ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ: ಭಾರತಕ್ಕೆ ಎಷ್ಟನೇ ಸ್ಥಾನ?

ನವದೆಹಲಿ, ಜನವರಿ 26: ಜಗತ್ತಿನಾದ್ಯಂತ ಭ್ರಷ್ಟಾಚಾರದ ಮಟ್ಟವನ್ನು ಮೌಲ್ಯಮಾಪನ ಮಾಡುವ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ವರದಿಯು ನಿನ್ನೆ, ಜನವರಿ 25 ರಂದು ಬಿಡುಗಡೆಯಾಗಿದೆ. 2021 ರ ಜಾಗತಿಕ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಉಲ್ಲೇಖಿಸಲಾದ ಒಟ್ಟು 180 ದೇಶಗಳಲ್ಲಿ ಭಾರತವು 85 ನೇ ಸ್ಥಾನದಲ್ಲಿದೆ.

ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತ 85 ನೇ ಸ್ಥಾನದಲ್ಲಿದ್ದರೆ, ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮತ್ತಷ್ಟು ಕೆಳಕ್ಕೆ ಜಾರಿದೆ. ಪಾಕಿಸ್ತಾನವು ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ 140 ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶವು 147 ನೇ ಸ್ಥಾನದಲ್ಲಿದೆ. ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (ಸಿಪಿಐ) 26 ಆಗಿದೆ.

2020 ರ ಸಿಪಿಐ ಅಂದರೆ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ ವರದಿಗೆ ಹೋಲಿಸಿದರೆ, 2021 ರಲ್ಲಿ ಪಾಕಿಸ್ತಾನವು 16 ಸ್ಥಾನಗಳು ಕೆಳಕ್ಕೆ ಇಳಿದಿದೆ. ಕೊರೊನಾ ವೈರಸ್‌ ಸಾಂಕ್ರಾಮಿಕ ಸಂದರ್ಭದಲ್ಲಿ ಪಾಕಿಸ್ತಾನ ದೇಶದಲ್ಲಿ ಭ್ರಷ್ಟಾಚಾರದ ಮಟ್ಟವು ತೀವ್ರವಾಗಿ ಹದಗೆಟ್ಟಿದೆ ಎಂಬುವುದನ್ನು ಈ ಜಾಗತಿಕ ಭ್ರಷ್ಟಾಚಾರ ಸೂಚ್ಯಂಕವು ಸ್ಪಷ್ಟಪಡಿಸಿದೆ. ಇನ್ನು ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (ಸಿಪಿಐ) ದ ಬಗ್ಗೆ ಅಧಿಕ ಮಾಹಿತಿಗಾಗಿ ಮುಂದೆ ಓದಿ..

 ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ: ದುರ್ಬಲ ಸ್ಥಾನದಲ್ಲಿ ಭಾರತ

ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ: ದುರ್ಬಲ ಸ್ಥಾನದಲ್ಲಿ ಭಾರತ

ಇನ್ನು ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ದುರ್ಬಲ ಸ್ಥಾನದಲ್ಲಿ ಪ್ರಪಂಚದ ಕೆಲವು ಅಧಿಕ ಜನಸಂಖ್ಯೆಯನ್ನು ಹೊಂದಿರುವ ದೇಶಗಳು ಇದೆ. ಚೀನಾ 45 ನೇ ಸ್ಥಾನದಲ್ಲಿ ಮತ್ತು ಭಾರತ 40 ನೇ ಸ್ಥಾನದಲ್ಲಿ ಮತ್ತು ಇತರ ದೊಡ್ಡ ಆರ್ಥಿಕತೆ ಹೊಂದಿರುವ ದೇಶಗಳಾದ ಇಂಡೋನೇಷ್ಯಾ 38 ನೇ ಸ್ಥಾನದಲ್ಲಿ, ಪಾಕಿಸ್ತಾನ 28 ನೇ ಸ್ಥಾನದಲ್ಲಿ, ಮತ್ತು ಬಾಂಗ್ಲಾದೇಶ 26 ಸ್ಥಾನದಲ್ಲಿ ಇದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ವರದಿಯನ್ನು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

 ಜಗತ್ತಿನಲ್ಲಿ ಭ್ರಷ್ಟಾಚಾರದ ಮಟ್ಟ ಹೇಗಿದೆ?

ಜಗತ್ತಿನಲ್ಲಿ ಭ್ರಷ್ಟಾಚಾರದ ಮಟ್ಟ ಹೇಗಿದೆ?

ಭಾರತವು 2021 ರಲ್ಲಿ ತನ್ನ ಸ್ಥಾನದಲ್ಲಿ ಸುಧಾರಣೆಯನ್ನು ಕಂಡಿದೆ. ಭಾರತವು 2020 ರಲ್ಲಿ 86 ನೇ ಸ್ಥಾನದಲ್ಲಿತ್ತು. ಭೂತಾನ್ ಹೊರತುಪಡಿಸಿ, ಭಾರತದ ಎಲ್ಲಾ ನೆರೆಹೊರೆಯವರು ಇದಕ್ಕಿಂತ ಕೆಳಗಿನ ಸ್ಥಾನದಲ್ಲಿ ಇದೆ ಎಂದು ವರದಿ ತೋರಿಸುತ್ತದೆ. ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್‌ನ ವರದಿಯು ಕಳೆದ ವರ್ಷಕ್ಕೆ ಹೋಲಿಸಿದರೆ ಯಾವುದೇ ಸುಧಾರಣೆಯಿಲ್ಲದೆ, ಜಗತ್ತಿನಲ್ಲಿ ಭ್ರಷ್ಟಾಚಾರದ ಮಟ್ಟವು ಹಾಗೆಯೇ ಇದೆ ಎಂದು ತೋರಿಸಿದೆ. "ಈ ಕೆಲವು ರಾಷ್ಟ್ರಗಳಾದ್ಯಂತ (ದುರ್ಬಲ ಅಂಕಗಳೊಂದಿಗೆ) ಭ್ರಷ್ಟಾಚಾರ ವಿರೋಧಿ ಸಂಸ್ಥೆಗಳು ದುರ್ಬಲವವಾಗಿದೆ ಅಥವಾ ಕೆಲವು ಸಂದರ್ಭಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಕ್ರಮವನ್ನು ಸಂಘಟಿಸುವ ಏಜೆನ್ಸಿ ಇಲ್ಲದಿರುವುದು ಈ ಭ್ರಷ್ಟಾಚಾರ ಅಧಿಕವಾಗಿರಲು ಕಾರಣವಾಗಿದೆ," ಎಂದು ವರದಿ ಉಲ್ಲೇಖ ಮಾಡಿದೆ.

 180 ದೇಶಗಳ ಭ್ರಷ್ಟಾಚಾರದ ಲೆಕ್ಕಾಚಾರ

180 ದೇಶಗಳ ಭ್ರಷ್ಟಾಚಾರದ ಲೆಕ್ಕಾಚಾರ

ದಕ್ಷಿಣ ಏಷ್ಯಾದ ದೇಶಗಳು ಭ್ರಷ್ಟಾಚಾರ ಸೂಚ್ಯಂಕದಲ್ಲಿ ತುಲನಾತ್ಮಕವಾಗಿ ಕಡಿಮೆ ಸ್ಥಾನದಲ್ಲಿ ಇದೆ. ಡೆನ್ಮಾರ್ಕ್, ಫಿನ್ಲ್ಯಾಂಡ್, ನ್ಯೂಜಿಲೆಂಡ್ ಮತ್ತು ನಾರ್ವೆಯಂತಹ ದೇಶಗಳು ಅತ್ಯಧಿಕ ಅಂಕಗಳನ್ನು ಪಡೆದು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಈ ಎಲ್ಲಾ ರಾಷ್ಟ್ರಗಳು ಭ್ರಷ್ಟಾಚಾರದ ಗ್ರಹಿಕೆ ಸ್ಕೋರ್ 88 ಅನ್ನು ಹೊಂದಿದೆ. ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI) ವಿಶ್ವ ಬ್ಯಾಂಕ್, ವಿಶ್ವ ಆರ್ಥಿಕ ವೇದಿಕೆ, ಖಾಸಗಿ ಅಪಾಯ, ಸಲಹಾ ಕಂಪನಿಗಳು, ಥಿಂಕ್ ಟ್ಯಾಂಕ್ಸ್‌ ಮತ್ತು ಇತರವುಗಳನ್ನು ಒಳಗೊಂಡಂತೆ 13 ಬಾಹ್ಯ ಮೂಲಗಳಿಂದ ಡೇಟಾವನ್ನು ಬಳಸುತ್ತದೆ. ಸಾರ್ವಜನಿಕ ವಲಯದ ಭ್ರಷ್ಟಾಚಾರದ ಮಟ್ಟವನ್ನು ಆಧರಿಸಿ 180 ದೇಶಗಳ ಅಂಕಗಳನ್ನು ಲೆಕ್ಕಾಚಾರ ಮಾಡುತ್ತದೆ.

 ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಅಪಾಯದಲ್ಲಿ!

ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಅಪಾಯದಲ್ಲಿ!

ಇನ್ನು ಈ ವರದಿಯು ಮೂಲಭೂತ ಸ್ವಾತಂತ್ರ್ಯಗಳು ಮತ್ತು ಸಮತೋಲನಗಳಿಗೆ ಧಕ್ಕೆ ಉಂಟಾಗುತ್ತಿರುವಂತೆ ದೇಶದ ಪ್ರಜಾಪ್ರಭುತ್ವದ ಸ್ಥಾನಮಾನದ ಬಗ್ಗೆ ಕಳವಳ ಉಂಟಾಗಿದೆ ಎಂದು ಉಲ್ಲೇಖ ಮಾಡಿದೆ. "ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ವಿಶೇಷವಾಗಿ ಅಪಾಯದಲ್ಲಿದ್ದಾರೆ. ಪೊಲೀಸರು, ರಾಜಕೀಯ ಉಗ್ರಗಾಮಿಗಳು, ಕ್ರಿಮಿನಲ್ ಗ್ಯಾಂಗ್‌ಗಳು ಮತ್ತು ಭ್ರಷ್ಟ ಸ್ಥಳೀಯ ಅಧಿಕಾರಿಗಳ ದಾಳಿಗೆ ಬಲಿಯಾಗಿದ್ದಾರೆ," ಎಂದು ಸೂಚ್ಯಂಕದ ಆಧಾರದ ಮೇಲೆ ವರದಿ ಹೇಳಿದೆ. ಸರ್ಕಾರದ ವಿರುದ್ಧ ಮಾತನಾಡುವ ನಾಗರಿಕ ಸಮಾಜದ ಸಂಘಟನೆಗಳನ್ನು ಭದ್ರತೆ, ಮಾನನಷ್ಟ, ದೇಶದ್ರೋಹ, ದ್ವೇಷದ ಭಾಷಣ ಮತ್ತು ನ್ಯಾಯಾಲಯದ ನಿಂದನೆ ಆರೋಪಗಳು ಮತ್ತು ವಿದೇಶಿ ನಿಧಿಯ ಮೇಲಿನ ನಿಯಮಗಳೊಂದಿಗೆ ಗುರಿಪಡಿಸಲಾಗಿದೆ ಎಂದು ವರದಿಯು ಆರೋಪಿಸಿದೆ. (ಒನ್‌ಇಂಡಿಯಾ ಸುದ್ದಿ)

Recommended Video

      Virat Kohli ಈಗಲೂ ಎಷ್ಟು ವರ್ಷ ಕ್ರಿಕೆಟ್ ಆಡಬಹುದು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+