Omicron Subvariant BF.7: ಕೊರೊನಾವೈರಸ್ ಬಿಎಫ್.7 ಉಪತಳಿ ಲಕ್ಷಣಗಳೇನು?

ನವದೆಹಲಿ, ಡಿಸೆಂಬರ್ 22: ಚೀನಾದಲ್ಲಿ ಹುಟ್ಟಿಕೊಂಡಿರುವ ಓಮಿಕ್ರಾನ್ ಹೊಸ ರೂಪಾಂತರ ತಳಿಯಿಂದ ಕೊರೊನಾವೈರಸ್ ಸೋಂಕಿತ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.

ಕೋವಿಡ್-19 ಸೋಂಕುಗಳ ಉಲ್ಬಣವು ಓಮಿಕ್ರಾನ್ ಉಪ-ತಳಿಯ BF.7 ಮಾದರಿಯೇ ಕಾರಣ ಎಂದು ನಂಬಲಾಗಿದೆ. ಭಾರತದಲ್ಲೂ ಇದುವರೆಗೆ BF.7 ರೂಪಾಂತರ ತಳಿಯ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಗುಜರಾತ್‌ನಲ್ಲಿ ಎರಡು ಮತ್ತು ಒಡಿಶಾದಿಂದ ಎರಡು ಪ್ರಕರಣಗಳು ಪತ್ತೆಯಾಗಿವೆ.

ಚೀನಾದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಬೆನ್ನಲ್ಲೇ ಇಡೀ ಜಗತ್ತು ಮತ್ತೊಮ್ಮೆ ಡ್ರ್ಯಾಗನ್ ರಾಷ್ಟ್ರದತ್ತ ತಿರುಗಿ ನೋಡುತ್ತಿದೆ. ಈ ಮಧ್ಯೆ ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ಡೆನ್ಮಾರ್ಕ್, ಯುಎಸ್ ಮತ್ತು ಯುಕೆ ಸೇರಿದಂತೆ ಹಲವಾರು ಇತರ ದೇಶಗಳಲ್ಲಿ ಈ ಉಪ-ತಳಿಯನ್ನು ಈಗಾಗಲೇ ಪತ್ತೆ ಮಾಡಲಾಗಿದೆ. ಹಾಗಿದ್ದರೆ ಹೊಸ ರೂಪಾಂತರ ಉಪ-ತಳಿಯ ಪತ್ತೆಯಾದವರಲ್ಲಿ ಯಾವೆಲ್ಲ ರೋಗದ ಲಕ್ಷಣಗಳು ಗೋಚರಿಸುತ್ತವೆ?, ಬಿಎಫ್.7 ಉಪ ತಳಿ ಹರಡುವಿಕೆ ಪ್ರಮಾಣ ಎಷ್ಟರ ಮಟ್ಟಿಗೆ ಇರುತ್ತೆೆ? ಈ ಓಮಿಕ್ರಾನ್ ಸೋಂಕಿನ ಉಪ ತಳಿಯಿಂದ ಮುನ್ನೆಚ್ಚರಿಕೆ ವಹಿಸುವುದು ಹೇಗೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳಿ.

ಬಿಎಫ್.7 ಉಪತಳಿ ಕುರಿತು ಈವರೆಗೆ ತಿಳಿದಿದ್ದೇನು?

ಬಿಎಫ್.7 ಉಪತಳಿ ಕುರಿತು ಈವರೆಗೆ ತಿಳಿದಿದ್ದೇನು?

ಕೊರೊನಾವೈರಸ್ ಸೋಂಕಿನ ಓಮಿಕ್ರಾನ್ ರೂಪಾಂತರದ BF.7 ಉಪ ತಳಿಯು BA.5ನ ವಂಶಾವಳಿಯಾಗಿದೆ. ಇದು ಕಡಿಮೆ ಅವಧಿಯೊಂದಿಗೆ ಹೆಚ್ಚು ಹರಡುವ ರೂಪಾಂತರವಾಗಿದೆ. ಇದು ಮರು-ಸೋಂಕನ್ನು ಉಂಟುಮಾಡುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಕೋವಿಡ್-19 ಲಸಿಕೆ ಪಡೆದುಕೊಂಡವರಲ್ಲಿಯೂ ಈ ಸೋಂಕು ಕಾಣಿಸಿಕೊಳ್ಳಬಹುದು.

'ಸೆಲ್ ಹೋಸ್ಟ್ ಮತ್ತು ಮೈಕ್ರೋಬ್' ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, BF.7 ರೂಪಾಂತರ ಉಪ-ತಳಿಯು ಮೂಲ ವುಹಾನ್ ವೈರಸ್‌ಗಿಂತ 4.4 ಪಟ್ಟು ಹೆಚ್ಚಿನ ತಟಸ್ಥೀಕರಣ ಪ್ರತಿರೋಧವನ್ನು ಹೊಂದಿದೆ. ಅಂದರೆ ಕೊರೊನಾವೈರಸ್ ಲಸಿಕೆಯ ಮೂಲಕ ಜನರು ಪಡೆದುಕೊಂಡಿರುವ ಪ್ರತಿರೋಧಕ ಶಕ್ತಿಗಿಂತಲೂ ಈ ರೋಗಾಣು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೀಗಾಗಿಯೇ ಲಸಿಕೆ ಪಡೆದುಕೊಂಡವರು ಸಹಿತ ಈ ಸೋಂಕಿಗೆ ಒಳಗಾಗುವ ಅಪಾಯವಿರುತ್ತದೆ.

ಓಮಿಕ್ರಾನ್ ರೂಪಾಂತರದ BF.7 ಉಪ-ತಳಿ ಲಕ್ಷಣ

ಓಮಿಕ್ರಾನ್ ರೂಪಾಂತರದ BF.7 ಉಪ-ತಳಿ ಲಕ್ಷಣ

ಕೊರೊನಾವೈರಸ್ ಸೋಂಕು ತಗುಲಿದ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಜ್ವರ, ಕೆಮ್ಮು, ಶ್ವಾಸಕೋಶ ಸಮಸ್ಯೆಗಳು ಪ್ರಾಥಮಿಕವಾಗಿ ಗೋಚರಿಸುತ್ತವೆ. ಹಾಗಿದ್ದರೆ ಓಮಿಕ್ರಾನ್ ರೂಪಾಂತರದ ಬಿಎಫ್.7 ಉಪ-ತಳಿಯ ಲಕ್ಷಣಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಬಿಎಫ್.7 ಉಪ-ತಳಿ ಲಕ್ಷಣಗಳು:

* ಜ್ವರ

* ಗಂಟಲು ನೋವು

* ಮೂಗು ಸ್ರವಿಸುವಿಕೆ

* ಕೆಮ್ಮು

* ಮೇಲ್ಭಾಗದ ಉಸಿರಾಟದ ಸಮಸ್ಯೆ

ಬಿಎಫ್.7 ಸೋಂಕಿನ ಬಗ್ಗೆ ಆತಂಕ ಸೃಷ್ಟಿಗೇನು ಕಾರಣ?

ಬಿಎಫ್.7 ಸೋಂಕಿನ ಬಗ್ಗೆ ಆತಂಕ ಸೃಷ್ಟಿಗೇನು ಕಾರಣ?

ಚೀನಾಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾವೈರಸ್ ಪರಿಸ್ಥಿತಿ ಭಿನ್ನವಾಗಿದೆ. ಈ ಹಿಂದಿನ ಕೋವಿಡ್-19 ಸೋಂಕಿನಿಂದಾಗಿ ಜನರಲ್ಲಿ ರೋಗನಿರೋಧಕ ಶಕ್ತಿಯ ಪ್ರಮಾಣ ಕುಗ್ಗಿದ್ದೇ, ಚೀನಾದಲ್ಲಿ ಹೊಸ ಅಲೆಯ ಆತಂಕ ಸೃಷ್ಟಿಗೆ ಪ್ರಮುಖ ಕಾರಣವಾಗುತ್ತದೆ. ಚೀನಾದಲ್ಲಿ ನೀಡಿದ ಲಸಿಕೆಯು ಅಷ್ಟಾಗಿ ಪರಿಣಾಮಕಾರಿಯಾಗಿ ಇರಲಿಲ್ಲ, ಇದಲ್ಲದೇ ಚೀನಾ ಜನರಲ್ಲಿ ಕುಗ್ಗಿದ್ದ ರೋಗನಿರೋಧಕ ಶಕ್ತಿಯ ಪ್ರಮಾಣವು ಹೊಸ ಅಲೆಯು ವ್ಯಾಪಕವಾಗಿ ಹರಡುವುದಕ್ಕೆ ದಾರಿ ಮಾಡಿಕೊಟ್ಟಿತು.

ಪ್ರಸ್ತುತ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಫ್ರಾನ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಕೋವಿಡ್ -19 ಪ್ರಕರಣಗಳಲ್ಲಿ ಆತಂಕಕಾರಿ ಉಲ್ಬಣವನ್ನು ವರದಿ ಮಾಡುತ್ತಿವೆ.

ಭಾರತದಲ್ಲಿ ಹೇಗಿದೆ ಕೋವಿಡ್-19 ಪರಿಸ್ಥಿತಿ?

ಭಾರತದಲ್ಲಿ ಹೇಗಿದೆ ಕೋವಿಡ್-19 ಪರಿಸ್ಥಿತಿ?

ಭಾರತದಲ್ಲಿ ಪರಿಸ್ಥಿತಿ ಚೀನಾದಂತೆ ಇಲ್ಲ. ಅದಾಗ್ಯೂ, ದೇಶದಲ್ಲಿ ಇಲ್ಲಿಯವರೆಗೆ ಓಮಿಕ್ರಾನ್ ರೂಪಾಂತರದ BF.7 ಉಪ-ತಳಿಯ ನಾಲ್ಕು ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಜನರು ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವಂತೆ ಒತ್ತಾಯಿಸಿದ್ದಾರೆ. "ಕೋವಿಡ್-19 ಇನ್ನೂ ಮುಗಿದಿಲ್ಲ. ನಾವು ಜಾಗರೂಕರಾಗಿರಲು ಮತ್ತು ಕಣ್ಗಾವಲು ಬಲಪಡಿಸಲು ಸಂಬಂಧಿಸಿದ ಎಲ್ಲರಿಗೂ ನಿರ್ದೇಶನ ನೀಡಿದ್ದೇನೆ. ಯಾವುದೇ ಪರಿಸ್ಥಿತಿಯನ್ನು ನಿರ್ವಹಿಸಲು ನಾವು ಸಿದ್ಧರಿದ್ದೇವೆ," ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ.

ಕೇಂದ್ರ ಸರ್ಕಾರವು ಅಂತರರಾಷ್ಟ್ರೀಯ ಪ್ರಯಾಣಿಕರ ಸರಿಯಾದ ತಪಾಸಣೆ ಮತ್ತು ಜೀನೋಮ್ ಅನುಕ್ರಮವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯಗಳಿಗೆ ಮಾಹಿತಿ ನೀಡಿದೆ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೋಜ್ ಅಗರ್ವಾಲ್ ತಿಳಿಸಿದ್ದಾರೆ.

ಮೈ ಮರೆತರೆ ಅಂಟುವುದು ಮತ್ತೊಮ್ಮೆ ಕೊರೊನಾ!

ಮೈ ಮರೆತರೆ ಅಂಟುವುದು ಮತ್ತೊಮ್ಮೆ ಕೊರೊನಾ!

ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಆಚರಣೆಗಳು ಹತ್ತಿರದಲ್ಲಿರುವುದರಿಂದ, ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವುದು ಎಂದಿಗಿಂತಲೂ ಹೆಚ್ಚು ನಿರ್ಣಾಯಕವಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಮತ್ತು ಕೈಗಳ ನೈರ್ಮಲ್ಯೀಕರಣವನ್ನು ಕಾಪಾಡಿಕೊಳ್ಳುವುದರಿಂದ ಹರಡುವಿಕೆಯನ್ನು ತಡೆಯಲು ಸಾಧ್ಯವಾಗುತ್ತದೆ.

ಭಾರತದಲ್ಲಿ ಈ ತಿಂಗಳುಗಳಲ್ಲಿ ಶೀತ, ಕೆಮ್ಮು ಮತ್ತು ಇತರ ಋತುಮಾನದ ಕಾಯಿಲೆಗಳು ಸಹ ಸಾಮಾನ್ಯವಾಗಿದೆ. ಆದರೆ ನೀವು ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು. ನೀವು ಅಥವಾ ನಿಮ್ಮ ಸುತ್ತಮುತ್ತಲಿನ ಯಾರಾದರೂ ಮೇಲೆ ತಿಳಿಸಲಾದ ರೋಗಲಕ್ಷಣಗಳನ್ನು ಎದುರಿಸುತ್ತಿದ್ದರೆ, ತಕ್ಷಣವೇ ಕೋವಿಡ್-19 ಪರೀಕ್ಷೆಯನ್ನು ಮಾಡಿಸಿಕೊಳ್ಳಿ ಮತ್ತು ಕ್ವಾರೆಂಟೇನ್ ಆಗಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+