ಫೋಟೋಶೂಟ್‌ ವೇಳೆ ಕಲರ್‌ ಬಾಂಬ್‌ ಸ್ಫೋಟ: ವಧುವಿನ ಸ್ಥಿತಿ ಗಂಭೀರ

ಮದುವೆ ಎನ್ನುವುದು ಎಲ್ಲರ ಜೀವನದ ಬಹುಮುಖ್ಯ ಘಟ್ಟವಾಗಿದ್ದು, ಈ ದಿನದ ಬಗ್ಗೆ ಹಲವಾರು ಕನಸುಗಳಿರುತ್ತದೆ. ಮದುವೆಯ ದಿನ ಹೀಗೆ ಕಾಣಿಸಬೇಕು, ಮದುವೆಯ ಬಟ್ಟೆ ಹೀಗೆ ಇರಬೇಕು. ಫೋಟೋ ಶೂಟ್‌ ಹೀಗೆ ನಡೆಯಬೇಕು ಹೀಗೆ ಹಲವು ನಿರೀಕ್ಷೆಗಳು ಇರುತ್ತದೆ. ಈಗಿನ ಇವೆಂಟ್‌ ಮ್ಯಾನೇಜ್‍ಮೆಂಟ್ ಕಂಪನಿಗಳು ವಧು-ವರರ ನಿರೀಕ್ಷೆಯಂತೆಯೇ ಮದುವೆಯ ಎಲ್ಲಾ ತಯಾರಿಗಳನ್ನು ಮಾಡಿಕೊಡುತ್ತಾರೆ. ನೂರಕ್ಕೆ ನೂರು ಅಲ್ಲದೇ ಇದ್ದರೂ ಬಹುತೇಕ ಅವರ ಕನಸಿನಂತೆಯೇ ಮದುವೆಯನ್ನು ನಡೆಸಿಕೊಡಲು ಇವೆಂಟ್‌ ಮ್ಯಾನೇಜ್‍ಮೆಂಟ್ ಕಂಪನಿಗಳು ಶ್ರಮವಹಿಸುತ್ತದೆ.

ಈಗೀಗ ಕೆಲವರ ಮದುವೆ ಎನ್ನುವುದು ಬಹಳ ವೈಭವೀಕರಣವಾಗಿರುತ್ತದೆ. ಈ ವೈಭವದ ಮದುವೆಯಲ್ಲಿ, ಅಷ್ಟೇ ಅದ್ಧೂರಿಯಾಗಿ ಫೋಟೋಶೂಟ್‌ಗಳನ್ನು ಸಹ ನಡೆಸುತ್ತಾರೆ. ಪ್ರೀ-ವೆಡ್ಡಿಂಗ್‌, ಎಂಗೇಜ್‌ಮೆಂಟ್‌ ಶೂಟ್‌, ವೆಡ್ಡಿಂಗ್‌ ಶೂಟ್‌ ಹೀಗೆ ತಮ್ಮ ಮುಖ್ಯವಾದ ದಿನದ ನೆನಪುಗಳನ್ನು ಕ್ಯಾಮೆರಾದಲ್ಲಿ ಸುಂದರವಾಗಿ ಸೆರೆಹಿಡಿಯಬೇಕು ಎನ್ನುವುದು ಎಲ್ಲರ ನಿರೀಕ್ಷೆಯಾಗಿರುತ್ತದೆ.

Color Bomb Explosion Seriously Injures Bride During Photoshoot

ಹೀಗಾಗಿ ಫೋಟೋಗ್ರಾಫರ್‌ ಯಾವುದೇ ವಸ್ತುಗಳನ್ನು ಬಳಸಿದರೂ ಯಾವುದೇ ಸ್ಥಳಗಳನ್ನು ಆಯ್ಕೆ ಮಾಡಿಕೊಂಡರೂ ಯಾವುದೇ ತಕರಾರು ಇರುವುದಿಲ್ಲ. ಒಟ್ಟಾರೆ ಫೋಟೋ ಚೆನ್ನಾಗಿ ಬಂದರೆ ಸಾಕು ಎನ್ನುವುದಷ್ಟೇ ತಲೆಯಲ್ಲಿ ಇರುತ್ತದೆ. ಆದರೆ ಈ ವೇಳೆ ನಡೆಯುವ ಕೆಲವು ಯಡವಟ್ಟುಗಳು ವಧು-ವರರೂ ತಮ್ಮ ಜೀವನ ಪೂರ್ತಿ ನೆನಪಿಟ್ಟುಕೊಳ್ಳುವ ನೋವನ್ನು ಕೊಡುತ್ತದೆ. ಇದೇ ರೀತಿಯ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ವಿಡಿಯೋದಲ್ಲಿ ನವ ವಧು-ವರರು ಫೋಟೋಶೂಟ್‌ ನಡೆಸುತ್ತಿರುತ್ತಾರೆ. ಫೋಟೋ ಚೆನ್ನಾಗಿ ಬರಲಿ ಎಂದು ಫೋಟೋಗ್ರಾಫರ್‌ ತಂಡ ಕಲರ್‌ ಬಾಂಬ್‌ಗಳನ್ನು ಸಿಡಿಸುತ್ತಾರೆ. ಈ ವೇಳೆ ಬಹುದೊಡ್ಡ ಅವಘಡ ನಡೆದಿದ್ದು, ಕಲರ್‌ ಬಾಂಬ್‌ ಸಿಡಿದು ವಧುವಿನ ಕೂದಲಿಗೆ ಬೆಂಕಿ ಹೊತ್ತಿಕೊಳ್ಳುತ್ತದೆ. ನೋಡು ನೋಡುತ್ತಿದ್ದಂತೆ ಕಲರ್‌ ಬಾಂಬ್‌ ಸ್ಫೋಟವಾಗಿ ಬೆಂಕಿ ಹೊತ್ತಿಕೊಂಡಿದ್ದು, ವಧು ಜೋರಾಗಿ ಕಿರುಚುತ್ತಾರೆ. ಕೂಡಲೇ ಆಕೆಯನ್ನು ರಕ್ಷಿಸಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ ದುರಾದೃಷ್ಟವಶಾತ್ ಸ್ಫೋಟದ ತೀವ್ರತೆಗೆ ಆಕೆಯ ಕೂದಲು ಸುಟ್ಟು ಹೋಗಿದ್ದು, ಬೆನ್ನಿನ ಭಾಗದಲ್ಲಿ ಸುಟ್ಟು ಗಂಭೀರ ಗಾಯಗಳಾಗಿದೆ.

Color Bomb Explosion Seriously Injures Bride During Photoshoot

ಕಲರ್ ಬಾಂಬ್‌ ಸ್ಫೋಟದ ವಿಡಿಯೋ ಜೊತೆಗೆ ಆಕೆ ಚಿಕಿತ್ಸೆ ಪಡೆಯುತ್ತಿರುವ ಫೋಟೋಗಳನ್ನು ಕೂಡ ಶೇರ್‌ ಮಾಡಲಾಗಿದ್ದು, ಆಕೆ ಮಲಗಲು ಕೂಡ ಕಷ್ಟಪಡುವಂತಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಮದುವೆ ಹಾಗೂ ಇತರ ಸಮಾರಂಭಗಳ ಸಮಯದಲ್ಲಿ ಫೋಟೋಶೂಟ್‌ಗಳನ್ನು ಮಾಡುವಾಗ ಎಚ್ಚರ ವಹಿಸಿ, ಅದ್ಧೂರಿ ಹೆಸರಿನಲ್ಲಿ ಅಪಾಯ ಬೇಡ ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+