2014ರಲ್ಲಿ ನರೇಂದ್ರ ಮೋದಿ ಪ್ರಮಾಣ ವಚನ ಹೇಗಿತ್ತು? 2019ರಲ್ಲಿ ಹೇಗಾಯಿತು?

Recommended Video

      ಇಷ್ಟು ದೊಡ್ಡ ಮಟ್ಟದ ಪ್ರಮಾಣವಚನ ಕಾರ್ಯಕ್ರಮ ಹಿಂದೆದೂ ಆಗಿಲ್ಲ..? | Oneindia kannada

      ನವದೆಹಲಿ, ಮೇ 30: ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ ಡಿಎ ಅದ್ಭುತವಾದ ಗೆಲುವು ಸಾಧಿಸಿದ ನಂತರ ಗುರುವಾರದಂದು ರಾಷ್ಟ್ರಪತಿ ಭವನದಲ್ಲಿ ಎರಡು ಗಂಟೆಗಳ ಕಾಲ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅವರ ಸಂಪುಟದ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

      ರಾಜ್ಯಗಳ ಹಾಗೂ ಸರಕಾರಗಳ ಮುಖ್ಯಸ್ಥರು, ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಿಗಳು ರಾಜತಾಂತ್ರಿಕರು, ಹಿರಿಯ ರಾಜಕೀಯ ನಾಯಕರು, ಸರಕಾರಿ ಅಧಿಕಾರಿಗಳು, ಕಲಾವಿದರು, ಮಾಧ್ಯಮದವರು, ಸ್ವಾಮೀಜಿಗಳು ಈ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು.

      ಕಳೆದ ಬಾರಿಯ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಲಿಸಿದರೆ ಈ ಬಾರಿಯದು ಹೇಗೆ ವಿಭಿನ್ನ ಎಂದು ಅಳೆದು ತೂಗುವ ಪ್ರಯತ್ನ ಇದು.

      Comparison of 2014 and 2019 Narendra Modi swearing ceremony

      ಅಹ್ವಾನಿತರ ಸಂಖ್ಯೆ
      ಗುರುವಾರದ ರಾತ್ರಿ ನರೇಂದ್ರ ಮೋದಿ ಹಾಗೂ ಸಚಿವರ ಪದವಿ ಪ್ರಮಾಣ ಸಮಾರಂಭದಲ್ಲಿ ಎಂಟು ಸಾವಿರ ಮಂದಿ ಆಹ್ವಾನಿತರು ಭಾಗವಹಿಸಿದ್ದರು. ಕಳೆದ ಬಾರಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರಮಾಣ ವಚನ ಬೋಧಿಸಿದ್ದರು. ನಾಲ್ಕು ಸಾವಿರ ಮಂದಿ ಆಹ್ವಾನಿತರು ಆಗಮಿಸಿದ್ದರು. ರಾಷ್ಟ್ರಪತಿ ಭವನದ ಅಡುಗೆ ಮನೆಯ ವಿಶೇಷ 'ದಾಲ್ ರೈಸಿನಾ'ವನ್ನು ವಿದೇಶಿ ಗಣ್ಯರಿಗೆ ಉಣಬಡಿಸಲಾಯಿತು.

      ವಿದೇಶಿ ನಾಯಕರು
      ಬಾಂಗ್ಲಾದೇಶ್, ಭೂತಾನ್, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ, ಥಾಯ್ಲೆಂಡ್, ಕಿರ್ಗಿಸ್ತಾನ, ಮಾರಿಶಸ್ ಸೇರಿದಂತೆ ಇತರ ದೇಶಗಳ ನಾಯಕರು ಭಾಗವಹಿಸಿದ್ದರು. ಕಳೆದ ಬಾರಿ ಪ್ರಮಾಣ ವಚನ ಸಮಾರಂಭದಲ್ಲಿ ಸಾರ್ಕ್ ರಾಷ್ಟ್ರಗಳ ನಾಯಕರು ಭಾಗವಹಿಸಿದ್ದರು. ಪಾಕಿಸ್ತಾನದ ಅಗಿನ ಪ್ರಧಾನಿ ನವಾಜ್ ಷರೀಫ್ ಭಾಗವಹಿಸಿದ್ದರು.

      ಪಾಕಿಸ್ತಾನ ನಾಯಕರು ಭಾಗವಹಿಸಿಲ್ಲ
      ಕಳೆದ ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಭಾಗವಹಿಸಿದ್ದರು. ಆದರೆ ಪುಲ್ವಾಮಾ ಉಗ್ರ ದಾಳಿಯ ನಂತರ ಭಾರತೀಯ ವಾಯುಸೇನೆ ಬಾಲಾಕೋಟ್ ದಾಳಿ ನಡೆಸಿತ್ತು. ಆ ನಂತರ ಎರಡೂ ದೇಶಗಳ ಮಧ್ಯೆ ಸಂಬಂಧ ಹಳಸಿತ್ತು. ಪಾಕ್ ಗೆ ಆಹ್ವಾನ ಇಲ್ಲದಿರುವುದನ್ನು ಆ ದೇಶ, ಇದು ಭಾರತದ ಆಂತರಿಕೆ ರಾಜಕೀಯ ಎಂದಿದೆ.

      ಸಂಪುಟದ ಗಾತ್ರ
      ಈ ಬಾರಿ ಮೋದಿ ಜತೆಗೆ ಇಪ್ಪತ್ನಾಲ್ಕು ಕೇಂದ್ರ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಇಪ್ಪತ್ನಾಲ್ಕು ಸಚಿವರು, ಒಂಬತ್ತು ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ) ಕೂಡ ಪದ ಸ್ವೀಕಾರ ಮಾಡಿದ್ದಾರೆ. ಈ ಸಲ ಒಟ್ಟಾರೆ ಐವತ್ತೇಳು ಮಂದಿ ಅಧಿಕಾರ ಸ್ವೀಕರಿಸಿದರೆ, ಕಳೆದ ಬಾರಿ ನಲವತ್ತಾರು ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದರು.

      ಕಾರ್ಯಕ್ರಮದ ಅವಧಿ
      ಈ ಬಾರಿ ರಾತ್ರಿ ಏಳು ಗಂಟೆಗೆ ಶುರುವಾದ ಪದ ಸ್ವೀಕಾರ ಕಾರ್ಯಕ್ರಮ ಎರಡು ಗಂಟೆಗೂ ಸ್ವಲ್ಪ ಹೆಚ್ಚು ಕಾಲ ನಡೆಯಿತು. ಕಳೆದ ಬಾರಿ ಸಂಜೆ ಆರು ಗಂಟೆಗೆ ಶುರುವಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+