Xerox Roti Available: ಇಲ್ಲಿ 'ಜೆರಾಕ್ಸ್ ರೊಟ್ಟಿ ಹಾಗೂ ಚಾಪಾತಿ ದೊರೆಯುತ್ತವೆ'...

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗದೇ ಇರುವ ಸುದ್ದಿಗಳು ಬಹುತೇಕ ಕಡಿಮೆ. ಹಲವು ಹಾಸ್ಯಾಸ್ಪದ ವಿಡಿಯೋಗಳು ಹಾಗೂ ಫೋಟೋಗಳು ಬಿರುಗಾಳಿಯಂತೆ ವೈರಲ್ ಆಗಿ ಬಿಡುತ್ತವೆ. ಹೀಗೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನು ಕಂಡ ಜನ ತಬ್ಬಿಬ್ಬಾಗಿದ್ದಾರೆ. ಜೊತೆಗೆ ಹೊಟ್ಟೆ ಹುಣ್ಣಾಗುವಷ್ಟು ನಗಾಡಿದ್ದಾರೆ.

ಅಷ್ಟಕ್ಕೂ ಫೋಟೋದಲ್ಲಿ ಅದೇನಿದೆ ಅಂದ್ರಾ? ವೈರಲ್ ಫೋಟೋದಲ್ಲಿ ನೆಲದ ಮೇಲೆ ಒಂದು ಬೋರ್ಡ್ ಇಡಲಾಗಿದೆ. ಈ ಬೋರ್ಡ್‌ನಲ್ಲಿ ಬರೆದಿರುವುದನ್ನು ನೋಡಿ ಜನ ಬಿದ್ದು ಬಿದ್ದು ನಗಾಡಿದ್ದಾರೆ. ಅಷ್ಟಕ್ಕೂ ಈ ಬೋರ್ಟ್‌ನಲ್ಲಿ ಏನ್ ಬರೆದಿದೆ ಗೊತ್ತಾ?- ''XEROX ಜೋಳದ ರೊಟ್ಟಿ ಮತ್ತು ಚಪಾತಿ ದೊರೆಯುತ್ತದೆ ಜೆರಾಕ್ಸ್'' ಎಂದು ಬರೆಯಲಾಗಿದೆ.

Here Xerox roti and chapati are available... Photo viral

ಇದನ್ನು ನೋಡಿದ ಜನ ಗೊಂದಲಗೊಂಡಿದ್ದಾರೆ. ಜೆರಾಕ್ಸ್‌ ರೊಟ್ಟಿ ಹಾಗೂ ಚಪಾತಿ ದೊರೆಯುತ್ತಾ? ಅಂತಾ ಆಶ್ಚರ್ಯಗೊಂಡಿದ್ದಾರೆ. ಒಂದು ಜೋಳದ ರೊಟ್ಟಿ ತೆಗೆದುಕೊಂಡು ಹೋದರೆ ಅನೇಕ ಜೋಳದ ರೊಟ್ಟಿ ಪೇಪರ್ ಪ್ರಿಂಟ್‌ನಂತೆ ಬರಬಹುತೆನಾಪ್ಪಾ ಅಂತಾ ಕಾಮೆಂಟ್ ಮಾಡಿದ್ದಾರೆ. ಈ ಫೋಟೋಕ್ಕೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಹುಶ: ಇದು ಇಷ್ಟೊಂದು ಹಾಸ್ಯಾಸ್ಪದವಾಗಿ ಕಾಣುತ್ತೆ ಅನ್ನೋದು ಇದನ್ನು ಬರೆದವರಿಗೂ ಗೊತ್ತಾಗಿಲ್ಲ ಅನಿಸುತ್ತದೆ. ಜೆರಾಕ್ಸ್ ಬೋರ್ಡ್‌ನಲ್ಲಿ ಕೊಂಚ ಸ್ಥಳ ಸಿಕ್ಕಿದೆ ಅಂತ ಮಧ್ಯದಲ್ಲಿ 'ರೊಟ್ಟಿ ಮತ್ತು ಚಪಾತಿ ದೊರೆಯುತ್ತದೆ' ಅಂತ ಸೇರಿಸಲಾಗಿದೆ. ಆದರೆ ಇದರ ಮೇಲೆ ಹಾಗೂ ಕೆಳಗೆ ಏನಿದೆ? ಅದನ್ನು ಸಂಪೂರ್ಣವಾಗಿ ಓದಿದರೆ ಅದು ಬೇರೆಯದ್ದೇ ಅರ್ಥವನ್ನು ನೀಡುತ್ತದೆ. ಇದರ ಪರಿವಿಲ್ಲದೆ ಬೋರ್ಡ್‌ನಲ್ಲಿ ಏನೇನೋ ಬರೆಯಲಾಗಿದೆ.

ಈ ಬೋರ್ಡ್‌ನಿಂದ ನಾವು ಸರಿಯಾಗಿ ಅರ್ಥೈಸಿಕೊಳ್ಳಬೇಕಾಗಿದ್ದು- ಇಲ್ಲಿ ಜೋಳದ ರೊಟ್ಟಿ, ಚಪಾತಿ ದೊರೆಯುತ್ತದೆ. ಜೆರಕ್ಸ್ ಕೂಡ ಮಾಡಲಾಗುವುದು ಎಂದಾಗಬೇಕಾಗಿತ್ತು. ಇಂಗ್ಲಿಷ್ 'XEROX' ಹಾಗೂ ಕನ್ನಡ 'ಜೆರಕ್ಸ್' ಮಧ್ಯೆ ಕನ್ನಡದಲ್ಲಿ 'ಜೋಳದ ರೊಟ್ಟಿ ಹಾಗೂ ಚಪಾತಿ ದೊರೆಯುತ್ತದೆ' ಎನ್ನುವುದು ಇದರ ಅರ್ಥವನ್ನೇ ಬದಲಾಯಿಸಿಬಿಟ್ಟಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ರಾಡ್ಗಿಚ್ಚಿನಂತೆ ವೈರಲ್ ಆಗುತ್ತಿದೆ. ಕೆಲವರು ಇದನ್ನು ಫೋಟೋ ಶಾಪ್ ಮಾಡುವ ಮೂಲಕ ಎಡಿಟಿಂಗ್ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.

ಅದೇನೇ ಇರಲ್ಲಿ ಬರೆಯುವಾಗ ಇಂತಹ ಸಣ್ಣ ವಿಚಾರದಲ್ಲಿ ಗಮನ ಹರಿಸದೇ ಇದ್ದರೆ ಅದು ಅಪಾರ್ಥವಾಗಿ ಬಿಡುತ್ತದೆ. ಇದು ಎಷ್ಟು ಹಾಸ್ಯಾಸ್ಪದವೋ ಅಷ್ಟೇ ಗಮನಹರಿಸಬೇಕಾದ ವಿಷಯ ಕೂಡ ಹೌದು.

ಸಲ್ಮಾನ್ ಖಾನ್

ಬಾಲಿವುಡ್ ಖ್ಯಾತ ನಟ ಸಲ್ಮಾನ್‌ ಖಾನ್ ಹುಟ್ಟಿದ ಹಬ್ಬವನ್ನು ಅವರ ಅಭಿಮಾನಿಗಳು ಇತ್ತೀಚಿಗಷ್ಟೇ ಅದ್ಧೂರಿಯಾಗಿ ಆಚರಿಸಿದರು. ಅವರ ಹುಟ್ಟುಹಬ್ಬಕ್ಕೆ ದೊಡ್ಡ ದೊಡ್ಡ ಬ್ಯಾನರ್‌ಗಳು, ಫ್ಲೆಕ್ಸ್‌ಗಳನ್ನು ಹಾಕಿರುವುದು ಅಲ್ಲಲ್ಲಿ ಸಾಮಾನ್ಯವಾಗಿ ಕಂಡುಬಂದಿದೆ. ಎಲ್ಲಾ ವಯಸ್ಸಿನವರನ್ನು ಸೆಳೆಯುವ ಸಲ್ಮಾನ್ ಖಾನ್ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಹೀಗಾಗಿ ಅವರ ಹುಟ್ಟುಹಬ್ಬಕ್ಕೆ ನಾನಾ ಕಾರ್ಯಕ್ರಮಗಳು, ಪೂಜೆ ಪುನಸ್ಕಾರಗಳು ಹಾಗೂ ವಿಶೇಷವಾಗಿ ಬ್ಯಾನರ್‌ಗಳನ್ನು ಮಾಡಿಸಿದ್ದು ಕಂಡು ಬಂದಿದೆ. ಹೀಗೆ ಸಲ್ಲು ಬಾಯ್ ಹುಟ್ಟುಹಬ್ಬಕ್ಕೆ ಮ್ಯಾರೇಜ್ ಬ್ಯೂರೋವೊಂದು ಶುಭಾಶಯವನ್ನು ತಿಳಿಸಿದೆ. ಈ ವಿಶ್‌ನ್ನು ಫ್ಲೆಕ್ಸ್ ಮೂಲಕ ಮಾಡಿಸಲಾಗಿದ್ದು ನೋಡುಗರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡಿದ್ದಾರೆ.

ಹ್ಯಾಪಿ ಬರ್ತಡೆ

ಸಲ್ಮಾನ್ ಖಾನ್ (ಸಲ್ಲು)

ಪ್ರಖ್ಯಾತ ಚಲನಚಿತ್ರ ನಟ

ಶುಭ ಕೋರುವವರು

ಸುಮಂಗಳ ಮ್ಯಾರೇಜ್ ಬ್ಯೂರೋ

ಶೀಘ್ರ ವಿವಾಹಕ್ಕಾಗಿ ಸಂಪರ್ಕಿಸಿ

ಉರ್ವ, ಚಿಲಿಂಬಿ, ಮಂಗಳೂರು

ಎಂದು ಶುಭಾಶಯ ತಿಳಿಸಲಾಗಿದೆ. ಹೇಳಿ ಕೇಳಿ ಸಲ್ಮಾನ್‌ ಖಾನ್‌ಗೆ ಇನ್ನೂ ಮದುವೆಯಾಗಿಲ್ಲ. ಸಲ್ಮಾನ್‌ ಖಾನ್ ಅವರು ಮದುವೆ ಯಾವಾಗ ಆಗ್ತಾರೆ ಅನ್ನೋದನ್ನು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಹೀಗಿರುವಾಗ ಸುಮಂಗಳ ಮ್ಯಾರೇಜ್ ಬ್ಯೂರೋ ಅವರಿಗೆ ಶುಭ ಕೋರಿದ್ದು ನಗಪಾಟಲಿಗೆ ಗುರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+