ವೀರ್ಯೋತ್ಪತ್ತಿ ಮೇಲೂ ಕೊರೊನಾ ಪರಿಣಾಮ; ಎಚ್ಚರಿಕೆ ಕೊಟ್ಟ ಅಧ್ಯಯನ
ಒಂದು
ವರ್ಷದಿಂದ ಇಡೀ ವಿಶ್ವವನ್ನೇ ತಲ್ಲಣಕ್ಕೆ ದೂಡಿರುವ ಕೊರೊನಾ ಸೋಂಕು ಇದುವರೆಗೂ 2.2 ಮಿಲಿಯನ್ ಮಂದಿಯ ಜೀವ ಕಸಿದುಕೊಂಡಿದೆ. ಕೊರೊನಾ ಸೋಂಕಿನ ಬಗ್ಗೆ ಹಲವು ದೇಶಗಳಲ್ಲಿ ಅಧ್ಯಯನಗಳು ನಡೆಯುತ್ತಿವೆ. ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ದೇಹದಲ್ಲಿ ಅದು ಉಳಿಸುವ ಬದಲಾವಣೆಗಳ ಕುರಿತೂ ಅಧ್ಯಯನಗಳು ನಡೆದಿವೆ. id="toptextpromo"> id='are-slot-1' class='oiad oi-axt oiadv'>ಈಚೆಗೆ
ಇದೇ ರೀತಿಯ ಅಧ್ಯಯನವೊಂದು ನಡೆದಿದ್ದು, ಕೊರೊನಾ ಸೋಂಕು ವೀರ್ಯದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ ಎಂದು ಅದು ತಿಳಿಸಿದೆ. ಕೊರೊನಾ ವೀರ್ಯದ ಗುಣಮಟ್ಟವನ್ನು ತಗ್ಗಿಸುತ್ತದೆ ಹಾಗೂ ಪುರುಷರಲ್ಲಿ ಸಂತಾನಶಕ್ತಿಯನ್ನು ಕುಂದಿಸುತ್ತದೆ ಎಂದು ತಿಳಿಸಿದೆ. ಮುಂದೆ ಓದಿ... id='are-slot-2' class='oiad oi-axt oiadv'>
ವೀರ್ಯದ ಗುಣಮಟ್ಟದ ಮೇಲೆ ಸೋಂಕಿನ ಪರಿಣಾಮ
ಕೊರೊನಾ ಸೋಂಕು ವೀರ್ಯದ ಜೀವಕೋಶಗಳನ್ನು ಸಾಯುವಂತೆ ಮಾಡುತ್ತದೆ. ಪುರುಷರ ಸಂತಾನೋತ್ಪತ್ತಿಗೆ ಸೋಂಕು ಹಾನಿ ಮಾಡುತ್ತದೆ ಎಂಬುದಕ್ಕೆ ಪ್ರಾಯೋಗಿಕ ಸಾಕ್ಷ್ಯವನ್ನು ಅಧ್ಯಯನ ಒದಗಿಸಿದೆ. ಆದರೆ ಈ ವಿಷಯದಲ್ಲಿ ವೈರಸ್ ಸಾಮರ್ಥ್ಯದ ಬಗ್ಗೆ ಸ್ಪಷ್ಟನೆ ದೊರೆತಿಲ್ಲ.

ಹಾರ್ಮೋನುಗಳ ಚಟುವಟಿಕೆ ತಗ್ಗಿಸುತ್ತದೆ
ಕೊರೊನಾ ಸೋಂಕು ಮೊದಲು ಉಸಿರಾಟದ ತೊಂದರೆ ಉಂಟು ಮಾಡುತ್ತದೆ. ವಯಸ್ಸಾದವರಲ್ಲಿ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿದ್ದವರಿಗೆ ಈ ಸಮಸ್ಯೆ ಬೇಗ ಕಾಣಿಸಿಕೊಳ್ಳುತ್ತದೆ. ಉಸಿರಾಟದಿಂದ ಆರಂಭಗೊಂಡು ಶ್ವಾಸಕೋಶ, ಕಿಡ್ನಿ, ಕರಳು ಹಾಗೂ ಹೃದಯದ ಮೇಲೆ ಸೋಂಕು ಪರಿಣಾಮ ಬೀರುತ್ತದೆ. ಪುರುಷರಲ್ಲಿ ವೀರ್ಯ ಕೋಶಗಳ ಬೆಳವಣಿಗೆಯನ್ನು ದುರ್ಬಲಗೊಳಿಸಿ ಸಂತಾನೋತ್ಪತ್ತಿ ಹಾರ್ಮೋನುಗಳ ಚಟುವಟಿಕೆ ತಗ್ಗಿಸುತ್ತದೆ ಎಂದು ಅಧ್ಯಯನ ವಾದಿಸಿದೆ.

ವಂಶವಾಹಿ ದುರ್ಬಲಗೊಳಿಸುವ ಸೋಂಕು
ಜರ್ಮನಿಯ ಲೀಬಿಗ್ ವಿಶ್ವವಿದ್ಯಾಲಯದ ಬೆಹ್ಜಾದ್ ಹಜಿಜಾದೆ ಮಲೇಕಿ ಹಾಗೂ ಭಕ್ತ್ಯಾರ್ ಎಂಬುವರು ಈ ಸಂಶೋಧನೆ ಕೈಗೊಂಡಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡಿದ್ದ 84 ಪುರುಷರ ಮೇಲೆ 60 ದಿನಗಳ ಕಾಲ ವಿಶ್ಲೇಷಣೆ ನಡೆಸಲಾಗಿದೆ. 105 ಆರೋಗ್ಯಕರ ಪುರುಷರೊಂದಿಗೆ ಇವರನ್ನು ಹೋಲಿಕೆ ಮಾಡಿ ಅಧ್ಯಯನ ಕೈಗೊಳ್ಳಲಾಗಿತ್ತು.
ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಪುರುಷರಲ್ಲಿ ವೀರ್ಯಕೋಶಗಳಲ್ಲಿ ಅಸಮತೋಲನ ಕಂಡುಬಂದಿದ್ದು, ಸೋಂಕು ವಂಶವಾಹಿಯನ್ನೇ ದುರ್ಬಲಗೊಳಿಸುವ ಹಾಗೂ ದೇಹದಲ್ಲಿ ಪ್ರೊಟೀನ್ ಗಳ ಮೇಲೆ ಪರಿಣಾಮ ಬೀರಿರುವ ಅಂಶ ಕಂಡುಬಂದಿದೆ.

"ಅಂತಿಮ ಅಭಿಪ್ರಾಯಕ್ಕೆ ಬರಲು ಸಾಧ್ಯವಿಲ್ಲ"
ಈ ಮುನ್ನವೇ ವೀರ್ಯೋತ್ಪತ್ತಿ ಸಮಸ್ಯೆಯಿದ್ದ ಪುರುಷರಲ್ಲಿ ಕೊರೊನಾ ಸೋಂಕಿನ ಪರಿಣಾಮ ಹೆಚ್ಚು ಎಂದು ಮಲೇಕಿ ಹೇಳಿದ್ದಾರೆ. ಈ ಪರಿಣಾಮ ನಂತರದ ದಿನಗಳಲ್ಲಿ ತಗ್ಗಿದರೂ ಸಮಸ್ಯೆಯ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂದಿದ್ದಾರೆ.
ಈ ಅಧ್ಯಯನವನ್ನು ತಜ್ಞರು ಸ್ವಾಗತಿಸಿದ್ದು, ಪುರಷರ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಕೊರೊನಾ ಸೋಂಕು ಪರಿಣಾಮ ಬೀರುವ ಅಂಶವನ್ನು ಸಾಬೀತುಪಡಿಸುವ ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ. ತಕ್ಷಣವೇ ಯಾವುದೇ ಅಂತಿಮ ಅಭಿಪ್ರಾಯಕ್ಕೆ ಬರಲು ಸಾಧ್ಯವಿಲ್ಲ ಎಂದಿದ್ದಾರೆ ಬ್ರಿಟನ್ ನ ಕೇರ್ ಫರ್ಟಿಲಿಟಿ ಗ್ರೂಪ್ ನಿರ್ದೇಶಕ ಅಲಿಸನ್ ಕ್ಯಾಂಪ್ ಬೆಲ್. ಆದರೂ ಅಧ್ಯಯನದ ಫಲಿತಾಂಶದ ಆಧಾರದ ಮೇಲೆ ವೈದ್ಯಕೀಯ ಕ್ಷೇತ್ರದಲ್ಲಿ ಬೆಳವಣಿಗೆಗಳು ಆಗಬೇಕಿದೆ ಎಂದು ತಿಳಿಸಿದ್ದಾರೆ.












Click it and Unblock the Notifications