ವಿಮಾನದಲ್ಲಿ ಮಾರಾಮಾರಿ: ಬ್ಯಾಂಕಾಕ್-ಕೋಲ್ಕತ್ತಾ ವಿಮಾನದಲ್ಲಿ ಪ್ರಯಾಣಿಕರ ನಡುವೆ ಹೊಡೆದಾಟ

ಬ್ಯಾಂಕಾಕ್-ಕೋಲ್ಕತ್ತಾ ವಿಮಾನದಲ್ಲಿ ಪ್ರಯಾಣಿಕರು ಹೊಡೆದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕರು ಘಟನೆಯನ್ನು ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ವಿಡಿಯೋದಲ್ಲಿ ಇಬ್ಬರು ಪುರುಷರು ಪರಸ್ಪರ ಜಗಳವಾಡುತ್ತಿರುವುದನ್ನು ಕಾಣಬಹುದು. ಜೊತೆಗೆ ವಿಮಾನದ ಸಿಬ್ಬಂದಿಗಳು ಪರಿಸ್ಥಿತಿಯನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ.

ಪುರುಷರಲ್ಲಿ ಒಬ್ಬರು "ಶಾಂತಿ ಸೆ ಬಾತ್" (ಸದ್ದಿಲ್ಲದೆ ಕುಳಿತುಕೊಳ್ಳಿ) ಎಂದು ಹೇಳುವುದನ್ನು ಕೇಳಬಹುದು. ಆದರೆ ಇನ್ನೊಬ್ಬರು "ಹಾತ್ ನೀಚೆ ಕರ್" (ನಿಮ್ಮ ಕೈಯನ್ನು ಕೆಳಕ್ಕೆ ಇರಿಸಿ) ಎಂದು ಹೇಳುತ್ತಾರೆ. ಕೆಲವೇ ಸೆಕೆಂಡುಗಳಲ್ಲಿ ಈ ಮಾತುಗಳು ವಿಕೋಪಕ್ಕೆ ತಿರುಗಿ ದೈಹಿಕ ಹಲ್ಲೆ ನಡೆಯುತ್ತದೆ. ಪ್ರಯಾಣಿಕನ ಮೇಲೆ ಹಲವಾರು ಪ್ರಯಾಣಿಕರು ಹಲ್ಲೆ ಮಾಡುತ್ತಾರೆ.

ವಿಡಿಯೋವನ್ನು ಇಲ್ಲಿ ವೀಕ್ಷಿಸಿ-

ವ್ಯಕ್ತಿ ತನ್ನ ಕನ್ನಡಕವನ್ನು ತೆಗೆದು ನಂತರ ಇನ್ನೊಬ್ಬ ವ್ಯಕ್ತಿಗೆ ಹೊಡೆಯುವುದನ್ನು ಕಾಣಬಹುದು. ವ್ಯಕ್ತಿಯ ಸ್ನೇಹಿತರು ಜಗಳಕ್ಕೆ ಸೇರುತ್ತಾರೆ. ಹೊಡೆಸಿಕೊಳ್ಳುವ ವ್ಯಕ್ತಿ ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ಮಾತ್ರ ಕಾಣಬಹುದು.

Fight on flight: Fight between passengers on Bangkok-Kolkata flight

ಕೆಲವು ಫ್ಲೈಟ್ ಅಟೆಂಡೆಂಟ್‌ಗಳು ಇಬ್ಬರನ್ನು ಜಗಳವನ್ನು ತಡೆಯಲು ಪ್ರಯತ್ನಿಸುತ್ತಾರೆ. ಮೊದಲು ಸಹ-ಪ್ರಯಾಣಿಕರು ಮತ್ತು ಕ್ಯಾಬಿನ್ ಸಿಬ್ಬಂದಿ ಜಗಳವನ್ನು ನಿಲ್ಲಿಸುವಂತೆ ವ್ಯಕ್ತಿಯನ್ನು ಕೇಳಿಕೊಳ್ಳುತ್ತಾರೆ. ಆದರೆ ಪ್ರಯಾಣಿಕರು ಅವರ ಮಾತನ್ನು ಕೇಳುವುದಿಲ್ಲ. ಬ್ಯಾಂಕಾಕ್‌ನಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ, ಥಾಯ್ ಸ್ಮೈಲ್ ಏರ್‌ವೇಸ್ ಈ ಸಮಸ್ಯೆಗೆ ಪ್ರತಿಕ್ರಿಯಿಸಿಲ್ಲ ಮತ್ತು ಅಪರಾಧಿಗಳ ಮೇಲೆ ತೆಗೆದುಕೊಂಡ ಕ್ರಮದ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+