Hero: ಮಾರುಕಟ್ಟೆಗೆ ಲಗ್ಗೆ ಇಡಲಿದೆ ಭರ್ಜರಿ ಎಂಜಿನ್‌ನ ಹಿರೋ ಬೈಕ್
ಬೈಕ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಹೊಂದಿರುವ ಹಿರೋ ಮೋಟೋಕಾರ್ಪ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಈಗಾಗಲೇ ದೇಶದ ಜನರಿಂದ ಭೇಷ್ ಎನಿಸಿಕೊಂಡರುವ ಹಿರೋ ಕಂಪನಿ, ಎಲ್ಲ ಬಜೆಟ್‌ಗಳಲ್ಲೂ ಟೂ ವೀಲರ್ ಲಾಂಚ್ ಮಾಡಿದೆ. ಹಲವು ಸೆಗ್ಮೆಂಟ್‌ಗಳಲ್ಲಿ ಗ್ರಾಹಕರಿಗೆ ಹತ್ತಿರವಾಗಿರುವ ಹಿರೋ ಈಗ ಭರ್ಜರಿ ಎಂಜಿನ್ ಹೊಂದಿರುವ ಮತ್ತೊಂದು ಬೈಕ್ ರಿಲೀಸ್ ಮಾಡಲು ಸಿದ್ಧವಾಗಿದೆ.
ಈ ಬೈಕ್ ಹೀರೋ ಎಕ್ಸ್‌ಪಲ್ಸ್ ಎಂಬ ಹೆಸರಿನಿಂದ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದ್ದು, ರಾಯಲ್ ಎನ್‌ಫೀಲ್ಡ್‌ನೊಂದಿಗೆ ಪೈಪೋಟಿ ನಡೆಸಲಿದೆ. ಹೊಸ ಮಾದರಿಯ ಬೈಕ್ ಹಲವು ವೈಶಿಷ್ಠಗಳನ್ನು ಹೊಂದಿವೆ. ಹಾಗಿದ್ದರೆ, ವಿಶೇಷತೆಗಳು ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಈ ಬೈಕ್ ಆಧುನಿಕ ತಂತ್ರಜ್ಞಾನಗಳನ್ನು ಮೈಗೂಡಿಸಿಕೊಂಡು ಬರುತ್ತಿದೆ. ಈ ಬೈಕ್ 210cc 4V ಎಂಜಿನ್ ನೊಂದಿಗೆ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಹೊಸ ಎಂಜಿನ್ ತನ್ನ ಶಕ್ತಿಯನ್ನು ಆನ್-ರೋಡ್ ಮತ್ತು ಆಫ್-ರೋಡಿಂಗ್ ಅನ್ನು ತೋರಿಸುತ್ತದೆ. ಅದೇ ಎಂಜಿನ್ ಕರಿಜ್ಮಾದಲ್ಲಿಯೂ ಕಂಡುಬರುತ್ತದೆ. ಪ್ರಸ್ತುತ ಬೈಕ್ 199.6 ಸಿಸಿ ಎಂಜಿನ್ ಹೊಂದಿದೆ. ಈ ಬೈಕಿನ ಗರಿಷ್ಠ ವೇಗ ಗಂಟೆಗೆ 135 ಕಿಮೀ. ಈ ಬೈಕ್ 32.9 kmpl ಮೈಲೇಜ್ ನೀಡುತ್ತದೆ.
ಪ್ರಸ್ತುತ ಹಿರೋ ಬೈಕ್ ಉತ್ತಮ ಲುಕ್ ಹೊಂದಿದೆ. Hero Xpulse 200 4V 825 ಎಂಎಂ ಸೀಟ್ ಹೊಂದಿದೆ. ಎಲ್ಲ ರಸ್ತೆಗಳಲ್ಲಿ ಸುಲಭವಾಗಿ ಓಡಿಸುವಂತೆ ಡಿಸೈನ್ ಮಾಡಲಾಗಿದೆ. ಉತ್ತಮ ಬ್ರೇಕಿಂಗ್‌ಗಾಗಿ, ಬೈಕ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಹೊಂದಿದೆ ಮತ್ತು ಇದು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಅನ್ನು ಸಹ ಹೊಂದಿದೆ. ಈ ಬೈಕ್ 1.72 ಲಕ್ಷ ಹಾಗೂ 1.80 ಲಕ್ಷದ ವರೆಗೆ ಆನ್‌ರೋಡ್‌ನಲ್ಲಿ ಸಿಗುತ್ತದೆ. ಬೈಕ್ ಎಲ್ ಇಡಿ ಹೆಡ್ ಲೈಟ್ ಮತ್ತು ಟೈಲ್ ಲೈಟ್ ಹೊಂದಿದೆ.

ಹೊಸ ಬೈಕ್‌ನಲ್ಲಿ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ?
ಈ ಬೈಕಿನ ಗ್ರೌಂಡ್ ಕ್ಲಿಯರೆನ್ಸ್ 230 ಎಂಎಂ. ಆಗಿರುವು ಸಾಧ್ಯತೆ ಇದೆ. ಈ ಬೈಕ್ 21 ಇಂಚಿನ ಮುಂಭಾಗ ಮತ್ತು 17 ಇಂಚಿನ ಹಿಂಭಾಗದ ಟೈರ್‌ಗಳನ್ನು ಹೊಂದಿದೆ. ಇದು ವೈರ್ ಸ್ಪೋಕ್ ರಿಮ್‌ನೊಂದಿಗೆ ಇರುತ್ತದೆ. ಇದು 17 ಲೀಟರ್ ಇಂಧನ ಟ್ಯಾಂಕ್‌ನ್ನು ಹೊಂದಿದೆ. ಡಿಸ್ಕ್ ಬ್ರೇಕ್, ಡ್ಯುಯಲ್ ಚಾನೆಲ್ ಎಬಿಎಸ್, ಬಣ್ಣದ ಟಿಎಫ್ಟಿ ಡಿಸ್ಪ್ಲೇ, ಸ್ಮಾರ್ಟ್ಫೋನ್ ಸಂಪರ್ಕ ಹೊಂದಿರುವ ಸಾಧ್ಯತೆ ಇದೆ.
ಈ ಬೈಕ್ ಬ್ಲೂಟೂತ್ ಸಂಪರ್ಕ, ಡಿಜಿಟಲ್ ಸ್ಪೀಡೋ ಮೀಟರ್, 21 ಇಂಚಿನ ಮುಂಭಾಗದ ಟೈರ್, 18 ಇಂಚಿನ ಹಿಂದಿನ ಟೈರ್, ಸ್ಪೋಕ್ ಚಕ್ರಗಳು, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್, ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆನ್ಷನ್, ಡಬಲ್ ಡಿಸ್ಕ್ ಬ್ರೇಕ್ಸ್, ಬೈಕ್ ಸಿಂಗಲ್ ಪೀಸ್ ಸೀಟ್, ಆಂಟಿ ಲಾಕ್ ಬ್ರೇಕಿಂಗ್ (ABS)ವ್ಯವಸ್ಥೆಗಳನ್ನು ಹೊಂದಿರುವ ಸಾಧ್ಯತೆ ಇದೆ.
ಹಿಮಾಲಯನ್‌ಗೆ ಪೈಪೋಟಿ
ಹೊಸ Xpulse 210 4V ನೇರವಾಗಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ನೊಂದಿಗೆ ಪೈಪೋಟಿ ನೀಡಲಿದೆ. ಇದು 451.65cc ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು 40 bhp ಪವರ್ ಮತ್ತು 40Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6 ಸ್ಪೀಡ್ ಗೇರ್ ಬಾಕ್ಸ್ ಸೌಲಭ್ಯವನ್ನು ಹೊಂದಿದೆ.












Click it and Unblock the Notifications