ಮೊಸರಿನೊಂದಿಗೆ ಗುಲಾಬ್ ಜಾಮೂನ್ ಮಿಕ್ಸ್: ವಿಲಕ್ಷಣ ವಿಡಿಯೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ವಿಲಕ್ಷಣ ಆಹಾರ ತಯಾರಿಕೆ ವಿಧಾನಗಳು ಎಂದಿಗೂ ಮುಗಿಯದ ಪ್ರೇಮ ಕಥೆಯಿದ್ದಂತೆ. ಪ್ರತೀ ಬಾರಿ ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚೆಗೆ ಚಾಕೊಲೇಟ್ ದೋಸೆ, ಮ್ಯಾಂಗೋ ಮ್ಯಾಗಿ, ಐಸ್ ಕ್ರೀಂನೊಂದಿಗೆ ಪಿಜ್ಜಾವನ್ನು ತಯಾರಿಸಿದ ವಿಡಿಯೋಗಳು ವೈರಲ್ ಆಗಿದ್ದವು. ಆದರೀಗ ಇಂತಹದ್ದೇ ಒಂದು ವಿಡಿಯೋ ವೈರಲ್ ಆಗಿದೆ.
ಈ ವೈರಲ್ ವಿಡಿಯೋದಲ್ಲಿ ಮೊಸರಿನೊಂದಿಗೆ ಗುಲಾಬ್ ಜಾಮೂನ್ ಬಡಿಸುತ್ತಿರುವುದು ಕಂಡು ಬಂದಿದೆ. ಈ ವಿಚಿತ್ರ ವಿಡಿಯೋ ನೋಡುಗರನ್ನು ಕೆರಳಿಸಿದೆ. ಕೆಲವರು ಈ ವಿಡಿಯೋಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಕ್ಲಿಪ್ ನಲ್ಲಿ ಮೊಸರಿನ ಜೊತೆಗೆ ರುಚಿಕರವಾದ ಗುಲಾಬ್ ಜಾಮೂನ್ ಅನ್ನು ಮಾರಾಟ ಮಾಡುವ ಮಾರಾಟಗಾರನನ್ನು ತೋರಿಸುತ್ತದೆ. ಮಾರಾಟಗಾರರು ತಮ್ಮ ಅಂಗಡಿಯಲ್ಲಿ ಇದು ಎರಡನೇ ಅತ್ಯಂತ ಪ್ರಸಿದ್ಧ ಭಕ್ಷ್ಯವಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಒಂದು ಪ್ಲೇಟ್‌ಗೆ 50 ರೂಪಾಯಿ ಬೆಲೆ ಎಂದು ಅವರು ಹೇಳಿಕೊಂಡಿದ್ದಾರೆ. ''ನೀವು ಇದನ್ನು ತಯಾರಿಸಲು ಪ್ರಯತ್ನಿಸುತ್ತೀರಾ?" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ.
ಈ ವೀಡಿಯೊವನ್ನು ಇಲ್ಲಿಯವರೆಗೆ ಎಂಟು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು ಮಿಶ್ರ ಪ್ರತಿಕ್ರಿಯೆಗಳನ್ನು ಗಳಿಸಿದೆ.
ಕಾಮೆಂಟ್ ಹೀಗಿದೆ-
ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದು ಹೀಗೆ, "ಇದು ಈಶಾನ್ಯ ಮತ್ತು ಪಶ್ಚಿಮ ಬಂಗಾಳದಲ್ಲಿ ಬಹಳ ಸಾಮಾನ್ಯವಾದ ಸಿಹಿತಿಂಡಿಯಾಗಿದೆ. ಜನರು ಇದನ್ನು ಮದುವೆ ಅಥವಾ ಯಾವುದೇ ವಿಶೇಷ ಸಂದರ್ಭಗಳಲ್ಲಿ ಬಡಿಸುತ್ತಾರೆ"
ಇತರರು ಇದನ್ನು ತಪ್ಪು ಬೆರಸುವಿಕೆ ಎಂದು ಹೇಳಿದ್ದಾರೆ, "ಇದು ಸಂಪೂರ್ಣವಾಗಿ ತಪ್ಪು ಸಂಯೋಜನೆಯಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ.
"ನಾವು ಗುಲಾಬ್ ಜಾಮೂನ್ ಪ್ರಿಯರು. ಈ ವೀಡಿಯೋ ನಮ್ಮನ್ನು ಕೊಂದಂತೆ ಭಾಸವಾಗುತ್ತಿದೆ" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
"ಫುಡ್ ವ್ಲಾಗರ್‌ಗಳಿಂದ ಬೀದಿ ಆಹಾರ ಉದ್ಯಮವು ನಾಶವಾಗಿದೆ ಮತ್ತು ಅವರ ಕಾರಣದಿಂದಾಗಿ ಈ ರೆಸ್ಟೋರೆಂಟ್ ಮಾಲೀಕರು ಜನಪ್ರಿಯವಾಗಲು ಹೊಸ ಆಹಾರ ಸಂಯೋಜನೆಗಳನ್ನು ರಚಿಸುತ್ತಿದ್ದಾರೆ" ಎಂದು ಒಬ್ಬ ವ್ಯಕ್ತಿ ಹೇಳಿಕೊಂಡಿದ್ದಾನೆ.
"ಇದುವರೆಗೆ ಮಾಡಿದ ಕೆಟ್ಟ ಸಂಯೋಜನೆಯಲ್ಲಿ ಇದು ಒಂದಾಗಿದೆ" ಎಂದು ಒಬ್ಬ ಬಳಕೆದಾರರು ಇದನ್ನು ವಿವರಿಸಿದ್ದಾರೆ.
ಹಿಂದಿನ ವಿಲಕ್ಷಣ ಸಂಯೋಜನೆಗಳು ಇಲ್ಲಿದೆ-
ಗುಲಾಬ್ ಜಾಮೂನ್‌ಗಳನ್ನು ಬಳಸಿ ಯಾರಾದರೂ ಹೊಸ ಖಾದ್ಯವನ್ನು ರೂಪಿಸುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಗುಲಾಬ್ ಜಾಮೂನ್ ಅನ್ನು ಚಾಟ್‌ನೊಂದಿಗೆ ಸಂಯೋಜಿಸಿದಾಗ ಸಿಹಿ ಪ್ರಿಯರು ಮನನೊಂದಿದ್ದರು.
ಪ್ರಯೋಗವನ್ನು ಪ್ರದರ್ಶಿಸುವ ವೀಡಿಯೊ ಕ್ಲಿಪ್ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿತ್ತು ಮತ್ತು ಈ ವಿಲಕ್ಷಣ ಸಂಯೋಜನೆಯ ಅಗತ್ಯವಿದೆಯೇ ಎಂದು ಕೇಳುವ ಮೂಲಕ ಜನರು ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.












Click it and Unblock the Notifications