Tesla Car: ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಬಂಗಾರದ ಟೆಸ್ಲಾ ಕಾರು, ವಿಶೇಷತೆ, ದರಗಳ ಮಾಹಿತಿ ತಿಳಿಯಿರಿ
Tesla Car: ಎಲಾನ್ ಮಸ್ಕ್ ನೇತೃತ್ವದ ಅಮೇರಿಕಾ ಮೂಲದ ಟೆಸ್ಲಾ ಇವಿ ಕಾರು ಇದೀಗ ಭಾರೀ ಸದ್ದು ಮಾಡುತ್ತಿದ್ದು, ಇದರ ತಯಾರಕ ಘಟಕವನ್ನು ಭಾರತದಲ್ಲಿಯೂ ಸ್ಥಾಪಿಸುವುದಾಗಿಯೂ ಹೇಳಲಾಗಿತ್ತು. ಇನ್ನು ಇತ್ತೀಚೆಗಷ್ಟೇ ಕೆಂಪು ಬಣ್ಣದ ಟೆಸ್ಲಾ ಕಾರು ಬೆಂಗಳೂರು ರಸ್ತೆ ಹಾಗೂ ಮೈಸೂರು ಚಾಮುಂಡಿ ಬೆಟ್ಟದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿತ್ತು. ಇದರಲ್ಲಿಯೂ 5 ಮಾದರಿಯ ಕಾರುಗಳನ್ನು ಕಾಣಬಹುದಾಗಿದ್ದು, ಈ ಐದರಲ್ಲಿ ಒಂದಕ್ಕೆ ಮಾತ್ರ ಬಂಗಾರ ಲೇಪನ ಮಾಡಲಾಗಿದೆ. ಹಾಗಾದರೆ ಆ ಕಾರು ಯಾವುದು ಹಾಗೂ ವಿಶೇಷತೆಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಟೆಸ್ಲಾ ಕಾರಿನಲ್ಲಿ ಐದು ಮಾದರಿಯ ಕಾರುಗಳಿದ್ದು, ಅವುಗಳು ಟೆಸ್ಲಾ ಎಸ್, ಟೆಸ್ಲಾ ಮಾದರಿ 3, ಟೆಸ್ಲಾ ಎಕ್ಸ್, ಟೆಸ್ಲಾ ವೈ, ಟೆಸ್ಲಾ ಸೈಬರ್ ಟ್ರಕ್ ಎನ್ನುವ ಮಾದರಿಗಳಾಗಿವೆ. ಈ ಪೈಕಿ ಟೆಸ್ಲಾ ಸೈಬರ್ ಟ್ರಕ್ ಮಾದರಿಯ ಕಾರು ಒಂದು ಬಣ್ಣದಲ್ಲಿ ಮಾತ್ರ ಲಭ್ಯವಿದ್ದು, ಅದು ಬ್ರೌನ್ ಕಲರ್ ಆಗಿದೆ. ಇನ್ನುಳಿದ ಮಾದರಿಯ ಕಾರುಗಳು ಕೆಂಪು, ನೀಲಿ ಬಣ್ಣಗಳಲ್ಲಿ ಲಭ್ಯವಿದೆ.

ವಿಶೇಷ ಅಂದರೆ, ಇದೀಗ ಸೈಬರ್ ಟ್ರಕ್ ಕೂಡ ಎರಡು ಕಲರ್‌ಗಳಲ್ಲಿ ಮಾರುಕಟ್ಟೆಗೆ ಬರಲಿದೆ ಎನ್ನುವ ಲಭ್ಯವಾಗಿದೆ. ಮತ್ತೊಂದು ಮಾದರಿಯ ಸೈಬರ್ ಟ್ರಕ್ ಕಾರು 24ಕೆ ಗೊಲ್ಡ್ ಕಲರ್‌ನಲ್ಲಿ ಬರಲಿದ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದು ಏನೆಲ್ಲ ವಿಶೇಷತೆಗಳನ್ನು ಒಳಗೊಂಡಿರುತ್ತದೆ ಹಾಗೂ ದರಗಳ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಅಪರೂಪಕ್ಕೆ ಕೆಂಪು ಬಣ್ಣದ ಟೆಸ್ಲಾ ಕಾರು ಇತ್ತೀಚೆಗಷ್ಟೇ ಕರ್ನಾಟಕದ ರಾಜಧಾನಿ ಬೆಂಗಳೂರಿಲ್ಲಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಂಡುಬಂದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಅಷ್ಟೇ ಅಲ್ಲದೆ, ಟೂರುಸ್ಟ್‌ವೊಬ್ಬರು ಇದೇ ಕಲರ್‌ನ ಕಾರಿನಲ್ಲಿ ಟ್ರಾವೆಲ್ ಮಾಡಿಕೊಂಡು ಮೈಸೂರಿನತ್ತ ತೆರಳುತ್ತಿರುವ ವಿಡಿಯೋವನ್ನು ಈ ಕಾರಿನ ಹಿಂದಿದ್ದ ಪ್ರಯಾಣಿಕರು ಮಾಡಿದ್ದರು.
ಕೊನೆಗೆ ಮೈಸೂರು ಚಾಮುಂಡಿ ಬೆಟ್ಟ ಮುಟ್ಟಿದ ತಕ್ಷಣ ಈ ಕಾರಿನ ಮಾಲೀಕ ಇದರ ವಿಶೇಷತೆಗಳೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಕೂಡ ಅಲ್ಲಿದ್ದ ಪ್ರವಾಸಿಗರೊಂದಿಗೆ ಹಂಚಿಕೊಂಡು ಗಮನ ಸೆಳೆದಿದ್ದರು.
ಟೆಸ್ಲಾದ ವಿವಿಧ ಮಾದರಿಯ ಕಾರುಗಳಿವು
1. Tesla cyber truck
2. Tesla Model S
3. Tesla Model 3
4. Tesla Model X
5. Tesla Model Y












Click it and Unblock the Notifications