ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರೈವಿಂಗ್ ಲೇಸೆನ್ಸ್ ನಿಯಮದಲ್ಲಿ ಭಾರೀ ಬದಲಾವಣೆ; ಆರ್‌ಟಿಒಗೆ ಸುತ್ತೋದು ತಪ್ಪುತ್ತೆ

|
Google Oneindia Kannada News

ವಾಹನ ಚಾಲನಾ ಪರವಾನಗಿ ಪಡೆಯುವ ವ್ಯವಸ್ಥೆ ಇತ್ತೀಚೆಗೆ ಸರಳಗೊಂಡಿದೆ. ಮೊದಲಾದರೆ ಲೈಸೆನ್ಸ್ ಪಡೆಯಲು ಹರಸಾಹಸವನ್ನೇ ಮಾಡಬೇಕಿತ್ತು. ಈಗ ಕೇಂದ್ರ ಸಾರಿಗೆ ಇಲಾಖೆ ಡ್ರೈವಿಂಗ್ ಲೈಸೆನ್ಸ್ ಪಡೆಯುವ ವ್ಯವಸ್ಥೆಯನ್ನು ಇನ್ನಷ್ಟು ಸುಲಭಗೊಳಿಸಿದೆ.

ಹೊಸ ವ್ಯವಸ್ಥೆಯ ಅಡಿಯಲ್ಲಿ ನೀವು ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಆರ್‌ಟಿಒ ಕಚೇರಿಗೆ ಅಲೆದಾಡುವ ಅಗತ್ಯ ಬೀಳುವುದಿಲ್ಲ. ಉದ್ದುದ್ದ ಕ್ಯೂನಲ್ಲಿ ನಿಂತು ಹೈರಾಣಗೊಳ್ಳುವ ಪ್ರಮೇಯ ಬರುವುದಿಲ್ಲ.

Vehicle Fitness Certificate: ನಿಮ್ಮ ವಾಹನದ ಎಫ್‌ಸಿ ಮಾಡಿಸುವುದು ಹೇಗೆ?Vehicle Fitness Certificate: ನಿಮ್ಮ ವಾಹನದ ಎಫ್‌ಸಿ ಮಾಡಿಸುವುದು ಹೇಗೆ?

ಲೈಸೆನ್ಸ್ ಪಡೆಯಲು ನೀವು ಆರ್‌ಟಿಒ ಅಧಿಕಾರಿಗಳ ಬಳಿ ಹೋಗಿ ನೀವು ವಾಹನ ಚಾಲನಾ ಪರೀಕ್ಷೆ ಎದುರಿಸಬೇಕಾಗಿಲ್ಲ. ಬಹಳ ಸುಗಮವಾಗಿ ಮತ್ತು ಸರಳವಾಗಿ ನಿಮಗೆ ವಾಹನ ಪರವಾನಗಿ ಸಿಗುವ ರೀತಿಯಲ್ಲಿ ಹೊಸ ನಿಯಮಗಳನ್ನು ತರಲಾಗಿದೆ.

Driving Licence Rules Big Change; No Test, All Easy, Know Details in Kannada

ಡ್ರೈವಿಂಗ್ ಸ್ಕೂಲ್‌ನಲ್ಲಿ ತರಬೇತಿ:

ಸರಕಾರದಿಂದ ಮಾನ್ಯತೆ ಪಡೆದ ಯಾವುದಾದರೂ ಡ್ರೈವಿಂಗ್ ತರಬೇತಿ ಶಾಲೆಯ ಮೂಲಕ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು. ಡ್ರೈವಿಂಗ್ ಸ್ಕೂಲ್‌ನಲ್ಲೇ ನೀವು ತರಬೇತಿ ಪಡೆದು ಪರೀಕ್ಷೆ ಎದುರಿಸಿ ಪಾಸ್ ಆಗಬೇಕು. ಆ ಶಾಲೆಯಿಂದ ನಿಮಗೆ ಪ್ರಮಾಣಪತ್ರ ಸಿಗುತ್ತದೆ. ಅದರ ಆಧಾರದ ಮೇಲೆ ಡ್ರೈವಿಂಗ್ ಲೈಸೆನ್ಸ್ ಒದಗಿಸಲಾಗುತ್ತದೆ.

ಹೊಸ ನಿಯಮಗಳು:

ವಾಹನ ಚಾಲನಾ ತರಬೇತಿ ಕೇಂದ್ರಗಳ ಬಗ್ಗೆ ಕೇಂದ್ರ ಸಾರಿಗೆ ಇಲಾಖೆ ಕೆಲ ಮಾರ್ಗಸೂಚಿಗಳನ್ನು ನೀಡಿದೆ. ಅದರಲ್ಲಿ ತರಬೇತಿ ಶಾಲೆಗಳ ಗಾತ್ರ, ತರಬೇತಿದಾರರ ವಿದ್ಯಾರ್ಹತೆ, ತರಬೇತಿ ಅವಧಿ, ತರಬೇತಿ ಪಠ್ಯಕ್ರಮ ಇತ್ಯಾದಿ ಅನೇಕ ಅಂಶಗಳಿವೆ. ಕೆಲ ಮುಖ್ಯ ಅಂಶಗಳು ಇಲ್ಲಿ ಕೆಳಕಾಣಿಸಿದಂತಿವೆ.

Driving Licence Rules Big Change; No Test, All Easy, Know Details in Kannada

* ದ್ವಿಚಕ್ರ, ತ್ರಿಚಕ್ರ ಮತ್ತು ಲಘು ವಾಹನಗಳ ಚಾಲನೆಯ ತರಬೇತಿ ನೀಡುವ ಡ್ರೈವಿಂಗ್ ಸ್ಕೂಲ್ ಕನಿಷ್ಠ 1 ಎಕರೆ ಪ್ರದೇಶ ಹೊಂದಿರಬೇಕು.

* ಮಧ್ಯಮ ಮತ್ತು ಭಾರೀ ಗಾತ್ರದ ವಾಹನಗಳ ಚಾಲನಾ ತರಬೇತಿ ಶಾಲೆ ಎರಡು ಎಕರೆ ಪ್ರದೇಶ ಜಾಗ ಹೊಂದಿರಬೇಕು.

* ತರಬೇತಿ ನೀಡುವ ವ್ಯಕ್ತಿ ಕನಿಷ್ಠ 12ನೇ ತರಗತಿ ಪಾಸ್ ಆಗಿರಬೇಕು. ವಾಹನ ಚಾಲನೆಯಲ್ಲಿ ಐದು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರಬೇಕು. ಎಲ್ಲಾ ಟ್ರಾಫಿಕ್ ನಿಯಮಗಳನ್ನು ತಿಳಿದುಕೊಂಡಿರಬೇಕು.

Driving Licence Rules Big Change; No Test, All Easy, Know Details in Kannada

* ಲಘು ಮೋಟಾರು ವಾಹನಗಳ ತರಬೇತಿ ಅವಧಿ 4 ವಾರ ಅಥವಾ 29 ಗಂಟೆಯವರೆಗೆ ಇರಬೇಕು. ತರಬೇತಿಯಲ್ಲಿ ಥಿಯರಿ ಮತ್ತು ಪ್ರಾಕ್ಟಿಕಲ್ ವಿಭಾಗ ಇರಬೇಕು.

* ತರಬೇತಿಯಲ್ಲಿ ಅಭ್ಯರ್ಥಿಗಳಿಗೆ 21 ಗಂಟೆ ಕಾಲ ರಸ್ತೆಗಳಲ್ಲಿ ಪ್ರಾಯೋಗಿಕವಾಗಿ ವಾಹನ ಚಲಾಯಿಸುವ ಅವಕಾಶ ನೀಡಿ ಕಲಿಸಬೇಕು. ಮಾಮೂಲಿಯ ರಸ್ತೆ, ಕಚ್ಛಾ ರಸ್ತೆ, ಹೆದ್ದಾರಿ, ನಗರ ರಸ್ತೆಗಳಲ್ಲಿ ತರಬೇತಿ ನೀಡಬೇಕು. ವಾಹನ ಹಿಂದಕ್ಕೆ ತಿರುಗಿಸುವುದು, ಪಾರ್ಕಿಂಗ್ ಮಾಡುವುದು, ಎತ್ತರದ ರಸ್ತೆಯಲ್ಲಿ ಚಲಾಯಿಸುವುದು, ತಗ್ಗಿನಲ್ಲಿ ಇಳಿಸುವುದು ಇತ್ಯಾದಿ ಚಾಲನಾ ಕಲೆಗಳನ್ನು ಕಲಿಸಿಕೊಡಬೇಕು.

* ಥಿಯರಿ 8 ಗಂಟೆ ಇರಬೇಕು. ಇದರಲ್ಲಿ ರಸ್ತೆ ನಿಯಮ, ರಸ್ತೆ ಅಪಘಾತ, ಪ್ರಥಮ ಚಿಕಿತ್ಸೆ ಇತ್ಯಾದಿ ವಿಚಾರಗಳನ್ನು ಕಲಿಸಿಕೊಡಬೇಕು.

ಡಿಜಿಲಾಕರ್‌ಗೆ ಡ್ರೈವಿಂಗ್ ಲೈಸೆನ್ಸ್ ಜೋಡಿಸುವುದು:

ವಾಹನ ಪರವಾನಗಿ ಕಾರ್ಡ್ ಅನ್ನು ನೀವು ಯಾವಾಗಲೂ ಜೊತೆಯಲ್ಲಿ ಇಟ್ಟುಕೊಳ್ಳುವುದು ಸುರಕ್ಷಿತವಲ್ಲ. ಡೂಪ್ಲಿಕೇಟ್ ಕಾರ್ಡ್ ಮಾಡಿಟ್ಟುಕೊಳ್ಳಬಹುದಾದರೂ ಅದನ್ನು ಸದಾ ಜೊತೆಯಲ್ಲಿ ಇಟ್ಟುಕೊಳ್ಳಲು ಇಚ್ಛಿಸದೇ ಇರುವವರಿಗೆ ಡಿಜಿಲಾಕರ್ ವ್ಯವಸ್ಥೆ ಅನುಕೂಲವಾಗಿದೆ.

ಸರಕಾರವೇ ನಿರ್ವಹಿಸುವ ಡಿಜಿಲಾಕರ್ ವೆಬ್‌ಸೈಟ್‌ನಲ್ಲಿ ಅಥವಾ ಅದರ ಮೊಬೈಲ್ ಆ್ಯಪ್‌ನಲ್ಲಿ ನೀವು ಡ್ರೈವಿಂಗ್ ಲೈಸೆನ್ಸ್ ಅನ್ನು ಜೋಡಿಸಬಹುದು. ಆ ಮೂಲಕ ಟ್ರಾಫಿಕ್ ಪೊಲೀಸರು ಕೇಳಿದಾಗ ಲೈಸೆನ್ಸ್ ಅನ್ನು ತೋರಿಸಬಹುದು. ಅದನ್ನು ಮಾಡುವ ಕ್ರಮ ಇಲ್ಲಿದೆ:

* ಡಿಜಿಲಾಕರ್ ವೆಬ್ ಅಥವಾ ಆ್ಯಪ್‌ನಲ್ಲಿ ನಿಮ್ಮ ಆಧಾರ್ ನಂಬರ್ ಮೂಲಕ ನೊಂದಾಯಿಸಬೇಕು.
* ನಂತರ ಮುಖ್ಯಪುಟದ ಎಡಬದಿಯ ಮೆನುನಲ್ಲಿ "ಇಷ್ಯೂಡ್ ಡಾಕುಮೆಂಟ್ಸ್", "ಗೆಟ್ ಇಷ್ಯೂಡ್ ಡಾಕ್ಯುಮೆಂಟ್ಸ್" ಆಯ್ದುಕೊಳ್ಳಿ.
* "ಸೆಂಟ್ರಲ್ ಗವರ್ನಮೆಂಟ್" ಮೆನುನಿಂದ "ಮಿನಿಸ್ಟ್ರಿ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಅಂಡ್ ಹೈವೇಸ್" ಆಯ್ದುಕೊಳ್ಳಿ.
* ನಂತರ "ಡ್ರೈವಿಂಗ್ ಲೈಸೆನ್ಸ್" ಕ್ಲಿಕ್ ಮಾಡಿ
* ಹೊಸ ಪುಟದಲ್ಲಿ ನಿಮ್ಮ ಹೆಸರು ಮತ್ತು ಜನ್ಮದಿನಾಂಕ ಕಾಣಿಸುತ್ತದೆ. ಅಲ್ಲಿ ನಿಮ್ಮ ಲೈಸೆನ್ಸ್ ನಂಬರ್ ಅನ್ನು ನಮೂದಿಸಿ. ಅದು KA0419920009646 ಮಾದರಿಯಲ್ಲಿ ನಂಬರ್ ಇರಬೇಕು.
* ಆಧಾರ್ ಮಾಹಿತಿಯನ್ನು ಹಂಚಿಕೊಳ್ಳಲು ಸಮ್ಮತಿ ನೀಡುವ ಬಾಕ್ಸ್ ಅನ್ನು ಕ್ಲಿಕ್ ಮಾಡಬೇಕು.
* ನಂತರ 'ಗೆಟ್ ಡಾಕ್ಯುಮೆಂಟ್' ಆಯ್ದುಕೊಳ್ಳಿ.

ಈಗ ನಿಮ್ಮ ವಾಹನ ಪರವಾನಗಿ ದಾಖಲೆಯು ಡಿಜಿಲಾಕರ್‌ನಲ್ಲಿ ಸೇವ್ ಆಗುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Central government has made the task of getting driving licence easier with new set of rules. One can get license without having to wait at RTO for driving test.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X