ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವು ನಿಂತಲ್ಲೇ ನಿಂತು ನೀರು ಕುಡಿಯುತ್ತೀರಾ? ಆರೋಗ್ಯವು ಹಾಳಾಗಬಹುದು ಎಚ್ಚರ..

|
Google Oneindia Kannada News

ನಿಂತಲ್ಲೇ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿಕರ. ನಿಂತುಕೊಂಡು ನೀರು ಕುಡಿಯುವುದನ್ನು ಆಯುರ್ವೇದದಲ್ಲಿ ನಿಷೇಧಿಸಲಾಗಿದೆ. ನಿಂತಿರುವಾಗ ನೀರು ಕುಡಿಯುವುದನ್ನು ನೀವು ರೂಡಿಸಿಕೊಂಡಿದ್ದರೆ ವ್ಯಕ್ತಿಯ ಪ್ರಮುಖ ಅಂಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಅಭ್ಯಾಸದಿಂದ ಆರೋಗ್ಯಕ್ಕೆ ಅಡ್ಡ ಪರಿಣಾಮಗಳು ಕಂಡು ಬರುತ್ತವೆ, ಹಾಗಾದರೆ ನಿಂತಲ್ಲೇ ನೀರು ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳ ತಿಳಿದುಕೊಳ್ಳವುದು ಅವಶ್ಯವಾಗಿದೆ.

ಹೌದು ನಾವು ಕೇವಲ ಹತ್ತು ಸೆಕೆಂಡ್‌ನಲ್ಲಿ ನೀರು ಕುಡಿಯುತ್ತೇವೆ ಆದರೆ, ಅದೇ ಹತ್ತು ಸಕೆಂಡ್‌ನಲ್ಲಿ ನಾವು ನಿಂತುಕೊಂಡು ನೀರು ಕುಡಿಯುವುದರಿಂದ ಮತ್ತಷ್ಟು ಆರೋಗ್ಯಕ್ಕೆ ಹಾನಿಕರವಿದೆ ಎಂದಾದರೆ ಕೇವಲ ಹತ್ತು ಸಕೆಂಡ್‌ನಲ್ಲಿ ನಾವು ಕುಳಿತು ನೀರು ಕುಡಿಯುವುದು ರೂಡಿಸಿಕೊಳ್ಳುವುದು ಯೋಗ್ಯವು ಹೌದು, ನಮ್ಮ ಆರೋಗ್ಯಕ್ಕೆ ಯೋಗವು ಹೌದು.

ನಿಂತಲ್ಲೇ ನಿಂತು ನೀರು ಕುಡಿಯುವುದು ಇಂದಿನ ಕಾಲದಲ್ಲಿ ಸಾಮಾನ್ಯ ಅಭ್ಯಾಸವಾಗಿದೆ. ಸಾಮಾನ್ಯವಾಗಿ ಜನರು ನಿಂತು ನೀರು ಕುಡಿಯುವ ಸಹಜ ಅಭ್ಯಾಸವನ್ನು ಹೊಂದಿರುತ್ತಾರೆ ಅಥವಾ ಕೆಲಸದ ಆತುರದಲ್ಲಿ ಜನರು ನೀರು ಕುಡಿಯುತ್ತಾರೆ. ನಿಂತುಕೊಂಡು ನೀರು ಕುಡಿಯುವುದನ್ನು ಆಯುರ್ವೇದದಲ್ಲಿ ನಿಷೇಧಿಸಲಾಗಿದೆ. ಏಕೆಂದರೆ ನಿಂತಲ್ಲೇ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿಕರ.

ನಿಂತಲ್ಲೇ ನೀರು ಕುಡಿಯುವುದರಿಂದ ನಮ್ಮ ದೇಹದ ಪ್ರಮುಖ ಅಂಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೆ, ಈ ರೀತಿ ನೀರು ಕುಡಿಯುವುದರಿಂದ ವ್ಯಕ್ತಿಯ ಬಾಯಾರಿಕೆ ಸಂಪೂರ್ಣವಾಗಿ ತಣಿಸುವುದಿಲ್ಲ. ಅದಕ್ಕಾಗಿಯೇ ನೀವು ಕುಳಿತು ನೀರು ಕುಡಿಯಲು ಪ್ರಯತ್ನಿಸುತ್ತೀರಿ. ನಿಂತು ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಆಗುವ ಹಾನಿಯ ಬಗ್ಗೆ ತಿಳಿದುಕೊಳ್ಳವುದು ಉತ್ತಮ.

 ಶ್ವಾಸಕೋಶಕ್ಕೆ ತೊಂದರೆ

ಶ್ವಾಸಕೋಶಕ್ಕೆ ತೊಂದರೆ

ನಿಂತಲ್ಲೇ ನೀರು ಕುಡಿಯುವುದು ಶ್ವಾಸಕೋಶಕ್ಕೆ ಹಾನಿಕಾರಕ. ಏಕೆಂದರೆ ನಿಂತು ನೀರು ಕುಡಿಯುವಾಗ ಆಹಾರ ಮತ್ತು ದೇಹದ ಗಾಳಿ ಪೈಪ್‌ನಲ್ಲಿ ಆಮ್ಲಜನಕದ ಪೂರೈಕೆ ನಿಲ್ಲುತ್ತದೆ. ಇದರಿಂದ ಶ್ವಾಸಕೋಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ನಿಂತಲ್ಲೇ ನೀರು ಕುಡಿಯುವುದರಿಂದ ಹರ್ನಿಯಾ ಸಮಸ್ಯೆ ಉಂಟಾಗುತ್ತದೆ. ಏಕೆಂದರೆ ನಿಂತಲ್ಲೇ ನೀರು ಕುಡಿಯುವುದರಿಂದ ಹೊಟ್ಟೆಯ ಕೆಳಭಾಗದಲ್ಲಿ ಒತ್ತಡ ಉಂಟಾಗುತ್ತದೆ. ಇದರಿಂದಾಗಿ ಹೊಟ್ಟೆಯ ಸುತ್ತಲಿನ ಅಂಗಗಳು ಹಾನಿಗೊಳಗಾಗಬಹುದು.

 ಕೀಲು ನೋವು ಉಂಟಾಗುತ್ತದೆ

ಕೀಲು ನೋವು ಉಂಟಾಗುತ್ತದೆ

ನಿಂತಿರುವಾಗ ನೀರು ಕುಡಿಯುವುದರಿಂದ ಕೀಲು ನೋವು ಉಂಟಾಗುತ್ತದೆ. ಏಕೆಂದರೆ ನಿಂತುಕೊಂಡು ನೀರು ಕುಡಿಯುವಾಗ, ನಿಮ್ಮ ದೇಹದ ಮೂಲಕ ನೀರಿನ ಹರಿವು ವೇಗವಾಗಿ ಕೀಲುಗಳಲ್ಲಿ ಸಂಗ್ರಹವಾಗುತ್ತದೆ. ಇದು ಕೀಲುಗಳು ಮತ್ತು ಮೂಳೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದಾಗಿ ಕೀಲುಗಳಲ್ಲಿನ ನೋವಿನ ಜೊತೆಗೆ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ.

ಇದನ್ನೂ ಓದಿ: ಮಕ್ಕಳ ತೂಕ ಹೆಚ್ಚಿಸುವುದರಿಂದ ಹಿಡಿದು ಮೂಳೆಗಳನ್ನು ಬಲಪಡಿಸುವವರೆಗೆ ಸಾಗುವಾನಿ ಪ್ರಯೋಜನಕಾರಿ, ಅದ್ಭುತ ಪ್ರಯೋಜನಗಳನ್ನು ತಿಳಿಯಿರಿ

 ಮೂತ್ರಪಿಂಡಕ್ಕೆ ಹಾನಿ

ಮೂತ್ರಪಿಂಡಕ್ಕೆ ಹಾನಿ

ನಿಂತಲ್ಲೇ ನೀರು ಕುಡಿಯುವುದು ಮೂತ್ರಪಿಂಡಗಳಿಗೆ ಹಾನಿಕರ. ಏಕೆಂದರೆ ನಿಂತಲ್ಲೇ ನೀರು ಕುಡಿಯುವಾಗ ನೀರು ಫಿಲ್ಟರ್ ಆಗದೆ ಹೊಟ್ಟೆಯ ಕೆಳಭಾಗಕ್ಕೆ ವೇಗವಾಗಿ ಚಲಿಸುತ್ತದೆ. ಇದರಿಂದಾಗಿ ನೀರಿನಲ್ಲಿ ಸಂಗ್ರಹವಾಗಿರುವ ಕಲ್ಮಶಗಳು ಪಿತ್ತಕೋಶದಲ್ಲಿ ಸಂಗ್ರಹವಾಗುವ ಅಪಾಯವಿದೆ, ಇದು ಮೂತ್ರಪಿಂಡಕ್ಕೆ ಹಾನಿಕಾರಕವಾಗಿದೆ. ನಿಂತಿರುವಾಗ ನೀರು ಕುಡಿಯುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾಳುಮಾಡುತ್ತದೆ. ಏಕೆಂದರೆ ನೇರವಾಗಿ ಕೆಳ ಹೊಟ್ಟೆಯ ಮೇಲೆ ಬೀಳುತ್ತದೆ, ಇದು ಹಾನಿಕಾರಕವಾಗಿದೆ.

ಕುಳಿತುಕೊಳ್ಳುವಾಗ ನಮ್ಮ ಮೂತ್ರಪಿಂಡಗಳು ಉತ್ತಮವಾಗಿ ಫಿಲ್ಟರ್ ಆಗುತ್ತವೆ ಎಂದು ಕಂಡುಬಂದಿದೆ. "ನೀರು ನಿಂತು ಕುಡಿಯುವಾಗ, ದ್ರವವು ಹೆಚ್ಚಿನ ಒತ್ತಡದಲ್ಲಿ ಇಲ್ಲದೆ ಹಾದುಹೋಗುತ್ತದೆ. ಇದು ಮೂತ್ರಕೋಶದಲ್ಲಿ ನೀರಿನ ಕಲ್ಮಶಗಳು ನೆಲೆಗೊಳ್ಳಲು ಕಾರಣವಾಗುತ್ತದೆ ಮತ್ತು ಮೂತ್ರಪಿಂಡದ ಕಾರ್ಯನಿರ್ವಹಣೆಯನ್ನು ಹಾನಿಗೊಳಿಸುತ್ತದೆ. ಇದು ಮೂತ್ರನಾಳದ ಅಸ್ವಸ್ಥತೆಗಳನ್ನು ಸಹ ಉಂಟುಮಾಡಬಹುದು.

 ನೀರು ಕುಡಿಯಲು ಸರಿಯಾದ ಮಾರ್ಗವಿದೆಯೇ?

ನೀರು ಕುಡಿಯಲು ಸರಿಯಾದ ಮಾರ್ಗವಿದೆಯೇ?

ನೀರು ಕುಡಿಯುವ ಸರಿಯಾದ ವಿಧಾನವೆಂದರೆ ಕುರ್ಚಿಯ ಮೇಲೆ ಕುಳಿತು ನೀರು ಕುಡಿಯುವಾಗ ಬೆನ್ನು ನೆಟ್ಟಗೆ ಮಾಡಿ ನೀರು ಕುಡಿಯಬೇಕು. ಈ ರೀತಿಯಾಗಿ ಮಾಡಿದರೆ, ಪೋಷಕಾಂಶಗಳು ಮೆದುಳಿಗೆ ತಲುಪುತ್ತದೆ ಮತ್ತು ಮೆದುಳಿನ ಚಟುವಟಿಕೆಯನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲ, ನಿಮ್ಮ ಜೀರ್ಣಕ್ರಿಯೆಯು ಸುಧಾರಿಸುತ್ತದೆ ವೈದ್ಯರು ಸೂಚಿಸುತ್ತಾರೆ.

English summary
Find out why drinking water while standing isn’t good for your health check here health tips, Do you stand up and drink water? Health may be damaged, beware,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X