ಸಂಚಾರಿ ನಿಯಮ ಪಾಲಿಸಿದ ಶ್ವಾನ: ಬೈಕ್ ಸವಾರನ ಹಿಂದೆ ಕುಳಿತು ಹೆಲ್ಮೆಟ್ ಧರಿಸಿದ್ದು ಮನುಷ್ಯ ಅಲ್ಲ ನಾಯಿ!
ದಿನನಿತ್ಯದ ಸಂಚಾರ ದಟ್ಟಣೆಯಲ್ಲಿ ಬೈಕ್ ಸವಾರರು ಮತ್ತು ಅವರ ಸಹ ಪ್ರಯಾಣಿಕರು ಸುರಕ್ಷತೆಗಾಗಿ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಈ ನಡುವೆ ವೀಡಿಯೊವೊಂದು ಇಂಟರ್ನೆಟ್‌ನ ಗಮನವನ್ನು ಸೆಳೆದಿದೆ. ಇದೊಂದು ಅಸಾಧಾರಣ ದೃಶ್ಯವಾಗಿದ್ದು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ತಮಿಳುನಾಡಿನಲ್ಲಿ ಒಬ್ಬ ವ್ಯಕ್ತಿ ಹೆಲ್ಮೆಟ್ ಧರಿಸಿದ ನಾಯಿಯನ್ನು ತನ್ನ ಸಹ ಪ್ರಯಾಣಿಕರಂತೆ ಕೂರಿಸಿಕೊಂಡು ಬೈಕ್ ಓಡಿಸುತ್ತಾನೆ. ಈ ಅಸಾಮಾನ್ಯ ಸನ್ನಿವೇಶವನ್ನು @PMN2463 ಎಂಬ ಟ್ವಿಟರ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಉತ್ಸಾಹದ ಅಲೆಯನ್ನು ಹುಟ್ಟುಹಾಕಿದೆ.

"ರೂಲ್ ಈಸ್ ರೂಲ್" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಹಿಂಬದಿ ಸವಾರ ಚಿತ್ರೀಕರಿಸಿದ್ದಾನೆ. ವಾಹನ ಸವಾರನ ಹಿಂದೆ ಸಹ ಪ್ರಯಾಣಿಕರಂತೆ ಕುಳಿತ ಕಪ್ಪು ಲ್ಯಾಬ್ರಡಾರ್ ನಾಯಿ ಹೆಲ್ಮೆಟ್ ಅನ್ನು ಧರಿಸಿದೆ. ಹಿಂಬದಿಯಿಂದ ನೋಡಲು ನಾಯಿಯು ನೇರವಾಗಿ ಕುಳಿತಿದೆ.
ವಿಚಿತ್ರವೆಂದರೆ ವಿಡಿಯೋದಲ್ಲಿ ಮನುಷ್ಯನೇ ಬೈಕ್ ಸವಾರನ ಹಿಂದಿನ ಸೀಟಿನಲ್ಲಿ ಕುಳಿತಿದ್ದಾನೆ ಎಂದು ತೋರುತ್ತದೆ. ಕೊಂಚ ದೂರದಿಂದ ನೋಡಿದರೆ ಇದು ನಾಯಿ ಎಂದು ಗೊತ್ತಾಗುವುದೇ ಇಲ್ಲ. ಈ ವಿಡಿಯೋ ನೋಡುಗರನ್ನು ಬೆರಗುಗೊಳಿಸಿದೆ. ವಿಡಿಯೋ ಕೊಂಚ ಹತ್ತಿರಕ್ಕೆ ಹೋದಾಗ ಇದು ನಾಯಿ ಎಂದು ಗೊತ್ತಾಗುತ್ತದೆ.
ನಾಯಿ ನಿಯತ್ತಿಗೆ ಹೆಸರಾದ ಪ್ರಾಣಿ. ಮನೆಯಲ್ಲಿ ಸಾಕುಪ್ರಾಣಿ ಇದ್ದರೆ, ಜೀವನ ತುಂಬಾ ಸಂತೋಷವಾಗಿರುತ್ತೆ. ಮನೆಯಲ್ಲಿ ನಾಯಿ ಇದ್ದರೆ, ಇಡೀ ದಿನ ಅದರೊಂದಿಗೆ ಆಟವಾಡುವುದರಲ್ಲಿ ಕಳೆಯುತ್ತದೆ. ನೀವು ಆಫೀಸಿನಿಂದ ಹಿಂದಿರುಗಿದಾಗ, ನಾಯಿ ನಿಮ್ಮ ಕುಟುಂಬ ಸದಸ್ಯರಿಗಿಂತ ಹೆಚ್ಚು ಸಂತೋಷ ಪಡುತ್ತೆ. ಅದು ಯಾವ ತಳಿಯ ನಾಯಿಯಾಗಿದ್ದರೂ, ಅದರ ಕೆಲವು ಅಭ್ಯಾಸಗಳು ಒಂದೇ ಆಗಿರುತ್ತವೆ.
ನಾಯಿ ನಿಮ್ಮೊಂದಿಗೆ ಆಡಲು ಇಷ್ಟಪಡುತ್ತೆ, ಜೊತೆಗೆ ನಿಮ್ಮ ಗಮನ ಸೆಳೆಯಲು ಇಷ್ಟಪಡುತ್ತೆ, ನೀವು ಹೊರಟಾಗ ಅದಕ್ಕೂ ಬೇಸರವಾಗುತ್ತದೆ. ಹೀಗಾಗಿ ಹಲವರು ನಾಯಿಯೊಂದಿಗೆ ಪ್ರಯಾಣ ಮಾಡಲು ಇಷ್ಟ ಪಡುತ್ತಾರೆ. ಜೊತೆಗೆ ಅವುಗಳಿಗೆ ಯಾಔಉದೇ ಕಾರಣಕ್ಕೂ ಕಾನಿಯಾಗದಂತೆ ಕಾಳಜಿ ವಹಿಸುತ್ತಾರೆ.
ಈ ಅಪರೂಪದ ದೃಶ್ಯವನ್ನು 95 ಸಾವಿರ ವೀಕ್ಷಣೆಗಳನ್ನು ಮತ್ತು 700 ಲೈಕ್‌ಗಳನ್ನು ಸಂಗ್ರಹಿಸಿದೆ. ವಿಡಿಯೊಗೆ ನೆಟಿಜನ್‌ಗಳ ಪ್ರತಿಕ್ರಿಯೆಗಳು ವಿಭಿನ್ನವಾಗಿವೆ. ಕೆಲವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರೆ, ಇತರರು ನಾಯಿಯನ್ನು ಇಷ್ಟು ಚೆನ್ನಾಗಿ ಆರೈಕೆ ಮಾಡಿದ್ದಕ್ಕಾಗಿ ವ್ಯಕ್ತಿಯನ್ನು ಶ್ಲಾಘಿಸಿದ್ದಾರೆ.
ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ, "ಬೈಕರ್ ಅವರ ಬಳಿಗೆ ಬರುವವರೆಗೂ ನಾನು ಉದ್ದನೆಯ ಕೂದಲಿನ ಮಹಿಳೆ ಎಂದು ಭಾವಿಸಿದ್ದೆನು" ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ, "ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ನೀವು ಅವರ ಬಗ್ಗೆ ಕಾಳಜಿ ವಹಿಸುತ್ತೀರಿ" ಎಂದು ಬರೆದಿದ್ದಾರೆ.
ವೈರಲ್ ವೀಡಿಯೊವನ್ನು ಇಲ್ಲಿ ನೋಡಿ:
Rule is rule..😜#WhatsApp #instagramdown #TamilNadu pic.twitter.com/g47mB5mEfY
— Mohammed Nayeem (@PMN2463) May 23, 2023
ಈ ವೈರಲ್ ವೀಡಿಯೊ ಅಂತರ್ಜಾಲವನ್ನು ಆಕರ್ಷಿಸಿದೆ. ನಮ್ಮ ಆಪ್ತರ ಹಾಗೂ ಸ್ನೇಹಿತರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ನಾವು ಎಷ್ಟು ಆದ್ಯತೆ ನೀಡಬೇಕು ಎಂಬುದರ ಕುರಿತು ಸಂಭಾಷಣೆಗಳು ಮತ್ತು ಚರ್ಚೆಗಳನ್ನು ಹುಟ್ಟುಹಾಕಿದೆ.
ಸಾಕುಪ್ರಾಣಿಗಳ ಬಗೆಗಿನ ಕಾಳಜಿಯ ಈ ಅನನ್ಯ ಮತ್ತು ಹೃದಯಸ್ಪರ್ಶಿ ವಿಡಿಯೋ ವೀಕ್ಷಕರಲ್ಲಿ ಒಂದು ಜಾಗೃತಿಯನ್ನು ಮೂಡಿಸಿದೆ. ನಮ್ಮ ಸಾಕುಪ್ರಾಣಿಗಳೊಂದಿಗೆ ನಾವು ಹಂಚಿಕೊಳ್ಳುವ ವಿಶೇಷ ಬಂಧವನ್ನು ಎತ್ತಿ ತೋರಿಸುತ್ತದೆ.












Click it and Unblock the Notifications