Get Updates
Get notified of breaking news, exclusive insights, and must-see stories!

Shocking Video: ಸೆಲೂನ್‌ಗೆ ನುಗ್ಗಿದ ಕಾರು: ವಿಡಿಯೋ ಕಂಡು ಜನ ಶಾಕ್..

ಸೆಲೂನ್‌ ಒಳಗೆ ಕಾರೊಂದು ನುಗ್ಗಿದ ದೃಶ್ಯ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಇದು ನೋಡಲು ಸೆಲೂನ್‌ನಂತೆ ಕಾಣುತ್ತದೆ. ಇಲ್ಲಿ ವ್ಯಕ್ತಿಯೊಬ್ಬ ಹೇರ್ ಕಟ್ ಮಾಡಿಸಿಕೊಳ್ಳುತ್ತಿದ್ದಾನೆ. ಮತ್ತೊಬ್ಬ ಅದನ್ನು ನೋಡುತ್ತಾ ಚೇರ್ ಮೇಲೆ ಕುಳಿತಿದ್ದಾನೆ. ಮತ್ತೊಬ್ಬರು ಅದೇನೋ ಕೆಲಸದಲ್ಲಿ ನಿರತವಾಗಿದ್ದಾರೆ. ಸಾಮಾನ್ಯವಾಗಿ ಸೆಲೂನ್‌ನಲ್ಲಿ ನಡೆಯುವ ಕೆಲಸಗಳು ಇಲ್ಲಿ ನಡೆಯುತ್ತಿವೆ. ಕೊಂಚ ಸಮಯದ ನಂತರ ಇಲ್ಲಿ ನಡೆಯುವ ಘಟನೆ ಯಾರಿಂದಲೂ ಊಹಿಸಲಿಕೊಳ್ಳಲು ಸಾಧ್ಯವೇ ಇಲ್ಲ. ಸೆಲೂನ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದ್ದು ನೋಡುಗರು ಧಂಗಾಗಿ ಹೋಗಿದ್ದಾರೆ.

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಮನೆ, ಮಾಲ್, ಚಲನಚಿತ್ರ ಮಂದಿರಗಳಲ್ಲಿ ಏಕಾಏಕಿ ವಾಹನಗಳು ಗೋಡೆ ಹೊಡೆದು ಒಳನುಗ್ಗುವ ದೃಶ್ಯಗಳನ್ನು ನಾವು ನೋಡಿರುತ್ತೇವೆ. ಆದರೆ ಅದು ನಿಜ ಜೀವನದಲ್ಲಿ ನಡೆದರೆ ಹೇಗಿರಬೇಡ. ದೃಶ್ಯದಲ್ಲಿ ಕಾಣುವ ಸೆಲೂನ್‌ನಲ್ಲೂ ಕೂಡ ಇದೇ ರೀತಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ವಾಹನವೊಂದು ಗೋಡೆ ಒಡೆದು ಸೆಲ್ಯೂನ್ ಒಳಗೆ ನುಗ್ಗಿದೆ. ಅಲ್ಲಿದ್ದವರು ಅರೆ ಕ್ಷಣ ಏನಾಯಿತು ಅನ್ನೋ ಹೊತ್ತಿಗೆ ಕಾರು ಯಮನಂತೆ ಸೆಲೂನ್ ಒಳಗಡೆ ಪ್ರವೇಶ ಮಾಡಿದೆ.

ವೈರಲ್ ವಿಡಿಯೋದಲ್ಲಿ ಸೆಲೂನ್ ಒಳಗೆ ನುಗ್ಗಿದ ವಾಹನ ವ್ಯಕ್ತಿ ಮೇಲೆ ಹರಿದಿದೆ. ಕ್ಷೌರ ಮಾಡಿಸಿಕೊಳ್ಳುತ್ತಿದ್ದ ವ್ಯಕ್ತಿ ಮತ್ತು ಕ್ಷೌರಿಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಆದರೂ ವಾಹನ ಗುದ್ದಿದೆ ರಬಸಕ್ಕೆ ಕ್ಷೌರ ಮಾಡಿಸಿಕೊಳ್ಳುತ್ತಿದ್ದ ವ್ಯಕ್ತಿ ಮತ್ತು ಕ್ಷೌರಿಕ ಗಾಯಗೊಂಡಿದ್ದಾರೆ. ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕ್ಷಣಾರ್ಧದಲ್ಲಿ ನಡೆದೆ ಈ ಘಟನೆಯಿಂದ ಸೆಲೂನ್‌ನಲ್ಲಿ ಇದ್ದವರು ಬೆಚ್ಚಿಬಿದ್ದಿದ್ದಾರೆ.

Car rammed into saloon: Scary scene caught on CCTV

ಇದೇ ತಿಂಗಳಲ್ಲಿ ಬಿಳಿ ಕಾರೊಂದು ಚೀನಾದ ಶಾಂಗೈ ಹೋಟೆಲ್‌ನ ಗಾಜಿನ ಬಾಗಿಲುಗಳನ್ನು ಒಡೆದು, ಹಿಮ್ಮಖವಾಗಿ ಲಾಬಿಗೆ ನುಗ್ಗಿ ಅಲ್ಲಿರುವ ಎಲ್ಲಾ ವಸ್ತುಗಳನ್ನು ನಾಶ ಮಾಡುವುದನ್ನು ಕಾಣಬಹುದು. ಸಿಟ್ಟಾಗಿದ್ದ ಅತಿಥಿಯೊಬ್ಬ ತನ್ನ ಸ್ಟೋರ್ಟ್ಸ್ ಕಾರನ್ನು ಚೈನೀಸ್ ಹೋಟೆಲ್‌ನ ಬಾಗಿಲುಗಳ ಮೂಲಕ ನುಗ್ಗಿಸಿ ಅದರ ಲಾಬಿಯ ಸುತ್ತಲೂ ಹುಚ್ಚುಚ್ಚಾಗಿ ಓಡಿಸಿದ್ದನು. ಇದಕ್ಕೆ ಕಾರಣ ವಿಚಿತ್ರವಾಗಿತ್ತು. ಈತನ ಲ್ಯಾಪ್‌ಟಾಪ್‌ ಕಾಣೆಯಾಗಿದ್ದು ಈ ಬಗ್ಗೆ ಸಿಬ್ಬಂದಿ ಜೊತೆಗೆ ವಾದ ಮಾಡಿದ್ದಾನೆ. ಆದರೆ ಲ್ಯಾಪ್‌ಟಾಪ್‌ ಸಿಗದೇ ಸಮಾಧಾನಗೊಳ್ಳದ ಈತ ಹೋಟೆಲ್ ಒಳಕ್ಕೆ ಕಾರು ನುಗ್ಗಿಸಿದ್ದಾನೆ.

Car rammed into saloon: Scary scene caught on CCTV

ಈ ಕಾರು ಐರಾಷರಾಮಿ ಕನ್ವರ್ಟಿಬಲ್ ಸ್ಪೋರ್ಟ್ಸ್ ಕಾರಾಗಿದ್ದು, ಒಳಗೆ ನುಗ್ಗಿದ ಮೇಲೆ ಅ್ಡಾದಿಡ್ಡಿಯಾಗಿ ಓಡಾಡಿದೆ. ಇದನ್ನು ಕಂಡು ಭಯಭೀತರಾದ ಸಾರ್ವಜನಿಕರು ಏನಾಗುತ್ತಿದೆ ಎಂದು ಒಬ್ಬರನೊಬ್ಬರು ಕೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+