Honda Elevate Black: ಭಾರತದಲ್ಲಿ ಬಿಡುಗಡೆಯಾದ ಹೋಂಡಾ ಎಲಿವೇಟ್ ಬ್ಲ್ಯಾಕ್ ಕಾರಿನ ದರ, ವಿಶೇಷತೆ ತಿಳಿಯಿರಿ
Honda Elevate Black: ಕಾಲ ಬದಲಾದಂತೆ ಜನ ಚೇಂಜ್ ಕೇಳ್ತಾರೆ. ಅದರಂತೆಯೇ ಆಟೋ ಮೊಬೈಲ್ ಕ್ಷೇತ್ರದ ವಿಚಾರಕ್ಕೆ ಬಂದರೆ, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಮಾರುಕಟ್ಟೆಗೆ ಹೊಸ ಹೊಸ ವಾಹನಗಳು ಎಂಟ್ರಿ ಕೊಡುತ್ತಲೇ ಇರುತ್ತವೆ. ಹಾಗೆಯೇ ಇದೀಗ ಪ್ರಸಿದ್ಧ ಕಂಪನಿಗಳಲ್ಲೊಂದಾದ ಹೋಂಡಾ ಎಲಿವೇಟ್ ಇದೀಗ ಲಾಂಚ್ ಆಗಿದೆ. ಹಾಗಾದರೆ ಯಾವೆಲ್ಲ ಮಾದರಿಗಳಲ್ಲಿ ಲಭ್ಯವಿದೆ ಹಾಗೂ ದರ, ವಿಶೇಷತೆಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಹೋಂಡಾ ಎಸ್‌ಯುವಿ ಎಲಿವೇಟ್ ಬ್ಲ್ಯಾಕ್ ಮತ್ತು ಸಿಗ್ನೇಚರ್ ಬ್ಲ್ಯಾಕ್ ಎರಡು ರೂಪಾಂತರಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಎರಡೂ ಆವೃತ್ತಿಗಳನ್ನು ಕ್ರಿಸ್ಟಲ್ ಬ್ಲ್ಯಾಕ್ ಪರ್ಲ್ ಬಣ್ಣದಲ್ಲಿ ಪರಿಚಯಿಸಲಾಗಿದೆ. ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಕಂಪನಿಯು ಎಲಿವೇಟ್ ಬ್ಲಾಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೋಂಡಾ ಎಲಿವೇಟ್ ಬ್ಲ್ಯಾಕ್ ಎಡಿಷನ್, ಸ್ಟೈಲಿಶ್ ಮತ್ತು ಪ್ರೀಮಿಯಂ ಎಸ್‌ಯುವಿಯನ್ನು ಬಯಸುವವರಿಗೆ ಹೇಳಿ ಮಾಡಿಸಿದ ಕಾರಾಗಿದೆ ಎಂದರೆ ತಪ್ಪಾಗಲಾರದು.

ಬೆಲೆಗಳ ವಿವರ: ಹೋಂಡಾ ಎಲಿವೇಟ್ ಬ್ಲ್ಯಾಕ್ ಎಡಿಷನ್ ZX MT ಎಕ್ಸ್ ಶೋರೂಂ ಬೆಲೆ 15.51 ಲಕ್ಷ ರೂಪಾಯಿ ಮತ್ತು ಸಿಗ್ನೇಚರ್ ಬ್ಲಾಕ್ ಎಡಿಷನ್ ZX MT ಮಾದರಿಯ ಕಾರು ಎಕ್ಸ್ ಶೋರೂಂ ಬೆಲೆ 15.71 ಲಕ್ಷ ರೂಪಾಯಿಯಿಂದ ಆರಂಭವಾಗಲಿದೆ. ಹೋಂಡಾ ಎಲಿವೇಟ್ ಬ್ಲ್ಯಾಕ್ ಎಡಿಷನ್ ZX CVT ಎಕ್ಸ್ ಶೋರೂಂ ದರ 16.73 ಲಕ್ಷ ರೂಪಾಯಿ ಆದರೆ, ಸಿಗ್ನೇಚರ್ ಬ್ಲಾಕ್ ಎಡಿಷನ್ ZX CVT ಎಕ್ಸ್ ಶೋರೂಂ ದರ 16.93 ಲಕ್ಷ ರೂಪಾಯಿ ಇದೆ.
1. ZX MT ಎಲಿವೇಟ್ ಬ್ಲ್ಯಾಕ್ & ಸಿಗ್ನೇಚರ್ ಬ್ಲಾಕ್
* ಹೋಂಡಾ ಎಲಿವೇಟ್ ಬ್ಲ್ಯಾಕ್ ಎಡಿಷನ್ ಎಕ್ಸ್ ಶೋರೂಂ ಬೆಲೆ 15.51 ಲಕ್ಷ ರೂಪಾಯಿ
* ಹೋಂಡಾ ಸಿಗ್ನೇಚರ್ ಬ್ಲಾಕ್ ಎಡಿಷನ್ ಎಕ್ಸ್ ಶೋರೂಂ ದರ 15.71 ಲಕ್ಷ ರೂಪಾಯಿ
2. ZX CVT ಎಲಿವೇಟ್ ಬ್ಲ್ಯಾಕ್ & ಸಿಗ್ನೇಚರ್ ಬ್ಲಾಕ್
* ಹೋಂಡಾ ಎಲಿವೇಟ್ ಬ್ಲ್ಯಾಕ್ ಎಡಿಷನ್ ಎಕ್ಸ್ ಶೋರೂಂ ದರ 16.73 ಲಕ್ಷ ರೂಪಾಯಿ
* ಹೋಂಡಾ ಸಿಗ್ನೇಚರ್ ಬ್ಲಾಕ್ ಎಡಿಷನ್ ಎಕ್ಸ್ ಶೋರೂಂ ದರ 16.93 ಲಕ್ಷ ರೂಪಾಯಿ
ಇನ್ನು ಗ್ರಾಹಕರು ಎಲಿವೇಟ್ ಬ್ಲ್ಯಾಕ್ ಕಾರುಗಳನ್ನು ಹೋಂಡಾ ಡೀಲರ್‌ಶಿಪ್‌ಗಳಲ್ಲಿ ಬುಕ್ ಮಾಡಬಹುದಾಗುದೆ. CVT ಮಾದರಿಯ ಕಾರುಗಳ ಮಾರಾಟವು ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಮ್ಯಾನುಯಲ್ ಟ್ರಾನ್ಸ್ಮಿಷನ್ ರೂಪಾಂತರದ ಕಾರುಗಳ ಮಾರಟವು ಫೆಬ್ರವರಿಯಿಂದ ಆರಂಭವಾಗಲಿದೆ.
ವಿಶೇಷತೆಗಳೇನು?: ಹೋಂಡಾ ಎಲಿವೇಟ್ ಬ್ಲ್ಯಾಕ್ ಆವೃತ್ತಿಯು ಕಪ್ಪು ಮಿಶ್ರಲೋಹದ ಚಕ್ರಗಳು ಮತ್ತು ಹೊರಭಾಗ ಕಪ್ಪು ಬಣ್ಣದಿಂದ ಕೂಡಿದೆ. ಅದರ ಮೇಲಿನ ಗ್ರಿಲ್‌ನಲ್ಲಿ ಸಿಲ್ವರ್ ಫಿನಿಶ್ಡ್ ಫ್ರಂಟ್ ಮತ್ತು ರಿಯರ್ ಸ್ಕಿಡ್ ಗಾರ್ನಿಶ್, ಲೋವರ್ ಡೋರ್ ಗಾರ್ನಿಶ್ ಮತ್ತು ರೂಫ್ ರೈಲ್‌ಗಳನ್ನು ಒದಗಿಸಲಾಗಿದೆ. ಕಾರಿನ ಹಿಂಭಾಗದಲ್ಲಿ ಕಪ್ಪು ಆವೃತ್ತಿಯ ಬ್ಯಾಡ್ಜಿಂಗ್ ವಿಶೇಷವಾಗಿ ಗ್ರಾಹಕರನ್ನು ಸೆಳೆಯುತ್ತಲೇ ಇದೆ.
ಎಲಿವೇಟ್ ಬ್ಲ್ಯಾಕ್ ಎಡಿಷನ್ ಮತ್ತು ಸಿಗ್ನೇಚರ್ ಬ್ಲ್ಯಾಕ್ ಎಡಿಷನ್‌ನ ಒಳಭಾಗದಲ್ಲಿ ತುಂಬಾ ಆಕರ್ಷಕವಾಗಿದೆ. ಸಂಪೂರ್ಣ ಕಪ್ಪು ಬಣ್ಣದ ಥೀಮ್ ಕ್ಯಾಬಿನ್ ಕಪ್ಪು ಲೆಥೆರೆಟ್ ಸೀಟ್‌ಗಳು, ಕಪ್ಪು ಬಣ್ಣದ ಡೋರ್ ಪ್ಯಾಡ್‌ಗಳು ಮತ್ತು ಆರ್ಮ್‌ರೆಸ್ಟ್‌ಗಳನ್ನು ಒಳಗೊಂಡಿದೆ. ಅಲ್ಲದೆ, ಒಳಭಾಗದಲ್ಲಿ ಐಷಾರಾಮಿಯಾಗಿ ಕಾಣುವಂತೆ ಹಲವು ಸೌಲಭ್ಯಗಳನ್ನು ನೀಡಲಾಗಿದೆ.
ಹೋಂಡಾ ಎಲಿವೇಟ್ ಬ್ಲಾಕ್ ಆವೃತ್ತಿ 1.5 ಲೀಟರ್ i-VTEC ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ. ಇದು 120 bhp ಮತ್ತು 145 ನ್ಯೂಟನ್ ಮೀಟರ್‌ಗಳ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಇಂಜಿನ್ ಮ್ಯಾನುವಲ್ ಮತ್ತು ಸಿವಿಟಿ ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಲಭ್ಯ ಇದೆ.












Click it and Unblock the Notifications