ಮೆಟ್ರೋದಲ್ಲಿ ಮೈಮರೆತ ಮತ್ತೊಂದು ಜೋಡಿ: ವಿಡಿಯೋ ಕಂಡು ನೆಟ್ಟಿಗರು ಕೆಂಡಾಮಂಡಲ!

ದೆಹಲಿ ಮೆಟ್ರೋ ಈಗ ಹೆಚ್ಚು ಸುದ್ದಿಯಲ್ಲಿದೆ. ಮೆಟ್ರೋದಲ್ಲಿ ಪ್ರೇಮಿಗಳು ಮೈಮರೆತು ಪ್ರಯಾಣ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗುತ್ತಲೇ ಇವೆ. ಇಂತಹ ಮತ್ತೊಂದು ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ.

ದೆಹಲಿ ಮೆಟ್ರೋದಲ್ಲಿ ಮಿನಿ ಸ್ಕರ್ಟ್‌ನಿಂದ ಹಿಡಿದು ಮೈಮರೆತು ಪ್ರಯಾಣಿಸುವ ಜೋಡಿಗಳಿಗೇನು ಕಡಿಮೆ ಇಲ್ಲ. ಹೀಗಾಗಿ ದೆಹಲಿ ಮೆಟ್ರೋದಲ್ಲಿನ ಪ್ರಯಾಣ ಪ್ರಯಾಣಿಕರಿಗೆ ಮುಜುಗರವನ್ನು ತಂದಿದೆ. ನಿತ್ಯ ಇಂಥಹ ಮಾನಗೇಡಿತನ ಮೆಟ್ರೋದಲ್ಲಿ ಕಂಡುಬರುತ್ತಿರುವುದರಿಂದ ಪ್ರಯಾಣಿಕರು ತಲೆ ತಗ್ಗಿಸುವಂತಾಗಿದೆ.

Couple kissing each other in Delhi Metro: Video goes viral

ಕೆಲವರು ಇಂತಹ ಅಶ್ಲೀಲತೆಯನ್ನು ವಿರೋಧಿಸಿದರೂ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು ಯುವ ಜೋಡಿಗಳು ನಾಚುತ್ತಿಲ್ಲ, ನಾಚಿಕೆ ಪಡುತ್ತಿಲ್ಲ. ಬದಲಿಗೆ ಇಂತಹ ಕೃತ್ಯಕ್ಕೆ ಪೈಪೋಟಿಗಿಳಿದಂತೆ ತೋರುತ್ತಿದೆ. ಇದಕ್ಕೆ ಮತ್ತೊಂದು ವಿಡಿಯೋ ಸಾಕ್ಷಿಯಾಗಿದೆ.

ದೆಹಲಿ ಮೆಟ್ರೋದಲ್ಲಿ ಜೋಡಿಯೊಂದು ಪರಸ್ಪರ ಚುಂಬಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ನೆಟ್ಟಿಗರನ್ನು ಕೆರಳಿಸಿದೆ. ಚಲಿಸುತ್ತಿರುವ ಮೆಟ್ರೋ ರೈಲಿನ ಬಾಗಿಲುಗಳ ಬಳಿ ನಿಂತ ಯುವ ಜೋಡಿ ತಬ್ಬಿಕೊಂಡು ಪರಸ್ಪರ ಚುಂಬಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಆನಂದ್ ವಿಹಾರ್ ಮೆಟ್ರೋ ನಿಲ್ದಾಣದ ಸುತ್ತಮುತ್ತ ಈ ಘಟನೆ ನಡೆದಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.

ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಪ್ರಯಾಣಿಕರನ್ನು ಇಂತಹ ನಡವಳಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಮತ್ತು ರೈಲಿನೊಳಗೆ ಸೂಕ್ತವಾಗಿ ವರ್ತಿಸುವಂತೆ ಸತತವಾಗಿ ಒತ್ತಾಯಿಸುತ್ತಲೇ ಇದೆ. ಆದರೂ ಯಾವ ಪ್ರಯೋಜನಗಳು ಆಗಿಲ್ಲ ಅನ್ನೋದಕ್ಕೆ ಈ ವಿಡಿಯೋವೇ ಸಾಕ್ಷಿ.

ವೀಡಿಯೊವನ್ನು ಇಲ್ಲಿ ವೀಕ್ಷಿಸಿ

@Postman_46 ಹೆಸರಿನ ಹ್ಯಾಂಡಲ್‌ನಿಂದ ಟ್ವಿಟ್ಟರ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. "ಆನಂದ್ ವಿಹಾರ್ ದೆಹಲಿ ಮೆಟ್ರೋ (OYO) ನ ಮತ್ತೊಂದು ವೀಡಿಯೊ. ಪ್ರೀತಿ ಕುರುಡು, ಜನರು ಕುರುಡು ಅಲ್ಲ ಎಂಬುದನ್ನು ನಾವು ಮರೆತಿರಬಹುದು'' ಎಂದು ಬರೆಯುವ ಮೂಲಕ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

Couple kissing each other in Delhi Metro: Video goes viral

ಈ ಹಿಂದೆ ವೈರಲ್ ಆಗಿದ್ದ ಇಂತದ್ದೇ ವಿಡಿಯೋ

ಈ ಹಿಂದೆ ಮೇ ತಿಂಗಳಲ್ಲಿ ಮೆಟ್ರೋ ಕೋಚ್‌ನ ನೆಲದ ಮೇಲೆ ಕುಳಿತು ಯುವ ಜೋಡಿಯೊಂದು ಪರಸ್ಪರ ಚುಂಬಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಇಡಯೋ ವೈರಲ್ ಆದ ಬಳಿಕ ದೆಹಲಿ ಮೆಟ್ರೋ ರೈಲು ನಿಗಮ ತನ್ನ ಪ್ರಯಾಣಿಕರಿಗೆ ಇಂತಹ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಮನವಿ ಕೂಡ ಮಾಡಿತ್ತು.

ಮೆಟ್ರೋ ಅಧಿಕಾರಿಗಳು ಇಂತಹ ಘಟನೆಗಳನ್ನು ಸಮೀಪದ ಲಭ್ಯವಿರುವ ಮೆಟ್ರೋ ಸಿಬ್ಬಂದಿ/ಸಿಐಎಸ್‌ಎಫ್‌ಗೆ ತಕ್ಷಣ ತಿಳಿಸಲು ಪ್ರಯಾಣಿಕರಿಗೆ ವಿನಂತಿಸಿದ್ದರು. ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಕೂಡ ಮನವಿ ಮಾಡಿದ್ದರು. ವಿಡಿಯೊದಲ್ಲಿ ಹುಡುಗಿ ಮೆಟ್ರೋ ಕೋಚ್‌ನ ನೆಲದ ಮೇಲೆ ಕುಳಿತಿದ್ದ ಹುಡುಗನ ಮಡಿಲಲ್ಲಿ ಮಲಗಿರುವುದು ಕಂಡುಬರುತ್ತದೆ. ಕಳೆದ ಕೆಲವು ತಿಂಗಳುಗಳಿಂದ ದೆಹಲಿ ಮೆಟ್ರೋ ಕೋಚ್‌ಗಳಲ್ಲಿ ಇಂತಹ ಅನೇಕ ವಿಡಿಯೋಗಳು ವೈರಲ್ ಆಗಿವೆ.

ದಿನಾಂಕವಿಲ್ಲದ ಈ ವಿಡಿಯೊ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕೆರಳಿಸಿದೆ. ಜೊತೆಗೆ ಅಶ್ಲೀಲವಾಗಿ ವರ್ತಿಸಿದ ಜೋಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ DMRC ಅನ್ನು ಒತ್ತಾಯಿಸಿದ್ದರು. ಆದರೆ ಕೆಲವರು ಈ ಕೃತ್ಯವನ್ನು ಚಿತ್ರೀಕರಿಸಿದ್ದನ್ನು ಪ್ರಶ್ನಿಸಿದ್ದರು.

ಡಿಎಂಆರ್‌ಸಿ ತನ್ನ ಹೇಳಿಕೆಯಲ್ಲಿ, "ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಜವಾಬ್ದಾರಿಯುತವಾಗಿ ವರ್ತಿಸಬೇಕು. ಸಮಾಜದಲ್ಲಿ ಸ್ವೀಕಾರಾರ್ಹವಾಗಿರುವ ಎಲ್ಲಾ ಸಾಮಾಜಿಕ ಶಿಷ್ಟಾಚಾರ ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಎಂದು ಡಿಎಂಆರ್‌ಸಿ ನಿರೀಕ್ಷಿಸುತ್ತದೆ" ಎಂದು ಹೇಳಿತ್ತಾದರೂ ಇಂತಹ ದೃಶ್ಯಗಳು ಮೆಟ್ರೋದಲ್ಲಿ ಕಂಡು ಬರುತ್ತಲೇ ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+