Headphones: 2000 ರೂಪಾಯಿ ಒಳಗೆ ಲಭ್ಯ ಇರುವ 5 ಬೆಸ್ಟ್‌ ಹೆಡ್‌ ಫೋನ್‌!

ಗ್ರಾಹಕ ಎಲೆಕ್ಟ್ರಾನಿಕ್‌ ಗೆಜೆಟ್‌ಗಳ ಬಗ್ಗೆ ಸಾಕಷ್ಟು ಆಸಕ್ತಿಯನ್ನು ಹೊಂದಿದ್ದಾನೆ. ದಿನವೂ ಹೊಸ ತಂತ್ರಜ್ಞಾನದಿಂದ ಕೂಡಿದ ಎಲೆಕ್ಟ್ರಾನಿಕ್‌ ಉತ್ಪನ್ನಗಳು ಮಾರಾಟಕ್ಕೆ ಲಭ್ಯ. ಇದರಲ್ಲಿ ತನಗೆ ಬೇಕಾಗಿರುವ ವಸ್ತುವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಈಗ ಮಾರುಕಟ್ಟೆಯಲ್ಲಿ ಮೊಬೈಲ್‌ ಹಾಗೂ ಹೆಡ್‌ಫೋನ್‌ ಹಾವಳಿ ಜೋರಾಗಿದೆ.

ಮರುಕಟ್ಟೆಯಲ್ಲಿ ದಿನವೂ ಒಂದಿಲ್ಲಾ ಒಂದು ಕಂಪನಿಯ ಹೆಡ್‌ಫೋನ್‌ ಅಥವಾ ಮೊಬೈಲ್‌ ಬಿಡುಗಡೆ ಆಗುತ್ತವೆ. ಇದರಲ್ಲಿ ನಮ್ಮ ಅಗತ್ಯಕ್ಕೆ ತಕ್ಕಾನದುದ್ದನ್ನು ಆರಿಸಿಕೊಳ್ಳಬಹುದು. ಒಂದು ವೇಳೆ ನೀವು ಹೆಡ್‌ ಫೋನ್‌ ತೆಗೆದುಕೊಳ್ಳಲು ಯೋಚಿಸುತ್ತಿದ್ದರೆ, ಅದರ ಬ್ರ್ಯಾಂಡ್‌, ಬ್ಯಾಟರಿ ಲೈಫ್‌, ಆನ್‌ಲೈನ್‌ನಲ್ಲಿ ಇದಕ್ಕೆ ನೀಡಿರುವ ರೇಟಿಂಗ್‌ ಹಾಗೂ ಸೌಂಡ್‌ನ್ನು ಗಮಸಿತ್ತೇವೆ. ಈ ವರದಿಯಲ್ಲಿ ನಾವು ಮಾರುಕಟ್ಟೆಯಲ್ಲಿ ಲಭ್ಯ ಇರುವ ಐದು ಬೆಸ್ಟ್‌ ಹೆಡಫೋನ್‌ಗಳ ಬಗ್ಗೆ ತಿಳಿಯೋಣ.

Headphones 5 best headphones available under 2000 rupees

ಮಾರುಕಟ್ಟೆಯಲ್ಲಿರುವ ಬೆಸ್ಟ್ ಹೆಡ್‌ ಫೋನ್‌

ಹೆಡ್‌ಫೋನ್‌ ವಿಚಾರಕ್ಕೆ ಬಂದರೆ ಭಾರತೀಯ ಗ್ರಾಹಕರ ಮೊದಲ ಆಯ್ಕೆ BoAt. ಈ ಕಂಪನಿ ಭಾರತ ಮೂಲದ್ದಾಗಿದೆ. ಇದರ ಹೆಡ್‌ಫೋನ್‌ಗಳ ಗುಣಮಟ್ಟವೂ ಚೆನ್ನಾಗಿದೆ. ಈಗ ಮಾರುಕಟ್ಟೆಯಲ್ಲಿ ಲಭ್ಯ ಇರುವ ಬಜೆಟ್‌ ಫ್ರೆಂಡ್ಲಿ ಹೆಡ್‌ಫೋನ್‌ಗಳಲ್ಲಿ ಇದಕ್ಕೂ ಸ್ಥಾನವಿದೆ.

BoAt Rockerz 255 Pro+ ಉತ್ತಮ ಗುಣ ಮಟ್ಟದ ಹೆಡ್‌ಫೋನ್‌. ಇದು 10 ಕ್ಕೂ ಹೆಚ್ಚು ಬಣ್ಣಗಳಲ್ಲಿ ಲಭ್ಯವಿದೆ. ಇದು ಮ್ಯಾಗ್ನೆಟಿಕ್ ಇಯರ್‌ಬಡ್‌ಗಳು ಮತ್ತು 10 ಎಂಎಂ ಡ್ರೈವರ್‌ಗಳನ್ನು ಹೊಂದಿದೆ. ಇದು ಈ ಬ್ರಾಂಡ್‌ನ ವಿಶೇಷತೆಯೇ ಧ್ವನಿ. ಈ ಹೆಡ್‌ಫೋನ್‌ನಲ್ಲಿ ಪ್ಲೇ/ಪಾಸ್/ವಾಲ್ಯೂಮ್‌ ಕಂಟ್ರೋಲ್‌ ನಂತಹ ನಿಯಂತ್ರಣಗಳನ್ನು ನೋಡಬಹುದು. ಸಿಂಗಲ್ ಪ್ರೆಸ್ ವಾಯ್ಸ್ ಅಸಿಸ್ಟೆಂಟ್ ಸಪೋರ್ಟ್ ಸಹ ಇದರಲ್ಲಿ ಲಭ್ಯವಿದೆ. ಇದು 10 ನಿಮಿಷಗಳ ಚಾರ್ಜಿಂಗ್‌ನಲ್ಲಿ 10 ಗಂಟೆಗಳವರೆಗೆ ಬೆಂಬಲಿಸುತ್ತದೆ. ಎಂದು ಕಂಪನಿ ತಿಳಿಸಿದೆ. ಈ ಹೆಡ್‌ಫೋನ್ IPX7 ರೇಟಿಂಗ್ ಹೊಂದಿದೆ.

ಬೆಲೆ: 1299

ಹೇಗಿದೆ ರಿಯಲ್‌ಮಿ ಹೆಡ್‌ಫೋನ್‌?

ರಿಯಲ್‌ಮಿ ಕಂಪನಿಯ ಫೋನ್‌ಗಳು ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿವೆ. ಅಂತೆಯೇ ಈ ಕಂಪನಿಯ ಹೆಡ್‌ಫೋನ್‌ ಗಳು ಸಹ ಸಖತ್‌ ಟ್ರೆಂಡ್‌ ಆಗಿವೆ. ಅದರಲ್ಲಿ realme buds wireless 2 neo ಒಂದು. ಈ ಫೋನ್‌ ಹೊರಗಿನ ಶಬ್ದವನ್ನು ಕಡಿಮೆ ಮಾಡುತ್ತದೆ. ಇದರಿಂದ ನೀವು ಬಯಸಿದ ಸಂಗೀತವನ್ನು ನೀವು ಆನಂದಿಸಬಹುದು. ಇದು 17 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ಹೊಂದಿದೆ ಮತ್ತು ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಸಹ ಹೊಂದಿದೆ. ಈ ಹೆಡ್‌ಫೋನ್‌ ಸಂಗೀತ ಕೇಳಲು, ಚಿತ್ರಗಳನ್ನು ನೋಡಲು ಗೇಮಿಂಗ್‌ ಪರಪೋಸ್‌ ಗೂ ಸಹಾಯವಾಗುತ್ತದೆ. ಇದು IPX4 ವಾಟರ್ ರೆಸಿಸ್ಟೆಂಟ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಇದು ಮೂರು ಬಣ್ಣಗಳಲ್ಲಿ ಲಭ್ಯ.

ಬೆಲೆ: 1199

Headphones 5 best headphones available under 2000 rupees

ಸೌಂಡ್‌ ಪ್ರೀಯರಿಗೆ ಇದು ಬೆಸ್ಟ್‌

ಈಗ ಮಾರುಕಟ್ಟೆಯಲ್ಲಿ ತರಹೇವಾರಿ ಹೆಡ್‌ಫೋನ್‌ಗಳು ಬಂದಿವೆ. ಆದರೆ ಮೊದಲು ಒಳ್ಳೆಯ ಸೌಂಡ್‌ ಕೊಡು ಸ್ಪೀಕರ್‌, ಟಿವಿಗಳಲ್ಲಿ ಸೋನಿ ಕಂಪನಿ ಹೆಸರು ಮುಂಚೂಣಿಯಲ್ಲಿ ಇರುತ್ತಿತ್ತು. ಈಗ ಹೆಡ್‌ ಫೋನ್‌ ಕ್ಷೇತ್ರಕ್ಕೂ ಈ ಕಂಪನಿ ಕಾಲಿಟ್ಟು ಬಹು ದಿನಗಳೇ ಕಳೆದಿವೆ. Sony WI-C100 Wireless Headphones ಸಹ ಮಾರುಕಟ್ಟೆಯಲ್ಲಿ ಲಭ್ಯ ಇರುವ ಬೆಸ್ಟ್‌ ಹೆಡ್‌ ಫೋನ್‌ಗಳಲ್ಲಿ ಒಂದು.

ಈ ಹೆಡ್‌ ಫೋನ್‌ ಸಹ ಮೂರು ಬಣ್ಣಗಳಲ್ಲಿ ಲಭ್ಯವಿದ್ದು, ಇದನ್ನು 25 ಗಂಟೆಯ ಬ್ಯಾಟರಿ ಬ್ಯಾಕಪ್‌ ಹೊಂದಿರುವುದಾಗಿ ಕಂಪನಿ ಹೇಳಿಕೊಂಡಿದೆ. ಐಪಿಎಕ್ಸ್ 4 ರೇಟಿಂಗ್ ಅನ್ನು ಸಹ ಪಡೆದಿದೆ. ಇದರ ಸಮತೋಲಿತ ಆಕಾರವು ಕುತ್ತಿಗೆಯ ಸುತ್ತಲೂ ಚೆನ್ನಾಗಿ ಹೊಂದಿಕೊಳ್ಳುತ್ತದೆ.

ಬೆಲೆ: 1690

ಮಾರುಕಟ್ಟೆಯಲ್ಲಿ ಸುದ್ದು ಮಾಡುತ್ತಿವೆ ಒನ್‌ಪ್ಲಸ್‌

ಬೆಸ್‌ ಹಾಗೂ ಬೆಸ್ಟ್‌ ಆಡಿಯೋವನ್ನು ಇಷ್ಟ ಪಡುವ ಗ್ರಾಹಕರಿಗೆ ಒನ್‌ ಪ್ಲಸ್‌ ಕಂಪನಿ Oneplus Bullets Z2 ಹೆಡ್‌ಫೋನ್‌ ರಿಲೀಸ್‌ ಮಾಡಿದೆ. ಇದು IP55 ರೇಟಿಂಗ್‌ ಹೊಂದಿದ್ದು ನೀರು ಮತ್ತು ಬೆವರು ನಿರೋಧಕವಾಗಿರುತ್ತವೆ. ಇದು ಮೂರು ಬಣ್ಣಗಳಲ್ಲಿ ಲಭ್ಯವಿದೆ: ಕಪ್ಪು, ನೀಲಿ ಮತ್ತು ಕೆಂಪು. 10 ನಿಮಿಷಗಳ ಚಾರ್ಜ್‌ನಲ್ಲಿ 20 ಗಂಟೆಗಳ ಕಾಲ ಅವುಗಳನ್ನು ಬಳಸಬಹುದು. ಒಂದೇ ಚಾರ್ಜಿಂಗ್‌ನಲ್ಲಿ ಇದನ್ನು 30 ಗಂಟೆಗಳ ಕಾಲ ಬಳಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಬೆಲೆ: 1799

ಬೋಟೋ ಕಂಪನಿಯ ಹೆಡ್‌ಪೋನ್‌ ಈ ರೇಂಜ್‌ನಲ್ಲಿ ಸಿಗುವ ಮತ್ತೊಂದು ಬೆಸ್ಟ್ ಆಯ್ಕೆ ಆಗಿದೆ. BoAt Rockerz 330 pro ಕೇಳುಗರಿಗೆ ವಿಭಿನ್ನ ಅನುಭವ ನೀಡುತ್ತದೆ. ಇದರಿಂದ ಕೇಳುಗ ತಾನು ಕೇಳುವ ಸಂಗೀತವನ್ನು ಕಲಾವಿದ ತನ್ನ ಮುಂದೆ ಹಾಡುತ್ತಿರುವಂತೆ ಅನಿಸುತ್ತದೆ. ಇದು ಸಹ ಕೇವಲ 10 ನಿಮಿಷಗಳಲ್ಲಿ 20 ಗಂಟೆಗಳ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಹೆಡ್‌ಫೋನ್ IPX5 ವಾಟರ್ ರೆಸಿಸ್ಟೆಂಟ್ ಮತ್ತು 10 ಎಂಎಂ ಡ್ರೈವರ್ ಅನ್ನು ಸಹ ಹೊಂದಿದೆ. ಇವುಗಳು ಅನುಕೂಲಕರವಾಗಿ ವಿನ್ಯಾಸಗೊಳಿಸಲಾದ ನೆಕ್‌ಬ್ಯಾಂಡ್ ಮತ್ತು ಮ್ಯಾಗ್ನೆಟಿಕ್ ಇಯರ್‌ಬಡ್‌ಗಳನ್ನು ಹೊಂದಿವೆ.

ಬೆಲೆ: 1299

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+