ಹೇಗಿದ್ದ ಕಾಟಿ ಸ್ಟಬಲ್ ಫೀಲ್ಡ್ ಹೇಗಾದಳು? ಮತ್ತೆ ಹೀಗಾದಳು...

ಓಹಿಯೋ (ಯುಎಸ್ ಎ), ಆಗಸ್ಟ್ 16: ಅದೊಂದು ಸುದೀರ್ಘವಾದ ಚಿಕಿತ್ಸೆ. 31 ಗಂಟೆಗಳ ಮುಖದ ಕಸಿ ಮಾಡಿಸಿದ ನಂತರ 21 ವರ್ಷದ ಕಾಟಿ ಸ್ಟಬಲ್ ಫೀಲ್ಡ್ ಜೀವನದಲ್ಲಿ ಹೊಸ ಪುಟ ತೆರೆದಿದೆ. ಅಂತಿಮವಾಗಿ ಆಕೆ ಮುಖದ ಮೇಲೆ ಕತ್ತರಿ ಆಡುವ ಮುನ್ನ 17 ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿತ್ತು.

ಸ್ಟಬಲ್ ಫೀಲ್ಡ್ ತುಂಬ ಚೆಂದಕ್ಕೆ ಇದ್ದ ಹುಡುಗಿ. ಭಾವನಾತ್ಮಕವಾಗಿ ಎದುರಿಸಿದ ತಾಕಲಾಟಗಳಿಂದ ಜರ್ಝರಿತಳಾಗಿ ತನ್ನ 18ನೇ ವಯಸ್ಸಿನಲ್ಲಿ ಮಾಡಿದ ಆತ್ಮಹತ್ಯೆಗೆ ಪ್ರಯತ್ನಿಸಿದ ಫಲವಾಗಿ ಮುಖದ ಚಹರೆಯೇ ಬದಲಾಗಿ ಹೋಯಿತು. ತನಗೆ ಗುಂಡು ಹಾರಿಸಿಕೊಂಡಿದ್ದ ಕಾಟಿ ಮೂಗು, ಬಾಯಿ ಕಳೆದುಕೊಂಡಳು. ಆಕೆಯ ಕಣ್ಣು ಆಚೀಚೆಯಾಗಿ ದೃಷ್ಟಿಯ ಸಮಸ್ಯೆಯಾಯಿತು.

ಕಾಟಿಯ ಶಸ್ತ್ರಚಿಕಿತ್ಸೆ ಮಾಡಿದ ಕ್ಲೆವ್ ಲ್ಯಾಂಡ್ ಕ್ಲಿನಿಕ್ ಒಂದು ವಿಡಿಯೋ ಹಾಕಿದೆ. ವೈದ್ಯರ ಪ್ರಕಾರ, ಶೇಕಡಾ ನೂರರಷ್ಟು ಆಕೆಯ ಮುಖದ ಕಸಿ ಮಾಡಿದೆ. ಈಗ ಫಲಿತಾಂಶವನ್ನು ನೋಡಿದರೆ ಇದೊಂದು ಪವಾಡ ಅಂತಲೇ ಹೇಳಬೇಕು. ಸರ್ಜಿಕಲ್ ರಿಹರ್ಸಲ್, ತ್ರಿಡಿ ಪ್ರಿಂಟಿಂಗ್, ವರ್ಚುವಲ್ ರಿಯಾಲಿಟಿ ತಂತ್ರಜ್ಞಾನವನ್ನು ಶಸ್ತ್ರಚಿಕಿತ್ಸೆಗೂ ಮುನ್ನ ಯೋಜನೆ ರೂಪಿಸಲು ಬಳಸಲಾಗಿದೆ ಎಂದಿದ್ದಾರೆ.

Historic face transplant to suicide survivor

ಕಾಟಿ ಕುಟುಂಬವು ಆಕೆಗೆ ಬೆಂಬಲವಾಗಿ ನಿಂತಿದೆ. ಮುಖದ ಕಸಿ ಎಂಬ ದೊಡ್ಡ ಪಯಣದಲ್ಲಿ ನಾಲ್ಕು ಹೆಜ್ಜೆ ಮುಂದೆ, ಎರಡು ಹೆಜ್ಜೆ ಹಿಂದೆ ಅಂತ ಇದ್ದೆವು. ಆದರೆ ಯಾವಾಗಲೂ ನಮ್ಮ ಪ್ರಯತ್ನ ನಿಲ್ಲಿಸಿರಲಿಲ್ಲ ಎಂದಿದ್ದಾರೆ ಆಕೆಯ ತಂದೆ ರಾಬ್.

21 ವರ್ಷದ ಈಕೆಯ ಶಸ್ತ್ರಚಿಕಿತ್ಸೆಗೆ ಸಮಯ ಬೇಕಿತ್ತು. ಏಕೆಂದರೆ ಮುಖ ಕಸಿ ಮಾಡಿಸಿಕೊಳ್ಳುವವರ ಪಟ್ಟಿ ಉದ್ದವಿತ್ತು. ಇದು 2016ನೇ ಇಸವಿ ಮಾತಾಯಿತು. 2017ರ ಮೇ ತಿಂಗಳಲ್ಲಿ ಅಮೆರಿಕದಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ಮುಖ ಕಸಿ ಮಾಡಿಸಿಕೊಂಡವಳಾಗಿ ಕಾಟಿ ದಾಖಲೆ ಬರೆದಳು. ಹಾಗೆ ಮುಖ ಕಸಿ ಮಾಡಿಸಿಕೊಂಡ ಜಗತ್ತಿನ ನಲವತ್ತನೇ ವ್ಯಕ್ತಿ ಆಕೆ.

ಕಾಟಿಯ ಇನ್ನುಳಿದ ಜೀವನದ ಉದ್ದಕ್ಕೂ ಔಷಧೋಪಚಾರದಲ್ಲಿ ಇರಬೇಕಾಗುತ್ತದೆ. ಏಕೆಂದರೆ, ಮುಖ ಕಸಿ ಮಾಡಿಸಿಕೊಂಡಿದ್ದರ ಅಡ್ಡ ಪರಿಣಾಮಗಳಾಗುವ ಸಾಧ್ಯತೆಗಳಿರುತ್ತವೆ. ಇದರ ಜತೆಗೆ ಫಿಸಿಕಲ್ ಮತ್ತು ಆಕ್ಯುಪೇಷನಲ್ ಥೆರಪಿ ತೆಗೆದುಕೊಳ್ಳಬೇಕು. ಸ್ಪೀಚ್ ಥೆರಪಿಸ್ಟ್ ಗಳ ನೆರವು ಪಡೆಯಬೇಕಾಗುತ್ತದೆ. ಆಕೆ ಬಗ್ಗೆ ಸಿಎನ್ ಎನ್ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+