ಯಾವುದೇ ಖರ್ಚಿಲ್ಲದೆ, 130 ಕಿಲೋ ಮೀಟರ್ ಓಡುವ ಹೊಸ ಬೈಕ್ ಬಿಡುಗಡೆ: ದರ, ವಿಶೇಷತೆ ತಿಳಿಯಿರಿ
GT Texa Electric Motorcycle: ಆಟೋಮೊಬೈಲ್ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಬದಲಾವಣೆಗಳೇ ಆಗುತ್ತಿವೆ. ಅದರಲ್ಲೂ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಬಂದಾಗಿನಿಂದ ಭಾರೀ ಪೈಪೋಟಿ ಏರ್ಪಟ್ಟಿದ್ದು, ಎಲ್ಲಾ ಕಂಪನಿಗಳು ಕೈಗೆಟಕುವ ದರದಲ್ಲಿ ಉತ್ತಮ ಸೌಲಭ್ಯಗಳನ್ನೊಳಗೊಂಡ ವಾಹನಗಳನ್ನು ಪರಿಚಯಿಸುತ್ತಲಿವೆ. ಹಾಗೆಯೇ ಇದೀಗ ಜಿಟಿ ಫೋರ್ಸ್ ತನ್ನ ಬಹುನಿರೀಕ್ಷಿತ ಎಲೆಕ್ಟ್ರಿಕ್ ಬೈಕ್ ಅನ್ನು ಪರಿಚಯಿಸಿದೆ. ಹಾಗಾದರೆ ಇದರ ವಿಶೇಷತೆ ಹಾಗೂ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಜಿಟಿ ಫೋರ್ಸ್ ತನ್ನ ಬಹುನಿರೀಕ್ಷಿತ ಎಲೆಕ್ಟ್ರಿಕ್ ಬೈಕ್ ಜಿಟಿ ಟೆಕ್ಸಾವನ್ನು ಪರಿಚಯಿಸಿದ್ದು, ಇದರ ಎಕ್ಸ್ ಶೋ ರೂಂ ದರ 1,19,555 ರೂಪಾಯಿ ಆಗಿದೆ. ನಗರ ಭಾಗದ ಜನರ ಅಭಿರುಚಿಗೆ ತಕ್ಕೆಂತೆ ಈ ಬೈಕ್ ಅನ್ನು ತಯಾರು ಮಾಡಲಾಗಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಜಿಟಿ ಟೆಕ್ಸಾ ಹೆಚ್ಚು ಇನ್ಸುಲೇಟೆಡ್ BLDC ಮೋಟಾರ್ ಹೊಂದಿದ್ದು, 80KM ಗರಿಷ್ಟ ವೇಗ ತಲುಪಬಲ್ಲ ಸಾಮರ್ಥ್ಯದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ, ಉತ್ತಮ ಪರ್ಫಾಮೆನ್ಸ್ ನೀಡಲಿದೆ ಎಂದು ತಿಳಿಸಿದೆ. ಹೊಸ ಜಿಟಿ ಟೆಕ್ಸಾ ಬೈಕ್‌ನಲ್ಲಿ 3.5 kWh Lithium-Ion ಬ್ಯಾಟರಿಯನ್ನು ಅಳವಡಿಕೆ ಮಾಡಲಾಗಿದ್ದು, ಇದನ್ನು ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ 120-130 ಕಿಲೋ ಮೀಟರ್‌ವರೆಗೂ ಮೈಲೇಜ್ ನೀಡಲಿದೆ. ಇದಕ್ಕೆ ಅಳವಡಿಸಲಾಗಿರುವ ಆಧುನಿಕ ಮೈಕ್ರೋ-ಚಾರ್ಜರ್‌ನೊಂದಿಗೆ ಬೈಕ್‌ಅನ್ನು ಕೇವಲ 4-5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.
ಇನ್ನು ಈ ಜಿಟಿ ಟೆಕ್ಸಾ ಬೈಕ್ ಕರಿ ಮತ್ತು ಕೆಂಪು ಎರಡು ಬಣ್ಣಗಳಲ್ಲಿ ಲಭ್ಯವಿದೆ. GT ಟೆಕ್ಸಾ ಬೈಕ್ 180KG ಲೋಡ್ ಸಾಮರ್ಥ್ಯ ಮತ್ತು 18 ಡಿಗ್ರಿಗಳ ಗ್ರೇಡಬಿಲಿಟಿಯೊಂದಿಗೆ ನಗರ ಪ್ರದೇಶಗಳಲ್ಲಿ ಸುಲಭವಾಗಿ ರೈಡ್ ಮಾಡಬಹುದಾಗಿದೆ. ಇದು ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದ್ದು, ಮುಂಭಾಗದ ಟೈರ್ ಗಾತ್ರ 80-100/18 ಮತ್ತು ಹಿಂಭಾಗದ ಟೈರ್ ಗಾತ್ರ 120-80/17 ಆಗಿದೆ. ಈ ಟೈರ್‌ಗಳಿಗೆ ಅನುಗುಣವಾಗಿ ಮುಂಭಾಗದಲ್ಲಿ 457.2MM ಮತ್ತು ಹಿಂಭಾಗದಲ್ಲಿ 431.8MM ಅಳತೆಯ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ.
ಜೊತೆಗೆ ಎರಡೂ ವೀಲ್‌ಗಳಲ್ಲಿ ಡಿಸ್ಕ್ ಬ್ರೇಕ್ ನೀಡಿದ್ದು, ಉತ್ತಮ ಬ್ರೇಕಿಂಗ್‌ಗಾಗಿ E-ABS ಅಳವಡಿಕೆ ಮಾಡಲಾಗಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಟೆಲಿಸ್ಕೋಪಿಕ್ ಡ್ಯುಯಲ್ ಸಸ್ಪೆನ್ಶನ್ ನೀಡಲಾಗಿದ್ದು, ಅತ್ಯಂತ ಕಳಪೆ ರಸ್ತೆಗಳಲ್ಲೂ ಕೂಡ ನೀವು ಆರಾಮದಾಯಕ ಸವಾರಿ ಮಾಡಬಹುದಾಗಿದೆ ಎಂದು ತಿಳಿಸಿದೆ.
ಸವಾರರು ರಿಮೋಟ್ ಸ್ಟಾರ್ಟ್ ಅಥವಾ ಕೀಲಿಯನ್ನು ಬಳಸಿಕೊಂಡು ಬೈಕ್ ರೈಡ್ ಆರಂಭಿಸಬಹುದು. ಇದರಲ್ಲಿನ 17.78 CM LED ಡಿಸ್ಪ್ಲೇ ಅನುಕೂಲಕರ ಮಾಹಿತಿ ಒದಗಿಸುತ್ತದೆ. ಡಿಜಿಟಲ್ ಸ್ಪೀಡೋಮೀಟರ್, ಸೆಂಟ್ರಲ್ ಲಾಕಿಂಗ್ ಸಿಸ್ಟಮ್, LED ಹೆಡ್ಲೈಟ್, ಟೈಲ್‌ಲೈಟ್ & ಟರ್ನ್ ಸಿಗ್ನಲ್ ಲ್ಯಾಂಪ್‌ಗಳನ್ನು ಫ್ಯೂಚರಿಸ್ಟಿಕ್ ಆಗಿ ಅಳವಡಿಕೆ ಮಾಡಲಾಗಿದೆ.
770MM ಸ್ಯಾಡಲ್ ಎತ್ತರ ಮತ್ತು 145MM ಗ್ರೌಂಡ್ ಕ್ಲಿಯರೆನ್ಸ್, 120 ಕೆ.ಜಿ. ಹಗುರವಾದ ಕರ್ಬ್ ತೂಕದಿಂದ ಸವಾರರು ಸುಲಭವಾಗಿ ಬೈಕ್ ನಿಯಂತ್ರಿಸಬಹುದಾಗಿದೆ. ಕಂಪನಿಯು ಕೇವಲ ಈ ಒಂದು ಬೈಕ್ ಮಾತ್ರವಲ್ಲದೆ, 55,555-84,555 ರೂಪಾಯಿ ಎಕ್ಸ್ ಶೋ ರೂಂ ಬೆಲೆಯಲ್ಲಿ ಕೈಗೆಟುಕುವ ದ್ವಿಚಕ್ರ ವಾಹನಗಳನ್ನು ಕೂಡ ನೀಡುತ್ತಿದೆ.
GT ವೇಗಾಸ್, GT Ryd Plus, GT One Plus Pro ಮತ್ತು GT ಡ್ರೈವ್ ಪ್ರೊ ಸೇರಿದಂತೆ GTಯ ಇತ್ತೀಚಿನ ಶ್ರೇಣಿಯ ಹೆಚ್ಚಿನ ಮತ್ತು ಕಡಿಮೆ-ವೇಗದ EV ದ್ವಿಚಕ್ರ ವಾಹನಗಳನ್ನು ಈಗಾಗಲೇ ಮಾರಾಟ ಮಾಡುತ್ತಿದೆ. ತನ್ನ ಪರಿಸರಸ್ನೇಹಿ ವಾಹನಗಳನ್ನು ಹೆಚ್ಚಿಸಲು 2024ರ ಅಂತ್ಯದ ವೇಳೆಗೆ ಒಟ್ಟು 100 ಡೀಲರ್‌ಶಿಪ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸಿಕೊಂಡಿರುವುದಾಗಿ ಕಂಪನಿ ತಿಳಿಸಿದೆ.












Click it and Unblock the Notifications