ಲಿ Departments & Services ಮೇಲೆ ಕ್ಲಿಕ್ ಮಾಡಬೇಕು. ಕನ್ನಡ ಮತ್ತು ಇಂಗ್ಲಿಶ್ ಭಾಷೆಯಲ್ಲಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಮಾಹಿತಿ ಲಭ್ಯವಿದೆ.

How To Apply For Birth Certificate In Seva Sindhu

ಎಲ್ಲಿ ಅರ್ಜಿ ಸಲ್ಲಿಸಬೇಕು?; ಇಲಾಖೆ & ಸೇವೆಗಳಲ್ಲಿ Planning Programme Monitoring & Statistics Department ಸೆಲೆಕ್ಟ್ ಮಾಡಬೇಕು. ಅಲ್ಲಿ Birth Certificate ಅಪ್ಲಿಕೇಶನ್ ಎಂಬಲ್ಲಿ ಕಾಣಿಸುತ್ತದೆ. ಇಲ್ಲವೇ search ನಲ್ಲಿ ಹುಡುಕಿದರೆ ಸಿಗಲಿದೆ.

ಈ ಹಿಂದೆ ನೀವು ನೋಂದಣಿ ಮಾಡಿಸದಿದ್ದರೆ No ಕ್ಲಿಕ್ ಮಾಡಿ. ಮಗುವಿನ ಜ್ಮನ ದಿನಾಂಕ, ಮಗುವಿನ ಹೆಸರು, ತಂದೆಯ ಹೆಸರು, ತಾಯಿಯ ಹೆಸರು ಭರ್ತಿ ಮಾಡಿ ಸರ್ಚ್ ಕ್ಲಿಕ್ ಮಾಡಿದರೆ ವಿವರಗಳು ಕಾಣಿಸುತ್ತದೆ.

ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ yes ಕ್ಲಿಕ್ ಮಾಡಿ ಎಷ್ಟು ಕಾಪಿಬೇಕು ಎಂದು ನಂಬರ್ ನಮೂದಿಸಿ, ಕ್ಯಾಪ್ಚಾ ಭರ್ತಿ ಮಾಡಿ ಸಬ್ ಮಿಟ್ ಮಾಡಿ.

7ನೇ ಹಂತದಲ್ಲಿ ಮೇಕ್ ಎ ಪೇಮೆಂಟ್ ಎಂಬ ಆಯ್ಕೆ ಸಿಗುತ್ತದೆ. ಪೇಮೆಂಟ್ ಮೋಡ್‌ ಮೂಲಕ ಶುಲ್ಕವನ್ನು ಪಾವತಿ ಮಾಡಿ. ಶುಲ್ಕ ಪಾವತಿ ಬಳಿಕ ರಶೀದಿ ಸಿಗುತ್ತದೆ. ಇದರಲ್ಲಿ ನೀವು ಭರ್ತಿ ಮಾಡಿದ ಎಲ್ಲಾ ವಿವರ ಇರುತ್ತದೆ.

ಬಳಿಕ ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ನಮೂದು ಮಾಡಿ. ಯೂಸರ್ ನೇಮ್, ಪಾಸ್ ವರ್ಡ್‌ ಕೊಟ್ಟು ಮುಂದೆ ಸಾಗಿರಿ.

ವೀವ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿಯ ಸ್ಥಿತಿ ತಿಳಿಯುತ್ತದೆ. ನಿಮಗೆ ನೀಡಿದ ರೆಫರೆನ್ಸ್ ನಂಬರ್ ಮೂಲಕ ನೀವು ಅರ್ಜಿ ಸ್ಥಿತಿಗತಿ ತಿಳಿಯಬಹುದು.

ಸ್ಥಿತಿಗತಿಯಲ್ಲಿ Delivered ಎಂದು ಇದ್ದರೆ ಅದನ್ನು ಕ್ಲಿಕ್ ಮಾಡಿ. ಇಶ್ಯು ಡಾಕ್ಯುಂಮೆಂಟ್ಸ್‌ ಸೆಕ್ಷನ್‌ನಲ್ಲಿ Output certificate ಮೇಲೆ ಕ್ಲಿಕ್ ಮಾಡಿ. ಆಗ ನೀವು ಜನನ ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಎಂಬ ವಿಡಿಯೋ ಮತ್ತು ಬರಹ ರೂಪದ ಮಾರ್ಗದರ್ಶಿಗಳು ಸಹ ಜನರಿಗಾಗಿ ಲಭ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+