ಟ್ರೋಲ್ ಆಯ್ತು ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ: ಬಿದ್ದು ಬಿದ್ದು ನಗಿಸುವ ವಿಡಿಯೋ ವೈರಲ್
ಫ್ರೀ... ಫ್ರೀ.... ಫ್ರೀ...... ಮಹಿಳೆಯರಿಗೆ ಬಸ್ ಪ್ರಯಾಣ ಫ್ರೀ. ಸಿಎಂ ಸಿದ್ದರಾಮಯ್ಯ ಹೇಳಿದ ಇದೊಂದು ಮಾತು ಮಹಿಳೆಯ ಮುಖದಲ್ಲಿ ಸಂತೋಷದ ಅಲೆಯನ್ನೇ ಮೂಡಿಸಿದೆ. ಇದೇ ಖುಷಿಯಲ್ಲಿ ಜೂನ್ 11ರಿಂದ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದೇ ಮಾಡಿದ್ದು. ವಿಡಿಯೋ, ಫೋಟೋಗಳನ್ನು ಹಂಚಿಕೊಂಡಿದ್ದೇ ಹಂಚಿಕೊಂಡಿದ್ದು. ಇದನ್ನ ತಾಳಲಾಗದೆ ಪುರುಷರು ನಮಗಾ ಭಾಗ್ಯ ಇಲ್ವೇ ಅಂತ ಹೊಟ್ಟೆ ಉರಿದುಕೊಂಡಿದ್ದು ಸುಳ್ಳಲ್ಲ.
ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ರಾಜ್ಯದಲ್ಲಿ ಶುರುವಾಗಿದೆ. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದು ಸಾಕಷ್ಟು ಟ್ರೋಲ್ ಕೂಡ ಆಗಿದೆ. ಹಾಗಾದರೆ ಟ್ರೋಲ್ ಆಗಿರುವ ವಿಡಿಯೋಗಳನ್ನು ನೋಡೋಣ.

ಆಶಾ ಡೆವಿಲ್ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೀಗೊಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸುದ್ದಿ ಟ್ರೋಲ್ ಆಗಿದೆ. ರಾಜ್ಯ ಸರ್ಕಾರ ನೀಡಿದ ಈ ಸೇವೆಯನ್ನು ಹುಡುಗಿಯರು ಯಾವ ರೀತಿ ದುರುಪಯೋಗ ಪಡೆದುಕೊಳ್ಳಬಹುದು ಎನ್ನುವುದನ್ನು ಈ ಟ್ರೋಲ್ ಆದ ವಿಡಿಯೋದಲ್ಲಿ ನೋಡಬಹುದು.
ಕ್ಯಾಂಪಸ್ ಮಜಿಸಿಷಿಯನ್ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.

ಇದರಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡುವಾಗ ಇಡೀ ಬಸ್ ಫುಲ್ ಟಿಕೆಟ್ ಕೇಳುತ್ತಾರೆ. ಅವರೆಲ್ಲರೂ ಪ್ರವಾಸ ಹೋಗುವುದಾಗಿ ಹೇಳುತ್ತಾರೆ. ಇದೂ ಕೂಡ ಟ್ರೋಲ್ ಆಗಿದೆ.
ಇನ್ನೂ ಕಾಮಿಡಿ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅವುಗಳನ್ನು ಇಲ್ಲಿ ವೀಕ್ಷಿಸಬಹುದು.












Click it and Unblock the Notifications