ಮೋದಿ ಎದುರಾಳಿ ತೇಜ್ ಬಹದೂರ್ ಯಾದವ್ ಆಸ್ತಿ ವಿವರ

Recommended Video

      Varanasi Lok Sabha Elections 2019: ವಾರಣಾಸಿಯ ಎಸ್ಪಿ ಅಭ್ಯರ್ಥಿ ಯೋಧ ತೇಜ್ ಬಹಾದೂರ್ ಯಾದವ್ ಆಸ್ತಿ ವಿವರ

      ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸುತ್ತಿರುವ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಮೈತ್ರಿಕೂಟ ಕೊನೆ ಕ್ಷಣದಲ್ಲಿ ಅಚ್ಚರಿಯ ನಿರ್ಧಾರ ಕೈಗೊಂಡು, ಅಮಾನತುಗೊಂಡ ಬಿಎಸ್ ಎಫ್ ಯೋಧ ತೇಜ್ ಬಹದೂರ್ ಯಾದವ್ ಅವರನ್ನು ಕಣಕ್ಕಿಳಿಸಿದೆ. ತೇಜ್ ಬಹದೂರ್ ಅವರ ಆಸ್ತಿ ವಿವರ ಇಲ್ಲಿದೆ.

      ತೇಜ್ ಬಹಾದೂರ್ ಯಾದವ್ ಅವರು ಸಮಾಜವಾದಿ ಪಕ್ಷದಿಂದ ಟಿಕೆಟ್ ಪಡೆದು ಕಣಕ್ಕಿಳಿಯುವ ಮೊದಲೇ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ, ಆಸ್ತಿ ವಿವರದ ಅಫಿಡವಿಟ್ ಸಲ್ಲಿಸಿದ್ದರು. ಇದಕ್ಕೂ ಮೊದಲು ಈ ಕ್ಷೇತ್ರದಲ್ಲಿ ಶಾಲಿನಿ ಯಾದವ್ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದರು.ಆದರೆ, ನಾಮಪತ್ರ ಸಲ್ಲಿಸುವ ಕಡೆಯ ದಿನ ಏಪ್ರಿಲ್ 29ರಂದು ಶಾಲಿನಿ ಯಾದವ್ ಅವರ ನಾಮಪತ್ರವನ್ನು ಹಿಂತೆಗೆದುಕೊಂಡಿದ್ದು, ತೇಜ್ ಬಹಾದೂರ್ ಯಾದವ್ ಅವರು ಎಸ್ಪಿ-ಬಿಎಸ್ಪಿ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದರು.

      ಮೇ 19ರಂದು ವಾರಣಾಸಿಯಲ್ಲಿ ಮತದಾನ ನಡೆಯಲಿದೆ. 2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ನರೇಂದ್ರ ಮೋದಿಯವರು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ಮುಖಭಂಗವಾಗುವಂತೆ ಸೋಲುಣಿಸಿದ್ದರು. ಚುನಾವಣೆಯ ಫಲಿತಾಂಶ ಮೇ 23ರಂದು ಹೊರಬೀಳಲಿದೆ.

      ಕಾಂಗ್ರೆಸ್ ಪಕ್ಷವು ಈ ಕ್ಷೇತ್ರದಿಂದ ಅಜಯ್ ರೈ ಅವರನ್ನು ಕಣಕ್ಕಿಳಿಸಿದ್ದು, 2014 ರ ಲೋಕಸಭೆ ಚುನಾವಣೆಯಲ್ಲೂ ನರೇಂದ್ರ ಮೋದಿ ಅವರ ವಿರುದ್ಧ 49 ವರ್ಷ ವಯಸ್ಸಿನ ಅಜಯ್ ರೈ ಅವರನ್ನೇ ಕಾಂಗ್ರೆಸ್ ಕಣಕ್ಕಿಳಿಸಿತ್ತು. ಆದರೆ ಅವರು ಈ ಚುನಾವಣೆಯಲ್ಲಿ ಕೇವಲ 75,614 ಮತಗಳನ್ನು ಪಡೆದು ಮೂರನೇ ಸ್ಥಾನ ಗಳಿಸಿದ್ದರು.

      ಈ ಬಾರಿಯೂ ವಾರಣಾಸಿಯಿಂದ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಕಣಕ್ಕಿಳಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಎಪಿಯ ಅರವಿಂದ್ ಕೇಜ್ರಿವಾಲ್ ಅವರೂ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು 5,81,022 ಮತಗಳನ್ನು ಪಡೆದರೆ, ಅರವಿಂದ್ ಕೇಜ್ರಿವಾಲ್ 2,09,238 ಮತಗಳನ್ನು ಪಡೆದಿದ್ದರು.

      ಹೆಸರು : ತೇಜ್ ಬಹದೂರ್

      ಹೆಸರು : ತೇಜ್ ಬಹದೂರ್

      ತಂದೆ : ಶೇರ್ ಸಿಂಗ್
      ವಿಳಾಸ: ರಾತಾ ಕಲ್ಯಾಣ್ ಮಹೇಂದ್ರ ಘರ್, ಹರ್ಯಾಣ
      ವಯಸ್ಸು : 43
      * 2014-15 ರಿಂದ 2018-19ರ ತನಕ ಅವಧಿಗಾಗಿ ತೇಜ್ ಬಹದೂರ್ ಹಾಗೂ ಅವರ ಪತ್ನಿ ಶರ್ಮಿಳಾ ದೇವಿ ಐಟಿ ರಿಟರ್ನ್ಸ್ ಸಲ್ಲಿಸಿದ್ದು, ಶೂನ್ಯ ಆದಾಯ ತೋರಿಸಿದ್ದಾರೆ.
      * ಯಾವುದೇ ಕ್ರಿಮಿನಲ್ ಮೊಕದ್ದಮೆ ಹೊಂದಿಲ್ಲ, ಯಾವುದೇ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ.

      ನಗದು ಇನ್ನಿತರ ಚರಾಸ್ತಿ

      ನಗದು ಇನ್ನಿತರ ಚರಾಸ್ತಿ

      ನಗದು:
      ತೇಜ್ : 10,000 ರು, ಶರ್ಮಿಳಾ : 20,000ರು
      * ಎಸ್ ಬಿಐನಲ್ಲಿ ಖಾತೆ ಹೊಂದಿದ್ದಾರೆ
      * ಎಲ್ ಐಸಿ ವಿಮೆ 1.5 ಲಕ್ಷ ರು.
      * ವಾಹನ: ಬಜಾಜ್ ಸಿಟಿ 100
      ಚರಾಸ್ತಿ ಒಟ್ಟು: 3,00,382ರು ಹಾಗೂ 7,69,728

      ಸ್ಥಿರಾಸ್ತಿ: 50,00,000 ಹಾಗೂ 40,00,000ರು
      ಸ್ವರ್ಯಾಜಿತ ಆಸ್ತಿ : ಶರ್ಮಿಳಾ 20,00,000 ರು ಪ್ಲಸ್ 15,00,000ರು
      ಒಟ್ಟು ಸಾಲ : 2,00,000 ರು

      ತೇಜ್ ಬಹದೂರ್ ಅಫಿಡವಿಟ್ ಮುಖ್ಯಾಂಶ

      ತೇಜ್ ಬಹದೂರ್ ಅಫಿಡವಿಟ್ ಮುಖ್ಯಾಂಶ

      ಎಸ್ಸೆಸ್ಸೆಲ್ಸಿ ಓದಿರುವ 43 ವರ್ಷದ ಮಾಜಿ ಜವಾನ, ಹರ್ಯಾಣದ ಮಹೇಂದ್ರಗಢದ ನಿವಾಸಿಯಾಗಿದ್ದು, ಹೆಚ್ಚೂಕಡಿಮೆ ಒಂದು ಕೋಟಿಯಷ್ಟು ಆಸ್ತಿಯನ್ನು ಹೊಂದಿದ್ದಾರೆ. ಈಗ ವೃತ್ತಿಯಿಂದ ಕೃಷಿಕ ಎಂದು ಹೇಳಿಕೊಂಡಿರುವ ತೇಜ್ ಬಹಾದೂರ್ (50 ಲಕ್ಷ ರು.) ಮತ್ತು ಅವರ ಪತ್ನಿ ಖಾಸಗಿ ಕಂಪನಿಯಲ್ಲಿ ನೌಕರಳಾಗಿರುವ ಶರ್ಮಿಳಾ ದೇವಿ(40 ಲಕ್ಷ ರು.)ಯವರ ಬಳಿಯಿರುವ ಒಟ್ಟು ಸ್ಥಿರಾಸ್ತಿ 90 ಲಕ್ಷ ರುಪಾಯಿಗೂ ಅಧಿಕವಾಗಿದೆ. ಇದಕ್ಕೆ ಚರಾಸ್ತಿಯನ್ನು ಸೇರಿಸಿದರೆ 1 ಕೋಟಿ ರುಪಾಯಿಗೂ ಅಧಿಕ.

      ಯಾರೀತ ತೇಜ್ ಬಹದೂರ್

      ಯಾರೀತ ತೇಜ್ ಬಹದೂರ್

      ಗಡಿ ಭದ್ರತಾ ಪಡೆಯಲ್ಲಿ ಜವಾನರಾಗಿದ್ದ ತೇಜ್ ಬಹಾದೂರ್ ಯಾದವ್ (43) ಅವರು, ಸೇನೆಯಲ್ಲಿದ್ದಾಗಲೇ ಕೇಂದ್ರ ಸರಕಾರದಿಂದ, ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯ ಬಳಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಕಳಪೆಮಟ್ಟದ ಆಹಾರ ಪೂರೈಕೆಯಾಗುತ್ತಿದೆ ಎಂದು ಸೆಲ್ಪಿ ವಿಡಿಯೋ ಮಾಡಿ 2017ರ ಜನವರಿಯಲ್ಲಿ ಸುದ್ದಿಗೆ ಗ್ರಾಸವಾಗಿದ್ದರು. ಈ ವಿಡಿಯೋ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ಆದರೆ, ವಿಚಾರಣೆ ಮಾಡಲಾಗಿ, ಗಡಿ ಭದ್ರತಾ ಪಡೆಯ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ, ಆದೇಶವಿದ್ದರೂ ಎರಡು ಫೋನ್ ಹೊಂದಿದ್ದರು ಮತ್ತು ಸಾಮಾಜಿಕ ಜಾಲತಾಣದಲ್ಲಿ ಆದೇಶಕ್ಕೆ ವಿರುದ್ಧವಾಗಿ ಫೋಟೋ ಮತ್ತು ವಿಡಿಯೋ ಪೋಸ್ಟ್ ಮಾಡಿದ್ದಾರೆಂಬ ಆರೋಪದ ಮೇಲೆ ಹರ್ಯಾಣದ ನಿವಾಸಿಯಾಗಿರುವ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+