ಒಂದೇ ಗಂಟೆಯಲ್ಲಿ 1,123 ಮರಗಳನ್ನು ತಬ್ಬಿಕೊಂಡು ಗಿನ್ನೆಸ್ ದಾಖಲೆ: ವಿಡಿಯೋ ನೋಡಿ
ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ಹೆಸರು ದಾಖಲಾಗಬೇಕು ಎನ್ನುವುದು ಸಾಧಕರ ಕನಸಾಗಿರುತ್ತದೆ. ಈ ಕನಸು ನನಸಾಗಲು ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಾರೆ. ಸದ್ಯ ವಿವಿಧ ರೀತಿಯಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಇದ್ದು, ಆಫ್ರಿಕಾದ ಘಾನಾದ ವಿದ್ಯಾರ್ಥಿಯೊಬ್ಬ ಮರಗಳನ್ನು ತಬ್ಬಿಕೊಳ್ಳುವ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ್ದಾರೆ.
ಘಾನಾದ ವಿದ್ಯಾರ್ಥಿ ಅಬುಬಕರ್ ತಾಹಿರು(29) 1 ಗಂಟೆಯಲ್ಲಿ 1,123 ಮರಗಳನ್ನು ತಬ್ಬಿಕೊಳ್ಳುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ. ಅಮೆರಿಕಾದ ಅಲಬಾಮಾದಲ್ಲಿರುವ ಟುಸ್ಕೆಗೀ ರಾಷ್ಟ್ರೀಯ ಅರಣ್ಯದಲ್ಲಿ ಒಂದು ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಳ್ಳುವ ಮೂಲಕ ವರ್ಲ್ಡ್ ರೆಕಾರ್ಡ್ ನಿರ್ಮಿಸಲಾಗಿದೆ.

ಕೃಷಿ ಸಮುದಾಯದಿಂದ ಬಂದ ಅಬುಬಕರ್ ತಾಹಿರು ಪ್ರಕೃತಿ ಮತ್ತು ಸಂರಕ್ಷಣೆಗಾಗಿ ಅಪಾರ ಉತ್ಸಾಹ ಹೊಂದಿದ್ದಾರೆ. ಹೀಗಾಗಿ, ಅರಣ್ಯ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. 2023 ರಲ್ಲಿ ಉಎಸ್‌ಎಯ ಅಲಬಾಮಾದ ಆಬರ್ನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುವ ಮೂಲಕ ತಮ್ಮ ಅಧ್ಯಯನವನ್ನು ಮುಂದುವರೆಸಿದ್ದಾರೆ. ಅಬುಬಕರ್ ತಾಹಿರಿಗೆ ಪ್ರಕೃತಿ ಮೇಲೆ ಅತಿಯಾದ ಪ್ರೀತಿ ಇದ್ದು, ಇದರಿಂದಲೇ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೇ 05ರಂದು ಅಬುಬಕರ್ ತಾಹಿರು ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಮೂರು ದಿನಗಳಲ್ಲಿ 9 ಲಕ್ಷದ 98ಸಾವಿರ ವೀಕ್ಷಣೆಯನ್ನು ಪಡೆದುಕೊಂಡಿದ್ದು ಸದ್ಯ ವಿಡಿಯ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.












Click it and Unblock the Notifications