Prabhas Movies: ಡಾರ್ಲಿಂಗ್ ಪ್ರಭಾಸ್ ಗೆದ್ದ ಸಿನಿಮಾ ಎಷ್ಟು? ಸೋತಿದ್ದು ಎಷ್ಟು?
ಪ್ರಭಾಸ್ ಸಿನಿಮಾಗಳು ಅಂದರೆ ಸಾಕು ಜನ ಉಸಿರು ಬಿಗಿಹಿಡಿದು ಕಾಯುತ್ತಿದ್ದರು. ಕೇವಲ 8 ವರ್ಷದ ಹಿಂದೆ ಪ್ರಭಾಸ್ ಹವಾ ಕಂಡು ಥಿಯೇಟರ್ ಮಾಲೀಕರು ಬೆಚ್ಚಿಬೀಳುತ್ತಿದ್ದರು. ಆದ್ರೆ ಈಗ ಕಾಲ ಬದಲಾಗಿದೆ. ಅಭಿಮಾನಿಗಳ ಪಾಲಿನ ಪ್ರೀತಿಯ ಡಾರ್ಲಿಂಗ್ ಪ್ರಭಾಸ್ ಸಾಲು ಸಾಲು ಸೋಲುಗಳಿಂದ ಬೆಚ್ಚಿಬಿದ್ದಿದ್ದಾರೆ. ಆದರೆ ಇದೀಗ ಪ್ರಭಾಸ್‌ರ ಬಹುನಿರೀಕ್ಷಿತ ಸಲಾರ್ ಸಿನಿಮಾ ಟೀಸರ್ ರಿಲೀಸ್‌ಗೆ ರೆಡಿಯಾಗಿದ್ದು, ಈ ಸಂದರ್ಭದಲ್ಲಿ ನಟ ಪ್ರಭಾಸ್ ಜೀವನದ ಸೋಲು & ಗೆಲುವಿನ ಲೆಕ್ಕಾಚಾರ ಇಲ್ಲಿದೆ.
'ಬಾಹುಬಲಿ' ಮೂಲಕ ಜಗತ್ತಿನಾದ್ಯಂತ ಮನೆಮಾತಾಗಿದ್ದ ಪ್ರಭಾಸ್ ಈಗ ಮತ್ತೆ ಅಂತಹ ಹಿಟ್ ಸಿನಿಮಾ ಕೊಡಲು ಸಜ್ಜಾಗಿದ್ದಾರೆ. 'ಉಗ್ರಂ', 'ಕೆಜಿಎಫ್: ಚಾಪ್ಟರ್ 1' ಹಾಗೂ 'ಕೆಜಿಎಫ್: ಚಾಪ್ಟರ್ 2' ಖ್ಯಾತಿಯ ಪ್ರಶಾಂತ್ ನೀಲ್ 'ಸಲಾರ್' ಚಿತ್ರಕ್ಕೆ ನಿರ್ದೇಶನವನ್ನು ಮಾಡಿರುವುದು ಕುತೂಹಲ ಕೆರಳಿಸಿದೆ. ಹೀಗೆ ಡಾರ್ಲಿಂಗ್ ಮತ್ತು ನೀಲ್ ಸಾರಥ್ಯದಲ್ಲಿ ಈ ಸಿನಿಮಾ ಇತಿಹಾಸ ಸೃಷ್ಟಿಸುವ ನಿರೀಕ್ಷೆ ಇದ್ದು, ಜುಲೈ 6ರಂದು ಬೆಳಗಿನ ಜಾವ 5.12ಕ್ಕೆ 'ಸಲಾರ್' ಸಿನಿಮಾ ಟೀಸರ್ ಬಿಡುಗಡೆಯಾಗಲಿದೆ. ಹಾಗಾದರೆ 'ಸಲಾರ್'ಗೂ ಮುನ್ನ ಪ್ರಭಾಸ್ ಅವರ ಹಿಟ್ ಮತ್ತು ಫ್ಲಾಪ್ ಸಿನಿಮಾಗಳ ಪಟ್ಟಿ ಇಲ್ಲಿ ತಿಳಿಯೋಣ.

ಡಾರ್ಲಿಂಗ್ ಪ್ರಭಾಸ್ ಸಿನಿಮಾ ಜೀವನ:
| ಕ್ರಮ ಸಂಖ್ಯೆ | ಸಿನಿಮಾ ಹೆಸರು | ಬಿಡುಗಡೆಯಾದ ವರ್ಷ | ರಿಸಲ್ಟ್ |
| 1 | ಈಶ್ವರ್ | 2002 | ಸಾಧಾರಣ |
| 2 | ರಾಘವೇಂದ್ರ | 2003 | ಫ್ಲಾಪ್ |
| 3 | ವರ್ಷಂ | 2004 | ಬ್ಲಾಕ್ ಬಸ್ಟರ್ |
| 4 | ಅಡವಿ ರಾಮುಡು | 2004 | ಫ್ಲಾಪ್ |
| 5 | ಚಕ್ರಂ | 2005 | ಫ್ಲಾಪ್ |
| 6 | ಛತ್ರಪತಿ | 2005 | ಬ್ಲಾಕ್ ಬಸ್ಟರ್ |
| 7 | ಪೌರ್ಣಮಿ | 2006 | ಬ್ಲಾಕ್ ಬಸ್ಟರ್ |
| 8 | ಯೋಗಿ | 2007 | ಫ್ಲಾಪ್ |
| 9 | ಮುನ್ನಾ | 2007 | ಫ್ಲಾಪ್ |
| 10 | ಬುಜ್ಜಿಗಾಡು | 2008 | ಫ್ಲಾಪ್ |
| 11 | ಬಿಲ್ಲಾ | 2009 | ಸಾಧಾರಣ |
| 12 | ಏಕ್ ನಿರಂಜನ್ | 2009 | ಸಾಧಾರಣ |
| 13 | ಡಾರ್ಲಿಂಗ್ | 2010 | ಹಿಟ್ |
| 14 | ಮಿ.ಪರ್ಫೆಕ್ಟ್ | 2011 | ಹಿಟ್ |
| 15 | ರೆಬೆಲ್ | 2012 | ಫ್ಲಾಪ್ |
| 16 | ಮಿರ್ಚಿ | 2013 | ಸೂಪರ್ ಹಿಟ್ |
| 17 | ಬಾಹುಬಲಿ-1 | 2015 | ಇಂಡಸ್ಟ್ರಿ ಹಿಟ್ |
| 18 | ಬಾಹುಬಲಿ-2 | 2017 | ಇಂಡಸ್ಟ್ರಿ ಹಿಟ್ |
| 19 | ಸಾಹೋ | 2019 | ಸಾಧಾರಣ |
| 20 | ರಾಧೆ ಶ್ಯಾಮ್ | 2022 | ಫ್ಲಾಪ್ |
| 21 | ಆದಿಪುರುಷ್ | 2023 | ಫ್ಲಾಪ್ |
| 22 | ಸಲಾರ್ | ಬಿಡುಗಡೆ ಆಗಬೇಕು | ? |
'ಸಲಾರ್' ಮೇಲೆ ಬೆಟ್ಟದಷ್ಟು ನಿರೀಕ್ಷೆ
ಹೌದು, ಈಗಾಗಲೇ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ನಟ ಪ್ರಭಾಸ್ ಫ್ಯಾನ್ಸ್‌ಗೆ ಈ ಸಿನಿಮಾ ಹಬ್ಬದಂತೆ ಭಾಸವಾಗುತ್ತಿದೆ. ಈಗಾಗಲೇ ಬಾಹುಬಲಿ ಸಿನಿಮಾದ 2 ಸರಣಿಯ ಮೂಲಕ ಪ್ರಭಾಸ್ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಲಾರ್ ಚಿತ್ರದ ಮೂಲಕ ದೊಡ್ಡ ಗಿಫ್ಟ್ ಕೊಡಲು ಸಜ್ಜಾಗಿದ್ದಾರೆ. ಇದೇ ಕಾರಣಕ್ಕೆ ಈಗ ಸಲಾರ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. 'ಬಾಹುಬಲಿ-1' & 'ಬಾಹುಬಲಿ-2' ನಂತರ ಬಿಡುಗಡೆಯಾದ ಡಾರ್ಲಿಂಗ್ ಪ್ರಭಾಸ್ ನಟನೆಯ 'ಸಾಹೋ' & 'ರಾಧೆ ಶ್ಯಾಮ್' ಹಾಗೂ 'ಆದಿಪುರುಷ್' ಸಿನಿಮಾಗಳು ಅಷ್ಟೇನು ಸದ್ದು ಮಾಡಲೇ ಇಲ್ಲ. ಹೀಗಾಗಿ ಅವರ ಅಭಿಮಾನಿಗಳು ಉಸಿರು ಬಿಗಿಹಿಡಿದು 'ಸಲಾರ್' ಸಿನಿಮಾಗಾಗಿ ಕಾಯುತ್ತಿದ್ದಾರೆ.
ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ
ಭಾರತೀಯ ಚಿತ್ರರಂಗದ ಹೊಸ ಟ್ರೆಂಡ್ ಪ್ಯಾನ್ ಇಂಡಿಯಾ ಸಿನಿಮಾಗಳು. ಈಗ ಸಲಾರ್ ಕೂಡ ಅದೇ ಪ್ಯಾನ್ ಇಂಡಿಯಾ ಸಾಲಿಗೆ ಹೊಸ ಸೇರ್ಪಡೆ ಆಗಲಿದೆ. ಹೊಂಬಾಳೆ ಫಿಲ್ಮ್ಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಶನ್‌ನ 'ಕೆಜಿಎಫ್-1' ಮತ್ತು 'ಕೆಜಿಎಫ್-2' ಸರಣಿಗಳು ಇಂಡಸ್ಟ್ರಿ ಹಿಟ್ ಆಗಿವೆ. ಈಗ 'ಸಲಾರ್' ಮೂಲಕ ಹೊಂಬಾಳೆ ಫಿಲ್ಮ್ಸ್ ಮತ್ತು ಪ್ರಶಾಂತ್ ನೀಲ್ ಮೊದಲ ಬಾರಿಗೆ ಪ್ರಭಾಸ್ ಜೊತೆಗೆ ಕೈಜೋಡಿಸಿದ್ದಾರೆ. ಅಲ್ಲದೆ ಇದು ಪರಭಾಷೆಯಲ್ಲಿ ಮೂಡಿಬರುತ್ತಿರುವ ಹೊಂಬಾಳೆ ಫಿಲ್ಮ್ಸ್‌ನ ಮೊದಲ ಸಿನಿಮಾ.
ಈಗಾಗಲೇ ಚಿತ್ರ ಬಿಡುಗಡೆ ಆಗುವುದಕ್ಕೂ ಮೊದಲೇ ನೂರಾರು ಕೋಟಿ ಬಿಸಿನೆಸ್ ಮಾಡಿದೆ ಎಂಬ ಮಾತು ಓಡಾಡುತ್ತಿದೆ. 'ಸಲಾರ್' ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಸೇರಿದಂತೆ ಶ್ರುತಿ ಹಾಸನ್ ಮತ್ತು ಕನ್ನಡದ ನಟರಾದ ಪ್ರಮೋದ್ ಹಾಗೂ ಮಧು ಗುರುಸ್ವಾಮಿ ನಟಿಸಿದ್ದಾರೆ. ಹೀಗೆ ದೊಡ್ಡ ತಾರಾಬಳಗವೇ 'ಸಲಾರ್' ಸಿನಿಮಾ ತಂಡಕ್ಕೆ ಸಾಥ್ ನೀಡಿದೆ. ಈ ಎಲ್ಲಾ ಕಾರಣಕ್ಕೆ ಇಡೀ ದೇಶಾದ್ಯಂತ ಸಲಾರ್ ಸಿನಿಮಾ ನೋಡಲು ಸಿನಿಮಾ ಪ್ರೇಮಿಗಳು ಕಾಯುತ್ತಿದ್ದಾರೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications