Bengaluru Biryani: ಬೆಂಗಳೂರಿನಲ್ಲಿ ಜನ ಮೆಚ್ಚಿದ ಮುಂಜಾನೆಯ ಬಿರಿಯಾನಿಗಳಿವು

ಬೆಂಗಳೂರು, ಡಿಸೆಂಬರ್‌ 20: ಚಳಿಗಾಲ, ಮಳೆಗಾಲ ಯಾವುದೇ ಇರಲಿ ಬಿಸಿ ಬಿಸಿ ಬಿರಿಯಾನಿ ಎನ್ನುವ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ಬಿರಿಯಾನಿಯ ರುಚಿಗೆ ಮನಸೋಲದವರಿಲ್ಲ. ದೇಶದಲ್ಲಿ ಅಂತ್ಯಂತ ಹೆಚ್ಚು ಜನರು ಇಷ್ಟಪಡುವ ಹಾಗೂ ಅಂತ್ಯಂತ ಹೆಚ್ಚು ಮಾರಾಟವಾಗುವ ಖಾದ್ಯವೆಂದರೆ ಅದು ಬಿರಿಯಾನಿ. ಬಿರಿಯಾನಿಯಲ್ಲೂ ವಿವಿಧ ಬಗೆಗಳಿದ್ದು, ಜನ ಅರಸಿ ಹೋಗಿ ಈ ಖಾದ್ಯವನ್ನು ಸವಿಯುತ್ತಾರೆ.

ಮೊದಲೆಲ್ಲಾ ವಿಶೇಷ ಎನಿಸಿಕೊಂಡಿದ್ದ ಬೆಂಗಳೂರಿನ ಮುಂಜಾನೆ ನಾಲ್ಕು ಗಂಟೆಯ ಬಿರಿಯಾನಿ ಈಗ ಸಾಮಾನ್ಯವಾಗಿ ಬಿಟ್ಟಿದೆ. ನಗರದ ಅನೇಕ ಕಡೆಗಳಲ್ಲಿ ಮುಂಜಾನೆ ನಾಲ್ಕು ಗಂಟೆಯ ಬಿರಿಯಾನಿ ದೊರೆಯುತ್ತದೆ. ಹೊಸಕೋಟೆಯ ಮಣಿ ಧಮ್‌ ಬಿರಿಯಾನಿ, ಆನಂದ್ ಹಾಗೂ ಅಕ್ಷಯ್‌ ಬಿರಿಯಾನಿ ಮಾತ್ರವಲ್ಲದೇ ಬೆಂಗಳೂರು ನಗರದ ಇನ್ನೂ ಕೆಲವು ಹೋಟೆಲ್‌ಗಳಲ್ಲಿ ಮುಂಜಾನೆ ನಾಲ್ಕು ಗಂಟೆಗೆ ಬಿರಿಯಾನಿ ಸಿಗುತ್ತದೆ. ಈ ಬಗ್ಗೆ ವಿವರ ಇಲ್ಲಿದೆ.

Discover The Best Early Morning Biriyanis In Bengaluru

ಮಂಡಿಪೇಟೆ ಮೈಸೂರು ಪಲಾವ್‌

ಮಂಡಿಪೇಟೆ ಮೈಸೂರು ಪಲಾವ್‌ ಬೆಂಗಳೂರಿನ ಜೆ.ಪಿ ನಗರದಲ್ಲಿದ್ದು, ಇಲ್ಲಿ ಮುಂಜಾನೆ ನಾಲ್ಕರಿಂದ ನಾಲ್ಕುವರೆಯೊಳಗೆ ಬಿರಿಯಾನಿ ಆರಂಭವಾಗುತ್ತದೆ. ಇಲ್ಲಿನ ಚಿಕನ್‌ ಹಾಗೂ ಮಟನ್‌ ಬಿರಿಯಾನಿ, ಮಟನ್‌ ಚಾಪ್ಸ್‌, ಹಾಗೂ ಕಾಲು ಸೂಪ್‌ ತುಂಬಾನೇ ಫೇಮಸ್‌ ಆಗಿದ್ದು, ಜನ ಹುಡುಕಿಕೊಂಡು ಬಂದು ಇಲ್ಲಿನ ಬಿರಿಯಾನಿ ಸವಿಯುತ್ತಾರೆ. ಇನ್ನು ಮಂಡಿಪೇಟೆ ಮೈಸೂರು ಪಲಾವ್‌ ಅವರ ಅನೇಕ ಬ್ರಾಂಚ್‌ಗಳು ಬೆಂಗಳೂರಿನಲ್ಲಿದ್ದು, ಜನರು ಹುಡುಕಿಕೊಂಡು ಹೋಗಿ ಈ ಹೋಟೆಲ್‌ನ ಆಹಾರಗಳ ರುಚಿ ನೋಡುತ್ತಾರೆ.

ದೊನ್ನೆ ಬಿರಿಯಾನಿ, ಹೆಚ್‌ಎಸ್‌ಆರ್‌ ಲೇಔಟ್‌

ಹೆಚ್‌ಎಸ್‌ಆರ್‌ ಲೇಔಟ್‌ನ ಸೆಕ್ಟರ್‌ 2ರಲ್ಲಿ ಇರುವ ದೊನ್ನೆ ಬಿರಿಯಾನಿ ಹೋಟೆಲ್‌ನಲ್ಲಿ ವಾರದ ಮೂರು ದಿನ ಮುಂಜಾನೆ ನಾಲ್ಕು ಗಂಟೆಗೆ ಬಿರಿಯಾನಿ ಸಿಗುತ್ತದೆ. ಬುಧವಾರ, ಶುಕ್ರವಾರ ಹಾಗೂ ಭಾನುವಾರ ಇಲ್ಲಿ ಬೆಳಗ್ಗೆ ನಾಲ್ಕು ಗಂಟೆಗೆಯಿಂದ ರಾತ್ರಿ 11 ಗಂಟೆವರೆಗೆ ಬಿರಿಯಾನಿ ಲಭ್ಯವಿರುತ್ತದೆ. ಬೆಂಗಳೂರಿನಲ್ಲಿ ದೊನ್ನೆ ಬಿರಿಯಾನಿ ಹೆಸರಿನ ಅನೇಕ ಹೋಟೆಲ್‌ಗಳಿದ್ದು, ಮುಂಜಾನೆ ಬಿರಿಯಾನಿ ಸಿಗುವ ಬೆಸ್ಟ್‌ ಸ್ಥಳಗಳಲ್ಲಿ ಹೆಚ್‌ಎಸ್‌ಆರ್‌ ಲೇಔಟ್‌ನ ಸೆಕ್ಟರ್‌ 2ರಲ್ಲಿ ಇರುವ ದೊನ್ನೆ ಬಿರಿಯಾನಿ ಹೋಟೆಲ್‌ ಪ್ರಮುಖವಾಗಿದೆ.

Discover The Best Early Morning Biriyanis In Bengaluru

ಮಾವಳ್ಳಿ ಬಿರಿಯಾನಿ

ಬೆಂಗಳೂರು ಮಾತ್ರವಲ್ಲ ರಾಜ್ಯದ ಟಾಪ್‌ ಬಿರಿಯಾನಿಗಳಲ್ಲಿ ಮಾವಳ್ಳಿ ಬಿರಿಯಾನಿ ಕೂಡ ಒಂದು. ವಿವಿಧ ಜಿಲ್ಲೆಗಳಲ್ಲಿ ಮಾವಳ್ಳಿ ಬಿರಿಯಾನಿ ಹೋಟೆಲ್‌ ಫೇಮಸ್‌ ಆಗಿದ್ದು, ಬೆಂಗಳೂರಿನಲ್ಲಿಯೇ ಮಾವಳ್ಳಿ ಬಿರಿಯಾನಿ ಹೆಸರಿನ ಅನೇಕ ಹೋಟೆಲ್‌ಗಳಿವೆ. ಇಲ್ಲಿ ಎಲ್ಲಾ ನಾಟಿ ಶೈಲಿಯ ಆಹಾರಗಳು ಸಖತ್‌ ಫೇಮಸ್‌ ಆಗಿದ್ದು, ಶಾಂತಿನಗರದಲ್ಲಿರುವ ಮಾವಳ್ಳಿ ಬಿರಿಯಾನಿಯಲ್ಲಿ ಬುಧವಾರ, ಶುಕ್ರವಾರ ಹಾಗೂ ಭಾನುವಾರ ಬೆಳಗ್ಗೆ ಮೂರು ಗಂಟೆಗೆ ಬಿರಿಯಾನಿ ಲಭ್ಯವಿರುತ್ತದೆ. ಇನ್ನು ಬೇರೆ ಬೇರೆ ಮಾವಳ್ಳಿ ಬಿರಿಯಾನಿ ಹೋಟೆಲ್‌ನಲ್ಲಿ ಸಮಯದಲ್ಲಿ ವ್ಯತ್ಯಾಸವಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಮೇಲಿನ ಬಿರಿಯಾನಿಗಳ ರುಚಿ ಹಾಗೂ ವಿಶೇಷತೆ ಬಗ್ಗೆ ಅನೇಕ ವಿಡಿಯೋಗಳು ವೈರಲ್‌ ಆಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+