Happy New Year 2025 Wishes: ಹೊಸ ವರ್ಷ 2025: 22 + ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲು ಇಲ್ಲಿವೆ!
Happy New Year 2025 Wishes: 2024 ಮುಕ್ತಾಯವಾಗಿ 2025 ಹೊಸ ವರ್ಷ ಬರ್ತಿದೆ. ಮತ್ತೆ ಹೊಸ ಸಂಭ್ರಮ, ಹೊಸ ಪ್ಲಾನ್.. ಹೊಸ ಸಂಕಲ್ಪ. 2024ರ ನೋವು - ಖುಷಿಗಳನ್ನು ಕಳೆದು 2025ರ ಇನ್ನೊಂದು ಸಂಭ್ರಮದತ್ತ ಜಗತ್ತು ಮುನ್ನುಗುತ್ತಿದೆ. ನೆನ್ನೆಯಷ್ಟೇ 2024 ಪ್ರಾರಂಭವಾದಂತಿತ್ತು. ಅಷ್ಟರಲ್ಲಿ ಒಂದು ವರ್ಷ ಕಳೆದೋಗಿದೆ. 2025 ಹಲವು ಕಾರಣಕ್ಕೆ ವಿಶೇಷವಾಗಿದೆ. 2000ನೇ ಇಸವಿ ಪ್ರಾರಂಭವಾಗಿ 25 ವರ್ಷವಾದಂತಾಗಿದೆ. 2000ನೇ ಇಸವಿಗೂ ಇದು ಯೌವನದ ಸಮಯ. ಹೊಸ ಕನಸು, ಸಂತೋಷ, ಖುಷಿ ಎಲ್ಲವೂ ಈ ಹೊಸ ವರ್ಷದಲ್ಲಿ ನಿಮ್ಮದಾಗಿರಲಿ. ಈ ಶುಭ ಸಂದರ್ಭದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಹಾಗೂ ಆತ್ಮೀಯರಿಗೆ ಹಂಚಿಕೊಳ್ಳಲು ಹೊಸ ವರ್ಷದ ಶುಭಾಶಯ ಸಂದೇಶಗಳು ಇಲ್ಲಿವೆ.
ಹೊಸ ವರ್ಷ ಎಂದರೆ ಕೇಲವ ಕ್ಯಾಲೆಂಡರ್‌ಗಳು ಮಾತ್ರ ಬದಲಾಗಲ್ಲ. ಬದುಕು ಬದಲಾಗುತ್ತೆ. ಹೊಸ ದಿನದಂದು ಹೊಸ ಕೆಲಸಗಳನ್ನು ಪ್ರಾರಂಭಿಸಿ, ಹೊಸ ಕನಸುಗಳತ್ತ ಮುನ್ನುಗ್ಗುವ ಸಮಯವಿದು. ಈ ಶುಭ ಸಂದರ್ಭದಲ್ಲಿ ಆತ್ಮೀಯರಿಗೆ ವಿಶ್ ಮಾಡದೆ ಇದ್ದರೆ ಹೇಗೆ. ಇಲ್ಲಿದೆ ಹೊಸ ವರ್ಷದ ಸಿಹಿ ಸಿಹಿ ವಿಶ್‌ಗಳು

* ಹೊಸ ವರ್ಷ 2025ರ ಶುಭಾಶಯಗಳು ಈ ಹೊಸ ವರ್ಷದಲ್ಲಿ ನಿಮ್ಮ ಕನಸುಗಳು ನನಸಾಗಲಿ. ಸಂತೋಷ ಮತ್ತು ಖುಷಿ ನಿಮ್ಮದಾಗಿರಲಿ.
* ಹೊಸ ವರ್ಷ 2025ರ ಆತ್ಮೀಯ ಶುಭಾಶಯಗಳು. ನಿಮ್ಮ ಬದುಕಿನಲ್ಲಿ ಮತ್ತೆ ಹೊಸ ಪುಟಗಳು ಪ್ರಾರಂಭವಾಗಲಿ. ಹೊಸ ವರ್ಷ ಜೀವನದ ಖಾಲಿ 365 ಪುಟಗಳು ತುಂಬಿವೆ ಎನ್ನುವುದು ನೆನಪಿರಲಿ. ಒಳ್ಳೆಯದಾಗಲಿ ಹೊಸ ಅಧ್ಯಾಯ ಪ್ರಾರಂಭಿಸಿ.
* ಹೊಸ ವರ್ಷದ ಶುಭಾಶಯಗಳು. ಈ ಹೊಸ ವರ್ಷ ನಿಮ್ಮ ಬಾಳಿನ ಸಂತೋಷದ ವರ್ಷವಾಗಿರಲಿ. ಪ್ರೀತಿ ಮತ್ತು ನಗುವಿನಿಂದ ತುಂಬಿರಲಿ.

* ಹೊಸ ವರ್ಷ ಎನ್ನುವುದೇ ಹೊಸ ಚೈತನ್ಯ. ಕಹಿಯ ಕ್ಷಣಗಳು ಕಳೆದು ನಿಮ್ಮ ಬದುಕಿನಲ್ಲಿ ಹೊಸ ಸಂತೋಷದ ಕ್ಷಣಗಳು ಮೂಡಲಿ ಎಲ್ಲರಿಗೂ 2025ರ ಹೊಸ ವರ್ಷದ ಶುಭಾಶಯಗಳು, ಖುಷಿ ನಿಮ್ಮದಾಗಲಿ.
* 2025ರ ಹೊಸ ವರ್ಷದ ಶುಭಾಶಯಗಳು! ಹೊಸ ವರ್ಷದಲ್ಲಿ ನಿಮಗೆ ಆರೋಗ್ಯ, ಸಂಪತ್ತು ಹಾಗೂ ಸಂತೋಷ ಕೊಡಲಿ ಎಂದು ಹಾರೈಸುತ್ತೇನೆ.
* ಹೊಸ ವರ್ಷ ಶುರುವಾಗುತ್ತಿದೆ. 2024ರಲ್ಲಿ ನೋವು, ಕಷ್ಟಗಳು ಹಾಗೂ ಸಂಕಷ್ಟಗಳ ಭಾರವಿದ್ದರೆ ಇಳಿಸಿಬಿಡಿ. ಹೊಸ ವರ್ಷ ಹೊಸದಾಗಿ ಪ್ರಾರಂಭಿಸಿ. 2024ರ ನೋವುಗಳಿಗೆ ಗುಡ್‌ಬಾಯ್ ಹೇಳಿ.. 2025ಕ್ಕೆ ಹಾಯ್ ಎನ್ನಿ. ಎಲ್ಲರಿಗೂ ಹೊಸ ವರ್ಷ 2025ರ ಶುಭಾಶಯಗಳು.

* ಹಳೆಯ ನೋವುಗಳು, ಕಷ್ಟಗಳು ಮರೆಯಾಗಿ ಹೊಸ ವರ್ಷದಲ್ಲಿ ನಿಮಗೆ ಒಳ್ಳೆಯದಾಗಲಿ. ಹೊಸ ಅವಕಾಶ ಹಾಗೂ ಹೊಸ ಅನುಭವ ನಿಮಗೆ ಸಿಗಲಿ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ.
* ಹೊಸ ವರ್ಷ ಬಂತು ಈ ವರ್ಷ ನಮ್ಮವರೊಂದಿಗೆ ನಮ್ಮ ಸಂತೋಷವನ್ನು ಹೆಚ್ಚಿಸುವವರೊಂದಿಗೆ ಹೆಚ್ಚು ಕಾಲ ಕಳೆಯೋಣ. ನಮ್ಮ ಸುತ್ತಮುತ್ತ ಇರುವವರ ಜೀವನ ಸುಂದರಗೊಳಿಸುವ ಹೊಸ ಭರವಸೆ, ನಂಬಿಕೆ ಹಾಗೂ ಪ್ರೀತಿಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
* 2025ರ ಎಲ್ಲಾ ದಿನಗಳು ನಗು, ಪ್ರೀತಿ ಹಾಗೂ ಹೊಸ ಅನುಭವಗಳಿಂದ ತುಂಬಿರಲಿ. ನಗು, ಪ್ರೀತಿ ಹಾಗೂ ಸಂತೋಷ ನಿಮ್ಮದಾಗಿರಲಿ. ಎಲ್ಲಾ ಆತ್ಮೀಯರಿಗೂ ಹೊಸ ವರ್ಷ 2025ರ ಶುಭಾಶಯಗಳು.
* ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಈ ಹೊಸ ವರ್ಷವು ನಿಮಗೆ ಶಾಂತಿ, ಸಂತೋಷ ಮತ್ತು ನೀವು ಇಷ್ಟಪಡುವ ಎಲ್ಲವನ್ನೂ ನಿಮಗೆ ಕೊಡಲಿ.
* 2025ರ ಹೊಸ ವರ್ಷದ ಶುಭಾಶಯಗಳು. ಹೊಸ ಆರಂಭಗಳು ನಿಮ್ಮದಾಗಲಿ ಎಂದೂ ಮುಗಿಯದ ಅವಕಾಶಗಳು, ಸಂತೋಷ ನಿಮ್ಮದಾಗಲಿ.
* ಹೊಸ ವರ್ಷದ ಶುಭಾಶಯಗಳು 2025 ಸಮೃದ್ಧವಾಗಿರಲಿ. ಹೊಸ ವರ್ಷವು ಸಂತೋಷ ಮತ್ತು ಯಶಸ್ಸಿನಿಂದ ತುಂಬಿರಲಿ ಎಂದು ಹಾರೈಸುತ್ತೇನೆ.
* ಒಳ್ಳೆಯ ನಾಳೆಗಳು ನಿಮ್ಮದಾಗಲಿ. ಭರವಸೆ ಹಾಗೂ ಉತ್ಸಾಹ ಈ ಹೊಸ ವರ್ಷದಲ್ಲಿ ತುಂಬಿರಲಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
* ಈ ಹೊಸ ವರ್ಷವು ಹೊಸ ಸಂತೋಷ ಹಾಗೂ ನೆನಪುಗಳೊಂದಿಗೆ ಆರಂಭವಾಗಲಿ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
* ಹೊಸ ವರ್ಷದ ಶುಭಾಶಯಗಳು. 2025ರಲ್ಲಿ ನಿಮ್ಮ ಕನಸುಗಳನ್ನು ನನಸಾಗಲಿ. ಧೈರ್ಯ, ಶಕ್ತಿ ಹಾಗೂ ದೃಢ ಸಂಕಲ್ಪ ಇರಲಿ ಎಂದು ಹಾರೈಸುತ್ತೇನೆ.
* ಹೊಸ ವರ್ಷದ ಶುಭಾಶಯ. ಉತ್ತಮ ಆರೋಗ್ಯ ಹಾಗೂ ಸಂಪತ್ತು ನಿಮ್ಮದಾಗಲಿ ಎಂದು ಹಾರೈಸುತ್ತೇನೆ.
* ಹೊಸ ವರ್ಷವು ನಿಮಗೆ ಸಮೃದ್ಧಿ ಹಾಗೂ ಅಪಾರ ಸಂತೋಷವನ್ನು ಕೊಡಲಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
* ನಿಮ್ಮ ಬದುಕು ಭರವಸೆಯಿಂದ ಕೂಡಿರಲಿ. ಈ ವರ್ಷ ಸಂತೋಷದಿಂದ ತುಂಬಿರಲಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
* ಈ ಹೊಸ ವರ್ಷ ಯಶಸ್ಸಿನಿಂದ ಕೂಡಿರಲಿ. ನಿಮ್ಮ ಆಸೆಗಳೆಲ್ಲ ಈಡೇರಲಿ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
* ಹೊಸ ವರ್ಷದ ಶುಭಾಶಯಗಳು. ಸವಾಲುಗಳನ್ನು ಎದುರಿಸುವ ಶಕ್ತಿ ನಿಮ್ಮದಾಗಲಿ. ಹೊಸ ಅವಕಾಶಗಳು ಸಿಗಲಿ. ಸರಿಯಾದ ಆಯ್ಕೆ ಮಾಡುವ ಬುದ್ಧಿವಂತಿಕೆ ನಿಮ್ಮದಾಗಲಿ ಎಂದು ಹಾರೈಸುತ್ತೇನೆ.
* ಸ್ನೇಹ, ನಗು ಹಾಗೂ ಹೊಸ ನೆನಪುಗಳನ್ನು ಸ್ವಾಗತಿಸೋಣ. ಈ ವರ್ಷವೂ ನಮ್ಮಿಬ್ಬರ ಸ್ನೇಹ ಇದೇ ರೀತಿ ಇರಲಿ ಹೊಸ ವರ್ಷದ ಶುಭಾಶಯಗಳು.
* ನಿಮ್ಮ ಸ್ನೇಹಕ್ಕೆ ನಾನು ಋಣಿ. ಹೊಸ ವರ್ಷದಲ್ಲಿ ನಿಮ್ಮ ಕನಸುಗಳು ನನಸಾಗಲಿ. ಯಶಸ್ಸು ನಿಮ್ಮದಾಗಿರಲಿ ಹೊಸ ವರ್ಷದ ಶುಭಾಶಯಗಳು.
* ನಿಮ್ಮ ಯಶಸ್ಸು ಇದೇ ರೀತಿ ಮುಂದುವರಿಯಲಿ. ಸ್ನೇಹಿತನಾಗಿ ನನ್ನ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದಕ್ಕೆ ಧನ್ಯವಾದ. 2025ರ ಹೊಸ ವರ್ಷದ ಶುಭಾಶಯಗಳು.
* ಈ ಹೊಸ ವರ್ಷ ನಿಮ್ಮ ಬದುಕಿನಲ್ಲಿ ಸಂತೋಷವೇ ಇರಲಿ. ಹೊಸ ಸಾಧನೆಗಳು ನಿಮ್ಮದಾಗಲಿ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
* ಕಷ್ಟದ ಸಮಯದಲ್ಲಿ ಸಹಾಯ ಮಾಡಿದ್ದಕ್ಕೆ ಧನ್ಯವಾದ. ಈ ವರ್ಷವೂ ನಿಮ್ಮ ಬೆಂಬಲ ಇರಲಿ. ನಿಮಗೆ ಹೊಸ ವರ್ಷದ ಶುಭಾಶಯಗಳು.
* ಈ ಹೊಸ ವರ್ಷದಲ್ಲಿ ನೀವು ಹೊಸ ಸಾಧನೆ ಮಾಡುವಂತಾಗಲಿ. ಹೊಸ ವರ್ಷವನ್ನು ಸಂತೋಷದಿಂದ ಸ್ವಾಗತಿಸಿ. ಹ್ಯಾಪಿ ನ್ಯೂ ಇಯರ್
* 2025 ನಿಮ್ಮ ಜೀವನದಲ್ಲಿ ಸಂತೋಷ ಹಾಗೂ ಪ್ರೀತಿಯನ್ನು ತರಲಿ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
* ಹೊಸ ವರ್ಷ ನಿಮ್ಮ ಜೀವನದಲ್ಲಿ ಸಂತೋಷದಿಂದ ಕೂಡಿರಲಿ. ನೀವು ಬಯಸಿದ್ದೆಲ್ಲ ಸಿಗುವಂತಾಗಲಿ. ಹ್ಯಾಪಿ ನ್ಯೂ ಇಯರ್.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ












Click it and Unblock the Notifications