CoWINನಲ್ಲಿ ನೋಂದಣಿ ಹೇಗೆ? ಯುವ ಪೀಳಿಗೆಗೆ ಇಲ್ಲಿದೆ ಮಾರ್ಗಸೂಚಿ

ನವದೆಹಲಿ, ಜನವರಿ 03: ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 25, 2021 ರಂದು ತಮ್ಮ ಭಾಷಣದಲ್ಲಿ 15-18 ವರ್ಷ ವಯಸ್ಸಿನ ಮಕ್ಕಳು ಜನವರಿ 3, 2022ರಿಂದ ಕೋವಿಡ್-19 ವಿರುದ್ಧ ಲಸಿಕೆಯನ್ನು ಪಡೆಯಲು ಪ್ರಾರಂಭಿಸುತ್ತಾರೆ ಮತ್ತು ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಜನವರಿ 10ರಿಂದ ಮುನ್ನೆಚ್ಚರಿಕೆಯ ಲಸಿಕೆ ಸ್ವೀಕರಿಸಲು ಪ್ರಾರಂಭಿಸುತ್ತಾರೆ ಎಂದು ಘೋಷಿಸಿದರು. ಯುವ ಪೀಳಿಗೆಗೆ ಲಸಿಕೆ ನೀಡುವ ಪ್ರಕ್ರಿಯೆಗೆ ಇಂದು ಚಾಲನೆ ನೀಡಲಾಗುತ್ತಿದ್ದರೂ ಜನವರಿ 1ರಿಂದಲೇ ಆನ್ ಲೈನ್ ನೋಂದಣಿ ಆರಂಭವಾಗಿದೆ. ಸರಿ ಸುಮಾರು 7.5 ಲಕ್ಷ ಮಂದಿ ಇಲ್ಲಿ ತನಕ ನೋಂದಣಿ ಮಾಡಿಕೊಂಡಿದ್ದಾರೆ. ಹಂತ ಹಂತವಾಗಿ CoWINನಲ್ಲಿ ನೋಂದಣಿ ಹೇಗೆ? ಯುವ ಪೀಳಿಗೆಗೆ ಇಲ್ಲಿದೆ ಮಾರ್ಗದರ್ಶನ...

ಭಾರತ್ ಬಯೋಟೆಕ್‌ನ ಕೋವಾಕ್ಸಿನ್, 12ರಿಂದ 18 ವರ್ಷದೊಳಗಿನ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗಾಗಿ ಅನುಮೋದನೆಯನ್ನು ನೀಡಲಾಗಿದೆ, ಇದು ಮಕ್ಕಳಿಗೆ ಲಭ್ಯವಿರುವ ಏಕೈಕ ಲಸಿಕೆಯಾಗಿದೆ. 2007ರಲ್ಲಿ ಜನಿಸಿದವರು ಅಥವಾ ಇದಕ್ಕೂ ಮುಂಚಿತವಾಗಿ ಜನಸಿದವರು 15 ರಿಂದ 18 ವರ್ಷ ವಯಸ್ಸಿನ ದೃಢೀಕರಣ ಪತ್ರ ಹೊಂದಿರುವವರು ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಆಧಾರ್ ಮತ್ತು ಇತರ ರಾಷ್ಟ್ರೀಯ ಗುರುತಿನ ಚೀಟಿಗಳಲ್ಲದೆ, ಮಕ್ಕಳು ತಮ್ಮ 10ನೇ ತರಗತಿಯ ಗುರುತಿನ ಚೀಟಿಯನ್ನು ನೋಂದಣಿಗಾಗಿ ಬಳಸಬಹುದು.

ಆಸ್ಪತ್ರೆ ಹಾಗೂ ಪ್ರತ್ಯೇಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತದೆ. ಈ ಪ್ರಕ್ರಿಯೆ ಶಾಲೆಗಳ ಸಹಯೋಗ ಇರಲಿದೆ. ಹಲವೆಡೆ ನೋಂದಾಯಿತ ಯುವಕ, ಯುವತಿಯರಿಗೆ ಶಾಲೆಗಳಲ್ಲೇ ಲಸಿಕೆ ನೀಡುವ ಪ್ರಕ್ರಿಯೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಜನವರಿ 3ರಂದು ಕೋವಿಡ್ -19 ವಿರುದ್ಧ ಡೋಸ್ ಪಡೆಯಲು ಪ್ರಾರಂಭಿಸುವ ಮಕ್ಕಳಿಗೆ ಲಸಿಕೆ ಹಾಕಲು ವಾಕ್-ಇನ್ ಮತ್ತು ಆನ್‌ಲೈನ್ ನೋಂದಣಿ ಎರಡೂ ಲಭ್ಯವಿರುತ್ತವೆ.

COVID Vaccination for 15-18 Age Group: Step-By-Step Guide for CoWIN Registration

2021ರ ಜೂನ್ 21ರಿಂದ ಸಾರ್ವತ್ರಿಕ ಕೋವಿಡ್-19 ಲಸಿಕೀಕರಣದ ಹೊಸ ಹಂತ ಆರಂಭವಾಗಿದೆ. ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿದೆ.

ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ ಹೇಗೆ?
* ಲಸಿಕೆ ಪಡೆಯಲು ಅರ್ಹತೆಯುಳ್ಳವರು ಅಧಿಕೃತ ವೆಬ್ ತಾಣಕ್ಕೆ ಅಥವಾ ಮೊಬೈಲ್ ಅಪ್ಲಿಕೇಷನ್‌ಗೆ ಭೇಟಿ ನೀಡಬಹುದು(https://www.cowin.gov.in/)
* ಅಧಿಕೃತ ವೆಬ್ ತಾಣದ ಬಗ್ಗೆ ಗೊಂದಲವಿದ್ದರೆ ಹಿರಿಯರ/ಶಿಕ್ಷಕರ ನೆರವು ಪಡೆದುಕೊಳ್ಳಬಹುದು.
* ಕೋವಿಡ್ ಅಧಿಕೃತ ಮುಖ್ಯಪಟದಲ್ಲಿ ಲಸಿಕೆ ಪಡೆಯಲು ಸಮಯ ನಿಗದಿ ಪಡೆಸಲು ಹಾಗೂ ಲಸಿಕೆ ಪಡೆದ ಬಳಿಕ ಪ್ರಮಾಣ ಪತ್ರ ಪಡೆಯಲು ಪ್ರತ್ಯೇಕ ಲಿಂಕ್ ಇರಲಿದೆ.
* ಹೊಸ ಖಾತೆಯನ್ನು ಆರಂಭಿಸಬಹುದು ಅಥವಾ ಲಭ್ಯವಿರುವ(ಮನೆ ಹಿರಿಯರ ಚಾಲ್ತಿ ಖಾತೆ) ಖಾತೆ ಬಳಸಿ ಕೂಡಾ ಸ್ಲಾಟ್ ಬುಕ್ ಮಾಡಿಕೊಳ್ಳಬಹುದು.
* ನೋಂದಣಿ ಮಾಡಿಕೊಳ್ಳುವ ವೇಳೆ ವಿದ್ಯಾರ್ಥಿಗಳು ತಮ್ಮ ಶಾಲೆ, ಕಾಲೇಜಿನ ಗುರುತಿನ ಚೀಟಿ ಬಳಸಬೇಕಾಗುತ್ತದೆ.
* ನೋಂದಣಿ ನಂತರ ಲಸಿಕೆ ಹಾಕಿಸಿಕೊಳ್ಳಲು ಸಮಯ ನಿಗದಿ ಪಡಿಸಿಕೊಳ್ಳಿ, ಇದಕ್ಕೆ ಚಾಲ್ತಿಯಲ್ಲಿರುವ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ.
* ನಿಮ್ಮ ಮೊಬೈಲ್ ಫೋನಿಗೆ ಒಟಿಪಿ ಬರಲಿದೆ. ಒಟಿಪಿ ಹಾಕಿ ನೋಂದಣಿ ಪ್ರಕ್ರಿಯೆ ಪೂರ್ತಿ ಗೊಳಿಸಿದೆ.
* ಜನವರಿ 3ರಿಂದ ಲಸಿಕೆ ಪಡೆಯುವ ದಿನಾಂಕ ಸಮಯದ ಬಗ್ಗೆ ಇರುವ ಮಾಹಿತಿಯನ್ನು ಸೇವ್ ಮಾಡಿಕೊಳ್ಳಿ. ಇದೇ ಸಂದೇಶ ನಿಮ್ಮ ಮೊಬೈಲ್ ಫೋನಿಗೂ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+