• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ 4 ವೈಜ್ಞಾನಿಕ ಕೊಡುಗೆಗಳು

|
Google Oneindia Kannada News

ನವದೆಹಲಿ, ಅಕ್ಟೋಬರ್ 15: ಭಾರತದ 11ನೇ ರಾಷ್ಟ್ರಪತಿ ಕ್ಷಿಪಣಿ ಬ್ರಹ್ಮ ಎಂದೇ ಖ್ಯಾತರಾದ ಭಾರತ ರತ್ನ ಅಬ್ದುಲ್ ಕಲಾಂ ಮಕ್ಕಳ ಹಾಗೂ ಭಾರತೀಯರ ಅಚ್ಚುಮೆಚ್ಚಿನ ರಾಷ್ಟ್ರಪತಿ.

ಅವರ ನೆಚ್ಚಿನ ಕೆಲಸ ಕಲಿಕೆಯಾಗಿತ್ತು, ಕಾಲೇಜೊಂದರಲ್ಲಿ ಉಪನ್ಯಾಸ ನೀಡುತ್ತಿದ್ದಾಗಲೇ ನಿಧನರಾದಾಗ ಇಡೀ ದೇಶವೇ ಕಣ್ಣೀರು ಹಾಕಿತ್ತು, ಇಂತಹ ಕಲಾಂ ಕೇವಲ ಕ್ಷಿಪಣಿ ತಜ್ಞರಷ್ಟೇ ಆಗಿರಲಿಲ್ಲ, ದೇಶದಕ್ಕೆ ಅವರು ನೀಡಿದ ಕೊಡುಗೆ ಅಪಾರವಾದದ್ದು.

ತಮಿಳುನಾಡಿನ ರಾಮೇಶ್ವರಂ ಪಟ್ಟಣದಲ್ಲಿ ಜನಿಸಿದ ಎ.ಪಿ.ಜೆ.ಅಬ್ದುಲ್ ಕಲಾಂ ಅವರು 2002ರಿಂದ 2007ರವರೆಗೆ ಭಾರತದ 11ನೇ ರಾಷ್ಟ್ರಪತಿಯಾಗಿದ್ದರು. ಭಾರತೀಯ ಏರೋಸ್ಪೇಸ್ ವಿಜ್ಞಾನಿಯಾಗಿದ್ದ ಕಲಾಂ ಅವರು 4 ದಶಕಗಳ ಕಾಲ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯಲ್ಲಿ ಕಳೆದರು. 1998 ರಲ್ಲಿ ಭಾರತದ ಪೋಖ್ರಾನ್-2 ಪರಮಾಣು ಪರೀಕ್ಷೆಗಳಿಗೆ ಮುಂದಾದರು.

ಅಕ್ಟೋಬರ್ 15, 1931 ರಂದು ಜನಿಸಿದ ಕಲಾಂ ಅವರ ಬಾಲ್ಯವು ಕಷ್ಟಕರವಾಗಿತ್ತು. ತಮ್ಮ ಕುಟುಂಬದ ಆದಾಯಕ್ಕೆ ನೆರವಾಗಲು ಸಣ್ಣ ವಯಸ್ಸಿನಲ್ಲಿಯೇ ಪತ್ರಿಕೆಗಳನ್ನು ಮಾರಾಟ ಮಾಡಿದರು. 1960 ರಲ್ಲಿ ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದ ಕಲಾಂ ಅವರು ವಿಜ್ಞಾನಿಯಾಗಿ ಡಿಆರ್‌ಡಿಒಗೆ ಸೇರಿದರು. ಕಲಾಂ ಅವರು ಭಾರತೀಯ ಸೈನ್ಯಕ್ಕಾಗಿ ಹೆಲಿಕಾಪ್ಟರ್‌ಗಳನ್ನು ವಿನ್ಯಾಸಗೊಳಿಸಿದರು.

ಕಲಾಂ 1974 ರಲ್ಲಿ ದೇಶದ ಮೊದಲ ಪರಮಾಣು ಪರೀಕ್ಷೆಗೆ ಸಾಕ್ಷಿಯಾದರು ಮತ್ತು ಅಗ್ನಿ ಮತ್ತು ಪೃಥ್ವಿಯಂತಹ ಪ್ರಮುಖ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 1992 ಮತ್ತು 1999 ರ ನಡುವೆ ಪ್ರಧಾನಮಂತ್ರಿಯ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದರು. ಭಾರತದ ಪರಮಾಣು ಕಾರ್ಯಾಚರಣೆಯ ಅಭಿವೃದ್ಧಿಯಲ್ಲಿ ಕಲಾಂ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ, ಪೋಖ್ರಾನ್- 2 ಪರಮಾಣು ಪರೀಕ್ಷೆಗಳನ್ನು ಅವರ ಮೇಲ್ವಿಚಾರಣೆಯಲ್ಲಿ ನಡೆಸಲಾಯಿತು.

ಉಪಗ್ರಹ ಉಡಾವಣಾ ವಾಹನ

ಉಪಗ್ರಹ ಉಡಾವಣಾ ವಾಹನ

ಉಪಗ್ರಹ ಉಡಾವಣಾ ವಾಹನ ಎಸ್‌ಎಲ್‌ವಿ3 ಯಶಸ್ಸಿನ ಹಿಂದೆ ಕಲಾಂ ಪಾತ್ರವಿದೆ. ಉಪಗ್ರಹ ಉಡಾವಣಾ ವಾಹನವನ್ನು ಭಾರತ ತಯಾರಿಸುವುದು ಅಸಾಧ್ಯ ಎನ್ನುವ ಸಂದರ್ಭದಲ್ಲಿ ಆ ಯೋಜನೆಯಲ್ಲ ಹತ್ತು ವರ್ಷಗಳ ಕಾಲ ಕಲಾಂ ದುಡಿದಿದ್ದರು. ಇದರ ಪರಿಣಾಮವಾಗಿ 1980ರ ಜುಲೈನಲ್ಲಿ ರೋಹಿಣಿ ಉಪಗ್ರಹವನ್ನು ಎಸ್‌ಎಲ್‌ವಿ 3 ಯಶಸ್ವಿಯಾಗಿ ಹೊತ್ತೊಯ್ದಿತ್ತು. ಈ ಮೂಲಕ ಭಾರತವು ಬಾಹ್ಯಾಕಾಶ ಕ್ಲಬ್‌ಗೆ ಸೇರಿಕೊಂಡಿತು.
ಕ್ಷಿಪಣಿ ನಿರ್ಮಾಣದ ಜತೆ ಅದಕ್ಕೆ ಪೂರಕವಾಗಿರುವ ಡೆವಿಲ್ ಹಾಗೂ ವೇಲಿಯಂಟ್ ಎನ್ನುವ ತಂತ್ರಜ್ಞಾನದ ಹಿಂದಿನ ಶಕ್ತಿಯು ಕಲಾಂ, ಈ ತಂತ್ರಜ್ಞಾನದ ಮೂಲಕವೇ ಭಾರತದ ಉಪಗ್ರಹ ಉಡಾವಣಾ ವಾಹನಗಳನ್ನು ಕುಡ ಅಭಿವೃದ್ಧಿಪಡಿಸಲಾಯಿತು. ಹಾಗೆಯೇ ಕಲಾಂ ಮಾರ್ಗದರ್ಶನದಲ್ಲಿ ಅಗ್ನಿ, ಪೃಥ್ವಿ ಸೇರಿ ಇನ್ನಿತರೆ ಕ್ಷಿಪಣಿಗಳನ್ನು ರೂಪಿಸಲಾಯಿತು.

ಪೋಖ್ರಾನ್ ಅಣು ಪರೀಕ್ಷೆಯಲ್ಲಿ ಪ್ರಮುಖ ಪಾತ್ರ

ಪೋಖ್ರಾನ್ ಅಣು ಪರೀಕ್ಷೆಯಲ್ಲಿ ಪ್ರಮುಖ ಪಾತ್ರ

ಅಂದು ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಗೆ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿದ್ದ ಕಲಾಂ ಪೋಖ್ರಾನ್ ಅಣು ಪರೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1992 ಜುಲೈನಿಂದ 1999ರವರೆಗೆ ಅಣು ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳ ಮೇಲುಸ್ತುವಾರಿಯನ್ನು ಕಲಾಂ ವಹಿಸಿಕೊಂಡಿದ್ದರು.

ಆರೋಗ್ಯ ಕ್ಷೇತ್ರದಲ್ಲೂ ಕಲಾಂ ಸೇವೆ

ಆರೋಗ್ಯ ಕ್ಷೇತ್ರದಲ್ಲೂ ಕಲಾಂ ಸೇವೆ

ಆರೋಗ್ಯ ಕ್ಷೇತ್ರದಲ್ಲೂ ಕಲಾಂ ಸೇವೆ ಗಮನಾರ್ಹವಾದದ್ದು ಇಂದು ಸ್ಟಂಟ್‌ಗಳು ಕಡಿಮೆ ದರದಲ್ಲಿ ಸಿಗುತ್ತಿದ್ದರೆ ಅದರಲ್ಲಿ ಕಲಾಂ ಪಾತ್ರವಿದೆ. ಹೃದ್ರೋಗ ತಜ್ಞ ಸೋಮರಾಜು ಅವರ ಜತೆ ಸೇರಿ ಅಗ್ಗದ ದರದಲ್ಲಿ ಸ್ಟಂಟ್‌ ಅನ್ನು ನಿರ್ಮಿಸಿದರು ಇದು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹೃದ್ರೋಗ ಚಿಕಿತ್ಸೆ ಸಿಗುವಲ್ಲಿ ಸಹಾಯ ಮಾಡಿತು. ಇದು ಈಗ ಕಲಾ ರಾಜು ಸ್ಟಂಟ್ ಎಂದು ಪ್ರಖ್ಯಾತಿ ಪಡೆದಿದೆ.ಗ್ರಾಮೀಣ ಪ್ರದೇಶಗಳ ಆರೋಗ್ಯ ಸೇವೆಯನ್ನು ತಂತ್ರಜ್ಞಾನದ ಮೂಲಕ ಗಮನಿಸಲು ಕಲಾಂ ಹಾಗೂ ಸೋಮರಾಜು ಸೇರ ವಿಶೇಷ ಟ್ಯಾಬ್ಲೆಟ್ ಒಂದನ್ನು ರೂಪಿಸಿದ್ದರು, ಅದಕ್ಕೆ ಕಲಾಂ-ರಾಜು ಟ್ಯಾಬ್ಲೆಟ್ ಎಂದು ಹೇಳಲಾಗುತ್ತಿತ್ತು. ಇದನ್ನು 2012ರಲ್ಲಿ ವಿನ್ಯಾಸಗೊಳಿಸಲಾಗಿತ್ತು.

ತಂತ್ರಜ್ಞಾನದ ಹಿಂದಿನ ಶಕ್ತಿ ಕಲಾಂ

ತಂತ್ರಜ್ಞಾನದ ಹಿಂದಿನ ಶಕ್ತಿ ಕಲಾಂ

ಕ್ಷಿಪಣಿ ನಿರ್ಮಾಣದ ಜತೆ ಅದಕ್ಕೆ ಪೂರಕವಾಗಿರುವ ಡೆವಿಲ್ ಹಾಗೂ ವೇಲಿಯಂಟ್ ಎನ್ನುವ ತಂತ್ರಜ್ಞಾನದ ಹಿಂದಿನ ಶಕ್ತಿಯು ಕಲಾಂ, ಈ ತಂತ್ರಜ್ಞಾನದ ಮೂಲಕವೇ ಭಾರತದ ಉಪಗ್ರಹ ಉಡಾವಣಾ ವಾಹನಗಳನ್ನು ಕುಡ ಅಭಿವೃದ್ಧಿಪಡಿಸಲಾಯಿತು. ಹಾಗೆಯೇ ಕಲಾಂ ಮಾರ್ಗದರ್ಶನದಲ್ಲಿ ಅಗ್ನಿ, ಪೃಥ್ವಿ ಸೇರಿ ಇನ್ನಿತರೆ ಕ್ಷಿಪಣಿಗಳನ್ನು ರೂಪಿಸಲಾಯಿತು.

English summary
From Being the people's president to spearheading the developpment of the most significant Indian Missiles, late President Dr APJ Abdul Kalam has contributed to the development of the country and different spheres.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X