ಅತ್ಯಂತ ಕಡಿಮೆ ದರದಲ್ಲಿ ಪೆಟ್ರೋಲ್ ಸಿಗುವುದು ಯಾವ ದೇಶದಲ್ಲಿ ಗೊತ್ತೇ?
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಭಾರತದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಭಾರತದ ಮೂಲಕ ತೈಲ ಆಮದು ಮಾಡಿಕೊಳ್ಳುತ್ತಿರುವ ನೆರೆಯ ನೇಪಾಳ, ಭೂತಾನ್ ದೇಶಗಳಲ್ಲಿಯೂ ಭಾರತಕ್ಕಿಂತ ಕಡಿಮೆ ದರದಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಜನಸಾಮಾನ್ಯರಿಗೆ ಎಟುಕುತ್ತಿದೆ. ಕೆಲವು ರಾಜ್ಯಗಳಲ್ಲಿ ಈಗಾಗಲೇ ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿಗಿಂತಲೂ ಅಧಿಕವಾಗಿದೆ.
ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 91 ರೂ ಆಸುಪಾಸಿನಲ್ಲಿದ್ದರೆ, ಬೆಂಗಳೂರಿನಲ್ಲಿ 93ರ ಗಡಿ ದಾಟಿದೆ. ಒಂದು ಕಾಲದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ನಡುವೆ ಸಾಕಷ್ಟು ಅಂತರವಿತ್ತು. ಆದರೆ ಈಗ ಈ ಅಂತರ ಕೂಡ ಕಡಿಮೆಯಾಗಿದೆ. ಪೆಟ್ರೋಲ್ ಬೆಲೆಯನ್ನು ಡೀಸೆಲ್ ಹಿಂಬಾಲಿಸುತ್ತಿದೆ. ಬಹುತೇಕ ರಾಜ್ಯಗಳಲ್ಲಿ ಡೀಸೆಲ್ ಬೆಲೆ ಕೂಡ 90ರ ಗಡಿ ಸಮೀಪಿಸಿದೆ.
ಫೆಬ್ರವರಿ 9ರಿಂದಲೂ ದೇಶದಲ್ಲಿ ಸತತವಾಗಿ ತೈಲ ಬೆಲೆ ಏರಿಕೆಯಾಗುತ್ತಿದೆ. ಒಂದೆರಡು ದಿನ ಏರಿಕೆಯಾಗದೆ ಇದ್ದರೂ, ಗ್ರಾಹಕರ ಜೇಬಿನ ಭಾರವನ್ನಂತೂ ತಗ್ಗಿಸಿಲ್ಲ. 12 ದಿನಗಳಲ್ಲಿ ಪೆಟ್ರೋಲ್ ಬೆಲೆ 3.63 ರೂದಷ್ಟು ಹೆಚ್ಚಾಗಿದ್ದರೆ, ಡೀಸೆಲ್ ದರ ಪ್ರತಿ ಲೀಟರ್‌ಗೆ 3.84 ರೂಪಾಯಿಯಷ್ಟು ಹೆಚ್ಚಾಗಿದೆ. ಅಂದಹಾಗೆ ಕೆಲವು ದೇಶಗಳಲ್ಲಿ ಈ ಹನ್ನೆರಡು ದಿನಗಳಲ್ಲಿ ಭಾರತದಲ್ಲಿ ಏರಿಕೆಯಾದ ಒಟ್ಟು ಮೊತ್ತಕ್ಕಿಂತಲೂ ಕಡಿಮೆ ದರದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟವಾಗುತ್ತಿದೆ ಎಂದರೆ ಅಚ್ಚರಿಯಾಗಬಹುದು. ನಿಜ. ಅನೇಕ ದೇಶಗಳಲ್ಲಿ ತೈಲ ಬೆಲೆ ತೀರಾ ಕಡಿಮೆ ಇದೆ. ಅಂತಹ ಕೆಲವು ದೇಶಗಳ ಪಟ್ಟಿ ಇಲ್ಲಿದೆ.

ಅತ್ಯಂತ ಅಗ್ಗದ ಪೆಟ್ರೋಲ್ ಸಿಗುವುದು ಇಲ್ಲಿ
ಗ್ಲೋಬಲ್ ಪೆಟ್ರೋಲ್ ಪ್ರೈಸಸ್ ವೆಬ್‌ಸೈಟ್‌ನ ಅಂಕಿ ಅಂಶಗಳ ಪ್ರಕಾರ ಇಡೀ ಜಗತ್ತಿನಲ್ಲಿಯೇ ಅತಿ ಕಡಿಮೆ ದರಕ್ಕೆ ಪೆಟ್ರೋಲ್ ಲಭ್ಯವಾಗುತ್ತಿರುವುದು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವೆನೆಜುವೆಲಾದಲ್ಲಿ. ವೆನೆಜುವೆಲಾದಲ್ಲಿ ಫೆ. 24ರಂದು ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ಭಾರತೀಯ ಕರೆನ್ಸಿ ಲೆಕ್ಕದಲ್ಲಿ ಕೇವಲ 1.45 ರೂ. ಅಮೆರಿಕನ್ ಡಾಲರ್ ಲೆಕ್ಕದಲ್ಲಿ 0.020 ಡಾಲರ್.

ಇರಾನ್‌ನಲ್ಲಿ ಎಷ್ಟಿದೆ?
ವೆನೆಜುವೆಲಾ ಬಳಿಕ ಅತ್ಯಂತ ಅಗ್ಗದ ದರದಲ್ಲಿ ಪೆಟ್ರೋಲ್ ದೊರಕುವುದು ಇರಾನ್‌ನಲ್ಲಿ. ಇಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 0.061 ಅಮೆರಿಕನ್ ಡಾಲರ್ ಇದೆ. ಅಂದರೆ ಭಾರತದ ಕರೆನ್ಸಿ ಲೆಕ್ಕದಲ್ಲಿ ಲೀಟರ್ ಪೆಟ್ರೋಲ್ ಬೆಲೆ 4.41 ರೂ. ಇದು ಕಳೆದ ಎರಡು ವಾರಗಳಲ್ಲಿ ಭಾರತದಲ್ಲಿ ಉಂಟಾದ ಒಟ್ಟು ಪೆಟ್ರೋಲ್ ಬೆಲೆ ಏರಿಕೆಗಿಂತ ಕೊಂಚ ಅಧಿಕವಷ್ಟೇ!

ಅಂಗೋಲಾದಲ್ಲಿ ಪೆಟ್ರೋಲ್ ದರ
ವೆಬ್‌ಸೈಟ್ ನೀಡಿರುವ ಮಾಹಿತಿ ಪ್ರಕಾರ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ ಅಂಗೋಲಾ, ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ದೊರಕುವ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ಮಂಗಳವಾರದ ದರ 0.246 ಡಾಲರ್. ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ 17.79 ರೂ ಮಾತ್ರ.

ಅಲ್ಜೀರಿಯಾದಲ್ಲಿಯೂ ಅಗ್ಗ
ಮೆಡಿಟರೇನಿಯನ್ ಸಮುದ್ರ ಕರಾವಳಿ ಹಾಗೂ ಸಹರಾ ಮರುಭೂಮಿಯ ಜತೆ ಹರಡಿಕೊಂಡಿರುವ ಉತ್ತರ ಆಫ್ರಿಕಾದ ಅಲ್ಜೀರಿಯಾ ದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 25.02 ರೂಪಾಯಿ ಇದೆ. ಅಮೆರಿಕನ್ ಡಾಲರ್ ಲೆಕ್ಕದಲ್ಲಿ ಇದು 0.346 ಡಾಲರ್. ಭಾರತಕ್ಕೆ ಒಪೆಕ್‌ನಿಂದ ಪೂರೈಕೆಯಾಗುವ ಕಚ್ಚಾ ತೈಲದ ದರಕ್ಕಿಂತಲೂ ಕಡಿಮೆ ಬೆಲೆಗೆ ಇಲ್ಲಿ ಪೆಟ್ರೋಲ್ ಲಭ್ಯ.

ಕುವೈತ್‌ನಲ್ಲಿ ಪೆಟ್ರೋಲ್ ದರ
ಇನ್ನು ತೈಲ ಉತ್ಪಾದನೆಯ ಕೊಲ್ಲಿ ದೇಶಗಳಲ್ಲಿ ಒಂದಾದ ಕುವೈತ್‌ನಲ್ಲಿ ಸಹಜವಾಗಿಯೇ ಪೆಟ್ರೋಲ್ ಬೆಲೆ ಕಡಿಮೆ ಇದೆ. ಇಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 0.347 ಡಾಲರ್, ಅಂದರೆ 25.09 ರೂಪಾಯಿ ಇದೆ.

ಕಡಿಮೆ ದರದ ಇತರೆ ದೇಶಗಳು
ಸುಡಾನ್‌ನಲ್ಲಿ 0.379 ಡಾಲರ್ ಅಥವಾ 27.40 ರೂಪಾಯಿ ದರವಿದೆ. ಕಜಕಿಸ್ತಾನದಲ್ಲಿ ಪೆಟ್ರೋಲ್ ದರ ಭಾರತೀಯ ಕರೆನ್ಸಿಯಲ್ಲಿ 29.64 ರೂ. ಇದೆ. ಕತಾರ್‌ನಲ್ಲಿ 29.79 ರೂ, ತುರ್ಕ್‌ಮೆನಿಸ್ತಾನ್‌ನಲ್ಲಿ 31.02, ನೈಜೀರಿಯಾದಲ್ಲಿ 31.52 ರೂ., ಈಕ್ವೆಡಾರ್‌ನಲ್ಲಿ 33.55 ರೂ., ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಕಿರ್ಗಿಸ್ತಾನ್‌ನಲ್ಲಿ 35.43 ರೂ., ಮಲೇಷ್ಯಾದಲ್ಲಿ 35.79 ರೂಪಾಯಿ ಇದೆ.

ಈ ದೇಶಗಳಲ್ಲಿ ಬಲು ದುಬಾರಿ
ಭಾರತದಲ್ಲಿ ಪೆಟ್ರೋಲ್ ದರ ಬಹಳ ದುಬಾರಿ ಎಂಬ ಆರೋಪವಿದೆ. ಆದರೆ ಭಾರತಕ್ಕಿಂತಲೂ ತೈಲ ಬೆಲೆ ಅಧಿಕವಾಗಿರುವ ದೇಶಗಳಿವೆ. ಹಾಂಕಾಂಗ್‌ನಲ್ಲಿ ಬುಧವಾರದ ವೇಳೆಗೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 175.26 ರೂ (2.424 ಡಾಲರ್) ಇದೆ. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್‌ನಲ್ಲಿ ಪೆಟ್ರೋಲ್ ಬೆಲೆ 147.64 ರೂಪಾಯಿ. ಇನ್ನು ನೆದರ್‌ಲ್ಯಾಂಡ್ಸ್‌ನಲ್ಲಿ 147.28 ರೂ ದರವಿದೆ. ನಾರ್ವೆಯಲ್ಲಿ 143.59 ರೂಪಾಯಿ ಇದೆ. 50ಕ್ಕೂ ಅಧಿಕ ದೇಶಗಳಲ್ಲಿ ಪೆಟ್ರೋಲ್ ಬೆಲೆ ಭಾರತಕ್ಕಿಂತ ಹೆಚ್ಚಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ












Click it and Unblock the Notifications