ಮಕ್ಕಳ ದಿನಾಚರಣೆ; ಮರೆಯಾಗುತ್ತಿರುವ ಆಟಗಳತ್ತ ಒಂದು ಸುತ್ತು
ಬಾಲ್ಯ ಎಲ್ಲರಿಗೂ ಅದೆಷ್ಟೋ ಸವಿ ನೆನಪುಗಳ ರಾಶಿಯನ್ನು ಕೊಟ್ಟ ಸಮಯ. ಇಂದಿಗೂ ಯಾರಿಗಾದರೂ ನಿನಗೆ ಮತ್ತೆ ಯಾವ ಜೀವನ ಬೇಕು ಎಂದರೆ ಬಾಲ್ಯವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇಂತಹ ಬಾಲ್ಯವನ್ನು ಜೀವಂತವಾಗಿರಿಸಿದ್ದು ಆಟಗಳು. ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳ ಕೆಲವು ಆಟಗಳನ್ನು ನೆನೆಯುವ.
ಆಟಗಳು ಮಕ್ಕಳ ಬಾಲ್ಯದಲ್ಲಿ ಪ್ರಮುಖ ಪಾತ್ರವಹಿಸುವ ಘಟ್ಟ. ಇಲ್ಲಿ ಮಗುವಿನ ದೇಹವಷ್ಟೇ ಗಟ್ಟಿಯಾಗುವುದಿಲ್ಲ. ಬುದ್ಧಿ ವಿಕಸನಕ್ಕೂ ಸಹಕಾರಿಯಾಗುತ್ತದೆ. ಗ್ರಾಮೀಣ ಮಕ್ಕಳಿಗೆ ಈ ಆಟಗಳಂತು ಬದುಕಿನ ಅವಿಭಾಜ್ಯ ಅಂಗಗಳೇ ಆಗಿದ್ದವು. ಒಳಾಂಗಣ, ಹೊರಾಂಗಣ ಆಟಗಳು ತಮ್ಮ ವ್ಯಾಪ್ತಿಯನ್ನು ಸೀಮಿತ ಮಾಡಿಕೊಂಡು ವಿಡಿಯೋ ಗೇಮ್ಸ್ ಮತ್ತು ಕ್ರಿಕೆಟ್‌ಗೆ ಬಂದು ನಿಂತಿವೆ.
ಇಂದಿನ ಮೊಬೈಲ್ ಫೋನ್, ಕಂಪ್ಯೂಟರ್, ಲ್ಯಾಪ್‌ಟಾಪ್, ಟಿವಿಗಳು ಮಕ್ಕಳನ್ನು ನಾಲ್ಕು ಗೋಡೆಗಳ ನಡುವೆ ಸೀಮಿತಗೊಳಿಸಿವೆ. ಇನ್ನು, ಮಕ್ಕಳು ಕೂಡ ಅವುಗಳಿಗೆ ದಾಸರಾಗುತ್ತಿದ್ದು, ಹೊರಾಂಗಣ ಕ್ರೀಡೆಗಳಲ್ಲಿಯೂ ಆಸಕ್ತಿ ಕಳೆದುಕೊಂಡಿದ್ದಾರೆ. ಕಳೆದು ಹೋಗುತ್ತಿರುವ ಬಾಲ್ಯದ ಆಟಗಳನ್ನು ಒಮ್ಮೆ ತಿರುಗಿ ನೋಡುವ.

ಲಗೋರಿ: ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರಿ ಆಡುವ ಆಟ. ಲಗೋರಿ ಎಂದರೆ ಗೋಪುರ ಅಥವಾ ಅಂತಹ ಮಾದರಿಯ ನಿರ್ಮಾಣ ಎಂದರ್ಥ. ಚೆಂಡಿನಿಂದ ಹೊಡೆದು ಕೆಡವಿರುವ ಬೆಣಚು ಕಲ್ಲುಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ಲಗೋರಿ ಎಂದು ಕೂಗಲಾಗುತ್ತದೆ. ಹೊರಾಂಗಣ ಕ್ರೀಡೆಯಾಗಿರುವ ಲಗೋರಿ ಆಡಲು ಶಕ್ತಿ ಜೊತೆಗೆ ಯುಕ್ತಿಯೂ ಬೇಕು.
ಚಿನ್ನಿ ದಾಂಡು: ಇದನ್ನು ದೇಸಿ ಕ್ರಿಕೆಟ್ ಎಂದರೆ ತಪ್ಪಾಗುವುದಿಲ್ಲ. ಕ್ರಿಕೆಟ್ ಗ್ರಾಮೀಣ ಭಾಗಗಳಲ್ಲಿ ಕಾಣಿಸಿಕೊಳ್ಳುವ ಮುಂಚೆ ಗಂಡು ಮಕ್ಕಳ ನೆಚ್ಚಿನ ಕ್ರೀಡೆಯಾಗಿತ್ತು ಚಿನ್ನಿ ದಾಂಡು. ಎಂಟರಿಂದ ಹತ್ತು ಜನರ ಎರಡು ತಂಡಗಳನ್ನು ಕಟ್ಟಿಕೊಂಡು ಚಿಕ್ಕ ಚಿನ್ನಿ ಮತ್ತು ದಾಂಡುಗಳನ್ನು ಇಟ್ಟುಕೊಂಡು ಆಡುವ ಆಟ. ಕ್ರಿಕೆಟ್ ಮಾದರಿಯದ್ದೇ, ಆದರೆ ಅದಕ್ಕೊಂದು ದೇಸಿ ಸ್ಪರ್ಶವಿದೆ.
ಕುಂಟೆ ಬಿಲ್ಲೆ: ಹೆಣ್ಣು ಮಕ್ಕಳ ನೆಚ್ಚಿನ ಆಟ ಕುಂಟೆ ಬಿಲ್ಲೆ. ನೆಲದ ಮೇಲೆ ಬಾಕ್ಸ್ ಮಾದರಿಯ ಅಂಕಣಗಳನ್ನು ಬರೆದುಕೊಂಡು ಒಂಟಿ ಕಾಲಿನಲ್ಲಿ ನೆಗೆಯುತ್ತಾ ಆಯತಗಳನ್ನು ನೂಕುತ್ತಾ ಆಡುವ ಆಟವಿದು. ಸಾಮಾನ್ಯವಾಗಿ ಹೆಣ್ಣುಮಕ್ಕಳು ಆಡಿದರೂ ಗಂಡು ಮಕ್ಕಳು ಭಾಗವಹಿಸುತ್ತಾರೆ.

ಚೌಕಾಬಾರಾ: ಇದು ಒಳಾಂಗಣ ಕ್ರೀಡೆ. ಚೌಕಾಬಾರ ಎರಡು ಅಥವಾ ನಾಲ್ಕು ಆಟಗಾರರು ಭಾಗವಹಿಸುತ್ತಾರೆ. ಇದರಲ್ಲಿ ಎರಡು ಬಗೆ ಐದು ಮತ್ತು ಏಳು ಮನೆ ಆಟವಾಡಬಹುದು. ಆಟದಲ್ಲಿ ಭಾಗವಹಿಸುವ ನಾಲ್ಕು ಜನರಿಗೆ ತಲಾ 4 ಕಾಯಿಗಳು ಇರುತ್ತವೆ. ತನ್ನ ಮನೆಯಿಂದ ಕವಡೆ ಅಥವಾ ಹುಣಸೆ ಬೀಜದಲ್ಲಿ ಮಾಡಿರುವ ಕಾಯಿ ಹಾಕಿ ಅದರಲ್ಲಿ ಬಿದ್ದ ಅಂಕಿಯ ಆದರದ ಮೇಲೆ ಕಾಯಿ ನಡೆಸುತ್ತ, ನಡುವಿನ ಹಣ್ಣು ಮನೆಗೆ ತಲುಪಬೇಕು. ಇದರ ನಡುವೆ ಎದುರಾಳಿ ಬೇರೆಯವರ ಕಾಯಿಯ ಬೆನ್ನಟ್ಟಿ ಬಂದು ಕಾಯಿಯನ್ನು ಹೊಡೆದರೆ ಮತ್ತೆ ತನ್ನ ಸ್ಥಾನಕ್ಕೆ ತೆರಳಬೇಕು. ಹೀಗೆ ಆಟ ಸಾಗುತ್ತದೆ.
ದೇವರ ಆಟ: ಹಳ್ಳಿಗಾಡಿನ ಮಕ್ಕಳ ನೆಚ್ಚಿನ ಆಟವಿದೆ. ದೇವಸ್ಥಾನಗಳಲ್ಲಿ ದೊಡವರು ಮಾಡುವ ಆಚರಣೆಗಳನ್ನು ಗಮನಿಸಿದ ಮಕ್ಕಳು ತಾವು ಕುಡ ಅದೇ ರೀತಿ ಮಾಡಲು ಪ್ರಯತ್ನಿಸುತ್ತಾರೆ. ದೇವರಂತೆಯೇ ಕಲ್ಲಿಗೂ ಶೃಂಗಾರ ಮಾಡಿ ತಲೆಯ ಮೇಲೆ ಹೊತ್ತು ಆಟವಾಡುತ್ತಾರೆ. ಇದು ಅವರವರ ಊರಿನ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ.
ಗೋಲಿ ಆಟ: ಇಂದಿಗೂ ಮಾತು ಮಾತಿಗೂ ಗೋಲಿ ಹೋಡಿ ಎಂದು ಹಲವು ಜನರು ಬಳಸುವುದನ್ನು ಕೇಳಿದ್ದೇವೆ. ಆದರೆ, ಈ ಗೋಲಿ ಹೋಡಿ ಎಂಬುದು ಸುಮ್ಮನೆ ಬಂದಿರುವುದಲ್ಲ. ಚಿಕ್ಕಂದಿನಲ್ಲಿ ಗೋಲಿ ಆಟವಾಡಿ ಬಂದಿರುವ ಪದ. ಒಂದು ಗೋಲಿಯಿಂದ ಇನ್ನೊಂದಕ್ಕೆ ಹೊಡೆಯುತ್ತಾ ಆಡುವ ಆಟವಿದು. ಹೊಡೆದ ಗೋಲಿ ಯಾರದಾಗಿರುತ್ತದೋ ಅವನಿಗೆ ಗೋಲಿಗಳು ಸಿಗುತ್ತವೆ. ಗೋಲಿಗಳನ್ನು ಸಂಗ್ರಹಿಸುವುದೇ ಮಕ್ಕಳಲ್ಲಿ ಒಂದು ದೊಡ್ಡ ಅಭ್ಯಾಸವಾಗಿತ್ತು.

ಇವುಗಳ ಜೊತೆಗೆ ಅಲಿಕಲ್ಲು ಆಟ, ಮನೆ ಕಟ್ಟುವುದು, ಅಳಿಗುಳಿ ಮಣೆ, ಗಾಳಿಪಟ ಹಾರಿಸುವುದು, ಕೋತಿಯಾಟ, ಅಡುಗೆ ಮಾಡುವ ಆಟ...ಹೀಗೆ ಹಲವು ಕಣ್ಣು ಮನಸ್ಸಿನಿಂದಲೂ ಮರೆಯಾಗುತ್ತಿವೆ. ಈಗ ನೆನಪಿರುವ ಆಟಗಳು ಮಕ್ಕಳ ಪೋಷಕರ ಮನಸ್ಸಿನಿಂದ ಹೊರಹೋಗುವುದಕ್ಕೆ ಹೆಚ್ಚು ಸಮಯ ಬೇಕಿಲ್ಲ. ನಮ್ಮ ಹಳ್ಳಿಗಾಡಿನ, ನಮ್ಮ ಸಂಸ್ಕೃತಿಯ, ಈ ಮಣ್ಣಿನ ಆಟಗಳನ್ನು ಜೀವಂತವಾಗಿರಿಸಿಕೊಳ್ಳಬೇಕಿರುವುದು ನಮ್ಮದೇ ಜವಾಬ್ದಾರಿಯಾಗಿದೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications