ಕಳೆದ ತಿಂಗಳೂ ಹೆಚ್ಚು ಮಾರಟವಾಗಿವೆ Hero Splendor Plus
ಭಾರತದಲ್ಲಿ ತನ್ನದೇ ಆದ ಗ್ರಾಹಕರನ್ನು ಹೊಂದಿರುವ ಹೀರೊ ಸ್ಪೆಲಂಡರ್ ಪ್ಲಸ್ ಈಗ ಮತ್ತಷ್ಟೂ ಜನಪ್ರೀಯ ಬೈಕ್‌ಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಈ ಬೈಕ್ ಕಳೆದ ತಿಂಗಳು (ಜೂನ್) ಅತಿ ಹೆಚ್ಚು ಮಾರಾಟವಾದ ಬೈಕ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಅಂದಹಾಗೆ ಈ ಬೈಕ್ ಮನೆಗೆ ಒಯ್ಯಲು ಜನ 15 ದಿನಗಳ ಕಾಯಲೇ ಬೇಕು.
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡುತ್ತಿರುವ Hero Splendor Plus ಜೂನ್‌ನಲ್ಲಿ 2.8 ಲಕ್ಷ ಯೂನಿಟ್ ಮಾರಾಟವಾಗಿವೆ. ಬೈಕ್‌ಗಳು ಹಲವು ರೀತಿಯಲ್ಲಿ ಗ್ರಾಹಕರನ್ನು ಸೆಳೆಯುತ್ತವೆ. ಅದರಲ್ಲಿ ಬೆಲೆ ಸಹ ಒಂದಾಗಿದೆ. ಈ ಬೈಕ್ ಮಾರುಕಟ್ಟೆಯಲ್ಲಿ ಲಭ್ಯ ಇರುವ ಈ ವೈಶಿಷ್ಠದ ಬೈಕ್‌ಗಳಿಗಿಂತ ಅಗ್ಗದಲ್ಲಿ ಸಿಗುತ್ತದೆ. ಈ ಬೈಕ್‌ನ ವಿಶೇಷತೆಗಳ ಬಗ್ಗೆ ಇಲ್ಲಿದೆ ವರದಿ.

ಮೊಬೈಲ್‌ನಂತೆ ಈ ಬೈಕ್ ಸಹ ಹಲವು ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿದೆ. ಅಂದಹಾಗೆ ಈ ಬೈಕ್ ಟಾಪ್ ವೇರಿಯೆಂಟ್ ಬೆಲೆ 98756 ಆನ್ ರೋಡ್ ಆಗಿದೆ. ಈ ಬೈಕ್‌ನಲ್ಲಿ ಸಿಂಗಲ್ ಸೀಟ್ ನೀಡಲಾಗಿದ್ದು, ಡಿಸ್ಕ್ ಮತ್ತು ಡ್ರಮ್ ಬ್ರೇಕ್ ಆಯ್ಕೆಯನ್ನು ಸಹ ಗ್ರಾಹಕರಿಗೆ ನೀಡಲಾಗುತ್ತದೆ. ಸ್ಪ್ಲೆಂಡರ್ ಪ್ಲಸ್‌ನ ಮೂಲ ಮಾದರಿಯು ಎಕ್ಸ್ ಶೋ ರೂಂ ಬೆಲೆ 76356 ರೂ. ಆಗಿದೆ.
ಹೀರೋ ಸ್ಪ್ಲೆಂಡರ್ ಪ್ಲಸ್ 112 ಕೆಜಿ ತೂಕವನ್ನು ಹೊಂದಿದ್ದು, ಈ ಬೈಕ್ ಅನ್ನು ಹೆಚ್ಚಿನ ವೇಗದಲ್ಲಿ ನಿಯಂತ್ರಿಸುವುದು ಕಷ್ಟವೇನಲ್ಲ. ಈ ಬೈಕ್ ಹೆಚ್ಚು ಮೈಲೇಜ್‌ಗಾಗಿ ಶಕ್ತಿಶಾಲಿ 97.2 ಸಿಸಿ ಎಂಜಿನ್‌ನೊಂದಿಗೆ ಬರುತ್ತದೆ. ಬೈಕ್ 7.91 bhp ಮತ್ತು 8.05 Nm ಟಾರ್ಕ್ ಅನ್ನು ಉತ್ತಾದಿಸುತ್ತದೆ. ಬೈಕ್‌ನಲ್ಲಿ ನಾಲ್ಕು ರೂಪಾಂತರಗಳು ಮತ್ತು ಏಳು ಆಕರ್ಷಕ ಬಣ್ಣ ಆಯ್ಕೆಗಳು ಲಭ್ಯವಿವೆ.
ಈ ಬೈಕ್ ನಾಲ್ಕು ಗೇರ್ ಹೊಂದಿದೆ. ಇದು ಸರಿಸುಮಾರು 87 ಕಿಲೋ ಮೀಟರ್ ವೇಗವನ್ನು ನೀಡುತ್ತದೆ. ದೊಡ್ಡ ಹೆಡ್‌ಲೈಟ್ ಮತ್ತು ಡಿಸೈನರ್ ಟೈಲ್‌ಲೈಟ್ ಅನ್ನು ಹೊಂದಿದೆ. ಇದು 9.8 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ. ಮೇ ತಿಂಗಳಿಗೆ ಹೋಲಿಸಿದರೂ ಇದರ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿದೆ.
ಈ ಬೈಕ್ ಮಾರುಕಟ್ಟೆಯಲ್ಲಿರುವ ಹಲವು ಬೈಕ್‌ಗಳೊಂದಿಗೆ ಪೈಪೋಟಿ ನಡೆಸುತ್ತದೆ. ಇದು ಹೊಂಡಾ ಶೈನ್ 100 ಹಾಗೂ ಟಿವಿಎಸ್ ರೇಡಿಯನ್ ಪೈಪೋಟಿ ನಡೆಸುತ್ತದೆ. ಇದು 65 kmpl ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ.
ಬೈಕ್‌ನ ವಿಶೇಷತೆಗಳು
- ಸಂಯೋಜಿತ ಬ್ರೇಕಿಂಗ್ ಸಿಸ್ಟಮ್ ಅನ್ನು ಹೊಂದಿದ್ದು, ಎರಡೂ ಟೈರ್‌ಗಳನ್ನು ಹೆಚ್ಚಿನ ವೇಗದಲ್ಲಿ ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಬೈಕ್ ಸೆಲ್ಫ್ ಸ್ಟಾರ್ಟ್ ಹೊಂದಿದೆ.
- ಇದು ಮಿಶ್ರಲೋಹದ ಚಕ್ರಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ
- ಬೈಕು ಸರಳವಾದ ಹ್ಯಾಂಡಲ್‌ಬಾರ್ ಹೊಂದಿದ್ದು ಗ್ರಾಹಕರನ್ನು ಸೆಳೆಯುತ್ತದೆ.
- ಇದು ಡಿಜಿಟಲ್ ಕನ್ಸೋಲ್ ಮತ್ತು ಸಿಂಗಲ್ ಪೀಸ್ ಸೀಟ್ ಅನ್ನು ಹೊಂದಿದೆ.
- ಬೈಕ್‌ಗೆ ಸೈಡ್ ಸ್ಟ್ಯಾಂಡ್, ಹೈ ಎಂಡ್ ಎಕ್ಸಾಸ್ಟ್ ಮತ್ತು ಸ್ಲೀಕ್ ಟರ್ನ್ ಇಂಡಿಕೇಟರ್‌ಗಳನ್ನು ನೀಡಲಾಗಿದೆ












Click it and Unblock the Notifications