ಅಡ್ಡಾದಿಡ್ಡಿ ಬೈಕ್ ಓಡಿಸಿದ ಹುಡುಗಿ: ಮುಂದೆ ಹೋಗುತ್ತಿದ್ದಂತೆ ಬಿದ್ದಳು ನಡುಗಿ!
ಹುಡುಗಿಯರು ಭಾರವಾದ ಬೈಕ್ ಓಡಿಸುವುದು ಈಗಿನ ಟ್ರೆಂಡ್ ಆಗಿದೆ. ರಸ್ತೆಯಲ್ಲಿ ತುಂಡುಗೆ ತೊಟ್ಟು ಬೈಕ್ ಸವಾರಿ ಮಾಡುವುದು ಈಗಲೂ ಫ್ಯಾಷನ್ ಆಗಿ ಉಳಿದಿದೆ. ಹೀದೊಂದು ಹುಡುಗಿ ಬೈಕ್ ಸವಾರಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಮುಂದೇನಾಗುತ್ತೆ ನೋಡಿ.
ಕೌಶಲ್ಯ ಮತ್ತು ಮೂರ್ಖತನದ ನಡುವೆ ಬಹಳ ಸೂಕ್ಷ್ಮವಾದ ಗೆರೆ ಇದೆ. ಕೆಲವು ಜನರಿಗೆ ಈ ಸರಳ ಮತ್ತು ಮುಖ್ಯವಾದ ಅಂಶ ಅರ್ಥವಾಗುವುದಿಲ್ಲ. ಆದ್ದರಿಂದ ಕೆಲವರು ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುತ್ತಾರೆ. ಹೀಗೊಂದು ವಿಡಿಯೋದಲ್ಲಿ ಬೈಕ್ ಮೇಲೆ ಕುಳಿತ ತುಂಡುಡುಗೆಯ ಯುವತಿ ಅಡ್ಡ ದಿಡ್ಡಿ ಬೈಕ್ ಸವಾರಿ ಮಾಡುತ್ತಾಳೆ. ರಸ್ತೆಯಲ್ಲಿ ಆಕೆ ಸಹ ಸವಾರರ ಮುಂದೆ ಜಂಬಕೊಚ್ಚಿಕೊಳ್ಳುತ್ತಾ ಭಾರವಾದ ಬೈಕ್ ಸವಾರಿ ಮಾಡುವುದನ್ನು ಕಾಣಬಹುದು. ಆದರೆ ಮುಂದೆ ಹೋಗುತ್ತಿದ್ದಂತೆ ಏನಾಗುತ್ತದೆ ಅನ್ನೋದು ಈ ವಿಡಿಯೋದ ಇಂಟ್ರಸ್ಟಿಂಗ್ ವಿಚಾರ. ಜೊತೆಗೆ ಇದರಲ್ಲಿ ವಾಹನ ಸವಾರರು ಅರಿತುಕೊಳ್ಳಬೇಕಾದ ವಿಷಯವೂ ಇದೆ.
ಭಾರವಾದ ಬೈಕ್ ಸವಾರಿ ಮಾಡುವುದು ಈಗಿನ ಕಾಲದಲ್ಲಿ ಫ್ಯಾಷನ್ ಆಗಿಬಿಟ್ಟಿದೆ. ಆದರೂ ಅದನ್ನು ಓಡಿಸಲು ಬಹಳಷ್ಟು ಪರಿಣತಿ ಮತ್ತು ಜವಾಬ್ದಾರಿಯ ಪ್ರಜ್ಞೆಯ ಅಗತ್ಯವಿದೆ. ಆದರಿಲ್ಲ ಶೋಕಿ ಮಾಡಲು ಹೋದ ಹುಡುಗಿ ಮಕಾಡೆ ಬಿದ್ದಿದ್ದಾಳೆ. ಹಿಂಬದಿ ಸವಾರ ಯುವತಿಯ ಬೈಕ್ ರೈಡ್ ಅನ್ನು ವಿಡಿಯೋ ಮಾಡಿದ್ದಾನೆ.

ವಿಡಿಯೋದ ಆರಂಭದಲ್ಲಿ ಯುವತಿ ಭಾರವಾದ ಬೈಕ್ ಮೇಲೆ ಸವಾರಿ ಮಾಡುತ್ತಾಳೆ. ರಸ್ತೆಗಳು ಬೇರೆ ವಾಹನಗಳಿದ್ದರೂ ಅಡ್ಡದಿಡ್ಡಿಯಾಗಿ ಬೈಕ್ ಓಡಿಸುತ್ತಾಳೆ. ಜೊತೆಗೆ ತನ್ನೊಂದಿಗೆ ಸಾಗುವ ವಾಹನ ಸವಾರರ ಕಡೆಗೂ ಕೈ ಬೀಳುತ್ತಾಳೆ. ನಗುತ್ತಾ ಕಿರುಚಾಡುತ್ತಾ ಪಕ್ಕದಲ್ಲಿ ಚಲಿಸುತ್ತಿರುವ ಕ್ಯಾಮರಾಪರ್ಸನ್ ಕಡೆಗೆ ಕೈ ಬೀಸುತ್ತಾಳೆ. ತಾನು ಬೈಕ್ ಸವಾರಿಯನ್ನು ಆನಂದಿಸುತ್ತಿದ್ದಾಳೆ ಎಂದು ಕ್ಯಾಮರಾ ಕಡೆಗೆ ಸೂಚಿಸುತ್ತಾಳೆ. ಬಳಿಕ ಆಕೆ ಬೈಕನ್ನು ಅಲುಗಾಡಿಸಲು ಪ್ರಾರಂಭಿಸುತ್ತಾಳೆ. ಸ್ವಲ್ಪ ಸಮಯದೊಳಗೆ ತನ್ನ ಸಮತೋಲನವನ್ನು ಕಳೆದುಕೊಂಡು ಎಡಭಾಗದಲ್ಲಿ ಕೆಳಗೆ ಬೀಳುತ್ತಾಳೆ. ಬೈಕು ಕೆಲವು ಅಡಿಗಳಷ್ಟು ಮುಂದೆ ಹೋಗಿ ಬೀಳುತ್ತದೆ. ಅದೃಷ್ಟವಶಾತ್ ಹುಡುಗಿ ಹೆಲ್ಮೆಟ್ ಧರಿಸಿದ್ದರಿಂದ ಪ್ರಣಾಪಾಯದಿಂದ ಪಾರಾಳಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಇದನ್ನು 10 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.
Presumiendo. 😎 pic.twitter.com/kXAqTStiMf
— ☛ Momentos Virales ☛ (@momentoviral) January 26, 2023
ಸವಾರದ ಬೈಕ್ ಸಾಹಸದ ವಿಡಿಯೋ
ತಮ್ಮ ಗುರಿಯನ್ನು ಮುಟ್ಟಲು ಯಾವುದೇ ಹಂತಕ್ಕೂ ಹೋಗುವ ಜನರು ನಮ್ಮಲ್ಲಿದ್ದಾರೆ. ಬೈಕ್ ಸವಾರರು, ಸೈಕ್ಲಿಸ್ಟ್‌ಗಳು, ಪ್ಯಾರಾ ಜಂಪರ್‌ಗಳು ಮತ್ತು ಇತರರ ವಿಚಾರದಲ್ಲಿ ಇದು ಸತ್ಯವಾದ ಮಾತು. ಸಾಮಾಜಿಕ ಮಾಧ್ಯಮ ಇಂತಹದೊಂದು ವಿಡಿಯೋ ವೈರಲ್ ಆಗಿದೆ. ಇದು ಕೌಶಲ್ಯ ಮತ್ತು ಸಾಹಸಗಳನ್ನು ಪ್ರದರ್ಶಿಸುವ ವಿಡಿಯೋವಾಗಿದ್ದು, ಬೈಕ್ ಸವಾರ ಕೆಳಗೆ ಬಿದ್ದರು ತನಗೇನು ಆಗದಂತೆ ತಕ್ಷಣ ಎದ್ದು ನಡೆಯುತ್ತಾನೆ.
Nailed it with the walk off 😎👊 pic.twitter.com/iD4HqTLzli
— Best Videos 🎥🔞 (@_BestVideos) January 23, 2023
ಇಂತಹದೊಂದು ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕನೊಬ್ಬ ಪಿಟ್ ಬೈಕ್ ಅಥವಾ ಡರ್ಟ್ ಬೈಕ್‌ನಲ್ಲಿ ಹಲವಾರು ಪ್ಲಾಸ್ಟಿಕ್ ಬ್ಯಾರೆಲ್‌ಗಳ ಮೇಲೆ ಸವಾರಿ ಮಾಡುತ್ತಾನೆ. ನೀರಿನ ಮೇಲೆ ತೇಲುವ ಬ್ಯಾರೆಲ್‌ಗಳ ಮೇಲೆ
ಬೈಕ್ ಓಡಿಸುತ್ತಾ ತಡ ಸೇರಿದ ಮೇಲೆ ಬೈಕ್ ಬಿದ್ದರು ತಾನು ತಕ್ಷಣವೇ ಎದ್ದೇಳುತ್ತಾನೆ. ಟ್ವಿಟ್ಟರ್‌ನಲ್ಲಿ @_BestVideos ಮೂಲಕ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ.
-
ಆಶಾ ಭೋಸ್ಲೆ ಮೊಮ್ಮಗಳು ಜನೈಗೆ ಸಾಂತ್ವನ ಹೇಳಿದ ಕ್ರಿಕೆಟಿಗ ಮೊಹಮ್ಮದ್ ಸಿರಾಜ್; ವಿಡಿಯೋ ವೈರಲ್ -
Yuzvendra Chahal: ಯುಜ್ವೇಂದ್ರ ಚಹಾಲ್ 'ಕ್ಯೂಟ್' ಕಾಮೆಂಟ್, ತಾನಿಯಾ ಚಟರ್ಜಿ ವಿಡಿಯೋ ವೈರಲ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ












Click it and Unblock the Notifications