Happy Republic Day 2022: ಗಣರಾಜ್ಯೋತ್ಸವದ ಮಹತ್ವ, ಶುಭ ಸಂದೇಶಗಳು

ಭಾರತಾಂಬೆ ಬ್ರಿಟಿಷರ ದಾಸ್ಯದಿಂದ ಬಂಧಮುಕ್ತವಾದ ನಂತರದ ಅಪೂರ್ವ ದಿನಗಳಲ್ಲಿ ಜನವರಿ 26 ಕೂಡ ಒಂದು. ಜನವರಿ 26, 1950ರಂದು ಭಾರತದ ಪರಮ ಪವಿತ್ರ ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದಿತ್ತು.

1947ರ ಆಗಸ್ಟ್‌ 29ರಂದು ಸಂವಿಧಾನ ಶಿಲ್ಪಿ ಡಾ ಬಿ. ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನೆಗಾಗಿ ಸಮಿತಿಯನ್ನು ನೇಮಿಸಲಾಗಿತ್ತು. ನವೆಂಬರ್ 26, 1949ರಲ್ಲಿ ಅಂಗೀಕರಿಸಲ್ಪಟ್ಟ ಈ ಸಂವಿಧಾನ ಪರಿಶೀಲನೆ, ತಿದ್ದುಪಡಿಗಳ ನಂತರ 1950ರ ಜನವರಿ 26ರಂದು ಅಧಿಕೃತವಾಗಿ ಜಾರಿಗೆ ಬಂತು. ಸ್ವಾತಂತ್ರ್ಯ ಸಿಕ್ಕ ಖುಷಿಯ ಬಳಿಕ ಇಡೀ ರಾಷ್ಟ್ರ ಸಂಭ್ರಮಿಸಿದ ಮತ್ತೊಂದು ಕ್ಷಣ ಎಂದರೆ ಅದು 1950ರ ಜನವರಿ 26.

ಗಣರಾಜ್ಯೋತ್ಸವದ ಶುಭಾಶಯಗಳು...

* ನಮ್ಮ ಶ್ರೇಷ್ಠ ರಾಷ್ಟ್ರಕ್ಕೆ ಸಾವಿರ ಸಾವಿರ ಪ್ರಣಾಮಗಳು. ನಮ್ಮ ದೇಶ ಇನ್ನಷ್ಟು ಸಮೃದ್ಧವಾಗಲಿ, ವಿಶ್ವದಲ್ಲಿಯೇ ಇನ್ನಷ್ಟು ಅಪೂರ್ವ ರಾಷ್ಟ್ರವಾಗಿ ರೂಪುಗೊಳ್ಳಲಿ. ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು

* ವೈವಿಧ್ಯಮಯ ಅದ್ಭುತ ಇತಿಹಾಸ ಮತ್ತು ಶ್ರೀಮಂತ ಪರಂಪರೆಯನ್ನು ಹೊಂದಿರುವ ಸುಂದರ ದೇಶದಲ್ಲಿ ನಾನು ಜನಿಸಿದ್ದೇನೆ ಎಂಬ ಹೆಮ್ಮೆ ನನಗಿದೆ. ನನ್ನ ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಸರ್ವರಿಗೂ ನನ್ನ ಪ್ರಣಾಮಗಳು. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು

Happy Republic Day Wishes, Images, Quotes, Greetings, Whatspp and Facebook Status Messages in Kannada

* ನಮ್ಮ ರಾಷ್ಟ್ರ ವಿಶ್ವದಲ್ಲೇ ಶ್ರೇಷ್ಠವಾದುದು. ಈ ರಾಷ್ಟ್ರವನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸೋಣ. ಗಣರಾಜ್ಯೋತ್ಸವದ ಶುಭಾಶಯಗಳು...

* ನಮ್ಮ ತಾಯ್ನೆಲದ ಅಭಿವೃದ್ಧಿಗಾಗಿ ಪ್ರತಿಕ್ಷಣವೂ ಶ್ರಮಿಸೋಣ. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು

* ಸ್ವಾತಂತ್ರ್ಯವು ಸುಲಭವಾಗಿ ನಮಗೆ ಲಭಿಸಿಲ್ಲ. ಇದರ ಹಿಂದೆ ಅದೆಷ್ಟೋ ಹೋರಾಟಗಾರರ ತ್ಯಾಗ, ಬಲಿದಾನವಿದೆ. ಇದನ್ನು ಪ್ರತಿಕ್ಷಣವನ್ನೂ ನೆನೆಯುವುದು ನಮ್ಮೆಲ್ಲಾ ಕರ್ತವ್ಯ. ಗಣರಾಜ್ಯೋತ್ಸವದ ಶುಭಾಶಯಗಳು

* ನಮ್ಮ ರಾಷ್ಟ್ರ ವಿಶ್ವದಲ್ಲೇ ಶ್ರೇಷ್ಠವಾದುದು. ಈ ರಾಷ್ಟ್ರವನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸೋಣ. ಹಿರಿಯರು ಹಾಕಿಕೊಟ್ಟ ದೇಶಪ್ರೇಮದ ಹಾದಿಯಲ್ಲಿ ಒಟ್ಟಾಗಿ ಸಾಗೋಣ. ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

* ನಮ್ಮ ಧೀರ ಸ್ವಾತಂತ್ರ್ಯ ಹೋರಾಟಗಾರರ ಕಠಿಣ ತ್ಯಾಗ ಬಲಿದಾನವನ್ನು ಎಂದೂ ಮರೆಯುವುದಿಲ್ಲ ಎಂದು ನಾವು ಪ್ರಮಾಣ ಮಾಡೋಣ. ವಿಶ್ವದಲ್ಲಿಯೇ ಭಾರತವನ್ನು ಅತ್ಯುತ್ತಮ ರಾಷ್ಟ್ರವನ್ನಾಗಿ ರೂಪಿಸಲು ನಾವು ಇನ್ನಷ್ಟು ಶ್ರಮವಹಿಸಿ ಮುಂದಡಿಯಿಡೋಣ. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು

* ಸ್ವಾತಂತ್ರ್ಯ ಸುಲಭವಾಗಿ ನಮಗೆ ಸಿಕ್ಕಿಲ್ಲ. ಅದೆಷ್ಟೋ ಮಹನೀಯರ ತ್ಯಾಗ, ಬಲಿದಾನದಿಂದ ನಾವಿಂದು ಸ್ವಾತಂತ್ರ್ಯದ ಸಿಹಿಯನ್ನು ಸವಿಯುತ್ತಿದ್ದೇವೆ. ಇಂತಹ ಮಹಾನ್ ವೀರರನ್ನು ಅನುದಿನವೂ ಸ್ಮರಿಸುವುದು ನಮ್ಮ ಕರ್ತವ್ಯ. ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು

*ಭಾರತಾಂಬೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸೋಣ, ಅದಕ್ಕಾಗಿ ಜಾತಿ, ಧರ್ಮ ಮರೆತು ನಾವೆಲ್ಲರೂ ಭಾರತೀಯರು ಎಂಬ ಮನೋಭಾವನೆಯಿಂದ ಒಂದಾಗೋಣ, ತಾಯಿಯ ರಕ್ಷಣೆಗೆ ನಿಲ್ಲೋಣ.

*ಎಲ್ಲಾ ದುಷ್ಟಶಕ್ತಿಗಳನ್ನು ಶಮನ ಮಾಡಿ ನಮ್ಮ ಭಾರತಾಂಬೆಯ ರಕ್ಷಣೆ ಮಾಡುತ್ತೇವೆ ಎಂದು ಶಪಥ ಮಾಡೋಣ

* ಮಹಾನ್ ನಾಯಕರೆಲ್ಲಾ ಜನಿಸಿದ ಪುಣ್ಯಭೂಮಿಯಲ್ಲಿ ಹುಟ್ಟಿದ ನಾವೇ ಧನ್ಯ. ನಾವು ಭಾರತೀಯರೆಂಬ ಹೆಮ್ಮೆ ಮನಸ್ಸಿಗೆ ಸದಾ ಖುಷಿ ಕೊಡುತ್ತದೆ. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು

* ಈ ವಿಶೇಷ ದಿನದಂದು ನಮ್ಮತನ, ನಮ್ಮ ಪರಂಪರೆ, ನಮ್ಮ ನೆಲದ ಸಿರಿಯನ್ನು ಸಂರಕ್ಷಿಸಲು ಮತ್ತು ಉತ್ಕೃಷ್ಟಗೊಳಿಸಲು ಅನುದಿನವೂ ಶ್ರಮಿಸುತ್ತೇವೆ ಎಂದು ನಮ್ಮ ತಾಯಿನೆಲಕ್ಕೆ ಪ್ರಮಾಣ ಮಾಡೋಣ. ಎಲ್ಲರಿಗೂ 2021ರ ಗಣರಾಜ್ಯೋತ್ಸವದ ಶುಭಾಶಯಗಳು

* ನಮ್ಮ ದೇಶ ಕಟ್ಟಿದ ಕೆಚ್ಚೆದೆಯ ವೀರರು ಹಾಕಿ ಕೊಟ್ಟ ಅಪೂರ್ವ ಹಾದಿಯಲ್ಲಿ ನಾವು ಮುನ್ನಡೆಯೋಣ. ಭಾರತದ ಅಭ್ಯುದಯಕ್ಕೆ ಅನುಕ್ಷಣವೂ ಬದುಕು ಸವೆಸಿದ ಈ ನಾಯಕರನ್ನು ದಿನಾ ಸ್ಮರಿಸೋಣ. ಈ ಮೂಲಕ ನಮ್ಮ ಶ್ರೇಷ್ಠ, ಬಲಿಷ್ಠ ದೇಶವನ್ನು ಇನ್ನಷ್ಟು ಅತ್ಯುತ್ತಮವನ್ನಾಗಿ ರೂಪಿಸಲು ಶ್ರಮಿಸೋಣ. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+