ಗ್ರಾಮ ಪಂಚಾಯಿತಿ ಚುನಾವಣೆ; ಪ್ರಚಾರಕ್ಕೆ ಮಾರ್ಗಸೂಚಿ

ಬೆಂಗಳೂರು, ಡಿಸೆಂಬರ್ 09: ಕೋವಿಡ್ ಸಂದರ್ಭದಲ್ಲಿಯೇ ಕರ್ನಾಟಕದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಎದುರಾಗಿದೆ. ರಾಜ್ಯದಲ್ಲಿ ಡಿಸೆಂಬರ್ 22 ಮತ್ತು 27ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 30ರಂದು ಫಲಿತಾಂಶ ಪ್ರಕಟವಾಗಲಿದೆ.

ಗ್ರಾಮ ಪಂಚಾಯತಿ ಚುನಾವಣೆ ಪಕ್ಷ ರಹಿತ ಚುನಾವಣೆಯಾಗಿದೆ. ಕ್ಷೇತ್ರದ ವ್ಯಾಪ್ತಿ ಚಿಕ್ಕದಿರುವುದರಿಂದ ಅಭ್ಯರ್ಥಿಗಳ ಪ್ರಚಾರವು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಗರಿಷ್ಟ 5 ಜನ ಬೆಂಬಲಿಗರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡಬಹುದು.

ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಕಡ್ಡಾಯವಾಗಿ ಫೇಸ್‍ ಮಾಸ್ಕ್ ಧರಿಸಿರಬೇಕು. ಎಲೆಕ್ಟ್ರಾನಿಕ್ ಮೀಡಿಯಾಗಳ ಮೂಲಕ ಆದಷ್ಟು ಪ್ರಚಾರ ಮಾಡಬಹುದು. ಅಭ್ಯರ್ಥಿಗಳು ಪ್ರಚಾರಕ್ಕಾಗಿ ನಿಯಮಾನುಸಾರ ಮುದ್ರಿಸಿದ ಕರಪತ್ರಗಳನ್ನು ಕಡ್ಡಾಯವಾಗಿ ಫೇಸ್‍ ಮಾಸ್ಕ್‌, ಹ್ಯಾಂಡ್‍ ಗ್ಲೌಸ್ ಧರಿಸಿ ಹಂಚಬೇಕು. ಹ್ಯಾಂಡ್ ಸ್ಯಾನಿಟೈಸರ್ ಉಪಯೋಗಿಸಬೇಕು.

ಕೋವಿಡ್ ಹಿನ್ನೆಲೆಯಲ್ಲಿ ಗುಂಪು ಗುಂಪಾಗಿ ಪ್ರಚಾರ ಮಾಡುಬಾರದು. ಕೋವಿಡ್ ಪಾಸಿಟಿವ್ ಇರುವ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಪ್ರಚಾರ ಮಾಡಬಹುದು. ಅವರು ಖುದ್ದಾಗಿ ಸಾಮಾನ್ಯ ಜನರೊಂದಿಗೆ ಅಥವಾ ಸಮುದಾಯದಲ್ಲಿ ಪ್ರಚಾರ ಮಾಡಲು ಅವಕಾಶವಿಲ್ಲ. ಪ್ರಚಾರಕ್ಕಾಗಿ ಸಭೆ ಅಥವಾ ಸಮಾರಂಭವನ್ನು ಕ್ಷೇತ್ರಗಳಲ್ಲಿ ಆಯೋಜನೆ ಮಾಡುವಾಗ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು.

ಆಯೋಗದ ಸೂಚನೆ ಪಾಲಿಸಿ

ಆಯೋಗದ ಸೂಚನೆ ಪಾಲಿಸಿ

ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳು ಚುನಾವಣಾ ಆಯೋಗ ಹೊರಡಿಸಿರುವ ಸಂಹಿತೆಗಳನ್ನು ಕಟ್ಟುನಿಟ್ಟಾಗಿ ಮತ್ತು ಕಡ್ಡಾಯವಾಗಿ ಪಾಲಿಸಬೇಕು. ಪ್ರಚಾರದ ವೇಳೆ ಮತೀಯ ಮತ್ತು ಭಾಷೆಯ ವಿಷಯದಲ್ಲಿ ವೈಮನಸ್ಸು ಮೂಡಿಸುವ, ದ್ವೇಷ ಹಬ್ಬಿಸುವ ಅಥವಾ ಉದ್ವೇಗಕ್ಕೆ ಕಾರಣವಾಗುವ ಅಂಶಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಬಾರದು. ಜಾತಿ-ಮತ, ಕೋಮು ಆಧಾರದಲ್ಲಿ ಮತಯಾಚನೆ ಮಾಡಬಾರದು, ಧಾರ್ಮಿಕ ಕೇಂದ್ರಗಳಾದ ದೇವಾಲಯ, ಮಸೀದಿ, ಚರ್ಚ್ ಅಥವಾ ಇನ್ನಿತರೆ ಯಾವುದೇ ಪೂಜಾ, ಪ್ರಾರ್ಥನಾ ಸ್ಥಳಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಬಾರದು.

ಬೆದರಿಕೆ ಹಾಕುವಂತಿಲ್ಲ, ಆಮಿಷ ವೊಡ್ಡುವಂತಿಲ್ಲ

ಬೆದರಿಕೆ ಹಾಕುವಂತಿಲ್ಲ, ಆಮಿಷ ವೊಡ್ಡುವಂತಿಲ್ಲ

ಚುನಾವಣೆ ಪ್ರಚಾರಕ್ಕೆ ಯಾವುದೇ ಧಾರ್ಮಿಕ, ಸಾಮಾಜಿಕ, ವ್ಯಕ್ತಿಗಳ, ರಾಷ್ಟ್ರೀಯ ನಾಯಕರ ಭಾವಚಿತ್ರಗಳು, ಧಾರ್ಮಿಕ, ಸಾಮಾಜಿಕ ಸಂಸ್ಥೆಗಳ ಹೆಸರು ಮತ್ತು ಚಿಹ್ನೆಗಳನ್ನು ಬಳಸುವಂತಿಲ್ಲ. ಭ್ರಷ್ಟಾಚಾರಕ್ಕೆ ಪ್ರಚೋದನೆ ನೀಡುವುದು, ಲಂಚ ನೀಡುವುದು, ಬೇರೆ-ಬೇರೆ ಆಮಿಷಗಳನ್ನೊಡ್ಡವುದು ಅಥವಾ ಬೆದರಿಕೆ ಹಾಕುವ ಮೂಲಕ ಮತಯಾಚನೆ ಮಾಡಬಾರದು. ಖಾಸಗಿ ಆಸ್ತಿಗಳು, ಕಟ್ಟಡಗಳ ಮೇಲೆ ಸಂಬಂಧ ಪಟ್ಟವರಿಂದ ಲಿಖಿತ ಅನುಮತಿ ಪಡೆಯದೆ ಚುನಾವಣಾ ಪ್ರಚಾರ ಸಾಮಾಗ್ರಿಗಳನ್ನು ಅಂಟಿಸಬಾರದು. ಸರ್ಕಾರಿ, ಸಾರ್ವಜನಿಕ ಸ್ಥಳಗಳಿಗೂ ಇದು ಅನ್ವಯವಾಗಲಿದೆ.

ಪ್ರಚಾರಕ್ಕೆ ಅಡ್ಡಿ ಮಾಡಬಾರದು

ಪ್ರಚಾರಕ್ಕೆ ಅಡ್ಡಿ ಮಾಡಬಾರದು

ಬೇರೆ ಅಭ್ಯರ್ಥಿಗಳ ಪ್ರಚಾರಕ್ಕೆ ಅಡ್ಡಿಪಡಿಸಬಾರದು. ಬೇರೆ ಅಭ್ಯರ್ಥಿಗಳ ಖಾಸಗಿ ನಡತೆ ಮುಂದಿಟ್ಟುಕೊಂಡು ಪ್ರಚಾರ ಮಾಡುವಂತಿಲ್ಲ. ಪ್ರಚಾರ ಸಭೆ, ಸಮಾರಂಭ ಆಯೋಜನೆ ಮಾಡಬೇಕಾದರೆ ಸ್ಥಳೀಯ ಪೊಲೀಸರಿಂದ ಅನುಮತಿ ಪಡೆಯಬೇಕು, ಧ್ವನಿವರ್ಧಕಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಬೆಳಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬಳಸಬಹುದು. ಚುನಾವಣಾ ಕರ್ತವ್ಯ ನಿರತ ಅಧಿಕಾರಿ ಸಿಬ್ಬಂದಿಗೆ ಅಡ್ಡಿಪಡಿಸಬಾರದು, ಮುಕ್ತ ಹಾಗೂ ಶಾಂತಿಯುತವಾಗಿ ಚುನಾವಣೆ ನಡೆಸಲು ಚುನಾವಣಾ ಅಧಿಕಾರಿಗಳಿಗೆ ಎಲ್ಲಾ ಅಭ್ಯರ್ಥಿಗಳು ಎಲ್ಲಾ ರೀತಿಯ ಸಹಕಾರ ನೀಡಬೇಕು. ಪ್ರಚಾರಕ್ಕೆ ಬಳಸುವ ಪೋಸ್ಟರ್, ಹ್ಯಾಂಡ್‍ಬಿಲ್ ಮತ್ತಿತರ ಪ್ರಚಾರ ಸಾಮಗ್ರಿಗಳಲ್ಲಿ ಮುದ್ರಕರು, ಪ್ರಕಾಶಕರ ಹೆಸರು, ವಿಳಾಸವನ್ನು ಮತ್ತು ಪ್ರಚಾರ ಸಾಮಗ್ರಿಯ ಸಂಖ್ಯೆಯನ್ನು ಕಡ್ಡಾಯವಾಗಿ ಮುದ್ರಿಸಬೇಕು.

ವೈರತ್ವವನ್ನು ಉತ್ತೇಜಿಸಿದರೆ ಶಿಕ್ಷೆ

ವೈರತ್ವವನ್ನು ಉತ್ತೇಜಿಸಿದರೆ ಶಿಕ್ಷೆ

ಚುನಾವಣೆಯ ಸಂಬಂಧದಲ್ಲಿ ಯಾವದೇ ವ್ಯಕ್ತಿಯು ಧರ್ಮ, ಜನಾಂಗ, ಜಾತಿ, ಸಮುದಾಯ ಅಥವಾ ಭಾಷೆಯ ಆಧಾರದ ಮೇಲೆ ಭಾರತದ ನಾಗರೀಕರ ವಿಭಿನ್ನ ವರ್ಗಗಳ ನಡುವೆ ವೈರತ್ವದ ಅಥವಾ ದ್ವೇಷದ ಭಾವನೆಗಳನ್ನು ಉತ್ತೇಜಿಸಿದರೆ ಅಥವಾ ಉತ್ತೇಜಿಸಲು ಪ್ರಯತ್ನಿಸಿದರೆ ಅಪರಾಧ ಸಾಬಿತಾದರೆ 3 ವರ್ಷಗಳಿಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ, ದಂಡ ಕಟ್ಟಬೇಕು.

ಚುನಾವಣಾ ದಿವಸದ ಹಿಂದಿನ ದಿವಸದಂದು ಮತ್ತು ಚುನಾನಣಾ ದಿವಸದಂದು ಸಾರ್ವಜನಿಕ ಸಭೆಗಳಿಗೆ ನಿಷೇಧವಿದೆ. ಮತದಾನ ಪ್ರಾರಂಭವಾಗುವ ದಿನಾಂಕಕ್ಕೆ ಮುಂಚೆ 48 ಗಂಟೆಗಳೊಳಗೆ ಅಥವಾ ಆ ಮತದಾನ ಕ್ಷೇತ್ರದಲ್ಲಿ ಚುನಾವಣೆಗಾಗಿ ಮತದಾನ ನಡೆಯುವಂಥ ದಿನಾಂಕದಂದು ಯಾವುದೇ ಸಾರ್ವಜನಿಕ ಸಭೆಯನ್ನು ಆಯೋಜಿಸುವಂತಿಲ್ಲ ಮತ್ತು ಹಾಜರಾಗುವಂತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+