• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೆಂಗಿನ ಕಾಯಿ, ತೆಂಗಿನೆಣ್ಣೆ ಕೊರೊನವನ್ನು ತಡೆಗಟ್ಟಬಹುದೇ?

By ಡಾ. ನಾಗಭೂಷಣ ಮೂಲ್ಕಿ, ಶಿಕಾಗೋ
|

ಚೀನಾದಲ್ಲಿ ಅವಿವೇಕಿ ಜನರು ಬಾವಲಿಗಳನ್ನು ಕೊಂದು ತಿಂದು ತೇಗಿ ರೋಗಿಗಳಾಗಿ ಕೊರೊನ ವೈರಸ್ ಮಾರಕ ರೋಗದಲ್ಲಿ ನರಳಿ ಬಸವಳಿದು ನೊಂದು ಬೆಂದು ಮಾರಣ ಹೋಮದಲ್ಲಿ ಹಲವಾರು ಮಂದಿ ಮರಣ ಹೊಂದಿದರು. ವಿಶ್ವದೆಲ್ಲೆಡೆ ಕೊರೊನ ವೈರಸ್ ಮಾರಕ ಸೋಂಕು ಜ್ವರದ ಭೀತಿಯಿಂದ ಜನರು ತತ್ತರಿಸಿ ಹೋಗಿದ್ದಾರೆ.

ಈ ಮಾರಕ ಸೋಂಕು ರೋಗಕ್ಕೆ ಯಾವುದೇ ಮದ್ದಾಗಲಿ ಅಥವಾ ಲಸಿಕೆಗಳಾಗಲಿ ಲಭ್ಯವಿಲ್ಲ. ಈ ಮಾರಿ ಜ್ವರ ಹಬ್ಬದಂತೆ ಹಲವಾರು ಜಾಗರೂಕತೆ ನಿರ್ಬಂಧಗಳನ್ನು ಹೇರಲಾಗಿದೆ. ಈ ಮುಂಜಾಗೃತಾ ಕಾನೂನು ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಎಲ್ಲರಲ್ಲೂ ಈ ಸೋಂಕು ನಿರೋಧಕ ಶಕ್ತಿ ಪ್ರಕೃತಿ ಸಹಜವಾಗಿ ಇರುತ್ತದೆ.

ಕೊರೊನಾಭೀತಿ ಇರುವವರು ಯಾವ ಆಹಾರ ಸೇವಿಸಬೇಕು?

ಇದಕ್ಕೆ ಉದಾಹರಣೆ ಏನೆಂದರೆ ಕೊರೊನ ವೈರಸ್ ಸೋಂಕು ಬಂದವರಲ್ಲಿ ಶೇಕಡಾ 90ರಷ್ಟು ಜನ ಜ್ವರ ಲಕ್ಷಣವಿಲ್ಲದೆ ಓಡಾಡುತ್ತಿರುತ್ತಾರೆ. ಅಂದರೆ, ಹಲವಾರು ಕಾರಣಗಳಿಂದ ಶೇಕಡಾ 10ರಷ್ಟು ಜನರಲ್ಲಿ ರೋಗ ನಿರೋಧಕ ಶಕ್ತಿಯು ಕುಗ್ಗಿರುತ್ತದೆ. ನಾವು ಉಸಿರಾಡಿದಾಗ ಈ ವೈರಸ್ ಮೂಗಿನ ಮೂಲಕ ಶ್ವಾಸಕೋಶಕ್ಕೆ ಹೋಗಿ ಅಂಗಾಂಶವನ್ನು ಧ್ವಂಸಮಾಡಿ ಉಸಿರಾಡದಂತೆ ಮಾಡುತ್ತದೆ. ನಾವು ಉಸಿರಾಡುವುದನಂತೂ ನಿಲ್ಲಿಸುವುದು ಅಸಾಧ್ಯ. ಆದುದರಿಂದ ವೈರಸ್ ದೇಹದೊಳಗೆ ಹೋಗದಂತೆ ಅಥವಾ ಹೋದರೆ ಉಸಿರಾಡುವ ಅಂಗಗಳನ್ನು ಹೇಗೆ ರಕ್ಷಿಸುವುದು ಬಗೆ ಚಿಂತನೆ ಮಾಡಬೇಕಿದೆ.

ಸುಮೇರು ಆಹಾರ ಉತ್ಪನ್ನ : ತಾಜಾ ತೆಂಗಿನ ಕಾಯಿ ತುರಿ

ಪ್ರಕೃತಿಯಲ್ಲಿ ಸೋಂಕು ನಿರೋಧಕ ಶಕ್ತಿಯನ್ನು ಮನುಷ್ಯನಲ್ಲಿ ಹೆಚ್ಚಿಸುವ ಗುಣ ವಿಶೇಷವಿರುವ ವಿವಿಧ ಗಿಡ ಮೂಲಿಕೆಗಳಲ್ಲಿ ಮತ್ತು ನಾವು ತಿನ್ನುವ ಆಹಾರ ಪಧಾರ್ಥಗಳಲ್ಲಿ ಇವೆ. ಅದರ ಸದುಪಯೋಗದಿಂದ ಹೇಗೆ ಈ ಮಹಾಮಾರಿ ಸೋಂಕು ಜ್ವರವನ್ನು ತಡೆಗಟ್ಟಬಹುದೆಂದು ತಿಳಿಯೋಣ.

ತೆಂಗಿನ ಎಣ್ಣೆ ದಿನನಿತ್ಯ ಬಳಕೆ

ತೆಂಗಿನ ಎಣ್ಣೆ ದಿನನಿತ್ಯ ಬಳಕೆ

ತೆಂಗಿನ ಎಣ್ಣೆ ಕರಾವಳಿ ಪ್ರದೇಶಗಳಲ್ಲಿ ತೆಂಗಿನ ಕಾಯಿ, ಎಣ್ಣೆ ಮತ್ತು ಸಿಯಾಳ ದಿನನಿತ್ಯ ಉಪಯೋಗಿಸುವುದು ವಾಡಿಕೆಯಿತ್ತು ತೆಂಗಿನ ಮರವನ್ನು ಭೂಲೋಕದ ಕಲ್ಪವೃಕ್ಷವೆಂದು ಕರೆಯಲಾಗುತ್ತದೆ. ಸನಾತನ ಧರ್ಮದ (ಹಿಂದು ಧರ್ಮ) ಶುಭ ಸಮಾರಂಭಗಳಲ್ಲಿ, ಧಾರ್ಮಿಕ ಪೂಜೆ ಪುರಸ್ಕಾರಗಳಲ್ಲಿ ತೆಂಗಿನ ಕಾಯಿ ಮಹತ್ವವಾದ ಸ್ಥಾನ ಪಡೆದಿದೆ. ದೇವರ ನೈವೇದ್ಯಕ್ಕೆ ತೆಂಗಿನ ಕಾಯಿ ಇರಲೇಬೇಕು. ನಮ್ಮ ಪೂರ್ವಜರು ಆರೋಗ್ಯಕ್ಕೆ ಉತ್ತಮವಾದುದ್ದನ್ನು ದೇವರಿಗೆ ಸಮರ್ಪಣೆ ಮಾಡಿ ಮತ್ತೆ ತಾವು ಸೇವಿಸುತ್ತಿದ್ದರು. ಹಾಗೆಯಾದರೂ ಜನರು ಉತ್ತಮ ಕ್ರಮ, ಪದಾರ್ಥಗಳನ್ನು ಅಳವಡಿಸಿಕೊಳ್ಳಿ ಎನ್ನುವ ಉದ್ದೇಶ ಅವರದ್ದು ಇದ್ದಿರಬೇಕು.

ಪ್ರಕೃತಿ ಸಹಜವಾದ ಗುಣಗಳನ್ನು ಉಳಿಸಿ

ಪ್ರಕೃತಿ ಸಹಜವಾದ ಗುಣಗಳನ್ನು ಉಳಿಸಿ

ಆಧುನಿಕ ಜೀವನ ಶೈಲಿ, ಪಾಶ್ಚಿಮಾತ್ಯ ಅನುಕರಣೆ ಮತ್ತು ಹಿಂದೆ ಕೆಲವು ಹಲವು ವೈಜ್ಞಾನಿಕವಾಗಿ ಸರಿಯಾದ ಸಂಶೋಧನೆ ನಡೆಸದಿರುವುದರಿಂದ ಪಾರಂಪರಿಕವಾಗಿ ನಡೆಸುತ್ತಿದ್ದ ಅನುಸರಣೆಯು ಮಾಯವಾಗುತ್ತಿದೆ. ಅದೃಷ್ಟವಶಾತ್ ಇತ್ತೀಚೆಗೆ ವಿಜ್ಞಾನಿಗಳ ಸಂಶೋಧನೆಯಿಂದಾಗಿ ಸತ್ಯಾಸತ್ಯತೆಗಳು ಬೆಳಕಿಗೆ ಬರುತಿದೆ. ತೆಂಗಿನ ಎಣ್ಣೆಯನ್ನು ಹಾಳಾಗದ ಹಾಗೆ ಬಹು ದಿನ ಇಡಲು ಕೃತಕವಾಗಿ ಸಂಸ್ಕರಿಸುತ್ತಾರೆ(ಹೈಡ್ರೋಜಿನೇಷನ್). ಇದರಿಂದಾಗಿ ಎಣ್ಣೆಯ ಪ್ರಕೃತಿ ಸಹಜವಾದ ಗುಣಗಳು ನಾಶವಾಗುತ್ತದೆ. ಪ್ರಕೃತಿ ಸಹಜವಾದ ಗುಣಗಳು ನಾಶವಾಗಿ ಆರೋಗ್ಯಕ್ಕೆ ಕೆಡುಕು ಉಂಟುಮಾಡುತ್ತದೆ .

ತೆಂಗಿನಲ್ಲಿ ರುಗೋಸ್ ಬಿಳಿ ನೊಣದ ಹತೋಟಿ ಹೇಗೆ? ಇಲ್ಲಿದೆ ಸಲಹೆ

ವರ್ಜಿನ್ ತೆಂಗಿನ ಎಣ್ಣೆ

ವರ್ಜಿನ್ ತೆಂಗಿನ ಎಣ್ಣೆ

ಈಗ ತೆಂಗಿನ ಎಣ್ಣೆಯನ್ನು ಹಳೆಯ ಕಾಲದಂತೆ, ಕೋಲ್ಡ್ ಪ್ರೆಸ್ ಮಾಡಿ ತೆಗೆಯುತ್ತಾರೆ. ಇದನ್ನು ವರ್ಜಿನ್ ತೆಂಗಿನ ಎಣ್ಣೆ ಎನ್ನುತ್ತಾರೆ. ಮೊದಲು ತೆಂಗಿನ ಎಣ್ಣೆ ಹೃದ್ರೋಗ ಹೆಚ್ಚಲು ಕಾರಣ ಎನ್ನುವ ವಿಜ್ಞಾನಿಗಳು, ವರ್ಜಿನ್ ತೆಂಗಿನ ಎಣ್ಣೆ ಹೃದ್ರೋಗ ಬರದಂತೆ ತಡೆಗಲ್ಲಬಲ್ಲದು ತೋರಿಸಿದ್ದಾರೆ. ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಸಿಡ್ (ಫ್ಯಾಟಿ ಆಸಿಡ್) ಎನ್ನುವ ಕೊಬ್ಬಿನಂಶ ಹಲವಾರು ವೈರಸ್ ನ್ನು ಜೀವಕೋಶದಲ್ಲಿ ಬೆಳೆಯುದನ್ನು ತಡೆಗಟ್ಟಬಲ್ಲದು ಎಂದು ತೋರಿಸಿರುತ್ತಾರೆ.

ಅದು ಹೇಗೆಂದರೆ, ಲಾರಿಕ್ ಆಸಿಡ್ ಪ್ರಚೋದನೆಯಿಂದ ಜೀವಕೋಶದಲ್ಲಿ 7-10 ಹೆಚ್ಚು ಪಟು ಟ್ರೈ ಎಸೈಲ್ ಗ್ಲಿಸರೊಲ್ ಎಂಬ ರಾಸಾಯನಿಕ ಪದಾರ್ಥವನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ಜೀವಕೋಶ ಕ್ಕೆ ಏನೂ ತೊಂದರೆಯಾಗುವುದಿಲ್ಲ. ಜೀವಕೋಶದಲ್ಲಿ ಅಧಿಕ ಮಟ್ಟದ ಟ್ರೈ ಎಸೈಲ್ ಗ್ಲಿಸರೊಲ್ ಇರುವುದರಿಂದ ವೈರಸ್ ಪ್ರೋಟೀನ್ ಗಳು ಸಮರ್ಪಕ ರೀತಿಯಲ್ಲಿ ಜೋಡಣೆಯಾಗದೆ ನಿಷ್ಕ್ರಿಯವಾಗುತ್ತದೆ. ಅದು ಅಲ್ಲದೆ ವೈರಸ್ ತನ್ನದೇ ಆದ ಪ್ರೋಟೀನ್ಸ್ ಅನ್ನು ಸುರಿಸುವಂತೆ ಮಾಡುತ್ತದೆ.

ತೆಂಗಿನೆಣ್ಣೆಯಲ್ಲಿ ಲಾರಿಕ್ ಆಸಿಡ್ ಅಧಿಕ

ತೆಂಗಿನೆಣ್ಣೆಯಲ್ಲಿ ಲಾರಿಕ್ ಆಸಿಡ್ ಅಧಿಕ

ಈ ಪ್ರೋಟೀನ್ಸ್ ವೈರಸ್ ನ್ನು ಜೀವಕೋಶದ ಹೊರ ಪದರದಲ್ಲಿ ನೆಲೆಯಾಗಲು ಬೇಕಾಗುತ್ತದೆ. ಆದರೆ ಈ ಕ್ರಿಯೆಯನ್ನು ಲಾರಿಕ್ ಆಸಿಡ್ ತಡೆಗಟ್ಟಿ ವೈರಸ್ ಜೀವಕೋಶದ ಒಳಗೆ ಹೋಗಿ ಹಾನಿ ಉಂಟು ಮಾಡುವುದನ್ನು ತಪ್ಪಿಸುತ್ತದೆ. ಲಾರಿಕ್ ಆಸಿಡ್ ತೆಗೆದ ಮೇಲೂ 4-7 ಗಂಟೆಗಳವರೆಗೂ ಮೇಲೆ ವಿವರಿಸಿದ ಪರಿಣಾಮ ಫಲಕಾರಿಯಾಗಿರುತ್ತದೆ. ತೆಂಗಿನ ಎಣ್ಣೆಯಲ್ಲಿ ಮಾತ್ರ ಲಾರಿಕ್ ಆಸಿಡ್ ಅಧಿಕ ಪ್ರಮಾಣದಲ್ಲಿ ಇದೆ.

ತೆಂಗಿನ ಎಣ್ಣೆಯ ಕೊಬ್ಬಿನಾಂಶದಲ್ಲಿ(30-35%) ಶೇಕಡಾ 50 ರಷ್ಟು ಲಾರಿಕ್ ಆಸಿಡ್ ಇದೆ. ತೆಂಗಿನ ಎಣ್ಣೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಜೀವಕೋಶ ಮತ್ತು ಅಂಗಾಂಶಗಳ ಪುನರ್ ಜೀವನಕೆ ಸಹಕಾರಿಯಾಗಿದೆ. ಉದುರಿತವನ್ನು ಕಡಿಮೆಮಾಡುತ್ತದೆ. ಎಣ್ಣೆಯ ಪದರವು ವೈರಸ್ ಗೆ ತಡೆ ಗೋಡೆಯಾಗಿರುತದೆ. ಜೀವಕೋಶ, ಅಂಗಾಂಶಗಳಿಗೆ ಎಣ್ಣೆ ಆಹಾರವಾಗಿ ತ್ವರಿತ ಶಕ್ತಿಯನ್ನು ಒದಗಿಸಿ ವೈರಸ್ ನ್ನು ಸಮರ್ಥವಾಗಿ ಎದುರಿಸಲು ಸಹಾಯವಾಗುತ್ತದೆ.

ಸೋಂಕು ತಡೆಗಟ್ಟಲು ಹೀಗೆ ಮಾಡಿ

ಸೋಂಕು ತಡೆಗಟ್ಟಲು ಹೀಗೆ ಮಾಡಿ

ಈಗ ಕೊರೊನ ಸೋಂಕನ್ನು ತಡೆಗಟ್ಟಲು ತೆಂಗಿನ ಎಣ್ಣೆ ಹೇಗೆ ಉಪಯೋಗಿಸಬೇಕೆಂದು ತಿಳಿಸುವೆ. ಬೆಳಿಗ್ಗೆ ಎದ್ದ ಮೇಲೆ ಮತ್ತು ಸಂಜೆ ಅಥವಾ ಮಲಗುವುದಕ್ಕೆ ಮೊದಲು ತೆಂಗಿನ ಎಣ್ಣೆಯನ್ನು ತಲೆ ಮೇಲೆ ಮಾಡಿ ಮೂಗಿನ ಎರಡೂ ಹೊಳ್ಳೆಯ ಒಳಗೆ ಹಾಕಿ. ಬಾಯಿಗೆ ಬಂದರೆ ಚಿಂತೆ ಮಾಡಬೇಡಿ. ತಲೆ ಮೇಲೆ ಮಾಡಿ ಹಾಗೆ ಐದು ನಿಮಿಷ ಕುಳಿತುಕೊಳ್ಳಿ. ಎರಡನೆಯದಾಗಿ, ಬರಿಯ ಹೊಟ್ಟೆಗೆ ಒಂದು ಚಮಚ ತೆಂಗಿನ ಎಣ್ಣೆಯನ್ನು ಬರೇ ಹೊಟ್ಟೆಯಲ್ಲಿ ತೆಗೆದುಕೊಳ್ಳಿ. ಅರ್ಧ ಗಂಟೆಯ ನಂತರ ಕುಡಿಯುವುದು, ತಿನ್ನುವುದು ಮಾಡಬಹುದು. ಕಣ್ಣಿಗೂ, ಕಿವಿಗೂ ಒಂದೆರಡು ತೊಟ್ಟು ಹಾಕಬಹುದು. ತೆಂಗಿನ ಕಾಯಿಯನ್ನು ಆಹಾರ ಪಧಾರ್ಥಗಳ ತಯಾರಿಕೆಯಲ್ಲಿ ಉಪಯೋಗಿಸಿ.

ಡಾ ನಾಗಭೂಷಣ ಮೂಲ್ಕಿ ಪರಿಚಯ

ಡಾ ನಾಗಭೂಷಣ ಮೂಲ್ಕಿ ಪರಿಚಯ

ಅಮೇರಿಕಾದ ಚಿಕಾಗೋದಲ್ಲಿ ನೆಲೆಸಿರುವ ಡಾ ನಾಗಭೂಷಣ ಮೂಲ್ಕಿಯವರು ಮೂಲತಃ ಮಂಗಳೂರಿನವರು. ಮುಂಬೈ ಟಾಟಾ ಕ್ಯಾನ್ಸರ್ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸಂಶೋಧನೆ ನಡೆಸಿದವರು. ಅಲ್ಲಿಯೇ ಡಾಕ್ಟರೇಟ್ ಪದವಿಯನ್ನು ಗಳಿಸಿ, ಅಮೆರಿಕಾದ ಶೇಷ್ಠ ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನೆ ನಡೆಸಿದವರು. ಇವರು ಟಾಟಾ ಕ್ಯಾನ್ಸರ್ ಸಂಸ್ಥೆಯಲ್ಲಿ ಸಂಶೋಧನೆ ಮಾಡಿ ಪ್ರಪಂಚದಲ್ಲಿಯೇ ಪ್ರಪ್ರಥಮ ಬಾರಿಗೆ (1984) ಅರಶಿನವು ಕ್ಯಾನ್ಸರ್ ಅನ್ನು ತಡೆಗಟ್ಟ ಬಲ್ಲದೆಂದು ಕಂಡುಹಿಡಿದವರು. ಈ ಸಂಶೋಧನೆಗಾಗಿ ಇಂಡಿಯನ್ ಕೌನ್ಸಿಲ್ ಅಫ್ ಮೆಡಿಕಲ್ ರಿಸರ್ಚ್, ನವದೆಹಲಿಯಿಂದ ಚಿನ್ನದ ಪದಕ ಪಡೆದಿರುತ್ತಾರೆ. ಅಲ್ಲದೆ ದೇಶ ವಿದೇಶಗಳಲ್ಲಿ 20ಕ್ಕೂ ಹೆಚ್ಚು ಪಾರಿತೋಷಕಗಳನ್ನು ಪಡೆದಿರುತ್ತಾರೆ.

English summary
How Coconut and its product can prevent Coronavirus threat? How effectively we can use coconut to boost resistance power against any virus. Dr. Nagabhushan Moolky from Chicago has an explanation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X