ಗುಜರಾತ್ ಉಪ ಚುನಾವಣೆ ಸಮೀಕ್ಷೆ: ಬಿಜೆಪಿಗೆ ಗೆಲುವಿನ ಸಿಹಿ

ಅಹಮದಾಬಾದ್, ನ. 7: ಕೊರೊನಾವೈರಸ್ ಕಾಟದ ನಡುವೆ ಗುಜರಾತಿನ 8 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3ರಂದು ಚುನಾವಣೆ ನಡೆಸಲಾಯಿತು. ನವೆಂಬರ್ 10ರಂದು ಫಲಿತಾಂಶ ಹೊರಬರಲಿದೆ. ಚುನಾವಣಾ ಆಯೋಗದ ನಿಯಮದಂತೆ ಸಂಜೆ 6 ಗಂಟೆ ನಂತರ ಚುನಾವಣೋತ್ತರ ಸಮೀಕ್ಷೆಗಳು ಬರಲಾರಂಭಿಸಿವೆ ಇಂಡಿಯಾ ಟುಡೇ ಹಾಗೂ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ವರದಿ ಇಲ್ಲಿದೆ...

ಅಕ್ಟೋಬರ್ 28 ರ ಬುಧವಾರ ಸಂಜೆ 6.30 ರಿಂದ ನವೆಂಬರ್ 7ರ ತನಕ ಗುಜರಾತ್ ಉಪ ಚುನಾವಣೆ, ಬಿಹಾರದ ವಿಧಾನಸಭೆ ಚುನಾವಣೆ, ಲೋಕಸಭೆ ಉಪ ಚುನಾವಣೆಗೆ ಸಂಬಂಧಿಸಿದಂತೆ ವೆಬ್ ತಾಣ, ಎಲೆಕ್ಟ್ರಾನಿಕ್ ಮಾಧ್ಯಮಗಳು ಎಕ್ಸಿಟ್ ಪೋಲ್ ಪ್ರಸಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು.

Gujarat Bypoll Exit Poll Results 2020: India Today-Axis My India

ಇಂಡಿಯಾ ಟುಡೇ ಹಾಗೂ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ವರದಿ : ಗುಜರಾತ್ (8 ಸ್ಥಾನ)
ಬಿಜೆಪಿ: 6 ರಿಂದ 7ಸ್ಥಾನ, ಶೇ 49ರಷ್ಟು ಮತ ಗಳಿಕೆ
ಕಾಂಗ್ರೆಸ್: 1 ರಿಂದ 0, ಶೇ 40ರಷ್ಟು ಮತ ಗಳಿಕೆ
ಇತರೆ: 11% ಮತ ಗಳಿಕೆ

ಇಂಡಿಯಾ ಟುಡೇ ಹಾಗೂ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ವರದಿ : ಉತ್ತರ ಪ್ರದೇಶ (7 ಸ್ಥಾನ)
ಬಿಜೆಪಿ: 5 ರಿಂದ 6ಸ್ಥಾನ, ಶೇ 49ರಷ್ಟು ಮತ ಗಳಿಕೆ
ಎಸ್ಪಿ: 1 ರಿಂದ 2, ಶೇ 40ರಷ್ಟು ಮತ ಗಳಿಕೆ
ಕಾಂಗ್ರೆಸ್: 0

182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ 103ಸ್ಥಾನ ಹೊಂದಿದ್ದು, ಕಾಂಗ್ರೆಸ್ 65ಸ್ಥಾನ ಹೊಂದಿದ್ದು, ಇಬ್ಬರು ಭಾರತೀಯ ಬುಡಕಟ್ಟು ಪಕ್ಷ , ಒಬ್ಬರು ಎನ್ ಸಿಪಿ, ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ದ್ವಾರಕಾ ಹಾಗೂ ಮೋರ್ವಾ ಹದಾಫ್ ಕ್ಷೇತ್ರಕ್ಕೆ ಚುನಾವಣೆ ಇನ್ನೂ ನಡೆಯಬೇಕಿದೆ.

Recommended Video

      Muniratna vs Kusuma : RR Nagar ಕಣದಲ್ಲಿ ಗೆಲ್ಲೋದು ಯಾರು, ಎರಡೂ ಪಕ್ಷಗಳ ಜಿದ್ದಾಜಿದ್ದಿ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+